Asianet Suvarna News Asianet Suvarna News

Tesla Autonomous Car ಡ್ರೈವರ್ ಇಲ್ಲ, 8 ಕ್ಯಾಮರಾ, AI ತಂತ್ರಜ್ಞಾನ ನೆರವಿನಿಂದ ಚಲಿಸಲಿದೆ ಸ್ವಯಂಚಾಲಿತ ಟೆಸ್ಲಾ ಕಾರು!

* ಸ್ವಯಂ ಚಾಲಿತ ಕಾರು ತಯಾರಿಯಲ್ಲಿ ಟೆಸ್ಲಾ ಮಗ್ನ

* ಕ್ಯಾಮೆರಾ, ಎಐ ಮಾಹಿತಿ ಆಧರಿಸಿ ಚಾಲನೆ

* ಹಲವೆಡೆ ಪರೀಕ್ಷಾರ್ಥ ಪ್ರಯೋಗ

Tesla use advanced technology 8 cameras and artificial intelligence for autonomous driving car
Author
Bangalore, First Published Jan 7, 2022, 7:41 PM IST

ವಾಶಿಂಗ್ಟನ್(ಜ.07): ಅಮೆರಿಕದ ಮೂಲದ ಹಾಗೂ ಎಲೆಕ್ಟ್ರಿಕ್ ವಲಯದಲ್ಲಿ ಪ್ರಾಬಲ್ಯ ಸಾಧಿಸಿರುವ ಟೆಸ್ಲಾ (Tesla) ಕಂಪನಿ ಇತ್ತೀಚಿನ ದಿನಗಳಲ್ಲಿ ಅದರ ವಾಹನಗಳಲ್ಲಿ ಸಾಕಷ್ಟು ಸುರಕ್ಷತಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೂ, ಟೆಸ್ಲಾ ಮಾತ್ರ ತಮ್ಮ ವಾಹನಗಳನ್ನು ಸಂಪೂರ್ಣ ಸ್ವಯಂಚಾಲಿತ ಹಾಗೂ ಕೃತಕ ಬುದ್ಧಿಮತ್ತೆಯಿಂದ ಚಲಾಯಿಸುವ ಪಟ್ಟಿನಿಂದ ಹಿಂದೆ ಸರಿದಿಲ್ಲ. ಈ ಕುರಿತು ಇತ್ತೀಚೆಗಷ್ಟೇ ಕಂಪನಿ ಹೇಳಿಕೆ ನೀಡಿದ್ದು, ಟೆಸ್ಲಾ ಅನ್ನು ಸಂಪೂರ್ಣವಾಗಿ ಸ್ವಯಂಚಾಲಿತ ಕಾರನ್ನಾಗಿಸಲು ಸಂಪೂರ್ಣವಾಗಿ ಕ್ಯಾಮೆರಾ ಹಾಗೂ ಕೃತಕ ಬುದ್ಧಿಮತ್ತೆಯ (Artificial intelligence-AI) ಮೇಲೆ ಅವಲಂಬಿಸುವುದಾಗಿ ತಿಳಿಸಿದೆ. ಆದ್ದರಿಂದ, ಸಾಮಾನ್ಯವಾಗಿ ಇತರ ವಾಹನಗಳಲ್ಲಿ ಬಳಕೆಯಾಗುವ ಲೇಸರ್ ಡಿಟೆಕ್ಷನ್ನಂತಹ (laser detection) ಉಪಕರಣಗಳು ಇದರಲ್ಲಿ ಕಾಣಿಸುವುದಿಲ್ಲ. 

ಟೆಸ್ಲಾ ಕಂಪನಿ ಮುಖ್ಯಸ್ಥೆ ಎಲಾನ್ ಮಸ್ಕ್ ಇತ್ತೀಚೆಗೆ, ತಮ್ಮ ಕಾರುಗಳ ಸುತ್ತ 8 ‘ಸರೌಂಡ್’ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅವುಗಳು ವಾಹನದ ‘ಆಳವಾದ ನ್ಯೂಟ್ರಲ್ ನೆಟ್ವರ್ಕ್’ಗೆ (neutral technology) ಮಾಹಿತಿ ನೀಡುತ್ತಿರುತ್ತದೆ ಎಂದಿದ್ದಾರೆ. ಆದರೆ, ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ, ಈ ತಂತ್ರಜ್ಞಾನ ಅಳವಡಿಕೆಯ ಪ್ರಯೋಗ ಇನ್ನೊಂದು ವಿವಾದಕ್ಕೆ ದಾರಿ ಮಾಡಿಕೊಡುವ ಲಕ್ಷಣಗಳು ಕೂಡ ಇವೆ.

Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

ಇತ್ತೀಚೆಗೆ ಲಾಸ್ ವೇಗಾಸ್ನಲ್ಲಿ ನಡೆದ ಗ್ರಾಹಕ ಎಲೆಕ್ಟ್ರಾನಿಕ್ ಪ್ರದರ್ಶನದಲ್ಲಿ (ಸಿಇಎಸ್-CES), ಲುಮಿನಾರ್ ಟೆಕ್ನಾಲಜೀಸ್ ಎರಡು ವಾಹನಗಳು ಗಂಟೆಗೆ 48 ಕಿಮೀ (kmph) ವೇಗದಲ್ಲಿ  ಒಂದು ಮಗುವಿನ ದಿಕ್ಕಿನಲ್ಲಿ ಚಲಿಸುವುದನ್ನು ತೋರಿಸಿತ್ತು.ಎಎಫ್ಪಿ ವರದಿಯ ಪ್ರಕಾರ, ಲೇಸರ್-ಆಧಾರಿತ ಸಿಸ್ಟಮ್ ಹಾಗೂ ಹಿಂದಿನ ಲಿಡಾರ್ ಹೊಂದಿರುವ ಕಾರು ತಕ್ಷಣ ಎದುರಿನ ಅಡ್ಡಿಯನ್ನು ಪತ್ತೆಹಚ್ಚಿದ ಸಂದೇಶ ರವಾನಿಸುತ್ತದೆ. ಆದ್ದರಿಂದ ಕಾರು ಆ ಮಗುವನ್ನು ತಲುಪುವ ಮುನ್ನವೇ ನಿಂತುಬಿಟ್ಟಿತು. 

