Asianet Suvarna News Asianet Suvarna News

Tesla Carಗಳಲ್ಲಿ ‘rolling stop’ ದೋಷ; ಮತ್ತೆ 53 ಸಾವಿರ ಕಾರುಗಳನ್ನು ಹಿಂಪಡೆಯಲು ನಿರ್ಧಾರ!

*ಟೆಸ್ಲಾ ಕಾರುಗಳಲ್ಲಿ ರೋಲಿಂಗ್‌ ಸ್ಟಾಪ್‌ ಸೌಲಭ್ಯದಿಂದ ತೊಂದರೆ
*ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಆಕ್ಷೇಪ
*ಕಾರುಗಳನ್ನು ಹಿಂಪಡೆಯಲು ನಿರ್ಧಾರ

Tesla to recall 5300 cars to upgrade its rolling stop options Details
Author
Bangalore, First Published Feb 2, 2022, 4:11 PM IST

Auto Desk: ಎಲೆಕ್ಟ್ರಿಕ್ ವಾಹನ ಕಂಪನಿ ಟೆಸ್ಲಾ (Tesla), ತನ್ನ ಕಾರುಗಳನ್ನು ಸಂಪೂರ್ಣ ಸ್ವಯಂಚಾಲಿತವನ್ನಾಗಿಸುವ ಗುರಿ ಹೊಂದಿತ್ತಾದರೂ, ಈಗ ಅದಕ್ಕೆ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಿದೆ. ಈಗ ಟೆಸ್ಲಾ ಐಎನ್ಸಿ (Tesla Inc (TSLA.O)) ಕಂಪನಿ, ತನ್ನ ಕಾರುಗಳಲ್ಲಿನ ಸಂಪೂರ್ಣ ಸ್ವಯಂ-ಚಾಲನಾ (ಬೀಟಾ-Beta) ಸಾಫ್ಟ್ವೇರ್ (Software) ಅನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ.ಈ ಸೌಲಭ್ಯ ಹೊಂದಿರುವ ಅಮೆರಿಕದ ಒಟ್ಟು 53,822  ವಾಹನಗಳನ್ನು ಹಿಂಪಡೆಯುವುದಾಗಿ ಕಂಪನಿ ಮುಂದಾಗಿದೆ. ಈ ಸ್ವಯಂ ಚಾಲನಾ ಸೌಲಭ್ಯದಿಂದ ಅದು ಆಟೊಮೆಟಿಕ್ ಆಗಿ, "ರೋಲಿಂಗ್ ಸ್ಟಾಪ್" (Rolling stop) ಸೌಲಭ್ಯವನ್ನು ಆನ್ ಮಾಡಲಿದೆ. ಇದರಿಂದ ಸ್ಟಾಪ್ ಸೈನ್ ಸಕ್ರಿಯಗೊಂಡ ನಂತರವೂ ಕಾರು ಸಂಪೂರ್ಣ ನಿಲ್ಲುವ ಬದಲು ವಾಹನ ನಿಧಾನವಾಗಿ ಚಲಿಸುತ್ತಿರಲಿದೆ.

ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ನಿರ್ವಹಣೆ (ಎನ್ಎಚ್ಟಿಎಸ್ಎ- NHTSA) ಜಾರಿಗೊಳಿಸಿದ ನೋಟಿಸ್ ಪ್ರಕಾರ, ಸ್ಟಾಪ್ ಸೈನ್ನ ವೈಫಲ್ಯ ಅಪಘಾತಕ್ಕೆ ಕಾರಣವಾಗಬಹುದು ಎಂದು ಉಲ್ಲೇಖಿಸಿದೆ. 
ಕೆಲವು 2016-2022ರಲ್ಲಿ ಬಿಡುಗಡೆಯಾದ ಮಾಡೆಲ್ ಎಸ್ (Model S) ಮತ್ತು ಮಾಡೆಲ್ ಎಕ್ಸ್, (Model X) 2017-2022ರ 3, ಮತ್ತು 2020-2022ರ  ವೈ ಮಾದರಿ ವಾಹನಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಕಾರ್‌ಗಳೂ ಎಫ್ಎಸ್ಡಿ (FSD) ಬೀಟಾ ಎಂದೂ ಕರೆಯಲ್ಪಡುವ ವೈಶಿಷ್ಟ್ಯವನ್ನು  ಒಳಗೊಂಡಿವೆ. 

ಟೆಸ್ಲಾ ತನ್ನ ಸೀಮಿತ ಎಫ್ಎಸ್ಡಿ ಬೀಟಾ ಪಾಪ್ಯುಲೇಷನ್ ಸೌಲಭ್ಯದಡಿ ಕಳೆದ ಅಕ್ಟೋಬರ್ನಲ್ಲಿ ರೋಲಿಂಗ್ ಸ್ಟಾಪ್ ತಂತ್ರಜ್ಞಾನವನ್ನು ಅಳವಡಿಸಿತ್ತು.  ಈ ಸೀಮಿತಿ ಕಾರುಗಳಲ್ಲಿ, ಟೆಸ್ಲಾ ಚಾಲಕರಿಗೆ ಚಾಲನೆಯ ಮೋಡ್ ಆಯ್ಕೆ ಮಾಡುವ ಅವಕಾಶ ಕಲ್ಪಿಸಲಿದೆ. ಚಾಲಕರು ‘ಚಿಲ್’,(Chill) ‘ಆ್ಯವರೇಜ್’ (Average) ಹಾಗೂ ‘ಅಸರ್ಟೀವ್’ (Assertive) ಮೋಡ್ಗಳನ್ನು ಆಯ್ಕೆ ಮಾಡಬಹುದು. ಆದರೆ, ಅಸರ್ಟೀವ್ ಮೋಡ್ ಆಯ್ಕೆ ಮಾಡಿದಾಗ, ಕಾರುಗಳು ನಿರಂತರವಾಗಿ ಲೇನ್ ಬದಲಿಸಬಹುದು, ರೋಲಿಂಗ್ ಸ್ಟಾಪ್ ಸಕ್ರಿಯಗೊಳ್ಳಬಹುದು ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. 

ಇದನ್ನೂ ಓದಿ: Electric Car ಟೆಸ್ಲಾಗೆ ಸೆಡ್ಡು, ಭಾರತದಲ್ಲಿ ಫಿಸ್ಕರ್ ಎಲೆಕ್ಟ್ರಿಕ್ ಕಾರು ಕಂಪನಿ ಘಟಕ ಆರಂಭಕ್ಕೆ ತಯಾರಿ, ನೇಮಕಾತಿ ಆರಂಭ!

ಟೆಸ್ಲಾ "ರೋಲಿಂಗ್ ಸ್ಟಾಪ್" ಕಾರ್ಯವನ್ನು ನಿಷ್ಕ್ರಿಯಗೊಳಿಸುವ ಪ್ರಸಾರದ ಸಾಫ್ಟ್ವೇರ್ ಅನ್ನು ನವೀಕರಿಸಲಿದೆ ಎಂದು ಎನ್ಎಚ್ಟಿಎಸ್ಎ ಹೇಳಿದೆ. ಈ ರೀತಿಯ ವ್ಯವಸ್ಥೆಗಳ ಸಂಭಾವ್ಯ ಸುರಕ್ಷತಾ ಕಾಳಜಿಗಳನ್ನು ಚರ್ಚಿಸಲು ಎಲ್ಲಾ ತಯಾರಕರೊಂದಿಗೆ ನಿಯಮಿತ ಮಾತುಕತೆ ನಡೆಸಲಾಗುತ್ತಿದೆ ಎಂದು ಅದು ತಿಳಿಸಿದೆ.ಈ ನಡುವೆ, ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಲೋನ್ ಮಸ್ಕ್ ಟ್ವೀಟ್ ಮಾಡಿದ್ದು, ಕಾರಿನಲ್ಲಿ ಯಾವುದೇ ಸುರಕ್ಷತಾ ಸಮಸ್ಯೆಗಳಿಲ್ಲ. ಕಾರು ಸರಳವಾಗಿ ನಿಧಾನವಾಯಿತು ಮತ್ತು ಯಾವುದೇ ಕಾರುಗಳು ಅಥವಾ ಪಾದಚಾರಿಗಳಿಲ್ಲದ ರಸ್ತೆಯಲ್ಲಿ ಮುಂದಕ್ಕೆ ಚಲಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವಾರ ಮಸ್ಕ್, ಅಮೆರಿಕದಲ್ಲಿ ಎಫ್ಎಸ್ಡಿ ಬೀಟಾ ಹೊಂದಿರುವ ಟೆಸ್ಲಾ ವಾಹನಗಳ ಸಂಖ್ಯೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 60,000 ಕ್ಕೆ ಏರಿದೆ ಎಂದು ಹೇಳಿದ್ದರು. ಟೆಸ್ಲಾ ತನ್ನ ಸ್ವಯಂಚಾಲಿತ ಡ್ರೈವಿಂಗ್ ಸಾಫ್ಟ್ವೇರ್ನ ಸುಧಾರಿತ ಆವೃತ್ತಿಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸುತ್ತಿದೆ ಎಂದಿದ್ದರು.ಕಾರುಗಳ ಹಿಂಪಡೆಯುವಿಕೆಗೆ ಸಂಬಂಧಿಸಿದ ಯಾವುದೇ ವಾರಂಟಿ ಕ್ಲೈಮ್ಗಳು, ಅಪಘಾತಗಳು, ಗಾಯಗಳು ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಟೆಸ್ಲಾ ತಿಳಿಸಿದೆ.“ರೋಲಿಂಗ್ ಸ್ಟಾಪ್" ಕಾರ್ಯವನ್ನು ಪರಿಚಯಿಸಲು ನವೀಕರಿಸಿದ ಆವೃತ್ತಿಯನ್ನು ಅಕ್ಟೋಬರ್ 20 ರಂದು ಬಿಡುಗಡೆ ಮಾಡುವುದಾಗಿ ಟೆಸ್ಲಾ ಆಟೋ ಸುರಕ್ಷತಾ ಏಜೆನ್ಸಿಗೆ ತಿಳಿಸಿದೆ.

