Self Charging ಹೈಬ್ರಿಡ್ ಎಲೆಕ್ಟ್ರಿಕ್ ವಾಹನಕ್ಕೆ ಸ್ವಯಂ ಚಾರ್ಜಿಂಗ್ ತಂತ್ರಜ್ಞಾನ, ಟೊಯೋಟಾ ಅಭಿಯಾನ!
- ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಅಭಿಯಾನ
- ಇಂಟರ್ನಲ್ ಕಂಬಷನ್ ಎಂಜಿನ್, ರೀಜನರೇಟಿವ್ ಬ್ರೇಕಿಂಗ್ ಮೂಲಕ ವಿದ್ಯುತ್
- ಪರಿಸರ ಸ್ನೇಹಿ ತಂತ್ರಜ್ಞಾನದ ಕುರಿತು ಅರಿವು
ಬೆಂಗಳೂರು(ಏ.21) ದೇಶದ ಕಾರ್ಬನ್ ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಅವಲಂಬನೆಯನ್ನು ಕಡಿಮೆಗೊಳಿಸುವ ಗುರಿಗೆ ಪೂರಕವಾಗಿ2050 ರ ವೇಳೆಗೆ ʼಕಾರ್ಬನ್ ನ್ಯೂಟ್ರಲಿಟಿʼ ನಿಲುವಿಗೆ ಟೊಯೊಟಾ ಬದ್ಧವಾಗಿದೆ. ಈ ಪೈಕಿ ಮೂರು, ತನ್ನ ಎಲ್ಲ ವಾಹನಗಳಲ್ಲಿ ಶೂನ್ಯ ಇಂಗಾಲದ ಮಾಲಿನ್ಯವನ್ನು ಖಾತ್ರಿಪಡಿಸುತ್ತದೆ. ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಕ್ಕೆ ವೇಗ ನೀಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ವಿಶೇಷ ವೆಬ್ ವಿಡಿಯೋ ಸರಣಿಗಳ ಮೂಲಕ “ಹಮ್ ಹೈ ಹೈಬ್ರೀಡ್” ಅಭಿಯಾನಕ್ಕೆ ಚಾಲನೆ ನೀಡಿದೆ. ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ (ಎಸ್‌ಎಚ್‌ಇವಿಎಸ್) ಕುರಿತು ಮತ್ತು ಅವುಗಳ ಬಳಕೆಯಲ್ಲಿರುವ ಉಪಯೋಗಗಳ ಕುರಿತು ಗ್ರಾಹಕರು ಮತ್ತು ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಸ್ವಯಂ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಡಿಜಿಟಲ್ ಅಭಿಯಾನದ ಮೂಲಕ ಟಿಕೆಎಂ, ದೇಶದ ಸಮೂಹಕ ವಿದ್ಯುದ್ದೀಕರಣ ನಿಲುವಿಗೆ ವೇಗ ನೀಡಲಿದೆ. ಟೊಯೊಟಾದ ಡಿಜಿಟಲ್ ಪ್ರಚಾರ ಕಾರ್ಯತಂತ್ರದ ಭಾಗವಾಗಿ ವಿನ್ಯಾಸಗೊಳಿಸಲಾಗಿರುವ “ಹಮ್ ಹೈ ಹೈಬ್ರೀಡ್” ಅಭಿಯಾನ ಎಸ್‌ಎಚ್‌ಇವಿ ಬಗ್ಗೆ ಸಾರ್ವಜನಿಕರಲ್ಲಿ ಈ ವಿಷಯಗಳಲ್ಲಿ ಅರಿವು ಮೂಡಿಸಲಿದೆ.
Hybrid Car ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ ಮಾಡಿದ ಟೊಯೋಟಾ ಕಿರ್ಲೋಸ್ಕರ್!
