Asianet Suvarna News Asianet Suvarna News

BECIL Recruitment 2022: Bsc ಪದವೀಧರರಿಗೆ ಭರ್ಜರಿ ಉದ್ಯೋಗವಕಾಶ ಅವಕಾಶ

ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ.  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು,  ಆನ್‌ಲೈನ್   ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆ ದಿನವಾಗಿದೆ. 

Broadcast Engineering Consultants India Limited  Recruitment 2022 notification for various posts gow
Author
Bengaluru, First Published Feb 19, 2022, 6:35 PM IST

ಬೆಂಗಳೂರು(ಫೆ.19): ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. (Broadcast Engineering Consultants India Limited) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.  ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರೇಡಿಯೋಗ್ರಾಫರ್ (Radiographer), ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ (Medical Lab Technologist) ಸೇರಿದಂತೆ ಒಟ್ಟು 96 ಹುದ್ದೆ ಖಾಲಿ ಇದ್ದು ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28  ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.becil.com/vacancies ಭೇಟಿ ನೀಡಲು ಕೋರಲಾಗಿದೆ.

ಒಟ್ಟು 96 ಹುದ್ದೆಗಳ ಮಾಹಿತಿ ಇಂತಿದೆ.
ರೇಡಿಯೋಗ್ರಾಫರ್ : 22 ಹುದ್ದೆಗಳು
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ: 51 ಹುದ್ದೆಗಳು
 ರೋಗಿಗಳ ಆರೈಕೆ ಸಂಯೋಜಕ (patient Care Coordinator):8 ಹುದ್ದೆಗಳು
ಫ್ಲೆಬೋಟೊಮಿಸ್ಟ್ (Phlebotomist):1ಹುದ್ದೆ
ಲ್ಯಾಬ್ ಅಟೆಂಡೆಂಟ್ (Lab Attendant): 14 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.

  • ರೇಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ರೇಡಿಯೋ ವಿಷಯದಲ್ಲಿ ಬಿ.ಎಸ್‌ಸಿ ಮಾಡಿರಬೇಕು. 
  • ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಬಿ.ಎಸ್‌ಸಿ (MLT) ಮತ್ತು ಸಂಬಂಧಿತ ವಿಭಾಗದಲ್ಲಿ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
  • ರೋಗಿಗಳ ಆರೈಕೆ ಸಂಯೋಜಕ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಲೈಫ್ ಸೈನ್ಸ್‌ ವಿಷಯದಲ್ಲಿ ಪದವಿ ಮಾಡಿರಬೇಕು.
  • ಫ್ಲೆಬೋಟೊಮಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರು/ವೈದ್ಯಕೀಯ ಪ್ರಯೋಗಾಲಯ ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನ) ಪದವಿ ಮಾಡಿರಬೇಕು.
  • ಲ್ಯಾಬ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ 10+2/ಪಿಯುಸಿ ಪಾಸಾಗಿರಬೇಕು. 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

COAL INDIA LIMITED RECRUITMENT 2022: ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ ವಿವರ: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರ ವೇತನ ಪಡೆಯಲಿದ್ದಾರೆ.

ರೇಡಿಯೋಗ್ರಾಫರ್ : 25,000 ರೂ.
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ: 21,970 ರೂ.
 ರೋಗಿಗಳ ಆರೈಕೆ ಸಂಯೋಜಕ (patient Care Coordinator):21,970 ರೂ.
ಫ್ಲೆಬೋಟೊಮಿಸ್ಟ್ (Phlebotomist):21,970 ರೂ.
ಲ್ಯಾಬ್ ಅಟೆಂಡೆಂಟ್ (Lab Attendant): 20,202 ರೂ.

Twitter CEO Paternity Leave: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಿತೃತ್ವ ರಜೆ ಪಡೆದ ಟ್ವಿಟ್ಟರ್‌ CEO

ಅರ್ಜಿ ಶುಲ್ಕ: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರಿಗೆ ವರ್ಗಾನುಸಾರ ವಯೋಮಿತಿ ನಿಗದಿಪಡಿಸಲಾಗಿದೆ.
ಸಾಮಾನ್ಯ,ಒಬಿಸಿ, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 750 ರೂ. ಮತ್ತು SC/ST ಹಾಗೂ  EWS/PH ಅಭ್ಯರ್ಥಿಗಳಿಗೆ 450 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಮೂದಿಸಿರುವ ಅಗತ್ಯ ದಾಖಲೆಗಳೊಂದಿಗೆ  ಇಲಾಖೆಯ ಅಧಿಕೃತ ವೆಬ್‌ ತಾಣ www.becil.com  ಅಥವಾ  https://becilregistration.com ನಲ್ಲಿ ಫೆಬ್ರವರಿ 17ರೊಳಗೆ ಅರ್ಜಿ ಸಲ್ಲಿಸಬೇಕು.  

Follow Us:
Download App:
  • android
  • ios