ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹಣವಿದ್ರೆ ಸಾಕಾ? ಷರತ್ತಿಗೆ ಬದ್ಧವಾಗಿರ್ಬೇಕಾ?

ರೋಲ್ಸ್ ರಾಯ್ಸ್ ಖರೀದಿ ಮಾಡೋದು ಕೆಲವರ ಕನಸು. ಜೀವನ ಪರ್ಯಂತ ದುಡಿದ ಹಣವನ್ನು ಅದಕ್ಕೆ ಹಾಕಲು ಸಿದ್ಧವಿರ್ತಾರೆ. ಆದ್ರೆ ಖರೀದಿ ಮಾಡುವ ಮುನ್ನ ಕೆಲ ವಿಷ್ಯವನ್ನು ಗ್ರಾಹಕರು ತಿಳಿದಿರಬೇಕು. 
 

rolls royce car buying criteria details roo

ರೋಲ್ಸ್ ರಾಯ್ಸ್ (Rolls Royce) ಖರೀದಿ ಮಾಡ್ಬೇಕು ಎನ್ನುವ ಆಸೆ ಇದ್ರೆ ಮೊದಲು ಅದ್ರ ಷರತ್ತುಗಳನ್ನು ತಿಳಿದ್ಕೊಳ್ಳಿ. ರೋಲ್ಸ್ ರಾಯ್ಸ್ ಹೆಸರು ಕೇಳ್ತಿದ್ದಂತೆ ಕೆಲವರು ನಮ್ಮ ಬಳಿ ಅಷ್ಟೊಂದು ಹಣವಿಲ್ವಪ್ಪ ಎನ್ನುತ್ತಾರೆ. ಒಂದ್ವೇಳೆ ನಿಮ್ಮ ಬಳಿ ರೋಲ್ಸ್ ರಾಯ್ಸ್ ಖರೀದಿ ಮಾಡುವಷ್ಟು ಹಣ ಇದ್ರೂ, ಎಲ್ಲರೂ ಈ ಕಾರು ಖರೀದಿ ಮಾಡಲು ಸಾಧ್ಯವಿಲ್ಲ. ಕಂಪನಿ (Company) ನೀವು ಹಣ ನೀಡಿದ್ದೀರಿ ಎನ್ನುವ ಕಾರಣಕ್ಕೆ ಕಾರನ್ನು ನಿಮಗೆ ಮಾರಾಟ ಮಾಡೋದಿಲ್ಲ. ಕಂಪನಿ ಕೆಲವೊಂದು ನಿಯಮಗಳನ್ನು ಹೊಂದಿದೆ. ಆ ಷರತ್ತಿ (condition)ಗೆ ನೀವು ಬದ್ಧರಾಗಿದ್ದರೆ ಮಾತ್ರ ನಿಮಗೆ ಕಾರು ಮಾರಾಟ ಮಾಡುತ್ತದೆ. ಕಂಪನಿ ಷರತ್ತುಗಳನ್ನು ಗ್ರಾಹಕನಿಗೆ ವಿಧಿಸುತ್ತದೆ. ಆ ಷರತ್ತಿನಲ್ಲಿ ಒಂದು ಫೇಲ್ ಆದ್ರೂ ಕಂಪನಿ ನಿಮಗೆ ಕಾರು ಖರೀದಿಗೆ ಅವಕಾಶ ನೀಡೋದಿಲ್ಲ ಎಂಬ ವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿದೆ. ಆದ್ರೆ ಅದು ಎಷ್ಟು ಸತ್ಯ ಎಂಬ ಮಾಹಿತಿ ಇಲ್ಲಿದೆ.

