Asianet Suvarna News Asianet Suvarna News

IREDA Recruitment 2022: ವಿವಿಧ ಹುದ್ದೆಗಳಿಗೆ ಐಆರ್‌ಇಡಿಎ ನೇಮಕಾತಿ

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತದಲ್ಲಿ ಖಾಲಿ ಇರುವ 16 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನ

IREDA Recruitment 2022 notification for various post gow
Author
Bengaluru, First Published Mar 10, 2022, 8:26 PM IST

ಬೆಂಗಳೂರು(ಮಾ.10): ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತ (India Renewable Energy Development Agency Limited-IREDA)ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 16 ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ www.ireda.in ಗೆ ಭೇಟಿ ನೀಡಲು ಕೋರಲಾಗಿದೆ.

ಮುಖ್ಯ ಅಪಾಯ ಅಧಿಕಾರಿ (Chief Risk Officer): 1 ಹುದ್ದೆ
ಮುಖ್ಯಸ್ಥ (ಮೇಲ್ವಿಚಾರಣೆ ಮತ್ತು ರಿಕವರಿ): 1 ಹುದ್ದೆ
ಮುಖ್ಯಸ್ಥ (ಆಂತರಿಕ ಆಡಿಟ್ -Internal Audit): 1 ಹುದ್ದೆ
ಮುಖ್ಯಸ್ಥ (Chief-ಕಾನೂನು): 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು-ಅಪಾಯ ನಿರ್ವಹಣೆ (Deputy General Manager-Risk Management): 1 ಹುದ್ದೆ
ಮುಖ್ಯ ವ್ಯವಸ್ಥಾಪಕ (Chief Manager)- ಮೇಲ್ವಿಚಾರಣೆ ಮತ್ತು ರಿಕವರಿ): 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು- ಆಂತರಿಕ ಲೆಕ್ಕಪರಿಶೋಧನೆ (Deputy General Manager- Internal Audit): 1 ಹುದ್ದೆ 
ಮುಖ್ಯ ವ್ಯವಸ್ಥಾಪಕ -ಕಾನೂನು (Chief Manager -Law): 1 ಹುದ್ದೆ
ಪ್ರೋಟೋಕಾಲ್ ಅಧಿಕಾರಿ(Protocol Officer)/ತಾಂತ್ರಿಕ ಸಹಾಯಕ(Technical Assistant)/ವಿಶೇಷ ಕರ್ತವ್ಯದ ಅಧಿಕಾರಿ(Officer on Special Duty): 8 ಹುದ್ದೆಗಳು

ಶೈಕ್ಷಣಿಕ ವಿದ್ಯಾಭ್ಯಾಸ: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು.

