Toyota Hilux Lunch ಟೋಯೋಟಾ ಹಿಲಕ್ಸ್ ಬೆಲೆ ಬಹಿರಂಗ, ಫಾರ್ಚುನರ್ ಕಾರಿಗಿಂತ ದುಬಾರಿ!

  • ಎಲ್ಲಾ ವೇರಿಯಂಟ್ ಗಳು  4X4 ಡ್ರೈವ್ ಟ್ರೈನ್ ಹೊಂದಿದೆ
  • 204 HP ಪವರ್ ಹಾಗೂ 500 NM ಪೀಕ್ ಟಾರ್ಕ್ 
  • ನೂತನ ಪಿಕ್ಅಪ್ ಬೆಲೆ 33,99,000 ರೂಪಾಯಿಯಿಂದ ಆರಂಭ
     
Toyota Kirloskar Motor Announces Price of iconic Hilux pick up truck at Rs 33 99000 ckm

ಬೆಂಗಳೂರು(ಏ.01): ಟೊಯೊಟಾ(Toyota) ಕಿರ್ಲೋಸ್ಕರ್ ಮೋಟಾರ್ (TKM), ಐಕಾನಿಕ್ ಹಿಲಕ್ಸ್(Hilux) ವಾಹನದ ಬೆಲೆ ಘೋಷಿಸಿದೆ. ಒನ್ ನೇಷನ್ ಒನ್ ಪ್ರೈಸ್ ಮೂಲಕ ಟೊಯೊಟಾ ನೂತನ ಹಿಲಕ್ಸ್ ಬೆಲೆ  33,99,000 ರೂಪಾಯಿ(ಎಕ್ಸ್ ಶೋ ರೂಂ). ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಪರಿಚಯಿಸಲಾದ ಹಿಲಕ್ಸ್, ಕಠಿಣ ಭೂಪ್ರದೇಶಗಳಲ್ಲಿ ಆಫ್-ರೋಡಿಂಗ್ ಅಡ್ವೆಂಚರ್ ಡ್ರೈವ್ಸ್ ಮತ್ತು ದೈನಂದಿನ ನಗರದ ಬಳಕೆಗೆ ಹೆಚ್ಚು ಸೂಕ್ತವಾದ ವಾಹನವಾಗಿದೆ.  ಇನ್ ಕ್ರೆಡಿಬ್ಲ್ ಲೈಫ್ ಸ್ಟೈಲ್ ಯುಟಿಲಿಟಿ ವೆಹಿಕಲ್ ಅನ್ನು ಬಯಸುವ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

ನೂತನ ಟೋಯೋಟಾ ಹಿಲಕ್ಸ್ ಬೆಲೆ(ಎಕ್ಸ್ ಶೋ ರೂಂ):
4*4 MT Standard: 33,99,000 ರೂಪಾಯಿ
4*4 MT High: 35,80,000 ರೂಪಾಯಿ
4*4 AT High: 36,80,000 ರೂಪಾಯಿ

ಹಿಲಕ್ಸ್ ಬೆಲೆಯನ್ನು ಘೋಷಿಸಲು ನಮಗೆ ಸಂತೋಷವಾಗಿದೆ. ಅತ್ಯಾಧುನಿಕ ಹಿಲಕ್ಸ್ ಮಾರುಕಟ್ಟೆಗೆ ಬಿಡುಗಡೆಯಾದಾಗಿನಿಂದ ಉತ್ತಮ ಪ್ರತಿಕ್ರಿಯೆಯೊಂದಿಗೆ ಗ್ರಾಹಕರ ಮೆಚ್ಚುಗೆಯನ್ನು ಪಡೆದಿದ್ದು, ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಮ್ಮ “ಕಸ್ಟಮರ್ ಫಸ್ಟ್”  ವಿಧಾನದೊಂದಿಗೆ, ಜನರ ಲೈಫ್ ಸ್ಟೈಲ್ ನಿಂದ ಸ್ಫೂರ್ತಿಯನ್ನು ಪಡೆಯುವುದರೊಂದಿಗೆ, ಹಿಲಕ್ಸ್ ನೊಂದಿಗೆ ಸಂಪೂರ್ಣ ಹೊಸ ಲೈಫ್ ಸ್ಟೈಲ್ ವಿಭಾಗದಲ್ಲಿ ನಮ್ಮ ಕೊಡುಗೆಯು ಎಲ್ಲರಿಗೂ ಸಂತಸ ನೀಡಲಿದೆ. ನಮ್ಮ ಬ್ರಾಂಡ್ ನಲ್ಲಿ ವಿಶ್ವಾಸವನ್ನು ಇರಿಸಿದ್ದಕ್ಕಾಗಿ ಮೌಲ್ಯಯುತ ಗ್ರಾಹಕರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು  ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ತದಶಿ ಅಸಜುಮಾ ಹೇಳಿದ್ದಾರೆ.

Toyota Hilux Launch ಬಹುನಿರೀಕ್ಷಿತ ಟೊಯೋಟಾ ಹಿಲಕ್ಸ್ SUV ಪಿಕ್ಅಪ್ ಬಿಡುಗಡೆ!

