Asianet Suvarna News Asianet Suvarna News

ESIC Recruitment 2022: ಭೋಧಕರ ಹುದ್ದೆಗೆ ಅರ್ಜಿ ಆಹ್ವಾನ, ಮಾರ್ಚ್ 2 ರಂದು ನೇರ ಸಂದರ್ಶನ

ರಾಜ್ಯ ನೌಕರರ ವಿಮಾ ನಿಗಮ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಟ್ಯೂಟರ್ ಸೇರಿದಂತೆ 13 ಹುದ್ದೆಗಳನ್ನು ಭರ್ತಿ ಮಾಡಲು  ಅರ್ಜಿ ಆಹ್ವಾನಿಸಿದೆ. ಆಸಕ್ತರು ಮಾರ್ಚ್ 2ಕ್ಕೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

Employee State Insurance Corporation Bengaluru Recruitment 2022 Notification  for Faculty Posts gow
Author
Bengaluru, First Published Feb 20, 2022, 10:01 AM IST

ಬೆಂಗಳೂರು(ಫೆ.20): ರಾಜ್ಯ ನೌಕರರ ವಿಮಾ ನಿಗಮ (Employees State Insurance Corporation - ESIC) ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಟ್ಯೂಟರ್ ಸೇರಿದಂತೆ 13 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು  ಮಾರ್ಚ್ 2 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ ತಾಣ  http://www.esic.nic.in/ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು.  

ಒಟ್ಟು 13 ಹುದ್ದೆಗಳ ಮಾಹಿತಿ ಇಂತಿದೆ:
ಉಪ ಪ್ರಾಂಶುಪಾಲ ಕಮ್ ಪ್ರಾಧ್ಯಾಪಕರು-01
ಅಸೋಸಿಯೇಟ್ ಪ್ರಾಧ್ಯಾಪಕರು-01
ಸಹಾಯಕ ಪ್ರಾಧ್ಯಾಪಕರು-01
ಬೋಧಕ-10

ಶೈಕ್ಷಣಿಕ ವಿದ್ಯಾರ್ಹತೆ: ರಾಜ್ಯ ನೌಕರರ ವಿಮಾ ನಿಗಮದಲ್ಲಿ ಖಾಲಿ ಇರುವ ಬೋಧಕರ ಹುದ್ದೆಗೆ ನೇರ ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಿರಬೇಕು.  

ಉಪ ಪ್ರಾಂಶುಪಾಲ ಕಮ್ ಪ್ರಾಧ್ಯಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವವರು M.Sc.ಮಾಡಿರಬೇಕು. ಜೊತೆಗೆ  12 ವರ್ಷಗಳ ಅನುಭವ ಇರಬೇಕು. ಕನಿಷ್ಠ 5 ವರ್ಷಗಳ ಬೋಧನಾ ಅನುಭವ ಇರಬೇಕು. ಪಿಎಚ್‌ಡಿ ಮಾಡಿರಬೇಕು.

ಅಸೋಸಿಯೇಟ್ ಪ್ರಾಧ್ಯಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವವರು M.Sc. ಮಾಡಿರಬೇಕು. 5 ವರ್ಷಗಳ ಬೋಧನಾ ಅನುಭವ ಸೇರಿದಂತೆ 8 ವರ್ಷಗಳ ಅನುಭವ ಇರಬೇಕು Ph.D. ಅಪೇಕ್ಷಣೀಯ.

ಸಹಾಯಕ ಪ್ರಾಧ್ಯಾಪಕರು ಹುದ್ದೆಗೆ  ಎಂ.ಎಸ್ಸಿ.  ಜೊತೆಗೆ 3 ವರ್ಷಗಳ ಬೋಧನಾ ಅನುಭವ ಇರಬೇಕು. Ph.D. ಅಪೇಕ್ಷಣೀಯ.

ಬೋಧಕ ಹುದ್ದೆಗೆ M.Sc ನರ್ಸಿಂಗ್ OR B.Sc. ನರ್ಸಿಂಗ್ /PB B. Sc. ಒಂದು ವರ್ಷದೊಂದಿಗೆ ನರ್ಸಿಂಗ್ ಅನುಭವ ಇರಬೇಕು.

ಸದ್ಯದಲ್ಲೇ ಉದ್ಯೋಗದ ಬಗ್ಗೆ ಸ್ವಯಂ ಚಾಲಿತವಾಗಿ ತಿಳಿಸುವ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನ: ಅಶ್ವತ್ಥನಾರಾಯಣ

ವೇತನ ವಿವರ: ರಾಜ್ಯ ನೌಕರರ ವಿಮಾ ನಿಗಮದಲ್ಲಿ ಖಾಲಿ ಇರುವ ಬೋಧಕರ ಹುದ್ದೆಗೆ ನೇರ ನೇಮಕಾತಿಯಲ್ಲಿ ಭಾಗವಹಿಸಿ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ 45000 ರೂ. ನಿಂದ 75000 ರೂ. ವೇತನ ಪಡೆಯಲಿದ್ದಾರೆ.

ವಯೋಮಿತಿ: ರಾಜ್ಯ ನೌಕರರ ವಿಮಾ ನಿಗಮದಲ್ಲಿ ಖಾಲಿ ಇರುವ ಬೋಧಕರ ಹುದ್ದೆಗೆ ನೇರ ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು 35 ರಿಂದ 65 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು  ಮಾರ್ಚ್ 2, 2022 ರಂದು ನಿಗದಿಪಡಿಸಲಾದ ವಾಕ್-ಇನ್-ಇಂಟರ್‌ವ್ಯೂನಲ್ಲಿ ಭಾಗವಹಿಸಬೇಕು.

EIL Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ಇಂಜಿನಿಯರ್ಸ್ ಇಂಡಿಯಾ

ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸೇರಲು ಭರ್ಜರಿ ಅವಕಾಶ: ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ಮಧ್ಯ ರೈಲ್ವೆ (South East Central Railway -SECR ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಗ್ರೂಪ್ ಸಿ ಹುದ್ದೆಗಳಿಗೆ ಕ್ರೀಡಾ ಕೋಟದ (Sports Quota) ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 21   ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 5, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://secr.indianrailways.gov.in/ ಗೆ ಭೇಟಿ ನೀಡಬಹುದು.

ಅರ್ಹತೆಗಳು: ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕ್ರಾಸ್ ಕಂಟ್ರಿ, ಹ್ಯಾಂಡ್‌ಬಾಲ್, ಹಾಕಿ, ಖೋ-ಖೋ ಮತ್ತು ಟೇಬಲ್ ಟೆನ್ನಿಸ್‌ನಂತಹ ಕ್ರೀಡೆ/ಆಟಗಳಲ್ಲಿ ಭಾಗವಹಿಸಿದ್ದ ಎಲ್ಲಾ ಆಸಕ್ತ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಲೆವೆಲ್ 2, 3, 4 ಮತ್ತು 5 ವಿಭಾಗಕ್ಕೆ  ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ಮತ್ತು SC/ST, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು  ಮಹಿಳಾ ಅಭ್ಯರ್ಥಿಗಳಿಗೆ 150 ರೂ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.

 

Follow Us:
Download App:
  • android
  • ios