Asianet Suvarna News Asianet Suvarna News

HAL Recruitment: ಸ್ಟಾಫ್ ನರ್ಸ್, ಫಿಜಿಯೋ ಥೆರಪಿಸ್ಟ್ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (Hindustan Aeronautics Limited-HAL) ಕಂಪನಿಯು ಖಾಲಿ ಇರುವ ಸ್ಟಾಫ್ ನರ್ಸ್, ಫಿಜಿಯೋಥೆರಪಿಸ್ಟ್ ಹಾಗೂ ಇತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಜಾಲತಾಣಕ್ಕೆ ಭೇಟಿ ನೀಡಬಹುದು.

HAL is recruiting Staff nurse Physiotherapist and other posts
Author
Bengaluru, First Published Nov 29, 2021, 5:08 PM IST

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited-HAL) 11 ಸ್ಟಾಫ್ ನರ್ಸ್, ಫಿಸಿಯೋ ಥೆರಪಿಸ್ಟ್‌ಗಳು ಸೇರಿದಂತೆ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 14  ಕೊನೆಯ ದಿನಾಂಕವಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು HALನ ಅಧಿಕೃತ ವೆಬ್‌ಸೈಟ್  hal-india.co.in ಮೂಲಕ ಅರ್ಜಿ ಸಲ್ಲಿಸಬಹುದು. ಸ್ಟಾಫ್ ನರ್ಸ್ (Staff Nurse) 07 ಹುದ್ದೆ,   ಪಿಸಿಯೋಥೆರಪಿಸ್ಟ್ (Physiotherapist ) - 1 ಹುದ್ದೆ, ಫಾರ್ಮಾಸಿಸ್ಟ್ (Pharmacist ) - 1 ಹುದ್ದೆಗೆ ಹಾಗೂ ಡ್ರೆಸ್ಸರ್ (Dresser ) - 2 ಹುದ್ದೆಗಳು ಖಾಲಿ ಇದ್ದು, ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್, ಫಿಜಿಯೋಥೆರಪಿಸ್ಟ್, ಡ್ರೆಸ್ಸೆರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು. ಕೋವಿಡ್‌ನಿಂದ ದೇಶ ಚೇತರಿಸಿಕೊಂಡು ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದೆ. ಅದರೊಂದಿಗೆ ಎಲ್ಲ ಆರ್ಥಿಕ ಚಟುವಟಿಕೆಗಳು ಕೂಡ ಹಿಂದಿನ ಸ್ಥಿತಿಗೆ ಮರಳುತ್ತಿದ್ದು, ಬಹುತೇಕ ಎಲ್ಲ ರಂಗಗಳಲ್ಲಿ ನೇಮಕಾತಿ ಪ್ರಕ್ರಿಯೆಯೂ ಹೆಚ್ಚಾಗುತ್ತಿದೆ. ಖಾಸಗಿ ಮತ್ತು ಸರ್ಕಾರಿ ಎರಡೂ ವಲಯಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ, ಎಚ್‌ಎಎಲ್ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. 

ಸ್ಟಾಫ್ ನರ್ಸ್ (Staff Nurse) ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಪಿಯುಸಿ (PUC) ಜೊತೆಗೆ ಜನರಲ್ ನರ್ಸಿಂಗ್ (General Nursing) ಮತ್ತು ಮಿಡ್ವೈಫರಿ (Midwifery) ಯಲ್ಲಿ 3 ವರ್ಷಗಳ ಡಿಪ್ಲೋಮಾ (Diploma) ಮಾಡಿರಬೇಕು. ಫಿಜಿಯೋಥೆರಪಿಸ್ಟ್ (Physiotherapist)  ಹುದ್ದೆಗೆ ಪಿಯುಸಿ (PUC) ಜೊತೆಗೆ 2 ವರ್ಷಗಳ ಪಿಜಿಯೋಥೆರಪಿ ಡಿಪ್ಲೋಮಾ (Diploma in Physiotherapy) ಮಾಡಿರಬೇಕು. ಫಾರ್ಮಾಸಿಸ್ಟ್ (Pharmacist) ಹುದ್ದೆಗೆ ಪಿಯುಸ (PUC) ಜೊತೆಗೆ 2 ವರ್ಷಗಳ ಡಿ ಫಾರ್ಮಾ (D’ Pharma) ಮಾಡಿರಬೇಕು. ಡ್ರೆಸ್ಸೆರ್ (Dresser) ಹುದ್ದೆಗೆ ಪಿಯುಸಿ (PUC) ಜೊತೆಗೆ ಭಾರತೀಯ ರೆಡ್ ಕ್ರಾಸ್ (Indian Red cross) ಅಥವಾ ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ ಅಸೋಸಿಯೇಷನ್ ಅಥವಾ ಅಂತಹ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿಯ ಪ್ರಮಾಣಪತ್ರ (Certificate of Training) ಹೊಂದಿರಬೇಕು.

Jobs Vacancy: ಭಾರತೀಯ ಐಟಿ ಕ್ಷೇತ್ರದಿಂದ ಭರ್ಜರಿ ನೇಮಕಾತಿ !

ಇನ್ನು ಅಭ್ಯರ್ಥಿಗಳು RTGS ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು. UR / OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂ. ಆಗಿರುತ್ತದೆ. SC / ST/ PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಲಿಖಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎಚ್ಎಎಲ್ ಹೊರಡಿಸಿರುವ ಅಧಿಸಚೂನೆಯನ್ನು ವೆಬ್‌ಸೈಟಿಗೆ ಭೇಟಿ ನೀಡಿ ತಿಳಿದುಕೊಳ್ಳಿ. 

ಸ್ಟಾಫ್ ನರ್ಸ್ (Staff Nurse), ಫಾರ್ಮಾಸಿಸ್ಟ್ (Pharmacist), ಫಿಜಿಯೋ ಥೆರಪಿಸ್ಟ್ (Physiotherapist ), ಡ್ರೆಸ್ಸೆರ್ (Dresser) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿ (Bengaluru)ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಸ್ಟಾಫ್ ನರ್ಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 37,383 ರೂ.ವರೆಗೂ ವೇತನ ಸಿಗಲಿದೆ. ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಎಚ್‌ಎಎಲ್‌ ಅಧಿಕೃತ ಜಾಲತಾಣಕ್ಕೆ  ಭೇಟಿ ನೀಡಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021ರ ಡಿಸೆಂಬರ್ 14 ಕೊನೆಯ ದಿನವಾಗಿದೆ ಎಂಬುದನ್ನ ಅಭ್ಯರ್ಥಿಗಳು ಮರೆಯ ಬಾರದು. 

ಸಾರ್ವಜನಿಕ ವಲಯದ ಪ್ರಮುಖ ಕಂಪನಿಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯು  ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, 1940ರಲ್ಲಿ ಸ್ಥಾಪನೆಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಇಂಥ ಕಂಪನಿಯಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ. 

Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

Follow Us:
Download App:
  • android
  • ios