Asianet Suvarna News Asianet Suvarna News

NLC Apprentice Recruitment 2022: 500 ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

NLC ಇಂಡಿಯಾ ಲಿಮಿಟೆಡ್ ವಿವಿಧ ಸ್ಥರಗಳಲ್ಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಫೆಬ್ರವರಿ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿ ಫೆಬ್ರವರಿ 15 ರಂದು ಅರ್ಜಿ ಸಲ್ಲಿಕೆ ಕೊನೆಗೊಳ್ಳಲಿದೆ.

NLC Recruitment 2022 notification Apply Online for Apprentice posts gow
Author
Bengaluru, First Published Jan 26, 2022, 5:53 PM IST

ಬೆಂಗಳೂರು(ಜ.26): NLC (Neyveli Lignite Corporation Limited) ಇಂಡಿಯಾ ಲಿಮಿಟೆಡ್ ವಿವಿಧ ಸ್ಥರಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ (Apprentice) ಭರ್ತಿಗಾಗಿ ನೇಮಕಾತಿ  ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC) ಒಟ್ಟು 550 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು  ಕೋರಲಾಗಿದೆ. ಫೆಬ್ರವರಿ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿ ಫೆಬ್ರವರಿ 15 ರಂದು ಅರ್ಜಿ ಸಲ್ಲಿಕೆ ಕೊನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ  ಆಸಕ್ತರು ಇಲಾಖೆಯ ಅಧಿಕೃತ ವೆಬ್‌ಸೈಟ್ https://www.nlcindia.in/new_website/index.htm ಭೇಟಿ ನೀಡಲು ಕೋರಲಾಗಿದೆ.

ಹುದ್ದೆಗಳ ವಿವರ:
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್: 70 ಹುದ್ದೆಗಳು
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್: 10 ಹುದ್ದೆಗಳು
ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: 10 ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್: 35 ಹುದ್ದೆಗಳು
ಮೆಕ್ಯಾನಿಕಲ್ ಇಂಜಿನಿಯರಿಂಗ್: 75 ಹುದ್ದೆಗಳು
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್: 20 ಹುದ್ದೆಗಳು
ಕೆಮಿಕಲ್ ಇಂಜಿನಿಯರಿಂಗ್: 10 ಹುದ್ದೆಗಳು
ಮೈನಿಂಗ್ ಇಂಜಿನಿಯರಿಂಗ್: 250 ಹುದ್ದೆಗಳು

ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ ಹುದ್ದೆಗಳು ಇಂತಿವೆ:
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್: 85 ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್: 35 ಹುದ್ದೆಗಳು
ಮೆಕ್ಯಾನಿಕಲ್ ಇಂಜಿನಿಯರಿಂಗ್: 90 ಹುದ್ದೆಗಳು
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್: 25 ಹುದ್ದೆಗಳು
ಫಾರ್ಮಸಿ: 15 ಪೋಸ್ಟ್‌ಗಳು

East Coast Railway Recruitment 2022: ನರ್ಸಿಂಗ್​ ಸೂಪರಿಂಟೆಂಡೆಂಟ್​ ಸೇರಿ ಹಲವು ಹುದ್ದೆಗಳಿಗೆ ಅರ್ಜಿ

ಶೈಕ್ಷಣಿಕ ವಿದ್ಯಾರ್ಹತೆ: NLC ಇಂಡಿಯಾ ಲಿಮಿಟೆಡ್ ವಿವಿಧ ಸ್ಥರಗಳಲ್ಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.
ಪದವೀಧರ ಅಪ್ರೆಂಟಿಸ್: - ಸಂಬಂಧಿತ ವಿಭಾಗದಲ್ಲಿ ಮಾನ್ಯತೆ ಪಡೆದ  ವಿಶ್ವವಿದ್ಯಾಲಯದಿಂದ ನೀಡಲಾದ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ (ಪೂರ್ಣ ಸಮಯ) ಮಾಡಿರಬೇಕು. ಸಂಬಂಧಿತ ವಿಭಾಗದಲ್ಲಿ  ಪದವಿಯನ್ನು ನೀಡಲು ಅಧಿಕಾರ ಹೊಂದಿರುವ ಸಂಸ್ಥೆಯಿಂದ  ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ (Technology) (ಪೂರ್ಣ ಸಮಯ) ಪದವಿ ಪಡೆದಿರಬೇಕು. ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ವೃತ್ತಿಪರ ಸಂಸ್ಥೆಗಳ (ಪೂರ್ಣ ಸಮಯ) ಪದವಿ ಪರೀಕ್ಷೆ ಮತ್ತು ಹುದ್ದೆಗೆ  ಸಮಾನಾದ ಪದವಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ: NLC ಇಂಡಿಯಾ ಲಿಮಿಟೆಡ್ ವಿವಿಧ ಸ್ಥರಗಳಲ್ಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸಂಬಂಧಿಸಿದ ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. NLC ಇಂಡಿಯಾ ಲಿಮಿಟೆಡ್ ವಿವಿಧ ಸ್ಥರಗಳಲ್ಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಫೆಬ್ರವರಿ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿ ಫೆಬ್ರವರಿ 15 ರಂದು ಅರ್ಜಿ ಸಲ್ಲಿಕೆ ಕೊನೆಗೊಳ್ಳಲಿದೆ.

KARNATAKA BANK RECRUITMENT 2022: ಮಾಜಿ ಯೋಧರಿಗೆ ಅವಕಾಶ, ಮಂಗಳೂರಿನಲ್ಲಿ ಉದ್ಯೋಗ

ಬರೋಡ ಬ್ಯಾಂಕ್ ನಲ್ಲಿ ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ: ಬ್ಯಾಂಕ್ ಆಫ್​ ಬರೋಡ (Bank of Baroda) ಖಾಲಿ ಇರುವ 198 ಹುದ್ದೆಗಳನ್ನು ತುಂಬಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ಮ್ಯಾನೇಜರ್, ಹೆಡ್ ಪ್ರಾಜೆಕ್ಟ್​ & ಪ್ರೊಸೆಸ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, MIS ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಪದವಿ ಪಾಸಾಗಿರುವ ಅಭ್ಯರ್ಥಿಗಳನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತರು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,  ಫೆಬ್ರವರಿ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಆಸಕ್ತರು ಬ್ಯಾಂಕ್​ ಆಫ್​ ಬರೋಡದ ಅಧಿಕೃತ ವೆಬ್​ಸೈಟ್​​ www.bankofbaroda.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

Follow Us:
Download App:
  • android
  • ios