ರೋಲ್ಸ್ ರಾಯ್ಸ್ ಕಾರು ಖರೀದಿ  ಷರತ್ತು : 
• ಬ್ಯಾಗ್ರೌಂಡ್ ಚೆಕ್ : ರೋಲ್ಸ್ ರಾಯ್ಸ್ ಕಾರು ಖರೀದಿಗೆ ಬಂದವನ ಬ್ಯಾಗ್ರೌಂಡ್ ಚೆಕ್ ಮಾಡುತ್ತದೆ. ಆತ ಕಾರು ಖರೀದಿಗೆ ಯೋಗ್ಯನೇ ಎಂಬುದನ್ನು ಹಾಗೂ ಕಾರು ಖರೀದಿ ನಂತ್ರ ತನ್ನ ಸ್ಟೇಟಸ್ ಮೆಂಟೇನ್ ಮಾಡಬಲ್ಲನೇ ಎಂಬುದನ್ನು ಪರಿಶೀಲಿಸುತ್ತದೆ ಎಂಬ ಸುದ್ದಿ ಇದೆ. ಆದ್ರೆ ಕಂಪನಿ ಮಾತ್ರ ಇದನ್ನು ವದಂತಿ ಎನ್ನುತ್ತದೆ. ನಾವು ಹಣವಿರುವ ಯಾವುದೇ ವ್ಯಕ್ತಿಗೆ ಕಾರು ಮಾರಾಟ ಮಾಡ್ತೇವೆ ಎಂದು ಕಂಪನಿ ಹೇಳಿದೆ. 

7.8 ಲಕ್ಷ ರೂ ಸ್ಕೋಡಾ ಕೈಲಾಖ್ ಕಾರು ಬುಕಿಂಗ್ ಆರಂಭ, ಭರ್ಜರಿ ಆಫರ್ ಘೋಷಣೆ!

• ಚಾಲಕನ ಮಾಹಿತಿ : ರೋಲ್ಸ್ ರಾಯ್ಸ್ ಕಾರು ಮಾರಾಟ ಮಾಡುವ ಮೊದಲು ಚಾಲಕನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಾರು ಖರೀದಿ ಮಾಡಿದ ವ್ಯಕ್ತಿಯೇ ಪ್ರತಿ ಬಾರಿಯೂ ಕಾರು ಚಾಲಾಯಿಸುವುದಿಲ್ಲ. ಹಾಗಾಗಿ ಆತನ ಜೊತೆಗಿರುವ ಚಾಲಕ ಹೇಗೆ ಕಾರು ಚಲಾಯಿಸುತ್ತಾನೆ ಎಂಬುದನ್ನು ಪರೀಕ್ಷೆ ಮಾಡುತ್ತದೆ. ಇದ್ರಿಂದ ಕಾರಿನ ಹಿಂದೆ ಕುಳಿತವರಿಗೆ ತೊಂದರೆ ಆಗ್ಬಾರದು ಎಂಬ ಉದ್ದೇಶದ ಜೊತೆ ಕಾರಿನ ಘನತೆ ಕಾಪಾಡಿಕೊಳ್ಳಲು ಕಂಪನಿ ಈ ಷರತ್ತು ವಿಧಿಸುತ್ತದೆಯಂತೆ. ಆದ್ರೆ ಕಂಪನಿ ಇದನ್ನು ತಳ್ಳಿ ಹಾಕಿದೆ. 

• ಪೇಂಟಿಂಗ್ : ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ ವ್ಯಕ್ತಿ, ಮಾರುಕಟ್ಟೆಯಲ್ಲಿ ಅದ್ರ ಬಣ್ಣ ಬದಲಿಸುವಂತಿಲ್ಲ. ಕಂಪನಿ ಬಳಿ 44 ಸಾವಿರ ಬಣ್ಣದ ಆಯ್ಕೆ ಇದೆ. ಒಂದ್ವೇಳೆ ಇದ್ರಲ್ಲಿ ಯಾವುದೂ ಇಷ್ಟವಾಗಿಲ್ಲ ಅಂದ್ರೆ ಕಂಪನಿಯೇ ಗ್ರಾಹಕನ ಇಚ್ಛೆಯ ಬಣ್ಣದ ಕಾರನ್ನು ಸಿದ್ಧಪಡಿಸುತ್ತದೆ. ಆದ್ರೆ ಬೇರೆ ಮಾರುಕಟ್ಟೆಯಲ್ಲಿ ಪೇಂಟಿಂಗ್ ಮಾಡುವಂತಿಲ್ಲ. 

