Upcoming Car ಹೊಸ ವರ್ಷದಲ್ಲಿ ಟಾಟಾದಿಂದ ಮತ್ತೊಂದು ಕೊಡುಗೆ, ಅಲ್ಟ್ರೋಜ್ ಆಟೋಮ್ಯಾಟಿಕ್ ಕಾರು ಲಾಂಚ್!
- 2021ರಲ್ಲಿ ಬಹುಬೇಡಿಕೆಯ ಕಾರಾಗಿ ಹೊರಹೊಮ್ಮಿದ ಟಾಟಾ ಅಲ್ಟ್ರೋಜ್
- ಹೊಸ ವರ್ಷದಲ್ಲಿ ಟಾಟಾ ಅಲ್ಟ್ರೋಜ್ ಆಟೋಮ್ಯಾಟಿಕ್ ಕಾರು ಬಿಡುಗಡೆ
- ರೋಡ್ ಟೆಸ್ಟ್ ವೇಳೆ ಪ್ರತ್ಯಕ್ಷವಾದ ಟಾಟಾ ಅಲ್ಟ್ರೋಜ್ AMT ಕಾರು
ನವದೆಹಲಿ(ಡಿ.31): ಟಾಟಾ ಮೋಟಾರ್ಸ್(Tata Motors) ಭಾರತದಲ್ಲಿ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಮಾರುತಿ ಸುಜುಕಿ, ಹ್ಯುಂಡೈ ಕಾರುಗಳ ಅಬ್ಬರದ ನಡುವೆ ಇದೀಗ ಟಾಟಾ ಮುಂಚೂಣಿಯ ಕಾರಾಗಿ ಮಾರ್ಪಟ್ಟಿದೆ. ಅದರಲ್ಲೂ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಟಾಟಾ ಅಲ್ಟ್ರೋಜ್(Tata Altroz) ಎರಡನೇ ಸ್ಥಾನಕ್ಕೇರಿದೆ. ಹ್ಯುಂಡೈ ಐ20 ಕಾರನ್ನು ಹಿಂದಿಕ್ಕಿರುವ ಅಲ್ಟ್ರೋಜ್ 2ನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಮಾರುತಿ ಬಲೆನೋ ಕಾರಿದೆ. 2021ರಲ್ಲಿ ಅಲ್ಟ್ರೋಜ್ ಕಾರಿನ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ಅನುಗುಣವಾಗಿ ಇದೀಗ ಟಾಟಾ ಅಲ್ಟ್ರೋಜ್ ಆಟೋಮ್ಯಾಟಿಕ್(Altroz Automatic) ಕಾರು ಬಿಡುಗಡೆ ಮಾಡುತ್ತಿದೆ.
ಟಾಟಾ ಅಲ್ಟ್ರೋಜ್ ಇದುವರೆಗೂ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರನ್ನು ಮಾತ್ರ ನೀಡಿದೆ. 2022ರಲ್ಲಿ ಟಾಟಾ ಮೋಟಾರ್ಸ್ ಹೊಸ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಅಲ್ಟ್ರೋಜ್ ಕಾರು ಆಟೋಮ್ಯಾಟಿಕ್ ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶ ಮಾಡಲಿದೆ. 2022ರ(New Year 2022) ಮಧ್ಯಭಾಗದಲ್ಲಿ ಕಾರು ಬಿಡುಗಡೆಯಾಗಲಿದೆ. ನೂತನ ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ.
Car Production Plant ಫೋರ್ಡ್ ಘಟಕ ಖರೀದಿಗೆ ಮುಂದಾದಾ ಟಾಟಾ ಮೋಟಾರ್ಸ್, ವಿದೇಶಿ ಕಂಪನಿಗಳಿಂದ ಪೈಪೋಟಿ!
ಟಾಟಾ ಅಲ್ಟ್ರೋಜ್ ಆಟೋಮ್ಯಾಟಿಕ್ ಕಾರಿನ ರೋಡ್ ಟೆಸ್ಟ್(Road Test) ನಡೆಯುತ್ತಿದೆ. ಈ ವೇಳೆ ಆಟೋಮ್ಯಾಟಿಕ್ ಕಾರು ಪ್ರತ್ಯಕ್ಷಗೊಂಡಿದೆ. ಹೊರವಿನ್ಯಾಸ ಹಾಗೂ ಒಳಾಂಗಣದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಹೆಚ್ಚುವರಿ ಕೆಲಫೀಚರ್ಸ್ ಸೇರಿಕೊಳ್ಳಲಿದೆ. ಇದನ್ನು ಹೊರತು ಪಡಸಿದರೆ ಹೆಚ್ಚಿನ ಬದಲಾವಣೆಗಳು ಅಲ್ಟ್ರೋಜ್ ನೂತನ ಕಾರಿನಲ್ಲಿ ಇಲ್ಲ ಅನ್ನೋದು ಮೂಲಗಳ ಮಾಹಿತಿ.
ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟ್ರೋಜ್ ಕಾರು iಟರ್ಬೋ ಪೆಟ್ರೋಲ್ ವೇರಿಯೆಂಟ್ ಕಾರು. 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಇನ್ನು ಇದೇ ಎಂಜಿನ್‌ನಲ್ಲಿ ಅಲ್ಟ್ರೋಜ್ ಆಟೋಮ್ಯಾಟಿಕ್ ಟಾರ್ಕ್ ಆಯ್ಕೆ ನೀಡುವ ಸಾಧ್ಯತೆ ಇದೆ. ಆಟೋಮ್ಯಾಟಿಕ್‌ನಲ್ಲಿ CVT ಆಯ್ಕೆಯೂ ಲಭ್ಯವಿದೆ. ಆದರೆ ಇನ್ನು ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್(DCT) ಟ್ರಾನ್ಸ್‌ಮಿಶನ್ ಹೆಚ್ಚು ದುಬಾರಿಯಾಗಿರುವ ಕಾರಣ ಅಲ್ಟ್ರೋಜ್ ಆಟೋಮ್ಯಾಟಿಕ್ ಟಾರ್ಕ್ ಟ್ರಾನ್ಸ್‌ಮಿಶನ್ ಆಯ್ಕೆ ನೀಡುವ ಸಾಧ್ಯತೆ ಇದೆ.
ಟಾಟಾ ಅಲ್ಟ್ರೋಜ್ ಎಂಜಿನ್
1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 109 bhp ಪವರ್ ಹಾಗೂ 140 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಟರ್ಬೋ ರಹಿತ ನ್ಯಾಚ್ಯುರಲ್ ಪೆಟ್ರೋಲ್ ಎಂಜಿನ್ 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
Upcoming Cars 2022 ದುಬಾರಿ ಇಂಧನಕ್ಕೆ ಪರ್ಯಾಯವಾಗಿ ಶೀಘ್ರದಲ್ಲೇ ಟಾಟಾ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ!
ಟಾಟಾ ಅಲ್ಟ್ರೋಜ್ ಫೀಚರ್ಸ್
ಅಲ್ಟ್ರೋಜ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಅತ್ಯುತ್ತಮ ಹಾಗೂ ಉಪಯುಕ್ತ ಫೀಚರ್ಸ್ ಲಭ್ಯವಿದೆ. 7 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್, ಕ್ರ್ಯೂಸ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆ್ಯಂಬಿಯೆಂಟ್ ಲೈಟಿಂಗ್, iRA ಕೆನೆಕ್ಟೆಟ್ ಫೀಚರ್ಸ್, ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ABS, EBD,ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ.
ಟಾಟಾ ಅಲ್ಟ್ರೋಜ್ ಕಾರಿನ ಬೆಲೆ
ಸದ್ಯ ಟಾಟಾ ಅಲ್ಟ್ರೋಜ್ 7 ವೇರಿಯೆಂಟ್ ಕಾರುಗಳು ಲಭ್ಯವಿದೆ XE, XE+, XM+, XT, XZ, XZ (O), ಹಾಗೂ XZ+ ವೇರಿಯೆಂಟ್ ಕಾರು ಲಭ್ಯವಿದೆ. ಅಲ್ಟ್ರೋಜ್ ಕಾರಿನ ಬೆಲೆ 5.89 ಲಕ್ಷ ರೂಪಾಯಿಯಿಂದ 9.64 ಲಕ್ಷ ರೂಪಾಯಿವರೆಗಿದೆ(ಎಕ್ಸ್ ಶೋ ರೂಂ). ಅಲ್ಟ್ರೋಜ್ ಕಾರು ಮಾರುತಿ ಬಲೆನೋ, ಹ್ಯುಂಡೈ ಐ20, ವೋಕ್ಸ್‌ವ್ಯಾಗನ್ ಪೋಲೋ, ಟೋಯೋಟಾ ಗ್ಲಾಂಜಾ, ಹೋಂಡಾ ಜಾಝ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
ಅಲ್ಟ್ರೋಜ್ ಎಲೆಕ್ಟ್ರಿಕ್
ಟಾಟಾ ಅಲ್ಟ್ರೋಜ್ ಅಟೋಮ್ಯಾಟಿಕ್ ಕಾರು 2 ರಿಂದ 3 ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. 2022ರಲ್ಲಿ ಕೇವಲ ಆಟೋಮ್ಯಾಟಿಕ್ ಮಾತ್ರವಲ್ಲ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. 500 ಕಿ.ಮೀ ಮೈಲೇಜ್ ನೀಡಬಲ್ಲ ಸಾಮರ್ಥ್ಯ, 10 ರಿಂ 12 ಲಕ್ಷ ರೂಪಾಯಿ ಒಳಗೆ ನೂತನ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಟಾಟಾ ನಿರ್ಧರಿಸಿದೆ. ಈ ಮೂಲಕ ಟಾಟಾ ಮೋಟಾರ್ಸ್ ಎರಡನೇ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಇಳಿಸಲಿದೆ. ಇದಕ್ಕೂ ಮೊದಲು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಟಾಟಾ ಬಿಡುಗಡೆ ಮಾಡಿದೆ.