ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಜೂನಿಯರ್ ಆಪರೇಟರ್ ಮತ್ತು ಅಟೆಂಡೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಒಟ್ಟು 246 ಹುದ್ದೆಗಳು ಖಾಲಿ ಇವೆ. ಪಿಯುಸಿ, ಐಟಿಐ ಓದಿದ ಅಭ್ಯರ್ಥಿಗಳು ಫೆಬ್ರವರಿ 23, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ IOCL ನ ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ.
ಪಿಯುಸಿ, ಐಟಿಐ ಓದಿದವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತದ ಪ್ರಮುಖ PSU ಕಂಪನಿಗಳಲ್ಲಿ ಒಂದಾಗಿದೆ. ಇದು ಜೂನಿಯರ್ ಆಪರೇಟರ್ (ಗ್ರೇಡ್ I) ಮತ್ತು ಜೂನಿಯರ್ ಅಟೆಂಡೆಂಟ್ (ಗ್ರೇಡ್ I) ಹುದ್ದೆಗಳಿಗೆ ನೇಮಕಾತಿ ಮಾಡ್ತಾ ಇದೆ. ಈ ನೇಮಕಾತಿಯು ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಅನುಭವಿ ಮತ್ತು ಹೊಸ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ನಿವೃತ್ತಿಯಾಗಿರುವ ಅಧಿಕಾರಿಗಳಿಗೆ SBIಯಲ್ಲಿ 1194 ಹುದ್ದೆಗಳು, ಇಂದೇ ಅರ್ಜಿ ಸಲ್ಲಿಸಿ
ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 246. ಈ ಹುದ್ದೆಗಳನ್ನು ವಿವಿಧ ರಾಜ್ಯಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ವರ್ಗಕ್ಕೂ ಇಲ್ಲಿ ಹುದ್ದೆಗಳನ್ನು ಮೀಸಲಿಡಲಾಗಿದೆ. IOCL/MKTG/HO/REC/2025ರ ಅಡಿಯಲ್ಲಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆಯು ಸವಾಲಿನ ಕೆಲಸದಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 3 ರಿಂದ ಫೆಬ್ರವರಿ 23, 2025 ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. IOCL ಜೂನಿಯರ್ ಆಪರೇಟರ್ ನೇಮಕಾತಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
DRDO ಇಂಟರ್ನ್‌ಶಿಪ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒದಗಿಬಂತು ಸುವರ್ಣಾವಕಾಶ
ಜೂನಿಯರ್ ಆಪರೇಟರ್ (ಗ್ರೇಡ್ I)
ವಿದ್ಯಾರ್ಹತೆ: 10 ನೇ ತರಗತಿ ಪಾಸ್ ಮತ್ತು NCVT/SCVT ಯಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಮೆಕಾನಿಕಲ್, ಫಿಟ್ಟರ್‌ನಂತಹ ನಿರ್ದಿಷ್ಟ ವಿಭಾಗಗಳಲ್ಲಿ 2 ವರ್ಷಗಳ ಐಟಿಐ ಪ್ರಮಾಣಪತ್ರ.
ಕೆಲಸದ ಅನುಭವ: ಕಾರ್ಖಾನೆ ಅಥವಾ ಉತ್ಪಾದನಾ ಘಟಕದಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವ (ತರಬೇತಿ ಹೊರತುಪಡಿಸಿ). ಎರಡು ವರ್ಷಗಳ ಐಟಿಐ ಅಧ್ಯಯನದ ನಂತರ ಅಪ್ರೆಂಟಿಸ್ ಕಾಯಿದೆಯಡಿ ತರಬೇತಿ ಪಡೆದಿದ್ದರೆ, ಅದನ್ನು ಅನುಭವವೆಂದು ಪರಿಗಣಿಸಲಾಗುತ್ತದೆ.
ಪ್ರಮುಖ ಹುದ್ದೆಗಳಿಗೆ ಕರೆ ಕೊಟ್ಟ ಟೆಸ್ಲಾ ಇಂಡಿಯಾ, ಈಗಲೇ ಅರ್ಜಿ ಸಲ್ಲಿಸಿ
ಜೂನಿಯರ್ ಅಸಿಸ್ಟೆಂಟ್ (ಗ್ರೇಡ್ I) - ವಿಶೇಷ ನೇಮಕಾತಿ (ವಿಕಲಚೇತನರಿಗೆ)
ವಿದ್ಯಾರ್ಹತೆ: 10ನೇ ತರಗತಿ ಪಾಸ್.
ಕೆಲಸದ ಅನುಭವ: ಅಗತ್ಯವಿಲ್ಲ.
IOCL ಜೂನಿಯರ್ ಆಪರೇಟರ್ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹುದ್ದೆಯ ಹೆಸರು: ಜೂನಿಯರ್ ಆಪರೇಟರ್ (ಗ್ರೇಡ್ I) ಮತ್ತು ಜೂನಿಯರ್ ಅಟೆಂಡೆಂಟ್ (ಗ್ರೇಡ್ I)
ಒಟ್ಟು ಖಾಲಿ ಹುದ್ದೆಗಳು: 246
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 23, 2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಅಧಿಕೃತ ವೆಬ್‌ಸೈಟ್: iocl.com
