Government jobs: NFLನಲ್ಲಿ ಸೀನಿಯರ್ ಕನ್ಸಲ್ಟಂಟ್, ಕನ್ಸಲ್ಟಂಟ್ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ!

ಸಾರ್ವಜನಿಕ ವಲಯದ ಪ್ರಮುಖ ಕಂಪನಿ ಎನಿಸಿಕೊಂಡಿರುವ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (National Fertilizers Limited- NFL) ಖಾಲಿ ಇರುವ 40  ಹಿರಿಯ ಸಲಹೆಗಾರ ಮತ್ತು ಸಲಹೆಗಾರ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

NFL recruitment 2021 National Fertilizers recruiting senior consultant and consultant and check details

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (National Fertilizers Limited- NFL) ನಲ್ಲಿ ಖಾಲಿ ಇರುವ 40 ಹಿರಿಯ ಸಲಹೆಗಾರ (Senior Consultant) ಮತ್ತು ಸಲಹೆಗಾರ (Consultant) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ nationalfertilizers.com ಗೆ ಭೇಟಿ ನೀಡಿ ನೇಮಕಾತಿ ಪ್ರಕ್ರಿಯೆ ಬಗ್ಗೆ ಪರಿಶೀಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಡಿಸೆಂಬರ್ 15,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಹಿರಿಯ ಸಲಹೆಗಾರ ಮತ್ತು ಸಲಹೆಗಾರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಿರಿಯ ಸಲಹೆಗಾರ (Senior Consultant) - 12 ಹುದ್ದೆಗಳು, ಸಲಹೆಗಾರ (Consultant)  - 28 ಹುದ್ದೆಗಳು ಸೇರಿ ಒಟ್ಟು 40 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತರು ಹಾಗೂ ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು. 

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ನೇಮಕಾತಿಯ ಹಿರಿಯ ಸಲಹೆಗಾರ ಮತ್ತು ಸಲಹೆಗಾರ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.  ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (National Fertilizers Limited- NFL)  ನೇಮಕಾತಿಯ ಹಿರಿಯ ಸಲಹೆಗಾರ ಮತ್ತು ಸಲಹೆಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎನ್‌ಎಫ್‌ಎಲ್ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು. 

Railway Jobs: ಆಗ್ನೇಯ ರೇಲ್ವೆಯಲ್ಲಿ 520 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಕೆ ಆರಂಭ

NFLನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಕಿರುಪಟ್ಟಿಯನ್ನು ಮಾಡಿ ತದನಂತರ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹಿರಿಯ ಸಲಹೆಗಾರ ಮತ್ತು ಸಲಹೆಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಬಹುದು. 

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://nationalfertilizers.com/ ಗೆ ಭೇಟಿ ನೀಡಿ. ಅಲ್ಲಿ ಲಭ್ಯವಿರುವ ನೇಮಕಾತಿ ಅಧಿಸೂಚನೆಯನ್ನು ಓದಿಕೊಂಡು ನಂತರ ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ಭರ್ತಿ ಮಾಡಿ ಡಿಸೆಂಬರ್ 15,2021ರೊಳಗೆ  ashokshrivastava@nfl.co.in. ವಿಳಾಸಕ್ಕೆ ಕಳುಹಿಸಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ "Chief Manager (HR), at Panipat Unit - ಈ ಕಚೇರಿ ವಿಳಾಸಕ್ಕೆ ಆಫ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು.

ನ್ಯಾಷನಲ್ ಫರ್ಟಿಲೈಸರ್ ಲಿ. ಕಂಪನಿಯು ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ನಿಗಮ ಸಂಸ್ಥೆಯಾಗಿದೆ. ಈ ಕಂಪನಿಯು ರಸಗೊಬ್ಬರಗಳು, ಆರ್ಗಾನಿಕ್ ಗೊಬ್ಬರ ಮತ್ತು ಕೈಗಾರಿಕೆಗಳಿಗೆ ಬೇಕಾಗುವ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಕೇಂದ್ರ ರಾಸಾಯನಿಕ ಮತ್ತು ಫರ್ಟಿಲೈಸರ್ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತದೆ. 2018ರ ಮಾಹಿತಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ರಸಗೊಬ್ಬರ ಉತ್ಪಾದಿಸಿದ ಕಂಪನಿಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ. 

IAF AFCAT Exam: ವಾಯು ಪಡೆಯ 317 ಹುದ್ದೆಗಳಿಗೆ ನೇಮಕಾತಿ!

ಎನ್ಎಫ್ಎಲ್ 1974ರಲ್ಲಿ ಆರಂಭವಾಯಿತು. ಇದರೊಂದಿಗೆ ಕೇಂದ್ರ ಸಾರ್ವಜನಿಕ ವಲಯದ  ಬಹುದೊಡ್ಡ ಕಂಪನಿ ಎನಿಸಿಕೊಂಡಿತು. 75 ಶತಕೋಟಿ ರೂಪಾಯಿ ವ್ಯವಾರವನ್ನು ಹೊಂದಿದೆ. ಭಾರತದಲ್ಲಿ ಫರ್ಟಿಲೈಸರ್‌ಗಳ ಪೈಕಿ ಯೂರಿಯಾವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವಲ್ಲಿ ಎನ್‌ಎಫ್ಎಲ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಂಪನಿಯು ಐದು ಗ್ಯಾಸ್ ಆಧರಿತ ಅಮೋನಿಯಾ ಯೂರಿಯಾ ಪ್ಲಾಂಟ್‌ಗಳನ್ನು ಪಂಜಾಬ್‌(Punjab)ನ ನಂಗಲ್ ಮತ್ತು ಭಟಿಂಡಾ, ಹರಿಯಾಣ(Haryana) ಪಾಣಿಪತ್ ಮತ್ತು ಮಧ್ಯ ಪ್ರದೇಶ(MadhyPradesh)ದ ವಿಜಯೀಪುರದಲ್ಲಿ 2 ಘಟಕಗಳನ್ನು ಹೊಂದಿದೆ.

Latest Videos
Follow Us:
Download App:
  • android
  • ios