Asianet Suvarna News Asianet Suvarna News

ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಾರಾ ಪ್ರಧಾನಿ ನರೇಂದ್ರ ಮೋದಿ?

ದೆಹಲಿ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಾರನ್ನು ಶೀಘ್ರದಲ್ಲೇ ಅಪ್ಗ್ರೇಡ್ ಮಾಡಲು ಸರ್ಕಾರ ಚಿಂತಿಸುತ್ತಿದ್ದು, ಮೋದಿ ಈಗ ಎಲೆಕ್ಟ್ರಿಕ್‌ ವಾಹನ ಬಳಸಲು ಉತ್ಸುಕರಾಗಿದ್ದಾರೆ.

Will Indian  PM Modi shift to Electric Vehicle
Author
Bangalore, First Published Aug 3, 2022, 5:33 PM IST

ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದರೂ, ಯಾವುದೇ ರಾಜಕೀಯ ನಾಯಕರು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುತ್ತಿರುವ ಉದಾಹರಣೆಗಳಿಲ್ಲ. ಆದರೆ, ಶೀಘ್ರದಲ್ಲೇ ಇದು ಬದಲಾಗಲಿದ್ದು, ಪ್ರಮುಖ ರಾಜಕೀಯ ನಾಯಕರೊಬ್ಬರು ಶಸ್ತ್ರಸಜ್ಜಿತ ಎಲೆಕ್ಟ್ರಿಕ್ (equipped electric) ವಾಹನದಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ದೆಹಲಿ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಾರನ್ನು ಶೀಘ್ರದಲ್ಲೇ ಅಪ್ಗ್ರೇಡ್ ಮಾಡಲು ಸರ್ಕಾರ ಚಿಂತಿಸುತ್ತಿದ್ದು, ಮೋದಿ ಎಲೆಕ್ಟ್ರಿಕ್ ವಾಹನ ಬಳಸಲು ಉತ್ಸುಕರಾಗಿದ್ದಾರೆ. ಪರಿಸರದಲ್ಲಿ ಇಂಗಾಲದ ಪ್ರಮಾಣ ಕಡಿಮೆ ಮಾಡಲು ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಮಿತಿಗೊಳಿಸಲು  ಸರ್ಕಾರವು ದೇಶದ ನಾಗರಿಕರನ್ನು EV  ಅಳವಡಿಕೆಗೆ ಒತ್ತಾಯಿಸುತ್ತಿರುವ ಬೆನ್ನಲ್ಲೇ, ಮೋದಿ ಜನರಿಗೆ 'ಉದಾಹರಣೆಯಾಗಿ ಮುನ್ನಡೆಯುವ' ಉದ್ದೇಶ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಪ್ರಧಾನಿ ಮೋದಿ, 12 ಕೋಟಿ ರೂ. ಮೌಲ್ಯದ ಮರ್ಸಿಡೀಸ್ ಮೇಬ್ಯಾಕ್ (Mercedes-Maybach S650) ಬಳಸುತ್ತಿದ್ದಾರೆ. ಇದು 6 ಟನ್ಗಳಿಗಿಂತ ಹೆಚ್ಚು ತೂಗುತ್ತದೆ. ಪಿಎಂ ಮೋದಿ ಇತ್ತೀಚೆಗೆ ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ಗೆ ಅಪ್ಗ್ರೇಡ್ ಆಗಿದ್ದಾರೆ. ಅದಕ್ಕೂ ಮೊದಲು ಅವರು ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್ ಬಳಸುತ್ತಿದ್ದರು.  ಈಗ ಜಗತ್ತು ಕ್ರಮೇಣ ಎಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿರುವಂತೆ ಇತರ ವಿಶ್ವ ನಾಯಕರು ಸಹ ಎಲೆಕ್ಟ್ರಿಕ್ ಕಾರುಗಳಿಗೆ ಅಪ್ಗ್ರೇಡ್ ಮಾಡಲು ಬಯಸುತ್ತಿದ್ದಾರೆ ಎನ್ನಲಾಗುತ್ತಿದ್ದಾರೆ. ಈಗಲೂ  ಪಿಎಂ ಮೋದಿ ಅವರು ರಾಜಧಾನಿ ದೆಹಲಿಯ ಉನ್ನತ ಮಟ್ಟದ ಸಭೆಗಳಿಗಾಗಿ ಲ್ಯಾಂಡ್ ಕ್ರೂಸರ್ನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಅವರು ಇದರಲ್ಲಿ ಪ್ರಯಾಣಿಸುವುದನ್ನು ಹಲವರು ನೋಢಿದ್ದಾರೆ.  ಈಗ, ಎಲ್ಲಾ ಶಸ್ತ್ರಸಜ್ಜಿತ ವಾಹನಗಳು ಅಕ್ಷರಶಃ 'ಟನ್ಗಳಷ್ಟು' ರಕ್ಷಣೆಯನ್ನು ಹೊಂದಿದ್ದು, ಲ್ಯಾಂಡ್ಮೈನ್ಗಳು, ಬಾಡಿಶೆಲ್ ಮತ್ತು ಬುಲೆಟ್ ಪ್ರೂಫ್, ಗುಂಡುಗಳನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಕಿಟಕಿಗಳು ಸೇಋಿಭಾರೀ ಶಸ್ತ್ರಸಜ್ಜಿತ ಒಳಭಾಗವನ್ನು ಒಳಗೊಂಡಿವೆ. ಈ ವಾಹನಗಳು ಅವುಗಳ ಸಾಮಾನ್ಯ ಮಾದರಿಗಿಂತ ಹೆಚ್ಚು ಭಾರವಾಗಿರುತ್ತದೆ. ಸ್ಟ್ಯಾಂಡರ್ಡ್ ಪ್ರೊಡಕ್ಷನ್ ಸ್ಪೆಕ್ Mercedes-Maybach S600 ಗಾರ್ಡ್ ಕೂಡ ಸುಮಾರು 5.5 ಟನ್ ತೂಕವಿದೆ.

ಜೊತೆಗೆ, ಇಂತಹ ವಾಹನಗಳು ತುರ್ತು ಪರಿಸ್ಥಿತಿಯಲ್ಲಿ ತ್ವರಿತವಾಗಿ ಹೊರಹೋಗಲು ಉತ್ತಮ ಮಟ್ಟದ ಕಾರ್ಯಕ್ಷಮತೆ ಹೊಂದಿರಬೇಕು. ಈ ಎರಡೂ ವಿಭಾಗಗಳಲ್ಲಿ EV ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ, ಕಾರಿನ ಪ್ರಯಾಣ ವ್ಯಾಪ್ತಿ ಕಡಿಮೆಯಿದ್ದರೂ, ಮೋದಿ ಅವರು ದೆಹಲಿಯ ಮಿತಿಯಲ್ಲಿಯೇ ಈ ಕಾರಿನಲ್ಲಿ ಪ್ರಯಾಣಿಸುವುದರಿಂದ ಅದು ಸಮಸ್ಯೆಯಾಗಲಾರದು.

ಟಾಟಾ ಅಲ್ಟ್ರೋಜ್ ಇವಿ, ಹ್ಯುಂಡೈ IONIQ ಸೇರಿ 7 ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರು ಶೀಘ್ರದಲ್ಲೇ ಲಾಂಚ್!

 ಮೋದಿ ಯಾವ ಕಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಶ್ವಾದ್ಯಂತ ಇನ್ನೂ EV ಅಳವಡಿಕೆ ಆರಂಭಿಕ ವರ್ಷಗಳಲ್ಲಿ ಇರುವುದರಿಂದ, ಹೆಚ್ಚು ಶಸ್ತ್ರಸಜ್ಜಿತ EV ಗಳು ಸದ್ಯ ಲಭ್ಯವಿಲ್ಲ. ಲಭ್ಯವಿರುವ ಆಯ್ಕೆಗಳಲ್ಲಿ ಒಂದು ಮರ್ಸಿಡಿಸ್ EQS ನ ಶಸ್ತ್ರಸಜ್ಜಿತ ಆವೃತ್ತಿಯಾಗಿರಬಹುದು ಎನ್ನಲಾಗುತ್ತಿದೆ. ಸದ್ಯ ಪ್ರಧಾನ ಮಂತ್ರಿ ಮತ್ತು ಭಾರತದ ರಾಷ್ಟ್ರಪತಿಗಳು ಪ್ರಸ್ತುತ ಎಸ್-ಕ್ಲಾಸ್ನ ವಿವಿಧ ರೂಪಾಂತರಗಳ ಶಸ್ತ್ರಸಜ್ಜಿತ ಆವೃತ್ತಿಗಳನ್ನು ಬಳಸುತ್ತಾರೆ.

ಪಿಎಂ ಮೋದಿಗೆ ಎಸ್ಯುವಿಗಳ ಮೇಲೆ ಪ್ರೀತಿ ಇದೆ ಎಂಬುದು ರಹಸ್ಯವಾಗೇನು ಉಳಿದಿಲ್ಲ. ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್ ಹೊರತುಪಡಿಸಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲು ಮಹೀಂದ್ರಾ ಸ್ಕಾರ್ಪಿಯೊವನ್ನು ತಮ್ಮ ವಾಹನವಾಗಿ ಬಳಸಿದ್ದಾರೆ.  ಅವರು ಎಲೆಕ್ಟ್ರಿಕ್ SUV ಗೆ ಅಪ್ಗ್ರೇಡ್ ಮಾಡಲು ಆಯ್ಕೆ ಮಾಡಿಕೊಂಡರೆ, ವಾಹನವು Mercedes EQS SUV ಕೂಡ ಅವರ ಆಯ್ಕೆಯಾಘಬಹುದು. ಸರ್ಕಾರ ಈ ಕಾರುಗಳಲ್ಲಿ ಒಂದನ್ನು ಖರೀದಿಸಲು ನಿರ್ಧರಿಸಿದರೆ, ಇದನ್ನು ಜರ್ಮನಿಯ ಮರ್ಸಿಡಿಸ್ ಪ್ರಧಾನ ಕಛೇರಿಯಲ್ಲಿ  ವಿಶೇಷವಾಗಿ ಭಾರತೀಯ ಪ್ರಧಾನ ಮಂತ್ರಿಗಾಗಿ ತಯಾರಿಸಲಾಗುವುದು.

ಜುಲೈನಲ್ಲಿ ಶೇ.51ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಟಾಟಾ ಮೋಟಾರ್ಸ್

Follow Us:
Download App:
  • android
  • ios