ಪೂರ್ವ ಮಧ್ಯ ರೈಲ್ವೆ 1154 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜನವರಿ 25ರಿಂದ ಫೆಬ್ರವರಿ 14, 2025ರವರೆಗೆ rrcecr.gov.in ನಲ್ಲಿ ಅರ್ಜಿ ಸಲ್ಲಿಸಬಹುದು. 50% ಅಂಕಗಳೊಂದಿಗೆ SSLC ಮತ್ತು ಐಟಿಐ ಅರ್ಹತೆ ಬೇಕು. ವಯೋಮಿತಿ 15-24 ವರ್ಷಗಳು. ಆಯ್ಕೆ ಮೆರಿಟ್ ಆಧಾರಿತ. ಅರ್ಜಿ ಶುಲ್ಕ ₹100, ಮೀಸಲಾತಿ ವಿಭಾಗದವರಿಗೆ ವಿನಾಯಿತಿ.

ಪೂರ್ವ ಮಧ್ಯ ರೈಲ್ವೆ ನೇಮಕಾತಿ 2025: ರೈಲ್ವೆ ನಲ್ಲಿ ಕೆಲಸ ಮಾಡಬೇಕು ಅಂತ ಆಸೆ ಇದ್ದವರಿಗೆ ಒಳ್ಳೆ ಸುದ್ದಿ. ಪೂರ್ವ ಮಧ್ಯ ರೈಲ್ವೆ (ECR) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 1000+ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು rrcecr.gov.in ವೆಬ್ಸೈಟ್ ಗೆ ಭೇಟಿ ನೀಡಿ. ಒಟ್ಟು 1154 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಜನವರಿ 25, 2025 ರಿಂದ ಫೆಬ್ರವರಿ 14, 2025 ರವರೆಗೆ ಅರ್ಜಿ ಸಲ್ಲಿಸಬಹುದು.

ವಿಭಾಗವಾರು ಹುದ್ದೆಗಳ ವಿವರ

  • ದಾನಾಪುರ ವಿಭಾಗ: 675 ಹುದ್ದೆಗಳು
  • ಧನ್ಬಾದ್ ವಿಭಾಗ: 156 ಹುದ್ದೆಗಳು
  • ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿಭಾಗ: 64 ಹುದ್ದೆಗಳು
  • ಸೋನ್ಪುರ ವಿಭಾಗ: 47 ಹುದ್ದೆಗಳು
  • ಸಮಸ್ತಿಪುರ ವಿಭಾಗ: 46 ಹುದ್ದೆಗಳು
  • ಪ್ಲಾಂಟ್ ಡಿಪೋ/ಪಂಡಿತ್ ದೀನ್ ದಯಾಳ್ ಉಪಾಧ್ಯಾಯ: 29 ಹುದ್ದೆಗಳು
  • ಕ್ಯಾರೇಜ್ ರಿಪೇರಿ ವರ್ಕ್ ಶಾಪ್/ಹರ್ನೌಟ್: 110 ಹುದ್ದೆಗಳು
  • ಮೆಕ್ಯಾನಿಕಲ್ ವರ್ಕ್ ಶಾಪ್/ಸಮಸ್ತಿಪುರ: 27 ಹುದ್ದೆಗಳು

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ವೃತ್ತಿಪರ ಕೋರ್ಸ್ ನಲ್ಲಿ ಐಟಿಐ (ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ ಅಥವಾ ತಾತ್ಕಾಲಿಕ ಪ್ರಮಾಣಪತ್ರ) ಪಡೆದಿರಬೇಕು.

10ನೇ ತರಗತಿ ಪಾಸಾದವರಿಗೆ ಯುಎಇಯಲ್ಲಿ ಉದ್ಯೋಗಾವಕಾಶಗಳು: ₹78,000 ವರೆಗೆ ಸಂಬಳ!

ವಯೋಮಿತಿ: ಜನವರಿ 1, 2025ಕ್ಕೆ ಅಭ್ಯರ್ಥಿಯ ವಯಸ್ಸು 15 ರಿಂದ 24 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವಿಭಾಗದವರಿಗೆ (SC/ST/OBC) ಸರ್ಕಾರದ ನಿಯಮಗಳ ಪ್ರಕಾರ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ: ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಮೆರಿಟ್ ಪಟ್ಟಿಯನ್ನು ಆಧರಿಸಿರುತ್ತದೆ. ಮೆರಿಟ್ ಪಟ್ಟಿಯನ್ನು 10ನೇ ತರಗತಿ ಮತ್ತು ಐಟಿಐ ಅಂಕಗಳನ್ನು ಆಧರಿಸಿ ತಯಾರಿಸಲಾಗುತ್ತದೆ.

ಕೋಲ್ ಇಂಡಿಯಾ ನೇಮಕಾತಿ, 434 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆ.14 ಕೊನೆಯ ದಿನ

ಅರ್ಜಿ ಶುಲ್ಕ

  • ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹100/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
  • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.
  • ಆನ್‌ಲೈನ್ ಪಾವತಿಯ ವಹಿವಾಟು ಶುಲ್ಕವನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ.
  • SC/ST/PWD/ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಪೂರ್ವ ಮಧ್ಯ ರೈಲ್ವೆ ನೇಮಕಾತಿ 2025: ಹೇಗೆ ಅರ್ಜಿ ಸಲ್ಲಿಸುವುದು?

  • rrcecr.gov.in ವೆಬ್ಸೈಟ್ ಗೆ ಭೇಟಿ ನೀಡಿ.
  • “Apprentice Recruitment 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪೂರ್ವ ಮಧ್ಯ ರೈಲ್ವೆ ನೇಮಕಾತಿ 2025: ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜನವರಿ 25, 2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಫೆಬ್ರವರಿ 14, 2025
  • ಹೆಚ್ಚಿನ ಮಾಹಿತಿಗಾಗಿ ಪೂರ್ವ ಮಧ್ಯ ರೈಲ್ವೆ ನೇಮಕಾತಿ ಕೋಶದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.