ICTS Recruitment 2023: ಬೆಂಗಳೂರಿನ ಸೈದ್ಧಾಂತಿಕ ವಿಜ್ಞಾನಗಳ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ
ಬೆಂಗಳೂರಿನಲ್ಲಿರುವ ಸೈದ್ಧಾಂತಿಕ ವಿಜ್ಞಾನಗಳ ಅಂತಾರಾಷ್ಟ್ರೀಯ ಕೇಂದ್ರವು ಖಾಲಿ ಇರುವ ಖಾಯಂ ಡಾಕ್ಟರಲ್ ಫೆಲೋ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆರ್ಜಿ ಸಲ್ಲಿಕೆಗೆ 2023ರ ಜನವರಿ 8ರಂದು ಕೊನೆ ದಿನವಾಗಿದೆ.
ಬೆಂಗಳೂರು (ಡಿ.2): ಬೆಂಗಳೂರಿನಲ್ಲಿರುವ ಸೈದ್ಧಾಂತಿಕ ವಿಜ್ಞಾನಗಳ ಅಂತಾರಾಷ್ಟ್ರೀಯ ಕೇಂದ್ರವು ಖಾಲಿ ಇರುವ ಖಾಯಂ ಡಾಕ್ಟರಲ್ ಫೆಲೋ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ನೇಮಕಾತಿ ಮಾನದಂಡಗಳೇನು?
ಹುದ್ದೆಗಳು ಎಷ್ಟುಇವೆ ಎಂದು ನಿರ್ದಿಷ್ಟವಾಗಿ ತಿಳಿಸಿಲ್ಲ. ಅಭ್ಯರ್ಥಿಯು ಹುದ್ದೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಪೂರ್ಣಗೊಳಿಸಿರಬೇಕಿದ್ದು, ಜೊತೆಗೆ ಪಿ.ಎಚ್‌ಡಿ ಕಡ್ಡಾಯವಾಗಿದೆ. ಅಲ್ಲದೇ, ಕನಿಷ್ಠ 21 ವರ್ಷ ಪೂರೈಸಿರಬೇಕಿದ್ದು, ಗರಿಷ್ಠ ವಯೋಮಿತಿ ವಿವರ ತಿಳಿಸಲಾಗಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಹೊಸ ಉದ್ಯೋಗಿಗೆ ಮಾಸಿಕವಾಗಿ 47,000ದಿಂದ 54,000 ರು. ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯ ಮೂಲಕ ಪಡೆದುಕೊಳ್ಳಬಹುದು.
* ಆರ್ಜಿ ಸಲ್ಲಿಕೆಗೆ 2023ರ ಜನವರಿ 8ರಂದು ಕೊನೆ ದಿನ
* ಉದ್ಯೋಗವು ಬೆಂಗಳೂರಿನಲ್ಲಿ ಆಗಿದೆ
* ಮಾಹಿತಿ ಬೇಕಿದ್ದಲ್ಲಿ https://www.icts.res.in/
ಮಂಗಳೂರು ವಿವಿ: ವಿವಿಧ ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲಾಗುವ ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದ ಬೇಡಿಕೆ ಬರುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಮತ್ತೊಮ್ಮೆ ಆಹ್ವಾನಿಸಲಾಗಿದೆ.
ವಿಶ್ವವಿದ್ಯಾನಿಲಯ ಆವರಣ ಮಂಗಳಗಂಗೋತ್ರಿ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ವಿವಿ ಸಂಧ್ಯಾ ಕಾಲೇಜು ಮಂಗಳೂರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ, ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರ ಹಾಗೂ ಮಂಗಳೂರು ವಿವಿಯ ಸಂಯೋಜಿತ ಕಾಲೇಜುಗಳು (ಸರ್ಕಾರಿ ಕೋಟಾ ಸೀಟುಗಳಿಗೆ) ಮತ್ತು ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುವ ಸ್ನಾತಕೋತ್ತರ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.
ಪ್ರವೇಶಾತಿಯನ್ನು ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಮೂಲಕ ಮಾಡಲಾಗುವುದು. ಮಾಹಿತಿಯು https://mangaloreuniversity.ac.in/mu-uucmsನಲ್ಲಿ ಲಭ್ಯ. ಪ್ರವೇಶಾತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು https://mangaloreuniversity.ac.in/ ನಲ್ಲಿ ಲಭ್ಯವಿರುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ ದಿನ.
ಪಿಎಸೈ ಅಕ್ರಮ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಧಾರವಾಡ: ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಆರೋಪದ ಅಡಿ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿಗಳನ್ನು ಗುರುವಾರ ಇಲ್ಲಿಯ ದಿವಾಣಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ರುದ್ರಗೌಡ ಪಾಟೀಲ ಹಾಗೂ ಕಾಶೀನಾಥ ಎಂಬುವರನ್ನು ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.
TECH COMPANIES LAYING OFF: 20 ಕ್ಕೂ ಹೆಚ್ಚು ಟೆಕ್ ಕಂಪೆನಿಗಳಲ್ಲಿ ಸರಣಿ ಉದ್ಯೋಗ ಕಡಿತ!
ಆದೇಶ ಹೊರಬಂದ ಆನಂತರ ಆರೋಪಿಗಳನ್ನು ಬಿಗಿ ಪೊಲೀಸ್ ಬಂದೋಬಸ್‌್ತ ಮಧ್ಯೆ ಕರೆದುಕೊಂಡು ಹೋಗುವ ವೇಳೆ, ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿದ ರುದ್ರಗೌಡ, ಮಾಧ್ಯಮದಲ್ಲಿ ಇಷ್ಟೆಲ್ಲ ಬಿತ್ತರಗೊಳ್ಳುತ್ತಿದೆ. ಆದರೆ, ಅದು ಸುಳ್ಳು. ತಮ್ಮ ಬಳಿ ಏನಾದರೂ ಸಾಕ್ಷಿ ಇದೆಯಾ? ಒಂದೇ ಒಂದು ಸಾಕ್ಷಿ ತೋರಿಸಿ. ಸಿಐಡಿ ಬಳಿಯೂ ಒಂದೇ ಒಂದೇ ಸಾಕ್ಷಿ ಇಲ್ಲ. ಇದೊಂದು ಅನ್‌ಲಾಜಿಕಲ್ ಪ್ರಕರಣ. ಆದರೂ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿಕೆ ನೀಡಿದರು.