ಇದನ್ನೂ ಓದಿ: EV Car sales 2.30 ಲಕ್ಷ ರೂ MINI ಎಲೆಕ್ಟ್ರಿಕ್ ಕಾರಿಗೆ ಬಾರಿ ಬೇಡಿಕೆ, ಸ್ವಿಫ್ಟ್, ಬಲೆನೋ, ಟೆಸ್ಲಾ ಹಿಂದಿಕ್ಕಿ ನಂ.1 ಸ್ಥಾನ

ಈ ವೈಶಿಷ್ಟ್ಯ ಹೊಂದಿರುವ ವಾಹನಗಳು ಗಂಟೆಗೆ 5.6 ಮೈಲಿಗಳು (9 ಕಿಮೀ) ಗಿಂತ ಕಡಿಮೆ ವೇಗದಲ್ಲಿ ಪ್ರಯಾಣಿಸುತ್ತಿರಬೇಕು ಎಂದು ವಾಹನ ತಯಾರಕರು ಹೇಳಿದ್ದಾರೆ. 2021ರ ನವೆಂಬರ್ನಲ್ಲಿ, ಮತ್ತೊಂದು ಸಾಫ್ಟ್ವೇರ್ ಅಪ್ಡೇಟ್ಗಾಗಿ 2017 ರಿಂದ ಮಾರಾಟವಾದ ಸುಮಾರು 12,000 ಅಮೆರಿಕ ವಾಹನಗಳನ್ನು ಟೆಸ್ಲಾ ಹಿಂಪಡೆಯಲಾಗಿದೆ. ಏಕೆಂದರೆ ಇದರಲ್ಲಿನ ಸಂವಹನ ದೋಷವು ತಪ್ಪು ಫಾರ್ವರ್ಡ್-ಘರ್ಷಣೆ ಎಚ್ಚರಿಕೆ ಅಥವಾ ತುರ್ತು ಬ್ರೇಕ್ಗಳ ಅನಿರೀಕ್ಷಿತ ಸಕ್ರಿಯಗೊಳಿಸುವಿಕೆಗೆ ಕಾರಣವಾಗುತ್ತಿತ್ತು.

ಎನ್ಎಚ್ಟಿಎಸ್ಎ ಕಳೆದ ವಾರ 580,000 ವಾಹನಗಳ ತನಿಖೆಗೆ ಸಂಬಂಧಿಸಿದಂತೆ ಟೆಸ್ಲಾದಿಂದ ಹೆಚ್ಚುವರಿ ಮಾಹಿತಿಯನ್ನು ಕೇಳಿದೆ. ಕಾರಿನ ಮೇಲೆ ಮುಂಭಾಗದ ಮಧ್ಯದ ಟಚ್ಸ್ಕ್ರೀನ್ನಲ್ಲಿ ಪ್ರಯಾಣಿಕರು ಆಟಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಈ ಕುರಿತು ಎನ್ಎಚ್ಟಿಎಸ್ಎ ಪ್ರಶ್ನೆ ಎತ್ತಿದೆ.

Follow Us:
Download App:
  • android
  • ios