ಟೊಯೊಟಾ ಹಿಲಕ್ಸ್ ವಿಶ್ವದರ್ಜೆಯ ಎಂಜಿನಿಯರಿಂಗ್, ಸರಿಸಾಟಿಯಿಲ್ಲದ ಸುರಕ್ಷತೆ ಮತ್ತು ಅತ್ಯುತ್ತಮ ದರ್ಜೆಯ ಆರಾಮದ ಸಾರಾಂಶವಾಗಿದೆ.  ಇವೆಲ್ಲವೂ ಸಾಹಸ, ರೋಮಾಂಚನ,  ಸ್ನೇಹಿತರು ಮತ್ತು ಕುಟುಂಬದೊಂದಿಗೆ ಶಾಶ್ವತ ನೆನಪುಗಳನ್ನು ಸೃಷ್ಟಿಸುವವರಿಗೆ ಇನ್ ಕ್ರೆಡಿಬಲ್ ಲೈಫ್ ಸ್ಟೈಲ್ ಯುಟಿಲಿಟಿ ವಾಹನವನ್ನು ರಚಿಸಲು ಸಂಪೂರ್ಣವಾಗಿ ಚಾನಲ್ ಮಾಡಲಾಗಿದೆ" ಎಂದರು.

ಜಾಗತಿಕವಾಗಿ, ಹಿಲಕ್ಸ್ ಮಾರಾಟವು 180 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ಜನರ ಮನ ಗೆದ್ದ 20 ಮಿಲಿಯನ್ ಯುನಿಟ್ ಗಳನ್ನು ದಾಟಿದೆ.  ಐದು ದಶಕಗಳು ಮತ್ತು ಎಂಟು ತಲೆಮಾರುಗಳಿಂದ ಟೊಯೋಟಾ ಹಿಲಕ್ಸ್ ಅಸಾಧಾರಣ ಅನುಭವಗಳನ್ನು ಮತ್ತು ತಮ್ಮ ದೈನಂದಿನ ಡ್ರೈವ್ ಗಳಲ್ಲಿ  ಅದ್ಭುತತೆಯನ್ನು ಬಯಸುವವರೊಂದಿಗೆ, ಅವರು ವ್ಯಾಪಾರದಲ್ಲಿರಲಿ ಅಥವಾ ತಮ್ಮ ಕುಟುಂಬಗಳೊಂದಿಗೆ ಇರಲಿ, ಅವರೊಂದಿಗೆ ಅವಿನಾಭಾವ ಸಂಬಂಧವನ್ನು ಸೃಷ್ಟಿಸಿದೆ.

ಹಿಲಕ್ಸ್ ನ ಜಾಗತಿಕ ಖ್ಯಾತಿಯು ಅದರ ಕಟ್ಟುನಿಟ್ಟಾದ ಇನ್ನೋವೇಟಿವ್ ಮಲ್ಟಿ-ಪರ್ಪಸ್ ವೆಹಿಕಲ್ (IMV) ಪ್ಲಾಟ್ ಫಾರ್ಮ್ ಮತ್ತು 2.8 L ಫೋರ್ ಸಿಲಿಂಡರ್ ಟರ್ಬೋ-ಡೀಸೆಲ್ ಎಂಜಿನ್ ನೊಂದಿಗೆ ಶಕ್ತಿಯುತ ಪವರ್ ಟ್ರೇನ್ ಸಿಸ್ಟಂ ಮತ್ತು 6- ಸ್ಪೀಡ್ ಆಟೋಮ್ಯಾಟಿಕ್ ಅಥವಾ 6-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ಲಭ್ಯವಿದೆ.  ದೃಢವಾದ ಎಂಜಿನ್ ನೊಂದಿಗೆ ಸೇರಿಕೊಂಡು ವಿವಿಧ ಗಮನಾರ್ಹ ವೈಶಿಷ್ಟ್ಯಗಳ ಜೊತೆಗೆ  ಕಡಿಮೆ ನಿರ್ವಹಣಾ ವೆಚ್ಚ, ಮತ್ತು ವಿವಿಧ ಬಳಕೆಯ ಉದ್ದೇಶಗಳಿಗಾಗಿ ಉತ್ತಮ ಪ್ರಾಯೋಗಿಕತೆಯನ್ನು ಸಹ ನೀಡುತ್ತದೆ. ಇದಲ್ಲದೆ, ಹಿಲಕ್ಸ್  700 ಎಂಎಂನ ವಾಟರ್ ವೇಡಿಂಗ್ ಸಾಮರ್ಥ್ಯವು ಭಾರತೀಯ ಟ್ರಯಲ್ಸ್ ಮೂಲಕ ಚಾಲನೆ ಮಾಡಲು ಸೂಕ್ತವಾಗಿದೆ, ಅದರ ಆಫ್-ರೋಡ್ ಸಾಮರ್ಥ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ.

ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!

ಅದ್ಭುತ ಡಿಜಿಟಲ್ ಅನುಭವವನ್ನು ಸುಲಭಗೊಳಿಸಲು, ಟೊಯೊಟಾ ವರ್ಚುವಲ್ ಶೋರೂಮ್ ಗ್ರಾಹಕರಿಗೆ ತಮ್ಮ ಮನೆಯಿಂದಲೇ ಹಿಲಕ್ಸ್ ಅನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಈಗ ಗ್ರಾಹಕರು 360 ಡಿಗ್ರಿ ಎಕ್ಸ್ ಟೀರಿಯರ್ ಮತ್ತು ಇಂಟೀರಿಯರ್ ಅವನ್ನು ತಡೆ ರಹಿತವಾಗಿ ವೀಕ್ಷಿಸಬಹುದು. ಲಭ್ಯವಿರುವ ಎಲ್ಲಾ ವೇರಿಯಂಟ್ ಗಳನ್ನು  ಮತ್ತು ಬಣ್ಣಗಳನ್ನು ಪರಿಶೀಲಿಸಬಹುದು, ಪ್ರಮುಖ ವೈಶಿಷ್ಟ್ಯಗಳನ್ನು ಅನುಭವಿವ ಜೊತೆಗೆ ವೇರಿಯೆಂಟ್ ವಾರು ಪಡೆಯಬಹುದು.

Latest Videos
Follow Us:
Download App:
  • android
  • ios