ಟೆಸ್ಲಾ ಸೆಡ್ಡು ಹೊಡೆಯಲಿರುವ ವೋಕ್ಸ್‌ವ್ಯಾಗನ್ ಅದೇ ಹಾದಿಯಲ್ಲಿ ಸಾಗಿರುವ ಟೊಯೋಟೋ ಎಲೆಕ್ಟ್ರಿಕ್ ವಾಹನಗಳಿಗೆ ಕೋಟ್ಯಂತರ ರೂಪಾಯಿ ಹೂಡಿಕೆ
Auto Desk(ಜ.06): ಎಲೆಕ್ಟ್ರಿಕ್ ವಾಹನಗಳು (electric vehicles) ಆಟೊಮೊಬೈಲ್ ಕ್ಷೇತ್ರದ ಭವಿಷ್ಯ ಎಂಬ ವಿಷಯ ದಿನದಿಂದ ದಿನಕ್ಕೆ ನಿಜವಾಗುತ್ತಿರುವ ಬೆನ್ನಲ್ಲೇ ಈ ವಲಯದ ಮೇಲೆ ನಿಯಂತ್ರಣ ಹೇರಲು ಕಾರು ತಯಾರಕರ ನಡುವೆ ತೀವ್ರ ಪೈಪೋಟಿ ಆರಂಭವೊಂಡಿದೆ. ಎಲೆಕ್ಟ್ರಿಕ್ ವಾಹನಗಳ ರೂವಾರಿ ಹಾಗೂ ಟ್ರೆಂಡ್ ಸೆಟ್ಟರ್ ಟೆಸ್ಲಾ, (tesla) ತನ್ನ ಇಂಧನ ಕಾರುಗಳಿಂದ ಮೊದಲ ಹಂತದಲ್ಲಿಯೇ ಹೂಡಿಕೆದಾರರನ್ನು ಸೆಳೆದುಕೊಂಡಿದ್ದು, ತನ್ನ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳಿಗೆ ಸುರಕ್ಷಿತ ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.
ಇನ್ನೊಂದೆಡೆ, ವಿಶ್ವದ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಾದ ವೋಕ್ಸ್ವ್ಯಾಘನ್ (VolksWagen) ಎಜಿ (AG) ಮತ್ತು ಟೊಯೋಟೊ ಮೋಟಾರ್ ಕಾರ್ಪ್ (Toyoto Motor Corp), ಟೆಸ್ಲಾ ಕಾರುಗಳ ಹಾವಳಿಯಲ್ಲಿ ಅತಿ ಕಡಿಮೆ ವಾಹನಗಳ ಮಾರಾಟ ಮಾಡಿದ್ದು, ಇದು ಬ್ಯಾಟರಿ ಚಾಲಿತ ವಾಹನಗಳ ಬೇಡಿಕೆ ಎಂಬುದನ್ನು ಅರಿತಿದ್ದು, ಈಗ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಪ್ರಯತ್ನದಲ್ಲಿವೆ.
ಈ ಕಂಪನಿಗಳು ಈಗ ತನ್ನ ಉತ್ಪಾದನೆಯಲ್ಲಿ 170 ಬಿಲಿಯನ್ ಡಾಲರ್ ಹೂಡಿಕೆ(1,26,46,18,10,00,000 ರೂಪಾಯಿ) ಮಾಡಲು ಮುಂದಾಗಿವೆ. ಈ ಕುರಿತು ಆಸ್ಟನ್ ಮಾರ್ಟಿನ್ ಹಾಗೂ ಮಾಜಿ ನಿಸಾನ್ ಮೋಟಾರ್ ಕಂಪನಿ ಸಹ ಕಾರ್ಯನಿರ್ವಾಹಕ ಅಧಿಕಾರಿ ಆ್ಯಂಡಿ ಪಾಲ್ಮರ್, ‘ ಜಗತ್ತಿನ ಎರಡು ಅತಿ ದೊಡ್ಡ ಕಾರು ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದರೆ, ಅದರ ಅರ್ಥ, ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳು ಮುಖ್ಯವಾಹಿನಿಗೆ ಬರಲಿವೆ ಎಂಬುದಾಗಿದೆ.ಇದರಲ್ಲಿ ಅನುಮಾನವೇ ಬೇಡ’ ಎಂದಿದ್ದಾರೆ.
ಭಾರಿ ವಿರೋಧದ ನಡುವೆ ಟೆಸ್ಲಾಗೆ ಆಮದು ಸುಂಕ ವಿನಾಯಿತಿ ನೀಡಲು ಮುಂದಾದ ಕೇಂದ್ರ!
ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ನಿರೀಕ್ಷೆಗೂ ಮೀರಿದ ವೇಗದಲ್ಲೇ ಬೆಳೆಯಲಿದೆ ಎಂಬ ವಿಶ್ವಾಸವಿದೆ ಎಂದು ಕೂಡ ಅವರು ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಜರ್ಮನಿ ಮತ್ತು ಜಪಾನ್ ಮೂಲದ ವೋಕ್ಸ್ವ್ಯಾಘನ್ ಹಾಗೂ ಟೊಯೋಟೋ ಕಂಪನಿಗಳು ಈ ಟೆಸ್ಲಾವನ್ನು ಮತ್ತೊಮ್ಮೆ ಹಿಂದಿಕ್ಕಲು ಎಲ್ಲಾ ಸಿದ್ಧತೆ ನಡೆಸಿವೆ.ವೋಕ್ಸ್ವ್ಯಾಘನ್ ಸದಸ್ಯ 120 ರಾಷ್ಟ್ರಗಳಲ್ಲಿ ವಾಹನಗಳ ಉತ್ಪಾದನೆ, ಮಾರಾಟ ಹೊಂದಿದ್ದು, ಟೈಗೂನ್ ಹಾಗೂ ಪಸಾಟ್ನಿಂದ ಲ್ಯಾಂಬೋರ್ಗಿನಿ ಸೂಪರ್ಕಾರ್ಗಳು ಮತ್ತು ಸ್ಕ್ಯಾನಿಯ ಹೆವಿ ಟ್ರಕ್ಗಳವರೆಗೆ ಎಲ್ಲಾ ವಲಯಗಳಲ್ಲೂ ಛಾಪು ಮೂಡಿದಿದೆ. ಇದು ವರ್ಷಕ್ಕೆ 280 ಬಿಲಿಯನ್ ಡಾಲರ್ ಆದಾಯ ಗಳಿಸುತ್ತದೆ ಎನ್ನಲಾಗುತ್ತಿದೆ.
300 ಬಿಲಿಯನ್ ಡಾಲರ್ ಕ್ಲಬ್‌ಗೆ ಎಲಾನ್ ಮಸ್ಕ್; 22.50 ಲಕ್ಷ ಆಸ್ತಿ ಹೊಂದಿದ ವಿಶ್ವದ ಮೊದಲಿಗ!
2021ರಲ್ಲಿ ವೋಕ್ಸ್ವ್ಯಾಘನ್ 3.22 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, 6 ಲಕ್ಷ ವಾಹನಗಳ ಮಾರಾಟದ ಗುರಿ ಹೊಂದಿದೆ. ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಸಿಇಒ ಹರ್ಬಟ್ ಡಿಯೆಸ್, ಡಿಸೆಂಬರ್ ತಿಂಗಳಲ್ಲಿ ಕಂಪನಿ, ಇವಿ ವಲಯಕ್ಕೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹಾಗೂ ಮುಂದಿನ ಅರ್ಧ ದಶಕಗಳಲ್ಲಿ ಸಾಫ್ಟ್ವೇರ್ ಅಭಿವೃದ್ಧಿಗೆ ಮೀಸಲಿರಿಸುವುದಾಗಿ ಘೋಷಿಸಿತ್ತು. ಶೀಘ್ರದಲ್ಲಿ ಆಟೊಮೊಬೈಲ್ ಕ್ಷೇತ್ರ ಕಳೆದ ಶತಮಾನದಲ್ಲಿ ಕಂಡುಕೇಳರಿಯದ ಬದಲಾವಣೆಗಳನ್ನು ಕಾಣಲಿದೆ ಎಂದರು.
ಇನ್ನೊಂದೆಡೆ ಟೊಯೋಟೋ ಕಂಪನಿ ಕೂಡ ಬ್ಯಾಟರಿ-ಚಾಲಿತ ಬಿಝೆಡ್4ಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆಗೊಳಿಸಿದೆ. ಜೊತೆಗೆ, ಹೈಡ್ರೋಜನ್ ಇಂಧನದ ಇಂಜಿನದ ಹೊಂದಿರುವ ಅಕಿಯೋ ಟೊಯೋಡಾ ಕಾರನ್ನು ಕೂಡ ಬಿಡುಗಡೆಗೊಳಿಸಿತ್ತು. ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ವಲಯಕ್ಕೆ ಕೂಡ 70 ಬಿಲಿಯನ್ ಡಲರ್ ಅನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಇದರಲ್ಲಿ ಅರ್ಧದಷ್ಟು ಮೊತ್ತ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಗೆ ನಳಸಲಾಗುತ್ತದೆ. ಸದ್ಯ ಟೊಯಾಟೊ 11 ಬ್ಯಾಟರಿ ಚಾಲಿತ ವಾಹನಗಳ ಬಿಡುಗಡೆಯ ಘೋಷಣೆ ಮಾಡಿದೆ. ಟೆಸ್ಲಾ ಕೂಡ 2021ರಲ್ಲಿ 9.63 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದು ಒಟ್ಟು ಉತ್ಪಾದನೆಯ ಶೇ.90ರಷ್ಟಿದೆ. ಇದರಲ್ಲಿ ಬಳಕೆಯಾದ ಅತ್ಯುನ್ನತ ಸಾಫ್ಟ್ವೇರ್ ಈಗಲೂ ಇತರ ಕಾರುಗಳಿಗೆ ಸವಾಲಾಗಿ ಉಳಿದಿದೆ.
