IRCON Recruitment 2022: ಇಂಜಿನಿಯರಿಂಗ್ ಪದವೀಧರರನ್ನು ಆಹ್ವಾನಿಸಿದ ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ

ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್  ಖಾಲಿ ಇರುವ ವಿವಿಧ ಇಂಜಿನಿಯರ್ ಹುದ್ದೆಗಳು ಸೇರಿ ಒಟ್ಟು  389 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 12 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

IRCON Recruitment 2022 notification for Works Engineers, Geologist and other post  gow

ಬೆಂಗಳೂರು(ಫೆ.28): ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ (Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸೀನಿಯರ್ ವರ್ಕ್ಸ್ ಇಂಜಿನಿಯರ್, ಭೂವಿಜ್ಞಾನಿ ಸೇರಿ ಒಟ್ಟು  389 ಹುದ್ದೆಗಳು  ಖಾಲಿ ಇದ್ದು ಅರ್ಹ  ಮತ್ತು  ಆಸಕ್ತ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು.  ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 12 ,2022  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ  ಇಲಾಖೆಯ ಅಧಿಕೃತ ವೆಬ್‌ ತಾಣ https://www.ircon.org ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 389  ಹುದ್ದೆಗಳ ಮಾಹಿತಿ:
ಸೀನಿಯರ್ ವರ್ಕ್ಸ್ ಇಂಜಿನಿಯರ್/ಸಿವಿಲ್ (Senior Works Engineer / Civil )-23 ಹುದ್ದೆಗಳು
ವರ್ಕ್ಸ್ ಇಂಜಿನಿಯರ್/ಸಿವಿಲ್ (Works Engineer / Civil )- 163 ಹುದ್ದೆಗಳು
ವರ್ಕ್ಸ್ ಇಂಜಿನಿಯರ್/ಸಿವಿಲ್ (Works Engineer / Civil )- 163 ಹುದ್ದೆಗಳು
ಸೈಟ್ ಸೂಪರ್‌ವೈಸರ್/ಸಿವಿಲ್ (Site Supervisor / Civil )-01 ಹುದ್ದೆಗಳು
ವರ್ಕ್ಸ್ ಇಂಜಿನಿಯರ್/ಎಲೆಕ್ಟ್ರಿಕಲ್ (Works Engineer/ Electrical) -09 ಹುದ್ದೆಗಳು
ಸೀನಿಯರ್ ವರ್ಕ್ಸ್ ಇಂಜಿನಿಯರ್/ಎಸ್ and ಟಿ (Senior Works Engineer / S  and T) -08 ಹುದ್ದೆಗಳು
ವರ್ಕ್ಸ್ ಇಂಜಿನಿಯರ್/ಎಸ್&ಟಿ (Works Engineer/ S & T) -21 ಹುದ್ದೆಗಳು
ಭೂವಿಜ್ಞಾನಿ (Geologist) - 01 ಹುದ್ದೆ

INDIAN NAVY RECRUITMENT 2022: ನೌಕಾದಳದ SSC ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿದ ಹುದ್ದೆಗನುಸಾರ  ವಿದ್ಯಾರ್ಹತೆ ಪಡೆದಿರಬೇಕು. 
ವಿವಿಧ ಇಂಜಿನಿಯರಿಂಗ್ ಹುದ್ದೆಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಎಂಜಿನಿಯರಿಂಗ್​ ನಲ್ಲಿ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.  
ಭೂ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸುವವರು  ಭೂ ವಿಜ್ಞಾನ ವಿಷಯದಲ್ಲಿ M.Sc/ M.Tech ಅಥವಾ ಭೂ ವಿಜ್ಞಾನ ಎಂಜಿನಿಯರಿಂಗ್​  ಮಾಡಿರಬೇಕು. ಮಾತ್ರವಲ್ಲ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.  

ವಯೋಮಿತಿ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ   ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ  35 ವರ್ಷಗಳ ಮಿತಿ ನಿಗದಿಪಡಿಸಲಾಗಿದೆ. OBC ಅವರಿಗೆ ಗರಿಷ್ಠ 38 ವರ್ಷ, SC / ST ಅಭ್ಯರ್ಥಿಗಳಿಗೆ 40 ವರ್ಷಗಳ ವಯೋಮಿತಿ ನೀಡಲಾಗಿದೆ. 

ಅರ್ಜಿ ಶುಲ್ಕ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವೇತನ ₹25000 ದಿಂದ ₹40,000 ವರೆಗೆ  ಪಡೆಯಲಿದ್ದಾರೆ.  

ಅರ್ಜಿ ಸಲ್ಲಿಸುವ ವಿಧಾನ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ https://www.ircon.org/index.php?lang=en ಗೆ ಭೇಟಿ ನೀಡಿ. ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಮಾರ್ಚ್ 12 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. 
 

Latest Videos
Follow Us:
Download App:
  • android
  • ios