NDRI Recruitment 2022: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ ಮಾರ್ಚ್ 8ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಬೆಂಗಳೂರು(ಫೆ.13): ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ (National Dairy Research Institute) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಯಂಗ್ ಪ್ರೊಫೆಶನಲ್ (Young Professional ), ಆಫೀಸ್ ಅಸಿಸ್ಟೆಂಟ್, SRF, JRF ಸೇರಿ ಒಟ್ಟು 15 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರ್ಚ್ 8ರಂದು ನೇರ ಸಂದರ್ಶನ (Walk-In-Interview) ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ndri.res.in ಗೆ ಭೇಟಿ ನೀಡಿ.
ಒಟ್ಟು 15 ಹುದ್ದೆಗಳ ಮಾಹಿತಿ ಇಂತಿದೆ:
ಯಂಗ್ ಪ್ರೊಫೆಶನಲ್ ಗ್ರೇಡ್1- 8
ಸೀನಿಯರ್ ರಿಸರ್ಚ್ ಫೆಲೋ- SRF- 4
ಆಫೀಸ್ ಅಸಿಸ್ಟೆಂಟ್- 1
ಯಂಗ್ ಪ್ರೊಫೆಶನಲ್ ಗ್ರೇಡ್2 -1
ಜೂನಿಯರ್ ರಿಸರ್ಚ್ ಫೆಲೋ- JRF-1
ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರ ಅರ್ಹತೆ ಪಡೆದಿರಬೇಕು.
ಯಂಗ್ ಪ್ರೊಫೆಶನಲ್ ಗ್ರೇಡ್1- ಬಿಕಾಂ/ಬಿಬಿಎ/ಬಿಬಿಎಸ್/ ಪದವಿ/ಸ್ನಾತಕೋತ್ತರ ಪದವಿ/ಎಂಎಸ್ಸಿ
ಸೀನಿಯರ್ ರಿಸರ್ಚ್ ಫೆಲೋ- SRF- ಪದವಿ, ಸ್ನಾತಕೋತ್ತರ ಪದವಿ
ಆಫೀಸ್ ಅಸಿಸ್ಟೆಂಟ್- ಪದವಿ
ಯಂಗ್ ಪ್ರೊಫೆಶನಲ್ ಗ್ರೇಡ್2 -ಸ್ನಾತಕೋತ್ತರ ಪದವಿ
ಜೂನಿಯರ್ ರಿಸರ್ಚ್ ಫೆಲೋ- ಎಂಇ/ಎಂಟೆಕ್/ಎಂವಿಎಸ್ಸಿ/ಎಂಎಸ್ಸಿ
ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶ 7 ಸಾವಿರ ಎಕರೆಗೆ ವಿಸ್ತರಣೆ: ಸಚಿವ ಡಾ. ಅಶ್ವತ್ಥನಾರಾಯಣ
ವೇತನ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ದೊರೆಯಲಿದೆ.
ಯಂಗ್ ಪ್ರೊಫೆಶನಲ್ ಗ್ರೇಡ್1- ಮಾಸಿಕ ₹ 25,000
ಸೀನಿಯರ್ ರಿಸರ್ಚ್ ಫೆಲೋ- SRF- ಮಾಸಿಕ ₹ 31,000-35,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹ 15,000
ಯಂಗ್ ಪ್ರೊಫೆಶನಲ್ ಗ್ರೇಡ್2 -ಮಾಸಿಕ ₹ 35,000
ಜೂನಿಯರ್ ರಿಸರ್ಚ್ ಫೆಲೋ- JRF-ಮಾಸಿಕ ₹ 31,000
ವಯೋಮಿತಿ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ.
ಯಂಗ್ ಪ್ರೊಫೆಶನಲ್ ಗ್ರೇಡ್1- 21ರಿಂದ 45 ವರ್ಷ
ಸೀನಿಯರ್ ರಿಸರ್ಚ್ ಫೆಲೋ- SRF- ಗರಿಷ್ಠ 40 ವರ್ಷ
ಆಫೀಸ್ ಅಸಿಸ್ಟೆಂಟ್- 18ರಿಂದ 45 ವರ್ಷ
ಯಂಗ್ ಪ್ರೊಫೆಶನಲ್ ಗ್ರೇಡ್2 -21ರಿಂದ 45 ವರ್ಷ
ಜೂನಿಯರ್ ರಿಸರ್ಚ್ ಫೆಲೋ- ಗರಿಷ್ಠ 35 ವರ್ಷ
ಉದ್ಯೋಗ ಸ್ಥಳ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹರಿಯಾಣದ ಕರ್ನಲ್ ನಲ್ಲಿ ಉದ್ಯೋಗ ಮಾಡಬೇಕು.
TCIL Recruitment 2022: ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ
ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ: ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್ (Telecommunications Consultants India Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 6 ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ (Technician Apprentice Trainee) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ dot.gov.in ಗೆ ಅಥವಾ https://tcilindia.com/ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮೊದಲಿಗೆ http://www.mhrdnats.gov.in/ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. https://tcilindia.com/ ನಲ್ಲಿ ಅಧಿಸೂಚನೆಯನ್ನು ಓದಿಕೊಂಡು ಬಳಿಕ ಅಗತ್ಯ ದಾಖಲಾತಿಗಳೊಂದಿಗೆ ಫೆ.15ಕ್ಕೆ ಮೊದಲು tcilapprentice2021@gmail.com ಈ ಮೇಲ್ ಮಾಡಬೇಕು.