Asianet Suvarna News Asianet Suvarna News

ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ Tata Motors ಲಗ್ಗೆ?

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಅತ್ಯಾಧುನಿಕ ಫೀಚರ್ ಹಾಗೂ ಸುರಕ್ಷತೆಯಲ್ಲಿ ಗುಣಮಟ್ಟದ ವಾಹನಗಳ ಉತ್ಪಾದಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಅತಿ ಹೆಚ್ಚು ಕಾರು ಮಾರಾಟ ಕಂಪನಿಗಳ ಪಟ್ಟಿಯಲ್ಲಿ ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ ಲಗ್ಗೆ ಹಾಕುತ್ತಿದೆ.

Tata Motrors ahead of Hyundai in ranking
Author
Bengaluru, First Published Nov 10, 2021, 2:54 PM IST

ಪ್ರಯಾಣಿಕ ವಾಹನ ವಿಭಾಗದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ದೇಶದ ಪ್ರಮುಖ ವಾಹನ ಉತ್ಪಾದನಾ ಕಂಪನಿ ಟಾಟಾ ಮೋಟಾರ್ಸ್ (TATA Motors) ಇದೀಗ ಎರಡನೇ ಅತಿದೊಡ್ಡ ಕಂಪನಿ ಎಂಬ ಕೀರ್ತಿಗೆ ಪಾತ್ರವಾಗಲಿದೆಯೇ? ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಕಂಪನಿಯ ಮಾರಾಟ ಪ್ರದರ್ಶನವನ್ನು ವಿಶ್ಲೇಷಿಸಿದರೆ ಇದು ವೇದ್ಯವಾಗುತ್ತದೆ. ಹಲವು ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಟಾಟಾ ಮೋಟಾರ್ಸ್ ಯಶಸ್ವಿಯಾಗಿದೆ. ಪರಿಣಾಮ ದೇಶದಲ್ಲಿ, ಅತಿ ಹೆಚ್ಚು ಕಾರು ಮಾರಾಟ ಮಾಡುವ ಕಂಪನಿಯ ಪಟ್ಟಿಯಲ್ಲಿ ಹುಂಡೈ (Hyundai) ಕಂಪನಿಯನ್ನು ಹಿಂದಕ್ಕಿ ಟಾಟಾ ಮೋಟಾರ್ಸ್ ಎರಡನೇ ಸ್ಥಾನಕ್ಕೇರುವ ಹಾದಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಟಾಟಾ ಮೋಟಾರ್ಸ್, ಎಂಟ್ರಿಲೇವಲ್ ವಿಭಾಗದಲ್ಲಿ ಬಿಡುಗಡೆ ಮಾಡಿದ ಟಾಟಾ ಟಿಯಾಗೋ(Tata Tiago)ದಿಂದ ಹಿಡಿದು ಎಸ್‌ಯುವಿವರೆಗೂ ಅನೇಕ ಮಾದರಿಯ ಕಾರುಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಟಾಟಾ ಕಾರು ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ಟಾಟಾ ಕಂಪನಿ ನೀಡುತ್ತಿರುವ ಎಲ್ಲ ಸೆಗ್ಮೆಂಟ್‌ನ ಕಾರುಗಳಿಗೆ ಹೆಚ್ಚಿನ ಬೇಡಿಕೆಯು ಸೃಷ್ಟಿಯಾಗುತ್ತಿದೆ.

ಮಾರುಕಟ್ಟೆಯಲ್ಲಿ ಪಾಲು ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಮಾರುತಿ ಮತ್ತು ಹುಂಡೈ ಹಿಂದೆ ಬೀಳುತ್ತಿವೆ. ಅದೇ ವೇಳೆ, ತಿಂಗಳಿಂದ ತಿಂಗಳಿಗೆ ಟಾಟಾ ಮೋಟಾರ್ಸ್ ತನ್ನ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುತ್ತಾ ಸಾಗುತ್ತಿದೆ. ಕಳೆದ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ ಹುಂಡೈ 2,18,130 ವಾಹನ ಮಾರಾಟ ಮಾಡಿದೆ. ಇದೇ ವೇಳೆ, ಟಾಟಾ ಮೋಟಾರ್ಸ್ 92,966 ವಾಹನ ಮಾರಾಟ ಮಾಡಿದ್ದು, 1,26,164 ಯುನಿಟ್ ವ್ಯತ್ಯಾಸವಿರುವುದನ್ನು ಗಮನಿಸಬಹುದು.

