IOCL Recrutiment: 527 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಕೇಂದ್ರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಇಲಾಖೆಯಡಿ ಕಾರ್ಯ ನಿರ್ವಹಿಸುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ.(IOCL) 527 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021ರ ಡಿಸೆಂಬರ್ 4 ಕೊನೆಯ ದಿನವಾಗಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಕೇಂದ್ರ ಸರ್ಕಾರ (Central Government) ದ ಸ್ವಾಮ್ಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation- IOCL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಐಒಸಿಎಲ್ (IOCL) ಬರೋಬ್ಬರೀ 527 ತಾಂತ್ರಿಕ (Technical) ಮತ್ತು ತಾಂತ್ರಿಕೇತರ (Non-Technical) ಅಪ್ರೆಂಟಿಸ್ (Apprentice) ಪೋಸ್ಟ್‌ಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ. (IOCL) ಕಂಪನಿಯು ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಶುರು ಮಾಡಿದೆ. 2021ರ ಡಿಸೆಂಬರ್ 4 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡನ ಅಧಿಕೃತ ವೆಬ್ಸೈಟ್ iocl.com ನಲ್ಲಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಅಭಿಯಾನದ ಮೂಲಕ ಪಶ್ಚಿಮ ಬಂಗಾಳ (West Bengal), ಬಿಹಾರ (Bihar), ಒಡಿಶಾ (Odisha), ಜಾರ್ಖಂಡ್ (Jhargkhand) ಮತ್ತು ಅಸ್ಸಾಂ (Assam) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಒಟ್ಟು 527 ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ (Apprentice) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ 236 ಹುದ್ದೆಗಳು, ಬಿಹಾರ 68 ಹುದ್ದೆಗಳು, ಒಡಿಶಾ 69 ಹುದ್ದೆಗಳು, ಜಾರ್ಖಂಡ್ 35 ಹುದ್ದೆಗಳು ಹಾಗೂ ಅಸ್ಸಾಂನಲ್ಲಿ 119 ಹುದ್ದೆಗಳನ್ನ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಯು ಭರ್ತಿ ಮಾಡಲಾಗುತ್ತದೆ.
ಐಒಸಿಎಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 19 ರಂದು ತಾತ್ಕಾಲಿಕವಾಗಿ ನಡೆಸಲಾಗುವ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗಾಗಿ, ಅಭ್ಯರ್ಥಿಗಳು ಅಗತ್ಯ ಪರೀಕ್ಷೆಗೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅಪೇಕ್ಷಿತ.
1664 ಅಪ್ರೆಂಟಿಸ್ ಹುದ್ದೆಗಳ ನೇಮಕ್ಕೆ ಉತ್ತರ ಮಧ್ಯೆ ರೇಲ್ವೆ ಅರ್ಜಿ ಆಹ್ವಾನ
ಅಂದಹಾಗೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Ltd) ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯು 12 ತಿಂಗಳುಗಳಾಗಿರುತ್ತದೆ. 15 ತಿಂಗಳ ತರಬೇತಿಯನ್ನು ಹೊಂದಿರುವ ಟ್ರೇಡ್ ಅಪ್ರೆಂಟಿಸ್ ಡೇಟಾ ಎಂಟ್ರಿ ಆಪರೇಟರ್ (ಫ್ರೆಷರ್ ಅಪ್ರೆಂಟಿಸ್‌ಗಳು) ಮತ್ತು 14 ತಿಂಗಳ ತರಬೇತಿಯನ್ನು ಹೊಂದಿರುವ ಟ್ರೇಡ್ ಅಪ್ರೆಂಟಿಸ್ ರಿಟೇಲ್ ಸೇಲ್ಸ್ ಅಸೋಸಿಯೇಟ್ (ಫ್ರೆಶರ್) ಹೊರತುಪಡಿಸಿ ಉಳಿದೆಲ್ಲ ಅಪ್ರೆಂಟಿಸ್ ಹುದ್ದೆಗಳ ತರಬೇತಿ ಅವಧಿ 12 ತಿಂಗಳು ಆಗಿರುತ್ತವೆ ಎಂದು ಐಒಸಿಎಲ್ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯ (General) ಮತ್ತು EWS ವರ್ಗದ ಅಭ್ಯರ್ಥಿಗಳ ವಯೋಮಿತಿ ಅಕ್ಟೋಬರ್ 31 ಕ್ಕೆ ಅನ್ವಯಿಸುವಂತೆ 18 ರಿಂದ 24 ವರ್ಷಗಳ ಒಳಗೆ ಇರಬೇಕು. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ SC/ ST/ OBC (NCL)/ PwBD ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಸಡಿಲಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ. ( IOCL) ನ ಅಧಿಕೃತ ವೆಬ್‌ಸೈಟ್ iocl.comಗೆ ಭೇಟಿ ನೀಡಿ, ಡಿಸೆಂಬರ್ 4ರೊಳಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ತಿಳಿಸಿರುವಂತೆ ಐಒಸಿಎಲ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಹಾಗಾಗಿ, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಡ ಮಾಡದೇ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಐಒಸಿಎಲ್‌ನ ಈ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಬ್ಯರ್ಥಿಗಳಿಗೆ ಆಕರ್ಷಕ ಸ್ಟೈಪಂಡ್ ಕೂಡ ದೊರೆಯಲಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು (IOCL) ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಅಧೀನ ಕಾರ್ಯನಿರ್ವಹಿಸುತ್ತದೆ. ಇದೊಂದು ಪೆಟ್ರೋಲಿಂ ರಿಪೈನ್ ಕಂಪನಿಯಾಗಿದೆ.
Good News: ಐಟಿ ಸಾಫ್ಟ್‌ವೇರ್ ಕ್ಷೇತ್ರದ ನೇಮಕಾತಿಯಲ್ಲಿ ಶೇ.85 ಹೆಚ್ಚಳ