ಕೇಂದ್ರ ಸರ್ಕಾರದ ಈ ಹುದ್ದೆಗೆ ಅರ್ಜಿ ಆಹ್ವಾನ, ಸಂಬಳ 5.62 ಲಕ್ಷ
ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿದೆ. ವಿತ್ತ ಸಚಿವಾಲಯ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ಉನ್ನತ ಹುದ್ದೆ (central government High post) ಯಲ್ಲಿ ಕೆಲಸ ಮಾಡಬೇಕೆಂದು ಕನಸು ಕಾಣ್ತಿರುವ ಹಿರಿಯ ಉದ್ಯೋಗಿಗಳಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಕೇಂದ್ರ ಸರ್ಕಾರ, ಉದ್ಯೋಗಿಯ ಹುಡುಕಾಟ ನಡೆದಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (PFRDA) ಹುದ್ದೆಗೆ ನೇಮಕಾತಿ ನಡೆಯಲಿದೆ. ಸದ್ಯ ಪಿಎಫ್‌ಆರ್‌ಡಿಎ ಅಧ್ಯಕ್ಷರಾಗಿ ದೀಪಕ್ ಮೊಹಂತಿ (Deepak Mohanty) ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಉತ್ತರಾಧಿಕಾರಿಗಾಗಿ ಕೇಂದ್ರ ಸರ್ಕಾರ ಹುಡುಕಾಟ ಶುರು ಮಾಡಿದೆ. ಕೇಂದ್ರ ಸರ್ಕಾರ, ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಹತೆ, ಕೊನೆ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ದೀಪಕ್ ಮೊಹಂತಿ ಅವರ ಅಧಿಕಾರಾವಧಿ ಮುಂದಿನ ವರ್ಷ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಹಾಗಾಗಿ ಈ ಹುದ್ದೆಯ ನೇಮಕಾತಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ.
ಪಿಎಫ್‌ಆರ್‌ಡಿಎ ಅಧ್ಯಕ್ಷ ಹುದ್ದೆಗೆ ಅರ್ಹತೆ : ವಿತ್ತ ಸಚಿವಾಲಯ (Ministry of Finance) ಹೊರಡಿಸಿರುವ ಅಧಿಸೂಚನೆ ಪ್ರಕಾರ, ನಿವೃತ್ತಿಗೆ ಎರಡು ವರ್ಷ ಬಾಕಿ ಇರುವ ಅಭ್ಯರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ, ಸರ್ಕಾರಿ ಉದ್ಯೋಗಿಯಾಗಿರಬೇಕು. ಸೆಂಟ್ರಲ್ ಗವರ್ನಮೆಂಟ್ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಅಥವಾ ರಾಜ್ಯ ಸರ್ಕಾರದಲ್ಲಿ ಅದಕ್ಕೆ ಸಮಾನವಾದ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದ್ರೆ ಕನಿಷ್ಠ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿರಬೇಕು. ಮಾಹಿತಿ ಪ್ರಕಾರ, ಹಿರಿಯ ಸರ್ಕಾರಿ ಅಧಿಕಾರಿಗಳಲ್ಲದೆ, ಸಿಇಒ, ಸಿಎಫ್ಒ ಮತ್ತು ಸಿಒಒ ಕೂಡ ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ತತ್ಸಮಾನ ಮಟ್ಟದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಕೂಡ ಪಿಎಫ್ಆರ್ಡಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹಣವಿದ್ರೆ ಸಾಕಾ? ಷರತ್ತಿಗೆ ಬದ್ಧವಾಗಿರ್ಬೇಕಾ?