ಮುಖ್ಯ ಅಪಾಯ ಅಧಿಕಾರಿ ಹುದ್ದೆಗೆ ಕಲೆ/ವಿಜ್ಞಾನ/ವಾಣಿಜ್ಯ/ಎಂಜಿನಿಯರಿಂಗ್‌ನಲ್ಲಿ ಪದವಿ ಮಾಡಿರಬೇಕು.
ಮುಖ್ಯಸ್ಥ (ಮೇಲ್ವಿಚಾರಣೆ ಮತ್ತು ರಿಕವರಿ) ಹುದ್ದೆಗೆ B.E./B.Tech./B.Sc. ಇಂಜಿನಿಯರಿಂಗ್/ವೆಚ್ಚ ಮತ್ತು ನಿರ್ವಹಣಾ ಲೆಕ್ಕಾಧಿಕಾರಿ (CMA)/ಕಂಪ್ಯೂಟರ್ ಕಾರ್ಯದರ್ಶಿ ಓದಿರಬೇಕು.
ಮುಖ್ಯಸ್ಥ (ಆಂತರಿಕ ಆಡಿಟ್) ಹುದ್ದೆಗೆ  CA/CMA ವಿದ್ಯಾರ್ಹತೆ ಪಡೆದಿರಬೇಕು.
ಮುಖ್ಯಸ್ಥ (ಕಾನೂನು) ಹುದ್ದೆಗೆ 5 ವರ್ಷಗಳ ಸಮಗ್ರ ಕಾನೂನು ಕೋರ್ಸ್ ಅಥವಾ LLB ಪದವಿ ಪಡೆದಿರಬೇಕು.
ಉಪ ಪ್ರಧಾನ ವ್ಯವಸ್ಥಾಪಕರು (ಅಪಾಯ ನಿರ್ವಹಣೆ)  ಹುದ್ದೆಗೆ  BE/BTech/BScಯಲ್ಲಿ ಎಂಜಿನಿಯರಿಂಗ್/ಸಿಎ/ಸಿಎಂಎ/ಸಿಎಸ್ ಮಾಡಿರಬೇಕು.
ಮುಖ್ಯ ವ್ಯವಸ್ಥಾಪಕ  (ಮೇಲ್ವಿಚಾರಣೆ ಮತ್ತು ರಿಕವರಿ) ಹುದ್ದೆಗೆ   ಹುದ್ದೆಗೆ B.E./B.Tech./B.Sc. ಇಂಜಿನಿಯರಿಂಗ್/ವೆಚ್ಚ ಮತ್ತು ನಿರ್ವಹಣಾ ಲೆಕ್ಕಾಧಿಕಾರಿ (CMA)/ಕಂಪ್ಯೂಟರ್ ಕಾರ್ಯದರ್ಶಿ ಓದಿರಬೇಕು.
ಉಪ ಪ್ರಧಾನ ವ್ಯವಸ್ಥಾಪಕರು (ಆಂತರಿಕ ಲೆಕ್ಕಪರಿಶೋಧನೆ) ಹುದ್ದೆಗೆ CA/CMA ವಿದ್ಯಾರ್ಹತೆ ಪಡೆದಿರಬೇಕು.
ಮುಖ್ಯ ವ್ಯವಸ್ಥಾಪಕ (ಕಾನೂನು)  ಹುದ್ದೆಗೆ 5 ವರ್ಷಗಳ ಸಮಗ್ರ ಕಾನೂನು ಕೋರ್ಸ್ ಅಥವಾ LLB ಪದವಿ ಪಡೆದಿರಬೇಕು.
ಪ್ರೋಟೋಕಾಲ್ ಅಧಿಕಾರಿ /ತಾಂತ್ರಿಕ ಸಹಾಯಕ/ವಿಶೇಷ ಕರ್ತವ್ಯದ ಅಧಿಕಾರಿ ಹುದ್ದೆಗಳಿಗೆ   ಯಾವುದೇ ವಿಭಾಗದಲ್ಲಿ ಕನಿಷ್ಠ 3 ವರ್ಷಗಳ ಅವಧಿಯ ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಮಾಡಿರಬೇಕು.

KUVEMPU UNIVERSITY: 2019-20ನೇ ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕುವೆಂಪು ವಿವಿ ನಿರ್ಧಾರ!

ವಯೋಮಿತಿ:  ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ. ಮುಖ್ಯಸ್ಥ ಹುದ್ದೆಗಳಿಗೆ ಗರಿಷ್ಠ 50 ವರ್ಷ  ಮತ್ತು ಉಪ ಪ್ರಧಾನ ವ್ಯವಸ್ಥಾಪಕ/ಮುಖ್ಯ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 53 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ₹1000 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. SC/ST/PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 2 ಲಕ್ಷದವರೆಗೂ ವೇತನ ದೊರೆಯಲಿದೆ.

IREDA RECRUITMENT 2022: ವಿವಿಧ ಹುದ್ದೆಗಳಿಗೆ ಐಆರ್‌ಇಡಿಎ ನೇಮಕಾತಿ

Follow Us:
Download App:
  • android
  • ios