ಈಗಾಗಲೇ ಸುಧಾರಿತ ಸ್ವಾಯತ್ತ ಚಾಲನಾ ವ್ಯವಸ್ಥೆಯನ್ನು  ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ವಾಹನ ತಯಾರಕರು ಲುಮಿನಾರ್ ತಂತ್ರಜ್ಞಾನವನ್ನು ಒಪ್ಪಿದ್ದಾಋೆ ಮತ್ತು ಅವರು, ಕ್ಯಾಮೆರಾ ಮತ್ತು ಸಿಸ್ಟಮ್ಗಳಾದ ಲಿಡಾರ್ಗಳು, ರೇಡಿಯೋ ತರಂಗಗಳನ್ನು ಆಧರಿದ ರೇಡಾರ್ ಅಥವಾ ಇವೆರಡನ್ನೂ ಒಳಗೊಂಡಿರುವ ತಂತ್ರಜ್ಞಾನ ಬಳಕೆಯ ಕೇಂದ್ರೀಕರಿಸುತ್ತಿರುವುದಾಗಿ ತಿಳಿಸಿದ್ದಾರೆ.
 ಟೆಸ್ಲಾ ಸ್ವಯಂ ಚಾಲಿತ ತಾಂತ್ರಿಕ ಮಾನದಂಡಗಳನ್ನು ಉಲ್ಲಂಘಿಸುತ್ತಿದ್ದರೂ, ಈ ಕಾರಿನ ಸಂಪೂರ್ಣ ವಿನ್ಯಾಸ ಹಾಗೂ ಕಾರ್ಯನಿರ್ವಹಣೆ ಅದರಲ್ಲಿನ ಕ್ಯಾಮೆರಾಗಳು ರವಾನಿಸುವ ಮಾಹಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ಅಳವಡಿಕೆಯಾಗಲಿರುವ ಎಐ ವ್ಯವಸ್ಥೆ, ಟೆಸ್ಲಾ ಬಹು ವರ್ಷಗಳಿಂದ ಸಂಗ್ರಹಿಸಿರುವ ಮಾಹಿತಿಗಳನ್ನು ಒಳಗೊಂಡಿರುತ್ತದೆ.

Tesla Electric cars ಸುರಕ್ಷತಾ ಕಾರಣಕ್ಕಾಗಿ 4.75 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಹಿಂಪಡೆದ ಟೆಸ್ಲಾ

ಕಾರ್ನೆಲ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನಿ ಕಿಲಿಯನ್ ವೈನ್ಬರ್ಗರ್ ಪ್ರಕಾರ, ಟೆಸ್ಲಾ ತನ್ನ ಸ್ವಾಯತ್ತ ಚಾಲನಾ ಗುರಿಗಳಿಗಾಗಿ, ಡೇಟಾ ಸಂಗ್ರಹಣೆಯನ್ನು ಬಳಸುತ್ತಿದ್ದು, ಅದರ ಮೂಲಕ ಅವರು ಅಲ್ಗಾರಿದಮ್ ಅನ್ನು ತರಬೇತಿ ಮಾಡಲು ಮುಂದಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಆಟೊಮೊಬೈಲ್ ಕಂಪನಿಗಳು ಚಾಲಕರಿಗೆ ನೆರವಾಗುವಂತೆ ಬ್ರೇಕಿಂಗ್, ಪಾರ್ಕಿಂಗ್ ಹಾಗೂ ಇತರ ಸ್ವಯಂಚಾಲಿತ ಅಂಶಗಳನ್ನು ಸೇರಿಸಿದ್ದಾರೆಯಾದರೂ, ಟೆಸ್ಲಾ ಈ ಎಲ್ಲಾ ಮಿತಿಗಳನ್ನು ಮೀರುವ ಪ್ರಯತ್ನದಲ್ಲಿದೆ.

ರಿಯರ್ ಮಿರರ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಟೆಸ್ಲಾ ವಿರುದ್ಧ ಅಮೆರಿಕದ ರಸ್ತೆ ಸುರಕ್ಷತಾ ಪ್ರಾಧಿಕಾರ ತನಿಖೆ ಆರಂಭಿಸಿದೆ. ಪರಿಣಾಮವಾಗಿ, ಟೆಸ್ಲಾ 2020ರ ಡಿಸೆಂಬರ್ ವೇಳೆಗೆ 4 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಹಿಂಪಡೆದಿದೆ. ಇದರ ಜೊತೆಗೆ ವಾಹನದಲ್ಲಿ ಅಳವಡಿಕೆಯಾಗಿರುವ ವಾಹನ ಚಾಲನೆ ಮಾಡುವಾಗಲೇ ನಿರ್ವಹಿಸಬಹುದಾದ ಟಚ್ ಸ್ಕ್ರೀನ್ಗಳಿಗೆ ಕೂಡ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ  ಕಾರಿನಲ್ಲಿ ಸುರಕ್ಷತಾಲೋಪ ಉಂಟಾಗಲಿದ್ದು, ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ ಎಂದು ಆರೋಪಿಸಲಾಗಿದೆ. 
 

Follow Us:
Download App:
  • android
  • ios