ಪಿಎಫ್‌ಆರ್‌ಡಿಎ ಅಧ್ಯಕ್ಷರ ಸಂಬಳ : ಪಿಎಫ್ಆರ್ಡಿಎ ಅಧ್ಯಕ್ಷರಾಗಿ ನೇಮಕಗೊಳ್ಳುವ ಅಭ್ಯರ್ಥಿಗೆ ಕಾರು ಮತ್ತು ಮನೆ ಸೌಲಭ್ಯವನ್ನು ಹೊರತುಪಡಿಸಿ ಪ್ರತಿ ತಿಂಗಳು ಒಟ್ಟು 5.62 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ.
ಅಧಿಕಾರಾವಧಿ : ಪಿಎಫ್‌ಆರ್‌ಡಿಎ ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳಾಗಿವೆ. 65 ವರ್ಷ ಮೇಲ್ಪಟ್ಟ ಉದ್ಯೋಗಿ, ನಿವೃತ್ತಿಯನ್ನು ಪಡೆಯಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಪಿಎಫ್‌ಆರ್‌ಡಿಎ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ತಿಂಗಳ ಕೊನೆಯವರೆಗೆ ಅವಕಾಶವಿದೆ. ಡಿಸೆಂಬರ್ 30ರೊಳಗೆ ಅವರು ಅರ್ಜಿ ಕಳುಹಿಸಬೇಕು.
ಆಯ್ಕೆ ವಿಧಾನ : ಪಿಎಫ್‌ಆರ್‌ಡಿಎ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಹಣಕಾಸು ವಲಯದ ನಿಯಂತ್ರಕ ನೇಮಕಾತಿ ಹುಡುಕಾಟ ಸಮಿತಿ (FSRASC) ಶಿಫಾರಸ್ಸು ಮಾಡಲಿದೆ. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ನೇಮಕಾತಿಯ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಹುದ್ದೆಗೆ ಅರ್ಜಿ ಸಲ್ಲಿಸಿರುವ ಉದ್ಯೋಗಿಯ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡುವ ಮತ್ತು ಶಿಫಾರಸು ಮಾಡುವ ಹಕ್ಕನ್ನು ಎಫ್‌ಎಸ್‌ಆರ್‌ಎಎಸ್‌ಸಿ ಹೊಂದಿರುತ್ತದೆ.
ಪಿಎಫ್‌ಆರ್‌ಡಿಎ, ಎನ್ಪಿಎಸ್ ಅನ್ನು ನಿಯಂತ್ರಿಸುತ್ತದೆ. ಪಿಎಫ್‌ಆರ್‌ಡಿಎನಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಆರು ಸದಸ್ಯರಿರುತ್ತಾರೆ. ಇದರಲ್ಲಿ ಕನಿಷ್ಠ ಮೂರು ಸದಸ್ಯರು ಪೂರ್ಣಾವಧಿ ಸದಸ್ಯತ್ವವನ್ನು ಹೊಂದಿರುತ್ತಾರೆ. ಅವರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡುತ್ತದೆ.
ಭಾರತೀಯ ನೌಕಾಪಡೆಗೆ ಸೇರುವುದು ಹೇಗೆ?, ಸವಲತ್ತುಗಳೇನು?
ಇನ್ನೊಂದು ಹುದ್ದೆಗೆ ಅರ್ಜಿ ಆಹ್ವಾನ : ಕೇಂದ್ರ ಸರ್ಕಾರ, ಪಿಎಫ್‌ಆರ್‌ಡಿಎ ಅಧ್ಯಕ್ಷರ ಹುದ್ದೆಗೆ ಮಾತ್ರವಲ್ಲದೆ ಮತ್ತೆರಡು ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಪಿಎಫ್‌ಆರ್‌ಡಿಎನ ಪೂರ್ಣಾವಧಿ ಸದಸ್ಯ ಹಣಕಾಸು ಹಾಗೂ ಪೂರ್ಣಾವಧಿ ಸದಸ್ಯ ಕಾನೂನು ಹುದ್ದೆಗೆ ಅರ್ಹರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಗರಿಷ್ಠ ವಯಸ್ಸು 62 ಆಗಿದ್ದು, ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು.