ಭಾರತೀಯ ರೈಲ್ವೆಯಲ್ಲಿ 12 ಸಾವಿರ TTE ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಇಲಾಖೆ!
ಭಾರತೀಯ ರೈಲ್ವೇಯಲ್ಲಿ 12,000 TTE ಹುದ್ದೆಗೆ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅಧಿಕೃತ ಸೈಟ್‌ನಲ್ಲಿ ಅರ್ಹರು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಕೆ, ಅರ್ಹತೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಆ.19) ಭಾರತೀಯ ರೈಲ್ವೇ ಇದೀಗ TTE ಹುದ್ದೆಗೆ ನೇಮಕಾತಿ ಆರಂಭಿಸಿದೆ. 2024ರ ಸಾಲಿನ TTE ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಖಾಲಿ ಇರುವ 12,000 ಹುದ್ದೆಗಳಿಗೆ ನೇಮಕಾತಿ ಆರಂಭಗೊಂಡಿದೆ. ಅರ್ಹರು ಅಧಿಕೃತ ಸೈಟ್ ಮೂಲಕ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಅವಕಾಶ ಮಾಡಿಕೊಡಲಾಗುತ್ತದೆ. ಈ ಮೂಲಕ ಅತೀ ದೊಡ್ಡ ನೇಮಕಾತಿ ಭಾರತೀಯ ರೈಲ್ವೇಯಲ್ಲಿ ಆರಂಭಗೊಂಡಿದೆ.
ಅರ್ಜಿ ಸಲ್ಲಿಸಲು ಬಯಸುವರಿಗೆ ಕನಿಷ್ಠ ಅರ್ಹತೆಗಳನ್ನೂ ನೀಡಲಾಗಿದೆ. ವಯಸ್ಸು ಜನವರಿ 1, 2024ಕ್ಕೆ ಅನುಗುಣವಾಗಿ ಕನಿಷ್ಠ 18 ಹಾಗೂ ಗರಿಷ್ಠ 30 ದಾಟಿರಬಾರದು. 10 ಹಾಗೂ 12ನೇ ತರಗತಿ ಪಾಸ್ ಆಗಿರುವು, ಡಿಪ್ಲೋಮಾ ಪೂರೈಸಿರುವ ಅಭ್ಯರ್ಥಿಗಳು TTE ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವಾಗ ಕೆಲ ದಾಖಲೆಗಳನ್ನು ಲಗತ್ತಿಸಬೇಕು.
ರಕ್ಷಾ ಬಂಧನ ರಜೆಗೆ ಸ್ಯಾಲರಿ ಕಟ್ ನಿರ್ಧಾರ ವಿರೋಧಿಸಿದ ಹೆಚ್ಆರ್ ಅಮಾನತು, ಕಂಪನಿ ಹೇಳಿದ್ದೇನು?
ಜನನ ಪ್ರಮಾಣ ಪತ್ರ, 12ನೇ ತರಗತಿ ಅಥವಾ 10ನೇ ತರಗತಿ ಅಥವಾ ಡಿಪ್ಲೋಮಾ ಅಂಕ ಪಟ್ಟಿ ಪ್ರತಿಯನ್ನೂ ಲಗತ್ತಿಸಬೇಕು. ಇದರ ಜೊತೆಗೆ ಆಧಾರ್ ಕಾರ್ಡ್, ಪಠ್ಯೇತರ ಚಟುವಟಿಕಗಳಾದ ಕ್ರೀಡೆ ಸೇರಿದಂತೆ ಇತರ ಸಾಧನೆಗಳ ಪ್ರಮಾಣ ಪತ್ರ, ವಿಳಾಸ ದಾಖಲೆಗಳನ್ನು ನೀಡಬೇಕು. ಅರ್ಜಿ ಸಲ್ಲಿಕೆಗೆ ಆರಂಭಗೊಂಡ ಬಳಿಕ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. 30 ದಿನದ ಬಳಿಕ ಸಲ್ಲಿಸಿದ ಅರ್ಜಿಗಳ ಮಾನ್ಯವಾಗುವುದಿಲ್ಲ. ಅರ್ಜಿ ಸಲ್ಲಿಕೆ ವೇಳೆ ಅಪೇಕ್ಷಿಸುವ ಹುದ್ದೆ, ಕೆಟಗರಿ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.
ಕಂಪ್ಯೂಟರ್ ಟೆಸ್ಟ್ ಹಾಗೂ ಫಿಸಿಕಲ್ ಟೆಸ್ಟ್ ಎರಡು ಮಾದರಿಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲು ಕಂಪ್ಯೂಟರ್ ಪರೀಕ್ಷೆಯಲ್ಲಿ 200 ಅಂಕಗಳ ಪ್ರಶ್ನೆ ಕೇಳಲಾಗುತ್ತದೆ. ಸಾಮಾನ್ಯ ಜ್ಞಾನದಿಂದ ಹಿಡಿದು ಕೆಲ ವಿಷಗಳ ಕುರಿತು ಪರೀಕ್ಷೆ ಇದಾಗಿರುತ್ತದೆ. 2 ಗಂಟೆ ಅವಧಿಯಲ್ಲಿ ಪರೀಕ್ಷೆ ಬರೆಯಬೇಕು. ತಪ್ಪು ಉತ್ತರಕ್ಕೆ ಅಂಕ ಕಡಿತಗೊಳ್ಳಲಿದೆ.ಫಿಸಿಕಲ್ ಟೆಸ್ಟ್‌ನಲ್ಲಿ ಆರೋಗ್ಯ, ದೈಹಿಕ ಸಾಮರ್ಥ್ಯ ಸೇರಿದಂತೆ ಇತರ ಕೆಲ ಪರೀಕ್ಷೆಗಳು ನಡೆಯಲಿದೆ.
ಅರ್ಜಿ ಸಲ್ಲಿಸಲು ಬಯಸುವವರು https://rrcb.gov.in/ ವೈಬ್‌ಸೈಟ್ ಕ್ಲಿಕ್ ಮಾಡಿ ಅಪ್ಲಿಕೇಶನ್ ಭರ್ತಿ ಮಾಡಿ ಸಲ್ಲಿಕೆ ಮಾಡಬಹುದು. ಇದೇ ವೇಳೆ ಅರ್ಜಿ ಸಲ್ಲಿಕೆ ಶುಲ್ಕವನ್ನು ಪಾವತಿಸಬೇಕು. ಒಂದು ಬಾರಿ ಅರ್ಜಿ ಸಲ್ಲಿಕೆ ಆರಂಭಗೊಂಡ ಬಳಿಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಈ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಬಳಿಕ ಅರ್ಹ ಅಭ್ಯರ್ಥಿಗಳನ್ನು ಪರೀಕ್ಷೆ ಹಾಜರಾಗಲು ಸೂಚಿಸಲಾಗುತ್ತದೆ. ಬಳಿಕ ಎರಡು ಹಂತ ಪರೀಕ್ಷೆಯಲ್ಲಿ ತೇರ್ಗಡೆಯಾದ ಸೂಕ್ತ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗಿಗಳಿಗೆ ಕಾರು ಬೈಕ್ ಉಡುಗೊರೆ ನೀಡುವ ಸೂರತ್ ಉದ್ಯಮಿ ಈ ಬಾರಿ ವಿಶೇಷ ಘೋಷಣೆ!