ಶಕ್ತಿಯುತ ಸಾಮರ್ಥ್ಯ- ಎಸ್‌ಎಚ್‌ಇವಿ ಸ್ಟಾರ್ಟ್ ಮಾಡಿ ಚಾಲಕರು ಪೆಡಲ್ ಮೇಲೆ ಕಾಲಿಟ್ಟ ತಕ್ಷಣ ಎಲೆಕ್ಟ್ರಿಕ್ ವಾಹನಕ್ಕೆ ತಕ್ಷಣದ ಟಾರ್ಕ್ ನೀಡುತ್ತದೆ. ನಿಮ್ಮ ವಾಹನಕ್ಕೆ ಇನ್ನಷ್ಟು ಶಕ್ತಿ ಬೇಕೆನಿಸಿದರೆ, ಎಲೆಕ್ಟ್ರಿಕ್ ಮೋಟಾರ್ ಮತ್ತು ಎಂಜಿನ್‌ಗಳೆಡರೂ ಜೊತೆಯಾಘಿ ಕೆಲಸ ಮಾಡಿ ಕಾರಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಅಧಿಕ ಇಂಧನ ಕ್ಷಮತೆ- ಅಪ್ಪಟ ಎಲೆಕ್ಟ್ರಿಕ್ ಮೋಡ್‌ನಲ್ಲಿದ್ದಾಗ ಎಸ್‌ಎಚ್‌ಇವಿ ಶೇ 60 ರವರೆಗೆ ಚಲಿಸುತ್ತದೆ. ಇದರಿಂದಾಗಿ ಇಂಧನ ಕ್ಷಮತೆ ಶೇ 40 ರಿಂದ 80 ರವರೆಗೆ ಹೆಚ್ಚಲಿದೆ
ಎಲೆಕ್ಟ್ರಿಕ್ ಪವರ್ ಸ್ಟೇಷನ್ ಇಲ್ಲವೆಂಬ ಆತಂಕ ಬೇಡ: ಎಸ್‌ಎಚ್‌ಇವಿಯಲ್ಲಿ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಹೀಗೆ ಎರಡೂ ಶಕ್ತಿ ಮೂಲಗಳಿರಲಿವೆ. ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನದ ರೀಚಾರ್ಜ್‌ಗೆ ಪ್ಲಗ್ ಇನ್ ಸೌಕರ್ಯ ಇರಬೇಕಾಗಿಲ್ಲ. ವಾಹನ ಚಲಿಸುತ್ತಿರುವಾಗಲೇ ಇಂಟರ್ನಲ್ ಕಂಬಷನ್ ಎಂಜಿನ್ ಮತ್ತು ರೀಜನರೇಟಿವ್ ಬ್ರೇಕಿಂಗ್ ಮೂಲಕ ವಿದ್ಯುತ್ ಮೋಟಾರ್ ಚಾರ್ಜ್ ಆಗುತ್ತದೆ.
ಕಡಿಮೆ ನಿರ್ವಹಣೆ ವೆಚ್ಚ: ಚಲಿಸುವ ಶೇ 60ರಷ್ಟು ಸಮಯ ಎಸ್‌ಎಚ್‌ಇವಿ ಎಲೆಕ್ಟ್ರಿಕ್ ಮೋಡ್‌ನಲ್ಲಿಯೇ ಇರುತ್ತದೆ. ಇದರಿಂದಾಗಿ ವಾಹನ ಚಲಿಸುವುದರಿಂದಾಗುವ ಹಾನಿ ಕಡಿಮೆ ಇರುತ್ತದೆ. ಎಸ್‌ಎಚ್‌ಇವಿಯಲ್ಲಿರುವ ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಬಿಡಿಭಾಗಗಳಿಗೆ ನಿರ್ವಹಣೆಯ ಅಗತ್ಯವಿಲ್ಲ. ಹಾಗಾಗಿ ಯಾವುದೇ ಅನಿರೀಕ್ಷಿತ ವೆಚ್ಚದ ಭಯ ಇಲ್ಲ.
Toyota Mirai ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!
