ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ಹೆಚ್ಚಾಯ್ತು ಗ್ರಾಚ್ಯುಟಿ

ಕೇಂದ್ರ ಸರ್ಕಾರ, ತನ್ನ ನೌಕರರಿಗೆ ಖುಷಿ ಸುದ್ದಿ ನೀಡಿದೆ. ನಿವೃತ್ತಿ ಸಂದರ್ಭದಲ್ಲಿ ಸಿಗುವ ಗ್ರಾಚ್ಯುಟಿಯಲ್ಲಿ ಏರಿಕೆ ಮಾಡಿದೆ. ಏಳನೇ ವೇತನ ಆಯೋಗದ ಶಿಫಾರಸ್ಸಿನ ಮೇಲೆ ಇದು ಜಾರಿಗೆ ಬಂದಿದೆ. 
 

gratuity hiked for central government employees roo

ಕೇಂದ್ರ ಸರ್ಕಾರಿ ನೌಕರ (central government employees)ರಿಗೆ ಕೇಂದ್ರ ಸರ್ಕಾರ (Central Government) ಮತ್ತೊಂದು ಖುಷಿ ಸುದ್ದಿಯೊಂದನ್ನು ನೀಡಿದೆ. ಕೆಲ ದಿನಗಳ ಹಿಂದಷ್ಟೆ, ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ (Dearness Allowance)ಯನ್ನು ಶೇಕಡಾ 50ರಷ್ಟು ಹೆಚ್ಚಿಸಿತ್ತು. ಈಗ  ಗ್ರಾಚ್ಯುಟಿ ಭತ್ಯೆಯನ್ನು ಹೆಚ್ಚಿಸಿದೆ. ಈ ಹಿಂದೆ 20 ಲಕ್ಷವಿದ್ದ ಗ್ರಾಚ್ಯುಟಿ (Gratuity) ಭತ್ಯೆ ಈಗ 25 ಲಕ್ಷವಾಗಿದೆ. ಜನವರಿ 1, 2024 ರಿಂದ ಇದು ಜಾರಿಗೆ ಬಂದಿದೆ. ಸರ್ಕಾರಿ ನೌಕರರಿಗೆ ನಿವೃತ್ತಿ ನಂತ್ರ ಸಿಗುವ ಅಥವಾ ಮರಣದ ನಂತ್ರ ಅವರ ಕುಟುಂಬಕ್ಕೆ ಸಿಗುವ ಗ್ರಾಚ್ಯುಟಿ ಮೊತ್ತ ಏರಿಕೆಯಾಗಿದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಅಡಿಯಲ್ಲಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಕಾಲ ಕಾಲಕ್ಕೆ ಉದ್ಯೋಗಿಗಳ ಗ್ರಾಚ್ಯುಟಿಯನ್ನು ಹೆಚ್ಚಿಸಬೇಕೆಂದು ಏಳನೇ ವೇತನ ಆಯೋಗದ ವರದಿಯಲ್ಲಿ ಹೇಳಲಾಗಿದೆ. ಗ್ರಾಚ್ಯುಟಿ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಬೇಕೆಂದು ಆಯೋಗ ಸೂಚಿಸಿತ್ತು. ಅಲ್ಲದೆ ನೌಕರರ ಡಿಎ ಶೇಕಡಾ 50ರಷ್ಟು ತಲುಪಿದೆ ಅಂದ್ಮೇಲೆ ಗ್ರಾಚ್ಯುಟಿ ಮಿತಿ ಶೇಕಡಾ 25ರಷ್ಟು ಹೆಚ್ಚಾಗಬೇಕೆಂದು ಆಯೋಗ ಸೂಚಿಸಿತ್ತು.

ಕೆಎಎಸ್ ಕನ್ನಡ ಮರುಪರೀಕ್ಷೆ ಬೇಡಿಕೆ ತಿರಸ್ಕರಿಸಿದ ಕೆಪಿಎಸ್‌ಸಿ?

ಗ್ರಾಚ್ಯುಟಿ ಎಂದರೇನು? : ಗ್ರಾಚ್ಯುಟಿ ಎಂದರೆ ಉದ್ಯೋಗದಾತರು,  ಉದ್ಯೋಗಿಗಳು ಸಲ್ಲಿಸಿದ ಸೇವೆಗೆ ನೀಡುವ ಗೌರವವಾಗಿದೆ. ಉದ್ಯೋಗಿ ಒಂದೇ ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ರೆ ನೀಡಲಾಗುತ್ತದೆ. ನಿವೃತ್ತಿಯ ನಂತರ ಅಥವಾ 5 ವರ್ಷಗಳ ಅವಧಿಯ ನಂತರ ವ್ಯಕ್ತಿ ಕಂಪನಿಯನ್ನು ತೊರೆದಾಗ ಅದಕ್ಕೆ ಪ್ರತಿಯಾಗಿ ಗ್ರಾಚ್ಯುಟಿ ನೀಡಲಾಗುತ್ತದೆ. ಗ್ರಾಚ್ಯುಟಿ ಉದ್ಯೋಗಿಯ ಒಟ್ಟು ವೇತನದ ಒಂದು ಅಂಶವಾಗಿದೆ. ಆದ್ರೆ ಪ್ರತಿ ತಿಂಗಳು ಆತನಿಗೆ ಈ ಹಣ ಸಿಗೋದಿಲ್ಲ. ಬದಲಾಗಿ ಆತನ ನಿವೃತ್ತಿ ನಂತ್ರ ಈ ಹಣವನ್ನು ನೀಡಲಾಗುತ್ತದೆ. 

