ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ 122 ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆಗೆ 2ನೇ ದಿನ ಬಾಕಿ!
ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಟೆಕ್ಸ್‌ಟೈಲ್ಸ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಸೈಂಟಿಸ್ಟ್- ಬಿ 122 ಹುದ್ದೆಗಳನ್ನು ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು (ಸೆ.03): ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಟೆಕ್ಸ್‌ಟೈಲ್ಸ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ (Central silk Board -CSB) ಸೈಂಟಿಸ್ಟ್- ಬಿ (ಬೆಳೆ ವಿಜ್ಞಾನ, ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಮತ್ತು ಇತರೆ) ಸೇರಿ 122 ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಹೊರಡಿಸಿದೆ.
ಈ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಬಿ ಹುದ್ದೆಗಳಿಗೆ ವೇತನ ಶ್ರೇಣಿ 56,100-1,77,500 ರೂ. ಇದೆ.
ಹುದ್ದೆಯ ಹೆಸರು: CSB ಸೈಂಟಿಸ್ಟ್- ಬಿ ಆನ್‌ಲೈನ್ ಫಾರ್ಮ್-2024. ಒಟ್ಟು 122 ಹುದ್ದೆಗಳ ನೇಮಕಾತಿಗೆ ಆ.22ರಂದು ಅಧಿಸೂಚನೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಸೆ.5ಕ್ಕೆ ಕೊನೆಯ ದಿನಾಂಕವಾಗಿದ್ದು, ಸೆ.6ಕ್ಕೆ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೆ 2 ದಿನಗಳು ಮಾತ್ರ ಬಾಕಿಯಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸಿ.
ಐಐಟಿನಲ್ಲಿ ಓದಿದ್ರೆ ಕೆಲಸ ಕಡ್ಡಾಯ ಅಂತಿದ್ರು, ಆದ್ರೆ ಈಗ ಕ್ಯಾಂಪಸ್ ಸೆಲೆಕ್ಷನ್ ಆಗೋದು ಕಷ್ಟ! ಕಾರಣಗಳೇನು?
ಅರ್ಜಿ ಶುಲ್ಕ: ಸಾಮಾನ್ಯವರ್ಗ/ ಎಕನಾಮಿಕಲಿ ವೀಕರ್ ಸೆಕ್ಷನ್-EWS/ OBC/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ.1000 ಶುಲ್ಕವಿದೆ. SC/ST/PwBD ಅಭ್ಯರ್ಥಿಗಳಿಗೆ ಯಾವುದೇಶ ಶುಲ್ಕವಿರುವುದಿಲ್ಲ. ಇನ್ನು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು.
ಅಗತ್ಯ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಲ್ಲಾ ಅರ್ಜಿದಾರರು ಪೋಸ್ಟ್‌ನ ಅಗತ್ಯ ಅವಶ್ಯಕತೆಗಳನ್ನು ಮತ್ತು ಜಾಹೀರಾತಿನಲ್ಲಿ ನಿಗದಿಪಡಿಸಿದ ಇತರ ಷರತ್ತುಗಳನ್ನು ಪೂರೈಸಬೇಕು. ಅವರು ಪೋಸ್ಟ್‌ಗೆ ನಿಗದಿಪಡಿಸಿದ ಕನಿಷ್ಠ ಅಗತ್ಯ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಅರ್ಜಿ ಸಲ್ಲಿಸುವ ಮೊದಲು ತಾವು ಅಗತ್ಯ ವಿದ್ಯಾರ್ಹತೆ ಹೊಂದಿದ ಬಗ್ಗೆ ಅಧಿಸೂಚನೆಯನ್ನು ನೋಡಿ ಖಚಿತಪಡಿಸಿಕೊಳ್ಳಬೇಕು. ಇನ್ನು ಅರ್ಹತೆಯ ಬಗ್ಗೆ ಸಲಹೆ ಕೇಳುವ ಯಾವುದೇ ವಿಚಾರಣೆಯನ್ನು ಪರಿಗಣಿಸಲಾಗುವುದಿಲ್ಲ. ನಿಗದಿತ ಅಗತ್ಯ ವಿದ್ಯಾರ್ಹತೆಗಳನ್ನು ಹೊಂದಿರದ ಅಭ್ಯರ್ಥಿಗಳನ್ನು ಸಂದರ್ಶನ/ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ.
ವಯಸ್ಸಿನ ಮಿತಿ ಮತ್ತು ಆಯ್ಕೆ ಪ್ರಕ್ರಿಯೆ: ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನ 2024ರ ಸೆ.5ಕ್ಕೆ ಸರಿಯಾಗಿ 18 ವರ್ಷ ದಾಟಿರಬೇಕು. ಜೊತೆಗೆ, ಗರಿಷ್ಠ ವಯೋಮಿತಿ 35 ವರ್ಷಗಳು ಆಗಿರುತ್ತದೆ. ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ. ಅರ್ಹ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ICAR AICE-JRF/SRF (Ph.D.) - 2024 ರಲ್ಲಿ ICAR AICE-JRF/SRF ಆಧಾರದ ಮೇಲೆ CSB ನೇಮಕಾತಿಗಾಗಿ ಸ್ನಾತಕೋತ್ತರ ಪದವಿ ಅರ್ಹತೆಗಳೊಂದಿಗೆ ಕೆಳಗಿನ ವಿಷಯ/ವಿಶೇಷತೆಯಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ಪರೀಕ್ಷೆಗೆ ಹಾಜರಾಗಿರಬೇಕು. ಅಥವಾ ಪಿಹೆಚ್‌ಡಿ ಪದವಿ ಪೂರೈಸಿರಬೇಕು. ಇನ್ನು ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ರೇಷ್ಮೆ ಅಭಿವೃದ್ಧಿ ಮಂಡಳಿಯಲ್ಲಿ ಕೆಲಸ ಮಾಡಲು ಬದ್ಧರಾಗಿರಬೇಕು.
ನಮ್ ಶಾಲೇಲಿ ಟೀಚರ್ ಇಲ್ಲ, ನಿವೇ ಪಾಠ ಮಾಡಿ ಎಂದು ಬಿಇಒ ಕಚೇರಿಗೆ ಬಂದ ಮಕ್ಕಳು!
ಹುದ್ದೆ ವಿವರ ಮತ್ತು ಸಂಕ್ಷಿಪ್ತ ಮಾಹಿತಿ:
- ಪೋಸ್ಟ್ ಹೆಸರು - ವಿಜ್ಞಾನಿ- ಬಿ
- ಒಟ್ಟು ಹುದ್ದೆಗಳು - 122
- ವಿದ್ಯಾರ್ಹತೆ - ಅಭ್ಯರ್ಥಿಯು ಪಿಜಿ (ವಿಜ್ಞಾನ/ಕೃಷಿ ವಿಜ್ಞಾನ) ಹೊಂದಿರಬೇಕು
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು - ಇಲ್ಲಿ ಕ್ಲಿಕ್ ಮಾಡಿ
- ಹುದ್ದೆಗಳ ಅಧಿಸೂಚನೆ - ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್ - ಇಲ್ಲಿ ಕ್ಲಿಕ್ ಮಾಡಿ