ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು  ಒಟ್ಟು 1061  ವಿವಿಧ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು  ನವೆಂಬರ್ 7 ರಿಂದ ಡಿಸೆಂಬರ್ 5ರವರೆಗೆ ಅವಕಾಶವಿದೆ.

ಬೆಂಗಳೂರು (ಅ.30): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಒಟ್ಟು 1061 CEPTAM 10 ಅಡ್ಮಿನ್ ಮತ್ತು ಅಲೈಡ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸ್ಟೆನೋಗ್ರಾಫರ್ ಗ್ರೇಡ್-1, ಜೂನಿಯರ್ ಟ್ರಾನ್ಸ್‌ಲೇಶನ್ ಆಫೀಸರ್ (ಜೆಟಿಒ), ಸ್ಟೆನೋಗ್ರಾಫರ್ ಗ್ರೇಡ್ II, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, ಸ್ಟೋರ್ ಅಸಿಸ್ಟೆಂಟ್, ಸೆಕ್ಯುರಿಟಿ ಅಸಿಸ್ಟೆಂಟ್, ವೆಹಿಕಲ್ ಆಪರೇಟರ್, ಫೈರ್ ಇಂಜಿನ್ ಡ್ರೈವರ್ ಮತ್ತು ಫೈರ್‌ಮ್ಯಾನ್ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 7 ರಿಂದ ಡಿಸೆಂಬರ್ 5ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ತಾಣ drdo.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. 

ಶೈಕ್ಷಣಿಕ ಅರ್ಹತೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 
-ಸ್ಟೆನೋಗ್ರಾಫರ್ ಗ್ರೇಡ್-1 ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಟೈಪಿಂಗ್‌ನಲ್ಲಿ ಉತ್ತಮವಾಗಿರಬೇಕು.
-ಜೂನಿಯರ್ ಟ್ರಾನ್ಸ್‌ಲೇಶನ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಮಟ್ಟದಲ್ಲಿ ಹಿಂದಿ/ಇಂಗ್ಲಿಷ್ ಕಡ್ಡಾಯ/ಆಯ್ದ ವಿಷಯವಾಗಿ ಇಂಗ್ಲೀಷ್/ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಮತ್ತು ಪದವಿಯಲ್ಲಿ ಇಂಗ್ಲಿಷ್ ಕಡ್ಡಾಯ ವಿಷಯವಾಗಿ ಪರೀಕ್ಷೆ ಮಟ್ಟ ಅಥವಾ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮುಖ್ಯ ವಿಷಯಗಳಾಗಿ ಹೊಂದಿರುವ ಪದವಿ ಅಥವಾ ಎರಡರಲ್ಲಿ ಯಾವುದಾದರೂ ಒಂದು ಪರೀಕ್ಷಾ ಮಾಧ್ಯಮ ಮತ್ತು ಇತರವು ಮುಖ್ಯ ವಿಷಯವಾಗಿ ಜೊತೆಗೆ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಕೋರ್ಸ್ ಹಿಂದಿ ಮತ್ತು ಇಂಗ್ಲಿಷ್‌ನಿಂದ ಅನುವಾದದಲ್ಲಿ ಮತ್ತು ಪ್ರತಿಯಾಗಿ ಅಥವಾ ಅನುವಾದ ಕೆಲಸದ ಎರಡು ವರ್ಷಗಳ ಅನುಭವ ಭಾರತ ಸರ್ಕಾರದ ಅಂಡರ್‌ಟೇಕಿಂಗ್‌ಗಳು ಸೇರಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿರಬೇಕು
-ಸ್ಟೆನೋಗ್ರಾಫರ್ ಗ್ರೇಡ್ II ಮತ್ತು ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ 12ನೇ ತರಗತಿ/ಪಿಯುಸಿ ಪಾಸ್ ಆಗಿರಬೇಕು.
-ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ ಉತ್ತೀರ್ಣರಾಗಿರಬೇಕು. ಅಥವಾ ಅದಕ್ಕೆ ಸರಿಯಾದ ವಿದ್ಯಾರ್ಹತೆ ಮಾಡಿರಬೇಕು.
-ಸೆಕ್ಯುರಿಟಿ ಅಸಿಸ್ಟೆಂಟ್, ವೆಹಿಕಲ್ ಆಪರೇಟರ್, ಫೈರ್ ಇಂಜಿನ್ ಡ್ರೈವರ್ ಮತ್ತು ಫೈರ್‌ಮ್ಯಾನ್ ಹುದ್ದೆಗಳಿಗೆ 10 ನೇ ತರಗತಿ , ಪಿಯುಸಿ ವಿದ್ಯಾರ್ಹತೆ ಮಾಡಿರಬೇಕು.

NIMHANS RECRUITMENT 2022; ನಿಮಾನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ /OBC/EWS & Other ಅಭ್ಯರ್ಥಿಗಳು 100 ರೂ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ.