Asianet Suvarna News Asianet Suvarna News

CRPF Recruitment 2023: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ 1458 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ASI ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ ನಲ್ಲಿ ಜನವರಿ 25ರೊಳಗೆ ಅರ್ಜಿ ಸಲ್ಲಿಸಬೇಕು.

CRPF Recruitment 2023 Notification for 1458 Various Post gow
Author
First Published Dec 31, 2022, 3:53 PM IST

ಬೆಂಗಳೂರು (ಡಿ.31): ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಹಾಯಕ ಸಬ್ ಇನ್ಸ್‌ಪೆಕ್ಟರ್ ASI ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ www.crpfindia.com, crpf.gov.in ಮತ್ತು www.crpf.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 1458 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಜನವರಿ 4, 2023 ರಿಂದ ಅರ್ಜಿ ಸಲ್ಲಿಕೆಗೆ  ಪ್ರಾರಂಭವಾಗುತ್ತದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 25 ಆಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.

ಒಟ್ಟು 1458 ಹುದ್ದೆಗಳ ಮಾಹಿತಿ ಇಂತಿದೆ
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸ್ಟೆನೋ): 143 ಹುದ್ದೆಗಳು
ಹೆಡ್ ಕಾನ್‌ಸ್ಟೆಬಲ್ (ಸಚಿವಾಲಯ): 1315 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳು ಮಧ್ಯಂತರ (10+2) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರಬೇಕು. 

ಆಯ್ಕೆಪ್ರಕ್ರಿಯೆ: ಮೇಲೆ ತಿಳಿಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು ಈ ಕೆಳಗಿನ ಆಧಾರದ ಮೇಲೆ ನಡೆಸುತ್ತದೆ.
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದೈಹಿಕ ಗುಣಮಟ್ಟದ ಪರೀಕ್ಷೆ (PST)
ಡಾಕ್ಯುಮೆಂಟ್ ಪರಿಶೀಲನೆ
ವಿವರವಾದ ವೈದ್ಯಕೀಯ ಪರೀಕ್ಷೆ

ವಯೋಮಿತಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಅಂತಿಮ ದಿನಾಂಕದಂದು ವಯಸ್ಸಿನ ಮಿತಿ 18 ರಿಂದ 25 ವರ್ಷಗಳಾಗಿರಬೇಕು. 

SAI Recruitment 2023: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ

ವೇತನ ವಿವರ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ದೊರೆಯಲಿದೆ.
ಸಹಾಯಕ ಸಬ್ ಇನ್ಸ್‌ಪೆಕ್ಟರ್  ಹುದ್ದೆಗೆ ಮಾಸಿಕ  ರೂ. 25,500 - ರೂ. 81,100 ವೇತನ ನಿಗದಿಯಾಗಿದೆ
ಹೆಡ್ ಕಾನ್‌ಸ್ಟೆಬಲ್  ಹುದ್ದೆಗೆ ಮಾಸಿಕ ರೂ. 29,200 - ರೂ. 92,300 ವೇತನ ನಿಗದಿಯಾಗಿದೆ.

ಟ್ವಿಟ್ಟರ್‌ ಕಚೇರಿಗೆ ಸ್ವಂತ ಟಾಯ್ಲೆಟ್ ಪೇಪರ್ ತರುತ್ತಿರುವ ಉದ್ಯೋಗಿಗಳು: ಕಾರಣ ಹೀಗಿದೆ..

ಪ್ರಮುಖ ದಿನಾಂಕಗಳು:
ಅರ್ಜಿ ನಮೂನೆಯ ಪ್ರಾರಂಭ ದಿನಾಂಕ: ಜನವರಿ 04, 2023.
ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ: ಜನವರಿ 25, 2023
ಪ್ರವೇಶ ಕಾರ್ಡ್: ಫೆಬ್ರವರಿ 15, 2023
ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುವ ನಿರೀಕ್ಷೆ: 22-28 ಫೆಬ್ರವರಿ 2023 ರ ನಡುವೆ

Follow Us:
Download App:
  • android
  • ios