ಅದೇ ರೀತಿ, ಈ ಹಣಕಾಸು ವರ್ಷದಲ್ಲಿ ಈ ವ್ಯತ್ಯಾಸವನ್ನು ಟಾಟಾ ಮೋಟಾರ್ಸ್ ಕಡಿಮೆ ಮಾಡಿಕೊಂಡಿದೆ. ಅಂದರೆ,  ಹುಂಡೈ 279515 ಯುನಿಟ್‌ಗೆ ಪ್ರತಿಯಾಗಿ ಟಾಟಾ ಮೋಟಾರ್ಸ್ 182243 ಯುನಿಟ್ ಮಾರಿದೆ. ಅಂದರೆ, ಎರಡೂ ಕಂಪನಿಗಳ ನಡುವಿನ ಮಾರಾಟ ವ್ಯತ್ಯಾಸ ಕಡಿಮೆಯಾಗಿದೆ. ಮಾರುಕಟ್ಟೆ ಪಾಲಿನ ವ್ಯತ್ಯಾಸವು ಮೇ ತಿಂಗಳಿನಿಂದ ತಿಂಗಳ ಆಧಾರದ ಮೇಲೆ ಇಳಿಯುತ್ತಲೇ ಇದೆ ಹ್ಯುಂಡೈ ಮತ್ತು ಟಾಟಾ ನಡುವಿನ ಮಾರುಕಟ್ಟೆ ಪಾಲಿನ ಅಂತರವು ಅಕ್ಟೋಬರ್ 2021 ರಲ್ಲಿ 1.19% ರಷ್ಟು ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿ ಎರಡನೇ ಸ್ಥಾನಕ್ಕಾಗಿ ಹುಂಡೈ ಮತ್ತು ಟಾಟಾ ಮೋಟಾರ್ಸ್ ನಡುವಿನ ಗ್ಯಾಪ್ ಕಡಿಮೆಯಾಗುತ್ತಲೇ ಬಂದಿದೆ.   ಏಪ್ರಿಲ್ ನಿಂದ ಅಕ್ಟೋಬರ್ 2020 ಕ್ಕೆ ಹೋಲಿಸಿದರೆ ಏಪ್ರಿಲ್ ನಿಂದ ಅಕ್ಟೋಬರ್ 2021 ರ ಅವಧಿಗೆ ಹುಂಡೈ ಲೀಡ್ ಅನ್ನು 28,892 ಯುನಿಟ್‌ಗಳಷ್ಟು ಕಡಿಮೆ ಮಾಡಲು ಯಶಸ್ವಿಯಾಗಿದೆ. ನಾವು ಸೆಪ್ಟೆಂಬರ್‌ನಲ್ಲಿ ನೋಡಿದರೆ ಅಂತರವನ್ನು 4 ಡಿಜಿಟ್‌ಗೆ ಇಳಿಸಲಾಗಿದೆ. ವಿಶೇಷವಾಗಿ ಅಕ್ಟೋಬರ್ ತಿಂಗಳ ಮಾರಾಟವನ್ನು ವಿಶ್ಲೇಷಿಸಿದರೆ ಎರಡು ಕಂಪನಿಗಳ ನಡುವಿನ ಮಾರಾಟದ ಗ್ಯಾಪ್ 3,095ಕ್ಕೆ ಇಳಿಕೆಯಾಗಿದೆ.