ದೀರ್ಘ ಬಾಳಿಕೆಯ ಬ್ಯಾಟರಿ: ಎಸ್‌ಎಚ್‌ಇವಿಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಟರಿಯನ್ನು ನಿಖರತೆಗೆ ಪೂರಕವಾಗಿ ರೂಪಿಸಲಾಗಿದೆ. ಅಲ್ಲದೇ ಟೊಯೊಟಾ ಎಸ್‌ಎಚ್‌ಇವಿದ ಬ್ಯಾಟರಿಗೆ ಎಂಟು ವರ್ಷ ಅಥವಾ 1,60,000 ಕಿಲೋಮೀಟರ್ (ಯಾವುದು ಮೊದಲು ಅದು ಅನ್ವಯ) ವಾರೆಂಟಿ ಹೊಂದಿದೆ.
ಕಡಿಮೆ ಇಂಗಾಲದ ಹೊರಸೂಸುವಿಕೆ: ಎಸ್‌ಎಚ್‌ಇವಿ ವಾಹನವು ಶೇ 60 ರಷ್ಟು ಸಮಯ ಎಲೆಕ್ಟ್ರಿಕ್ ಮೋಡ್‌ನಲ್ಲಿಯೇ ಚಲಿಸುವುದರಿಂದರಿಂದ ಇಂಗಾಲದ ಬಿಡುಗಡೆಯ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇಂಗಾಲದ ಮಾಲಿನ್ಯ ಶೇ 30ರಿಂದ 50ರವರೆಗೆ ಕುಗ್ಗಲಿದ್ದು, ಇಂಧನ ಕ್ಷಮತೆ ಶೇ 40ರಿಂದ ೮೦ರವರೆಗೆ ಹೆಚ್ಚಲಿದೆ
ನಿಶ್ಶಬ್ಧ ಚಾಲನೆ: ಎಸ್‌ಎಚ್‌ಇವಿಯಲ್ಲಿರುವ ಎಲೆಕ್ಟ್ರಿಕ್ ಮೋಟಾರ್‌ನಲ್ಲಿ ಇಂಟರ್ನಲ್ ಕಂಬಷನ್ ಎಂಜಿನ್ (ಐಸಿಇ) ಹೊರತುಪಡಿಸಿದರೆ ಉಳಿದ ಬಿಡಿಭಾಗಗಳ ಚಲನೆ ಕಡಿಮೆ ಇರುತ್ತದೆ. ಶೇ 60ರಷ್ಟು ಸಮಯ ವಾಹನ ಎಲೆಕ್ಟ್ರಿಕ್ ಮೋಡ್‌ನಲ್ಲಿಯೇ ಇರುವುದರಿಂದ ಇತರ ಐಸಿಇ ವಾಹನಕ್ಕೆ ಹೋಲಿಸಿದರೆ ಎಸ್‌ಎಚ್‌ಇವಿ ಚಾಲನೆ ಸರಳ, ನಿರಾಳ ಮತ್ತು ನಿಶ್ಶಬ್ಧವಾಗಿರುತ್ತದೆ.
ಸುಲಭದ ಚಾಲನೆ: ಎಸ್‌ಎಚ್‌ಇವಿನಲ್ಲಿ ಎಲೆಕ್ಟ್ರಿಕ್ ಡ್ರೈವ್ ಮತ್ತು ಪೆಟ್ರೋಲ್ ಎಂಜಿನ್ ನಡುವೆ ಬದಲಾವಣೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.
ಅಭಿಯಾನದ ವೆಬ್ ವಿಡಿಯೋ ಸರಣಿಗಳನ್ನು ಟೊಯೊಟಾ ಭಾರತ್ ವೆಬ್‌ಸೈಟ್ ಅಥವಾ ಸೋಷಿಯಲ್ ಮೀಡಿಯಾ ಪೇಜ್ ಮೂಲಕ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ಗಳಲ್ಲಿ ಸುಲಭವಾಗಿ ಪಡೆಯಬಹುದು. ಎಸ್‌ಎಚ್‌ಇವಿ ತಂತ್ರಜ್ಞಾನದ ಅನುಭವ ಪಡೆಯಲು ದಯವಿಟ್ಟು ನಿಮ್ಮ ಸಮೀಪದ ಟೊಯೊಟಾ ಡೀಲರ್‌ಷಿಪ್‌ಗೆ ಭೇಟಿ ಕೊಡಿ.
ಹಮ್ ಹೈ ಹೈಬ್ರಿಡ್ ಅಭಿಯಾನದ ಕುರಿತು ಮಾತನಾಡಿದ ಟಿಕೆಎಂನ (ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್) ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಅತುಲ್ ಸೂದ್ “ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ನಮ್ಮ ನಿರಂತರ ಪ್ರಯತ್ನಗಳು ಭಾರತದ ಶೂನ್ಯ ಕಾರ್ಬನ್ ಗುರಿಗಳಿಗೆ ಪೂರಕವಾಗಿವೆ. ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುನ್ನುಡಿ ಬರೆದಿರುವ ನಾವು ಸುಸ್ಥಿರ ಮತ್ತು ಕಾರ್ಯಸಾಧು ಮೊಬಿಲಿಟಿ ಪರಿಹಾರಗಳ ಕುರಿತು ಅರಿವು ಮೂಡಿಸುವ ಅಭಿಯಾನ ನಡೆಸುತ್ತಿದ್ದೇವೆ. ಇದರೊಂದಿಗೆ ಗ್ರಾಹಕರಿಗೆ, ಒಟ್ಟಾರೆ ಪರಿಸರಕ್ಕೆ ಪ್ರಯೋಜವಾಗಲಿದೆ. ಅಲ್ಲದೇ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಲೂ ಇದು ನೆರವಾಗಬಹುದು ಎಂಬ ಆಶಯ ನಮ್ಮದು. ಇಂಥ ಅಭಿಯಾನ ದೀರ್ಘಾವಧಿಯಲ್ಲಿ ನಮ್ಮ ಗ್ರಾಹಕರು, ಪೂರೈಕೆ ಪಾಲುದಾರರು, ಮಾಧ್ಯಮ, ವಿದ್ಯಾರ್ಥಿಗಳು ಮತ್ತು ಕಾರುಗಳಲ್ಲಿ ಆಸಕ್ತಿ ಹೊಂದಿರುವವರಿಗೆಲ್ಲ ಪರಿಸರ ಸ್ನೇಹಿ ತಂತ್ರಜ್ಞಾನದ ಕುರಿತು ಅರಿವು ಮೂಡಿಸಲಿದೆ” ಎಂದು ಹೇಳಿದರು.
