Asianet Suvarna News Asianet Suvarna News

Jobs Opportunity: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಪ್ರೊಫೆಸರ್ ಹುದ್ದೆಗಳಿಗೆ Walk-in-interview

ನೌಕರರ ರಾಜ್ಯ ವಿಮಾ ನಿಗಮ(Employees State Insurance Corporation- ESIC)ದಲ್ಲಿ ಖಾಲಿ ಇರುವ ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ Walk-in-interview ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಒಂದು ವರ್ಷದವರೆಗೆ ಗುತ್ತಿಗೆಯಾಧರಿತವಾಗಿವೆ. ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
 

ESIC Recruitment walk in interview for professor and assistant professor
Author
Bengaluru, First Published Nov 24, 2021, 6:56 PM IST

ನೌಕರರ ರಾಜ್ಯ ವಿಮಾ ನಿಗಮ (Employees State Insurance Corporation- ESIC) ಕಲಬುರ್ಗಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಲಬುರಗಿಯ ಇಎಸ್ಐಸಿ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 31 ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ (Assistant Professor & Associate Professor)ಹುದ್ದೆಗಳು ಖಾಲಿ ಇದ್ದು, ಅರ್ಹತೆ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.  ಎಂಬಿಬಿಎಸ್(MBBS), ಪಿಎಚ್.ಡಿ(Ph. D), ಎಂಎಸ್(MS), ಎಂಡಿ(MD) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ESIC ಕಲಬುರಗಿ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನದ(Walk-in-Interview) ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ 3 ರಂದು ನೇರ ಸಂದರ್ಶನ ನಡೆಯಲಿದೆ. ಖಾಲಿ ಇರುವ ಒಟ್ಟು 31 ಹುದ್ದೆಗಳ ಪೈಕಿ ಅಸಿಸ್ಟೆಂಟ್ ಪ್ರೊಫೆಸರ್- 23 ಹುದ್ದೆ, ಅಸೋಸಿಯೇಟ್ ಪ್ರೊಫೆಸರ್-08 ಹುದ್ದೆಗಳನ್ನ ನೇಮಕ ಮಾಡಲಾಗುವುದು.  ನೌಕರರ ರಾಜ್ಯ ವಿಮಾನ ನಿಗಮವು ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ಸಂಬಂಧ ಹೊರಡಿಸಲಾದ ಅಧಿಸೂಚನೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಫಿಸಿಯೋಲಜಿ (Physiology) 1 ಹುದ್ದೆ, ಕಮ್ಯೂನಿಟಿ ಮೆಡಿಸಿನ್ (Community Medicine)3 ಹುದ್ದೆ, ಬಯೋಕೆಮಿಸ್ಟ್ರಿ (Biochemistry) 1, ಮೈಕ್ರೋಬಯೋಲಜಿ (Microbiology) 1, ಪಾಥೋಲಜಿ (Pathology) 1, ಜನರಲ್ ಮೆಡಿಸಿನ್ (General Medicine)3 ಹುದ್ದೆ, ಡರ್ಮಾಟಾಲಜಿ (Dermatology) 1, ಸೈಕಿಯಾಟ್ರಿ (Psychiatry) 1, ಜನರಲ್ ಸರ್ಜರಿ (General Surgery) 1, ಅರ್ಥೋಪೆಡಿಕ್ಸ್ (Orthopedics) 1, ಆಪ್ಥಾಲಜಿ (Ophthalmology) 1,OBG: 2, ಅನಸ್ತೇಶಿಯಾಲಜಿ (Anesthesiology) 2, ರೇಡಿಯೋ ಡಯಾಗ್ನಿಸಿಸ್ (Radio Diagnosis)2, ಎಮರ್ಜೆನ್ಸಿ ಮೆಡಿಸಿನ್ (Emergency Medicine) 1, ಬ್ಲಡ್ ಬ್ಯಾಂಕ್(Blood Bank) 1 ಹುದ್ದೆ ಸೇರಿ ಒಟ್ಟು 23 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಹಾಗೇ ಪ್ಯಾಥಾಲಜಿ (Pathology ) - 2 ಹುದ್ದೆ, ಜನರಲ್ ಮೆಡಿಸಿನ್ (General Medicine) 1 ಹುದ್ದೆ, ಡರ್ಮಾಟಾಲಜಿ (Dermatology) 1 ಹುದ್ದೆ,  ಸೈಕಿಯಾಟ್ರಿಕ್ (Psychiatry)1 ಹುದ್ದೆ, ಜನರಲ್ ಸರ್ಜರಿ (General Surgery) 1 ಹುದ್ದೆ, ರೇಡಿಯೋ ಡಯಾಗ್ನಸಿಸ್ (Radio Diagnosis) 1 ಹುದ್ದೆ, ಎನರ್ಜಿ ಮೆಡಿಸಿನ್ (Emergency Medicine) 1 ಹುದ್ದೆ ಸೇರಿ ಒಟ್ಟು 8 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ.  

Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

 ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್, ಪಿಎಚ್.ಡಿ, ಎಂಎಸ್, ಎಂಡಿ ಪೂರ್ಣಗೊಳಿಸಿರಬೇಕು. ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 69 ವರ್ಷದೊಳಗಿರಬೇಕು.  ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರ್ಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. 

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ನೇಮಕವಾದ್ರೆ ಮಾಸಿಕ ₹ 1,06,000 ವೇತನ ಸಿಗಲಿದೆ. ಹಾಗೇ ಅಸಿಸ್ಟೆಂಟ್ ಪ್ರೊಫೆಸರ್ಗಳಿಗೆ ಮಾಸಿಕ ₹ 92,000 ವೇತನ ಲಭ್ಯವಾಗಲಿದೆ.   

ECIL Recruitment: ತಾಂತ್ರಿಕ ಅಧಿಕಾರಿಗಳ ನೇಮಕ್ಕೆ ಅರ್ಜಿ ಆಹ್ವಾನ    

ಡಿಸೆಂಬರ್ 3ರಂದು ನೇರ ಸಂದರ್ಶನ(Walk-in-Interview) ನಡೆಯಲಿದೆ. ಬಳಿಕ ನೌಕರರ ರಾಜ್ಯ ವಿಮಾ ನಿಗಮ (Employees State Insurance Corporation- ESIC) ಅಭ್ಯರ್ಥಿಗಳ ದಾಖಲಾತಿಗಳನ್ನ ಪರಿಶೀಲನೆ ನಡೆಸಲಿದೆ. ಆನಂತರ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಯು ಕಾಂಟ್ರಾಕ್ಟ್ ಬೇಸಿಸ್ನಲ್ಲಿ ಕೆಲಸ ಮಾಡಬೇಕಿದ್ದು, 1 ವರ್ಷದವರೆಗೆ ಕಲಬುರಗಿ ಇಎಸ್ಐಸಿ ಮೆಡಿಕಲ್ ಕಾಲೇಜಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Follow Us:
Download App:
  • android
  • ios