• ರಿಪೇರಿ : ಕಾರು ಹಾಳಾದಲ್ಲಿ ಕಂಪನಿಯ ಸರ್ವಿಸ್ ಸೆಂಟರ್ ಗೆ ಗ್ರಾಹಕ ಬರಬೇಕು. ಬೇರೆ ಮೆಕ್ಯಾನಿಕ್ ನಿಂದ ರಿಪೇರಿ ಮಾಡಿಸುವಂತಿಲ್ಲ. ಒಂದ್ವೇಳೆ ಮಾತು ತಪ್ಪಿದ್ರೆ ಇನ್ನೊಮ್ಮೆ ಕಾರು ಕೆಟ್ಟಾಗ ಕಂಪನಿ ರಿಪೇರಿ ಜವಾಬ್ದಾರಿ ಹೊರುವುದಿಲ್ಲ. 

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತಿದ್ದೀರಾ? ಈ 22 ಕಾರುಗಳುಗಳಿಂದ ದೂರವಿರಿ!

• ಸೆಕೆಂಡ್ ಹ್ಯಾಂಡ್ ಆಯ್ಕೆ ಇಲ್ಲ : ಗ್ರಾಹಕ ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗೆ ರೋಲ್ಸ್ ರಾಯ್ಸ್ ಕಾರನ್ನು ಮಾರಾಟ ಮಾಡುವಂತಿಲ್ಲ. ಆತ ಅದನ್ನು ಕಂಪನಿಗೆ ನೀಡಬೇಕು. 

• ಮೇಕಪ್ – ಪರ್ಫ್ಯೂಮ್ : ಕಾರಿನ ಈ ಷರತ್ತು ವಿಚಿತ್ರವಾಗಿದೆ. ಯಾವುದೇ ವ್ಯಕ್ತಿ ಕಾರಿನಲ್ಲಿ ಕುಳಿತುಕೊಳ್ಳುವಾಗ ಅತಿ ಹೆಚ್ಚು ಮೇಕಪ್ ಮಾಡಿರಬಾರದು. ಹಾಗೆಯೇ ಹೆಚ್ಚು ಪರ್ಫ್ಯೂಮ್ ಹಾಕಿರಬಾರದು. ಕಾರಿಗೆ ತನ್ನದೇ ಆದ ವಾಸನೆಯಿದ್ದು, ಮೇಕಪ್ ಹಾಗೂ ಬೇರೆ ಪರ್ಫ್ಯೂಮ್ ಕಾರಿನ ಸ್ಮೆಲ್ ಹಾಳು ಮಾಡುತ್ತದೆ ಎಂದು ಕಂಪನಿ ನಂಬುತ್ತದೆ. ತನ್ನ ಗ್ರಾಹಕರಿಗೂ ಒಂದೇ ರೀತಿಯ ಪರ್ಫ್ಯೂಮ್ ಬಳಸಲು ಅದು ಸೂಚನೆ ನೀಡುತ್ತದೆ.

• ಬ್ಯಾಟರಿ ಬದಲಾವಣೆ : ಕಾರಿನ ಮಾಲೀಕ ಕಾರಿನ ಬ್ಯಾಟರಿ ಹಾಳಾದಲ್ಲಿ ಬೇರೆ ಬ್ಯಾಟರಿ ಬಳಸುವಂತಿಲ್ಲ. ಬ್ಯಾಟರಿ ಕೈಕೊಡುವ ಮೊದಲೇ ಕಂಪನಿ ಈ ಬಗ್ಗೆ ಎಚ್ಚರಿಕೆ ನೀಡಿರುತ್ತದೆ. ಅದನ್ನು ಗ್ರಾಹಕ ಪಾಲಿಸಬೇಕಾಗುತ್ತದೆ. ಕಂಪನಿ ಗ್ರಾಹಕರ ಹಿತಕ್ಕಾಗಿ ಕೆಲ ನಿಯಮಗಳನ್ನು ರೂಪಿಸಿದೆ. ಕಂಪನಿಯಿಂದಲೇ ಎಲ್ಲ ಸೌಲಭ್ಯ ಸಿಗುತ್ತೆ ಅಂದಾದ್ಮೇಲೆ ಗ್ರಾಹಕ ಏಕೆ ಬೇರೆ ಕಡೆ ಹೋಗ್ಬೇಕು ಎನ್ನುತ್ತದೆ ಕಂಪನಿ.

Latest Videos
Follow Us:
Download App:
  • android
  • ios