BHEL ನೇಮಕಾತಿ: ವೈದ್ಯ ವೃತ್ತಿಪರರಿಂದ ಅರ್ಜಿ ಆಹ್ವಾನ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ. ಕಂಪನಿಯು ತನ್ನ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ವೈದ್ಯಕೀಯ ವೃತ್ತಿಪರರು ಅರ್ಜಿ ಸಲ್ಲಿಸಬಹುದು.

BHEL recruits for medical professionals and check details

ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ವೈದ್ಯರು ಕೆಲಸ ಮಾಡಬಹುದು. ಅರೆ..ಇದು ಎಲೆಕ್ಟ್ರಾನಿಕ್ ಕಂಪನಿ..ಇಲ್ಲಿ ಎಂಜಿನಿಯರ್ಸ್‌ಗೆ ಮಾತ್ರ ಅವಕಾಶ ಅಲ್ವಾ? ಅಲ್ಲಿ ಡಾಕ್ಟರ್ಸ್ ಏನು ಕೆಲಸ ಮಾಡ್ತಾರೆ ಅಂದುಕೊಳ್ತಿರಾ?. ಬಿಎಚ್ ಇಎಲ್ ಕಂಪನಿಯಲ್ಲಿ ಕೆಲ್ಸ ಮಾಡೋಕ್ಕಲ್ಲ. ತನ್ನ ಸುಪರ್ದಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವೈದ್ಯಕೀಯ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

BHEL recruits for medical professionals and check details

ತಿರುಚಿ, ಭೋಪಾಲ್, ಹರಿದ್ವಾರ, ಹೈದರಾಬಾದ್, ಝಾನ್ಸಿ, ರಾಣಿಪೇಟೆ, ಜಗದೀಶ್‌ಪುರ, ವೈಜಾಗ್ ಮತ್ತು ದೆಹಲಿ/ ಎನ್‌ಸಿಆರ್‌ನಲ್ಲಿನ ವಿವಿಧ ಆಸ್ಪತ್ರೆಗಳು / ಔಷಧಾಲಯಗಳು, ಕಚೇರಿಗಳಿಗೆ ಇ-2 ದರ್ಜೆಯಲ್ಲಿ ತಜ್ಞರಾಗಿ ಸೇವೆ ಸಲ್ಲಿಸಲು ನೇಮಕಾತಿಗಾಗಿ ವೈದ್ಯಕೀಯ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ನೇಮಕ

ಈಗಾಗಲೇ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BHEL ನ ಅಧಿಕೃತ ವೆಬ್‌ಸೈಟ್‌ careers.bhel.in ನಲ್ಲಿ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಬಿಹೆಚ್ ಇಎಲ್ ಈ ನೇಮಕಾತಿ ಪ್ರಕ್ರಿಯೆಯಲ್ಲಿ 27 ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. 27 ಸೀನಿಯರ್ ಮೆಡಿಕಲ್ ಆಫೀಸರ್ (ಸ್ಪೆಷಲಿಸ್ಟ್) ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗಿವುದು. ಈ ವೈದ್ಯಕೀಯ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 37 ವರ್ಷಗಳನ್ನ ಮೀರಿರಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕ ಮತ್ತು ಜಿಎಸ್‌ಟಿ ಸೇರಿ ಒಟ್ಟು ₹354 ಪಾವತಿಸಬೇಕು.

ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಪೂರೈಸಿರಬೇಕು. ಜೊತೆಗೆ ಒಂದು ವರ್ಷ ಸಂಬಂಧಿತ ವಿಷಯದಲ್ಲಿ ಅರ್ಹತಾ ಅನುಭವ/ ತರಬೇತಿಯೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಅಂದಹಾಗೇ BHELನಲ್ಲಿ ವೈದ್ಯಕೀಯ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗಿಲ್ಲ. ಆದರೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಬಿಇಎಲ್‌ನಲ್ಲಿ ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ, ಅರ್ಜಿ ಹಾಕಿ

ಹಿರಿಯ ವೈದ್ಯಕೀಯ ಅಧಿಕಾರಿಗಳ (ಸ್ಪೆಷಲಿಸ್ಟ್) ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹70,000 ದಿಂದ 2 ಲಕ್ಷ ರೂ.ವರೆಗೂ ವೇತನ ದೊರೆಯಲಿದೆ. ವೈದ್ಯಕೀಯ ಅಧಿಕಾರಿಗಳಾಗಿ ಕೆಲಸ ಮಾಡುವವರಿಗೆ ಕಂಪನಿಯು ಒಳ್ಳೆಯ ಸಂಬಳ ಪ್ಯಾಕೇಜ್ ಅನ್ನು ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ, ಬಿಎಚ್‌ಇಎಲ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದೋರಿಗೆ  ಇದೊಂದು ಒಳ್ಳೆಯ ಅವಕಾಶವಾಗಿದೆ ಎನ್ನಬಹುದು. 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು BHEL ನ ಅಧಿಕೃತ ಪೋರ್ಟಲ್ http://careers.bhel.in ನ ಮುಖಪುಟದಲ್ಲಿರುವ ವೈದ್ಯಕೀಯ ವೃತ್ತಿಪರರ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಸಾಮಾನ್ಯವಾಗಿ ಬಿಎಚ್‌ಇಎಲ್ ಎಂದರೆ ಎಂಜಿನಿಯರ್‌ಗಳಿಗೆ ಅಥವಾ ತಾಂತ್ರಿಕ ತಜ್ಞರಿಗೆ ಉದ್ಯೋಗ ಅವಕಾಶಗಳು ಹೆಚ್ಚು. ಆದರೆ, ವೈದ್ಯಕೀಯ ಸಿಬ್ಬಂದಿಗೆ ಅವಕಾಶ ಕಡಿಮೆ. ಆದರೆ, ಕಂಪನಿಯು ತನ್ನ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಿಗಾಗಿ ಈ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಹಾಗಾಗಿ, ಅರ್ಹ ವೈದ್ಯಕೀಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 7 ಕೊನೆಯ ದಿನವಾಗಿದೆ ಎಂಬುದನ್ನ ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು. 

ನಾವಲ್‌ ಶಿಪ್ ರಿಪೇರ್ ಯಾರ್ಡ್ ನೇಮಕಾತಿ: 230 ಅಪ್ರೆಂಟಿಸ್‌ಗೆ ಅರ್ಜಿ ಆಹ್ವಾನ

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ.(BHEL) ಕಂಪನಿಯ ಸರ್ಕಾರ ಸ್ವಾಮ್ಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಬೃಹತ್ ಉದ್ದಿಮೆ ಮತ್ತು ಸಾರ್ವಜನಿಕ ಕಂಪನಿಗಳ ಸಚಿವಾಲಯದಡಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ. ಕಂಪನಿಯು ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಸಲಕರಣಗಳನ್ನು ಉತ್ಪಾದನೆ ಮಾಡುತ್ತದೆ. ದೇಶದಲ್ಲೇ ಈ ಕಂಪನಿಯು ಅಗ್ರಗಣ್ಯ ಕಂಪನಿಗಳಲ್ಲಿ ಒಂದು ಎನಿಸಿಕೊಂಡಿದೆ.

Latest Videos
Follow Us:
Download App:
  • android
  • ios