ಗ್ರಾಚ್ಯುಟಿ ಲೆಕ್ಕಾಚಾರ : ಒಬ್ಬ ಉದ್ಯೋಗಿಯ ಸಂಬಳದ ಆಧಾರದ ಮೇಲೆ ಆತನ ಗ್ರಾಚ್ಯುಟಿಯನ್ನು ಲೆಕ್ಕ ಹಾಕಲಾಗುತ್ತದೆ. ಗ್ರಾಚ್ಯುಟಿ ಪಡೆಯಲು ಉದ್ಯೋಗಿ ಐದು ವರ್ಷ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದು ಕಡ್ಡಾಯ. ಆತ ಸಾವನ್ನಪ್ಪಿದ್ರೆ ಅಥವಾ ವಿಕಲಾಂಗತೆ ಸಮಸ್ಯೆ ಎದುರಿಸಿದ್ರೆ ಆಗ ಈ ನಿಯಮ ಅನ್ವಯವಾಗುವುದಿಲ್ಲ. ಆತನಿಗೆ ಗ್ರಾಚ್ಯುಟಿ ನೀಡುವ ಸಮಯದಲ್ಲಿ ವರ್ಷಕ್ಕೆ 240 ದಿನಗಳನ್ನು ಕೆಲಸದ ದಿನ ಎಂದು ಲೆಕ್ಕ ಹಾಕಲಾಗುತ್ತದೆ.  

ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ನೇಮಕಾತಿ, ₹92,000 ವರೆಗೆ ವೇತನ!

ಗ್ರಾಚ್ಯುಟಿಗೆ ತೆರಿಗೆ : ಕೇಂದ್ರ ಸರ್ಕಾರ ತನ್ನ ನೌಕರರಿಗೆ ನೀಡುವ ಗ್ರಾಚ್ಯುಟಿ, ತೆರಿಗೆ ಮುಕ್ತವಾಗಿದೆ. ಆದ್ರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇದ್ರ ನಿಯಮ ಭಿನ್ನವಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತೆರಿಗೆ ಮುಕ್ತ ಗ್ರಾಚ್ಯುಟಿ ಮಿತಿ ಕೇವಲ 20 ಲಕ್ಷ ರೂಪಾಯಿ. ಅದಕ್ಕಿಂತ ಹೆಚ್ಚು ಗ್ರಾಚ್ಯುಟಿ ಪಡೆದ ವ್ಯಕ್ತಿ, ತೆರಿಗೆ ಪಾವತಿಸಬೇಕು. ಖಾಸಗಿ ಉದ್ಯೋಗಿಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ. ಒಂದು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ರ ಅಡಿ ಬರುವ ಉದ್ಯೋಗಿಗಳು ಹಾಗೂ ಇನ್ನೊಂದು ಈ ಕಾಯ್ದೆ ಅಡಿ ಬರದ ಉದ್ಯೋಗಿಗಳು. ಉದ್ಯೋಗಿ ಯಾರೇ ಆಗಿರಲಿ ಅವರು 20 ಲಕ್ಷ ರೂಪಾಯಿಗಿಂತ ಹೆಚ್ಚು ಗ್ರಾಚ್ಯುಟಿ ಪಡೆದಾಗ ತೆರಿಗೆ ಪಾವತಿಸಬೇಕು. ಆದ್ರೆ ಸರ್ಕಾರಿ ಉದ್ಯೋಗಿ ಎಷ್ಟೇ ಗ್ರಾಚ್ಯುಟಿ ಪಡೆದ್ರೂ ಅದು ತೆರಿಗೆ ಮುಕ್ತವಾಗಿದೆ. ಈಗ ಸರ್ಕಾರ ಹೊರಡಿಸಿರುವ ಆದೇಶ ಖಾಸಗಿ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ. ಅವರಿಗೆ ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಬಜೆಟ್ ಪೂರ್ವ ಸಭೆಯಲ್ಲಿ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಗ್ರಾಚ್ಯುಟಿ ಲೆಕ್ಕಾಚಾರದ ನಿಯಮದಲ್ಲಿ ಬದಲಾವಣೆ ತರುವಂತೆ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios