ರೈಲ್ವೆ ನೇಮಕಾತಿ ಸೆಲ್ ಜೈಪುರವು ಅಪ್ರೆಂಟಿಸ್ ಆ್ಯಕ್ಟ್‌ 1961 ನಿಯಮದ ಅಡಿ ಎನ್‌ ಡಬ್ಲ್ಯೂಆರ್‌ ವಿಭಾಗ ವಿವಿಧ ಕಚೇರಿಯಲ್ಲಿ ಖಾಲಿ ಇರುವ 1646 ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ರೈಲ್ವೆ ನೇಮಕಾತಿ ಸೆಲ್ (ಆರ್‌ ಆರ್‌ ಸಿ) ಜೈಪುರ, ಅಪ್ರೆಂಟಿಸ್ ಆ್ಯಕ್ಟ್‌ 1961 ನಿಯಮದ ಅಡಿಯಲ್ಲಿ ಎನ್‌ ಡಬ್ಲ್ಯೂಆರ್‌ ವಿಭಾಗದ ವಿವಿಧ ಕಚೇರಿಯಲ್ಲಿ ಖಾಲಿ ಇರುವ 1646 ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

1. ಅಜ್ಮೀರ್ ವಿಭಾಗ - 402 ಹುದ್ದೆ

2. ಬಿಕಾನೇರ್ ವಿಭಾಗ - 424 ಹುದ್ದೆ

3. ಜೈಪುರ ವಿಭಾಗ - 488 ಹುದ್ದೆ

4. ಜೋಧ್‌ಪುರ ವಿಭಾಗ - 67 ಹುದ್ದೆ

5. ಬಿ ಟಿ ಸಿ ಕ್ಯಾರೇಜ್, ಅಜ್ಮೀರ್ ವಿಭಾಗ - 113 ಹುದ್ದೆ

6. ಬಿ ಟಿ ಸಿ ಲೋಕೋ ಅಜ್ಮೀರ್ ವಿಭಾಗ - 56 ಹುದ್ದೆ

7. ಕ್ಯಾರೇಜ್ ಶಾಪ್, ಬಿಕಾನೇರ - 29 ಹುದ್ದೆ

8. ಕ್ಯಾರೇಜ್ ಶಾಪ್, ಜೋಧ್‌ಪುರ - 67 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-02- 2024

ವಯಸ್ಸಿನ ಮಿತಿ (10 - 02 - 2024ರಂತೆ)

ಕನಿಷ್ಠ ವಯಸ್ಸಿನ ಮಿತಿ : 15 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ : 25 ವರ್ಷಗಳು

ಅರ್ಜಿ ಶುಲ್ಕ :

ಸಾಮಾನ್ಯ ಅಭ್ಯರ್ಥಿಗಳಿಗೆ 100 ರು., ಎಸ್‌ ಸಿ/ಎಸ್‌ ಟಿ/ ಮಹಿಳೆಯರು/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್/ ಸ್ಟೇಟ್ ಕೌನ್ಸಿಲ್‌ನಿಂದ ಕನಿಷ್ಠ 50% ಅಂಕಗಳೊಂದಿಗೆ ಐಟಿಐ ಪ್ರಮಾಣ ಪತ್ರ ಪಡೆದಿರಬೇಕು.

ತರಬೇತಿ ಅವಧಿ

ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ತರಬೇತಿ ಅವಧಿಗೆ ಒಳಪಟ್ಟಿರುತ್ತಾರೆ

ಸ್ಟೈಪೆಂಡ್

ಅಪ್ರೆಂಟಿಸ್ ಆ್ಯಕ್ಟ್ 1961 ನಿಯಮದ ಅಡಿಯಲ್ಲಿ ರೈಲ್ವೆ ಮಂಡಳಿಯ ಪ್ರಕಾರ ಸ್ಟೈಪೆಂಡ್ ನಿಡಲಾಗುತ್ತದೆ.

ಆಯ್ಕೆಯ ವಿಧಾನ

ಅಭ್ಯರ್ಥಿಯು 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಐಟಿಐನಲ್ಲಿ ಪಡೆದ ಸರಳ ಸರಾಸರಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: https://www.rrcjaipur.in/