ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರ ಬಂಪರ್ , ಶೇ.3ರಷ್ಟು ಡಿಎ ಹೆಚ್ಚಳ, ಜುಲೈನಿಂದಲೇ ಪೂರ್ವಾನ್ವಯ?
ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ ಸಾಧ್ಯತೆ. ಜು.1ರಿಂದಲೇ ಪೂರ್ವಾನ್ವಯ. ಏರಿಕೆ ಬಳಿಕ ತುಟ್ಟಿಭತ್ಯೆ ಪ್ರಮಾಣ ಶೇ.45ಕ್ಕೆ ಹೆಚ್ಚಳ.
ನವದೆಹಲಿ (ಸೆ.10): ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೀಘ್ರದಲ್ಲೇ ತುಟ್ಟಿಭತ್ಯೆ ಹೆಚ್ಚಳ ಘೋಷಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಶೇ.3ರಷ್ಟುಡಿಎ ಹೆಚ್ಚಬಹುದಾಗಿದ್ದು, ಈ ವರ್ಷದ ಜು.1ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೆ ಬರುವ ಸಾಧ್ಯತೆ ಇದೆ. ಈ ಹೆಚ್ಚಳದ ನಂತರ ತುಟ್ಟಿಭತ್ಯೆಯು ಮೂಲ ವೇತನದ ಶೇ.45ಕ್ಕೆ ತಲುಪಲಿದೆ.
ಉದಾಹರಣೆಗೆ, ಈಗ ವ್ಯಕ್ತಿಯೊಬ್ಬರ ವೇತನ ತಿಂಗಳಿಗೆ 50,000 ರು. ಆಗಿದ್ದರೆ ಮತ್ತು ಮೂಲ ವೇತನವಾಗಿ 15,000 ರು. ಪಡೆಯುತ್ತಾರೆ. ಈಗ ಡಿಎ ಮೂಲವೇತನದ ಶೇ.42 ಇರುವ ಕಾರಣ ಡಿಎ ಪ್ರಮಾಣ 6300 ರು. ಆಗುತ್ತದೆ. ಇನ್ನು ಶೇ.3ರಷ್ಟುಡಿಎ ಹೆಚ್ಚಳ ಆದರೆ ಉದ್ಯೋಗಿ ತಿಂಗಳಿಗೆ 6,750 ರು. ಡಿಎ ಪಡೆಯುತ್ತಾನೆ. ಇದರಿಂದ 50 ಸಾವಿರ ರು. ಸಂಬಳ ಪಡೆದು, 15 ಸಾವಿರ ರು. ಮೂಲವೇತನ ಪಡೆಯುತ್ತಿದ್ದರೆ ಅವರ ಒಟ್ಟಾರೆ ಸಂಬಳ 450 ರು. ಏರಲಿದೆ.
100 ಕೋಟಿಗಿಂತ ಹೆಚ್ಚಿನ ವೇತನ ಪಡೆದು ಒಂದೇ ವರ್ಷಕ್ಕೆ ಕಂಪೆನಿಯಿಂದ ವಜಾಗೊಂಡ ಐಐಟಿ ಬಾಂಬೆ ವಿದ್ಯಾರ್ಥಿ!
ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ.
ಟೆಕ್ ದೈತ್ಯ ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ರೂ ಪ್ಯಾಕೇಜ್ ಉದ್ಯೋಗ ಪಡೆದ ಭಾರತೀಯ!
ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ 2 ಬಾರಿ ಹೆಚ್ಚಿಸಲಾಗುತ್ತದೆ. ಅದು ಜನವರಿ ಮತ್ತು ಜುಲೈನಲ್ಲಿ. ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ.42 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ.