Upcoming Tata Car ಟಾಟಾ ಟಿಯಾಗೋ CNG ಕಾರಿನ ಡೀಲರ್‌ಶಿಪ್ ಬುಕಿಂಗ್ ಆರಂಭ, ಶೀಘ್ರದಲ್ಲೇ ಬಿಡುಗಡೆ!
- ಮೊದಲ CNG ಕಾರು ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್
- ಟಾಟಾ ಟಿಯಾಗೋ ಫ್ಯಾಕ್ಟರಿ ಫಿಟ್ಟೆಡ್ CNG ಕಾರು ಶೀಘ್ರದಲ್ಲೇ ಲಾಂಚ್
- ಭಾರಿ ಬೇಡಿಕೆ ಬೆನ್ನಲ್ಲೇ ಡೀಲರ್‌ಶಿಪ್ ಬುಕಿಂಗ್ ಆರಂಭ
ನವದೆಹಲಿ(ಜ.03): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Cars) ಜೊತೆಗೆ CNG ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಮಾರುತಿ ಸುಜುಕಿ ಹಾಗೂ ಹ್ಯುಂಡೈ CNG ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಈ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಮೋಟಾರ್ಸ್(Tata Motors) ಟಿಯಾಗೋ CNG ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಡೀಲರ್‌ಶಿಪ್ ಬುಕಿಂಗ್ ಆರಂಭಗೊಂಡಿದೆ.
ಈ ತಿಂಗಳ ಅಂತ್ಯದಲ್ಲಿ ಹೊಚ್ಚ ಹೊಸ ಟಾಟಾ ಟಿಯಾಗೊ CNG ಕಾರು(Tata Tiago Car CNG) ಡೀಲರ್ಸ್ ಬಳಿ ತಲುಪಲಿದೆ. ಈಗಾಗಲೇ ಹಲವು ಬಾರಿ CNG ಕಾರು ರೋಡ್ ಟೆಸ್ಟ್ ವೇಳೆ ಕಾಣಿಸಿಕೊಂಡಿದೆ. ಇದೀಗ ಅಧಿಕೃತ ಬುಕಿಂಗ್ ಪ್ರಕಟಣೆ ಹೊರಡಿಸಿಲ್ಲ. ಆದರೆ ಡೀಲರ್‌ಶಿಪ್ ಬಳಿಕ ಬುಕಿಂಗ್(booking) ಆರಂಭಗೊಂಡಿದೆ. ನಗರ, ಪಟ್ಟಣ ಹಾಗೂ ಬೇರೆ ಸ್ಥಳಗಳಲ್ಲಿ ಬುಕಿಂಗ್ ಬೆಲೆ ವ್ಯತ್ಯಾಸವಾಗಲಿದೆ. ಮೂಲಗಳ ಪ್ರಕಾರ 5,000 ರೂಪಾಯಿಂದ 20,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು.
Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!
ಫ್ಯಾಕ್ಟರಿ ಫಿಟ್ಟೆಡ್ ಟಾಟಾ ಟಿಯಾಗೋ CNG ಕಾರಿನ ಬೆನ್ನಲ್ಲೇ ಟಿಗೋರ್ CNG ಕಾರು ಬಿಡುಗಡೆಯಾಗಲಿದೆ. ಇನ್ನು ಅಲ್ಟ್ರೋಜ್, ನೆಕ್ಸಾನ್ ಕಾರುಗಳು CNG ರೂಪದಲ್ಲಿ ಬಿಡುಗಡೆಯಾಗು ಸಾಧ್ಯತೆಗಳಿವೆ. ಇದರ ಜೊತೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಚನೆಯಂತೆ ಬಹುಪಯೋಗಿ ಇಂಧನ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ತಯಾರಿ ನಡೆಸಿದೆ.