Toyota ಸಬ್ ಕಾಂಪಾಕ್ಟ್ ಕಾರ್ Aygo X ಅನಾವರಣ, ಪಂಚ್‌ಗೆ ಠಕ್ಕರ್

ಚಿಪ್ ಕೊರತೆಯೂ ಹುಂಡೈ ಕಾರುಗಳ ಮಾರಾಟಕ್ಕೆ ಹಿನ್ನಡೆಯಾಗಿರಬಹುದು ಎಂದು ವಾದಿಸಬಹುದು. ಆದರೆ, ಚಿಪ್ ಕೊರತೆಯು ಸಾರ್ವತ್ರಿಕವಾಗಿದ್ದು ಎಲ್ಲ ಒಇಎಂ(ಒರಿಜನಲ್ ಈಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರ್ಸ್) ಕಂಪನಿಗಳಿಗೆ ಇದರಿಂದ ಹೊಡೆತ ಬಿದ್ದಿದೆ. ಆದರೆ, ಭಾರತದಲ್ಲಿ ನೋಡುವುದಾದರೆ, ಉಳಿದ ಯಾವುದೇ ಒಇಎಂಗಳಿಗಿಂತಲೂ ಟಾಟಾ ಉತ್ತಮ ಸ್ಥಿತಿಯನ್ನು ಹೊಂದಿದೆ. 

ಮಾರುತಿಯನ್ನು ಹಿಂದಿಕ್ಕಿದ ಟಾಟಾ
ಪ್ರತಿ ಕಾರಿನ (Car) ಮಾರಾಟದ ಮೂಲಕ ಗಳಿಸುವ ಲಾಭದ  ಪ್ರಮಾಣದಲ್ಲಿ ಟಾಟಾ ಮೋಟಾರ್ (TATA Motor), ದಶಕದಲ್ಲೇ ಮೊದಲ ಬಾರಿಗೆ ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಝುಕಿಯನ್ನು (Maruti SUZUKI) ಹಿಂದಿಕ್ಕಿದೆ.

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ ನ ಪ್ರತಿ ಕಾರಿನ ಮೇಲಿನ ನಿರ್ವಹಣಾ ಲಾಭವು 45810 ರೂ.ಗಳಿಗೆ ಏರಿದೆ. ಇದು ಮಾರುತಿಗಿಂತ ಡಬಲ್‌ ಎಂಬುದು ವಿಶೇಷ. ಹೊಸ ಕಾರುಗಳಿಗೆ (New Car) ಹೆಚ್ಚಿದ ಬೇಡಿಕೆ, ಚಾಣಾಕ್ಷ ಉತ್ಪಾದನಾ ತಂತ್ರಗಾರಿಕೆ ಮತ್ತು ವಿತರಣಾ ವ್ಯವಸ್ಥೆ, ಬಹುಮಾದರಿ ಲಭ್ಯತೆಯ ವಿಷಯಗಳು ಟಾಟಾ ಮೋಟಾರ್ಸ್ ನಿರ್ವಹಣಾ ಲಾಭ ಏರಿಕೆಗೆ ಕಾರಣವಾಗಿದೆ.

ASEAN NCAP ಕ್ರ್ಯಾಶ್ ಟೆಸ್ಟ್: 2021 ಹೋಂಡಾ ಸಿವಿಕ್‌ಗೆ 5 ಸ್ಟಾರ್!

ಮತ್ತೊಂದೆಡೆ ಬಿಡಿಭಾಗ ವಿವಿಧ ಉತ್ಪನ್ನಗಳಿಗೆ ವಿದೇಶಗಳನ್ನು ಅವಲಂಬಿಸಿರುವ ಮಾರುತಿ ಸೇರಿದಂತೆ ಇತರೆ ಕಂಪನಿಗಳ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಉದಾಹರಣೆಗೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಟಾಟಾ ಮೋಟಾರ್‍ಸ್ನ ಕಾರುಗಳ ಉತ್ಪಾದನೆ ಶೇ.53ರಷ್ಟುಏರಿಕೆ ಕಾಣುವ 84000ಕ್ಕೆ ತಲುಪಿದ್ದರೆ, ಇದೇ ಅವಧಿಯಲ್ಲಿ ಮಾರುತಿಯ ಉತ್ಪಾದನೆ ಶೇ.1.2ರಷ್ಟುಕಸಿತ ಕಂಡಿದೆ.

Follow Us:
Download App:
  • android
  • ios