ಟೊಯೊಟಾದ ವಿದ್ಯುದ್ದೀಕರಣ ರೋಡ್‌ಮ್ಯಾಪ್‌ನ ಭಾಗವಾಗಿರುವ ಎಸ್‌ಎಚ್‌ಇವಿ, ಶಕ್ತಿಯುತ ಪೆಟ್ರೋಲ್ ಎಂಜಿನ್ ಮತ್ತು ಆಧುನಿಕ ಎಲೆಕ್ಟ್ರಿಕ್ ಮೋಟಾರ್‌ನ ಅತ್ಯುತ್ತಮ ಸಂಯೋಜನೆಯಾಗಿದ್ದು, ಗ್ರಾಹಕರಿಗೆ ಎರಡು ಪವರ್ ಮೂಲಗಳ ನಡುವೆ ಆಯ್ಕೆಯನ್ನು ನೀಡುತ್ತದೆ. ಎಸ್‌ಎಚ್‌ಇವಿ ವಾಹನಗಳು ಎಲೆಕ್ಟ್ರಿಫೈಡ್ ವೆಹಿಕಲ್ ಟೆಕ್ನಾಲಜೀಸ್‌ನ (ಎಕ್ಸ್‌ಇವಿ) ಕುಟುಂಬಕ್ಕೆ ಸೇರಿದ್ದು, ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ), ಪ್ಲಗ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಪಿಎಚ್‌ಇವಿ), ಫುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಇಇವಿ)ಗಳು ಇದರಲ್ಲಿವೆ. ಈ ಎಲ್ಲ ವಾಹನಗಳಲ್ಲಿ ಅತ್ಯಾಧುನಿಕ ಬ್ಯಾಟರಿ ಮತ್ತು ಪವರ್ ಎಲೆಕ್ಟ್ರಾನಿಕ್ಸ್‌ಗಳಿರುವ ಎಲ್ಲ ಸಾಮಾನ್ಯ ಎಲೆಕ್ಟ್ರಿಕ್ ಪವರ್‌ಟ್ರೇನ್ ಪಾರ್ಟ್‌ಗಳು ಸಾಮಾನ್ಯವಾಗಿರುತ್ತವೆ. ಆದ್ದರಿಂದ ಎಸ್‌ಎಚ್‌ಇವಿ ಕಾರ್ಯಸಾಧುವಾದ ಮತ್ತು ಪ್ರಸ್ತುತ ಸನ್ನಿವೇಶಕ್ಕೆ ಅಗತ್ಯವಿರುವ ಸುಸ್ಥಿರ ಮೊಬಿಲಿಟಿ ಸೊಲ್ಯೂಷನ್ ಆಗಿದ್ದು, ದೇಶದ ಇಂಧನ ಬಳಕೆಗೆ ಪೂರಕವಾಗಿ ಅನೇಕ ಪ್ರಯೋಜನಗಳನ್ನು ಹೊಂದಿವೆ.
ಸಮಾಜದ ಭವಿಷ್ಯದ ಸಂಚಾರದ ನೇತೃತ್ವವನ್ನು ವಹಿಸಿಕೊಳ್ಳುವ ಗುರಿ ಹೊಂದಿರುವ ಟೊಯೊಟಾ, ವಿಶ್ವಾದ್ಯಂತ ಜನರಿಗೆ ಸುರಕ್ಷಿತ, ಪರಿಸರಸ್ನೇಹಿ ಮತ್ತು ಇಷ್ಟಪಡುವ ರೀತಿಯಲ್ಲಿ ಸಂಚಾರಕ್ಕೆ ವೇದಿಕೆ ಕಲ್ಪಿಸುತ್ತಿದೆ. ಈ ಗುರಿಯನ್ನು ಸಾಕ್ಷಾತ್ಕಾರಗೊಳಿಸಲು ಟಿಕೆಎಂ ನಿರಂತರವಾಗಿ ಉತ್ತಮ ಕಾರ್ಪೊರೆಟ್ ಸುಸ್ಥಿರ ಅಭಿಯಾನಗಳನ್ನು ನಡೆಸುತ್ತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯೊಂದಿಗೆ ಸಮೂಹ ವಿದ್ಯುದ್ದೀಕರಣದತ್ತ ಹೆಚ್ಚು ಗಮನ ಹರಿಸುತ್ತಿದೆ. ಟೊಯೊಟಾ, ವಾಸ್ತವಿಕ, ಸುಸ್ಥಿರ ಮತ್ತು ಕಾರ್ಯಸಾಧು ದೃಷ್ಟಿಕೋನಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿದೆ. “ಕಾರ್ಬನ್ ನ್ಯೂಟ್ರಲಿಟಿ”ಯನ್ನು ನಿಜವಾಗಿಸಲು ಹಲವು ದಾರಿಗಳನ್ನು ಅಳವಡಿಸಿಕೊಂಡಿದೆ. ಈ ಮೂಲಕ “ಎಲ್ಲರಿಗೂ ಸಂತೋಷ” ಹಂಚುತ್ತಿದೆ.