ಟಾಟಾ ಟಿಯಾಗೋ CNG ಕಾರು
ಹೊಚ್ಚ ಹೊಸ ಟಾಟಾ ಟಿಯಾಗೊ CNG ಕಾರಿನ ಕಮಿಂಗ್ ಸೂನ್ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೂತನ CNG ಕಾರು 1.2 ಲೀಟರ್ ನ್ಯಾಚ್ಯುಲರ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 85 Bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ CNG ಕಾರಣದಿಂದ ಇಂಧನದಲ್ಲಿರುವ ದಕ್ಷತೆ ಇಲ್ಲಿರುವುದಿಲ್ಲ. ಹಾಗೂ HP ಪವರ್ ಹಾಗೂ nm ಪೀಕ್ ಟಾರ್ಕ್ ಕೊಂಚ ಇಳಿಕೆ ಕಾಣಲಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 5 ಸ್ಪೀಡ್ ಎಎಂಟಿ ಆಯ್ಕೆಯೂ ಲಭ್ಯವಾಗುವ ಸಾಧ್ಯತೆ ಇದೆ.
Upcoming Cars 2022 ದುಬಾರಿ ಇಂಧನಕ್ಕೆ ಪರ್ಯಾಯವಾಗಿ ಶೀಘ್ರದಲ್ಲೇ ಟಾಟಾ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ!
ಟಾಟಾ ಟಿಯಾಗೋ CNG ಟಾಪ್ ವೆರಿಯೆಂಟ್ ಕಾರಿನಲ್ಲಿ ಹರ್ಮನ್ ಕಾಡ್ರೊನ್ ಸೌಂಡ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 7.0 ಇನ್ಫೊನ್ಮೆಂಟ್ ಸಿಸ್ಟಮ್, ನಾಲ್ಕು ಏರ್‌ಬ್ಯಾಗ್, ABS,EBD, ಆಟೋಫೋಲ್ಟಿಂಗ್ ORVM ಸೇರಿದಂತೆ ಹಲವು ಫೀಚರ್ಸ್ ಈ ವೇರಿಯೆಂಟ್ ಕಾರಿನಲ್ಲಿ ಲಭ್ಯವಿದೆ. ಸುರಕ್ಷತೆಯಲ್ಲಿ ಟಾಟಾ ಕಾರು ಇತರ ಕಾರುಗಳಿಗಿಂತ ಮುಂಚೂಣಿಯಲ್ಲಿದೆ.
ಟಾಟಾ ಟಿಯಾಗೋ CNG ಕಾರಿನ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದುಬಾರಿಯಾಗಿರುವ ಕಾರಣ ಇದೀಗ ಹಲವು ಎಲೆಕ್ಟ್ರಿಕ್ ವಾಹನ ಹಾಗೂ CNG ವಾಹನದ ಮೊರೆ ಹೋಗುತ್ತಿದ್ದಾರೆ. ಸದ್ಯ ಪೆಟ್ರೋಲ್ ಬೆೆ 102 ರೂಪಾಯಿ ಹಾಗೂ ಡೀಸೆಲ್ ಬೆಲೆ 94.14 ರೂಪಾಯಿ ಆಗಿದೆ. ಆದರೆ ಒಂದು ಕೆಡಿ CNG ಬೆಲೆ 63.50 ರೂಪಾಯಿ.
Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!
ಟಾಟಾ ಎಲೆಕ್ಟ್ರಿಕ್ ಕಾರು:
CNG ಕಾರಿನಂತೆ ಎಲೆಕ್ಟ್ರಿಕ್ ಕಾರಿನ ಬೇಡಿಕೆಯೂ ಹೆಚ್ಚಾಗಿದೆ. ಟಾಟಾ ಈಗಾಗಲೇ ಟಾಟಾ ನೆಕ್ಸಾನ್ ಹಾಗೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಈ ವರ್ಷ ಟಾಟಾ ಎಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. 500 ಕಿ.ಮೀ ಮೈಲೇಜ್ ನೀಡಬಲ್ಲ ಸಾಮರ್ಥ್ಯದ ಕಾರು ಎಂದು ಕಂಪನಿ ಹೇಳಿದೆ. ಇನ್ನು ಟಾಟಾ ನೆಕ್ಸಾನ್ ಹಾಗೂ ಟಿಗೋರ್ ಕಾರಿನ ಮೈಲೇಜ್ ರೇಂಜ್ ಹೆಚ್ಚಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ.