Asianet Suvarna News Asianet Suvarna News

ದಕ್ಷಿಣ ಭಾರತದಲ್ಲಿ ಟಾಟಾ ಹೊಸ ಅಧ್ಯಾಯ; ಒಂದೇ ದಿನ 70 ಶೋ ರೂಂ ಆರಂಭ!

  • ಟಾಟಾ ಎಲೆಕ್ಟ್ರಿಕ್ ವಾಹನ ಹಾಗೂ ಫಾರೆವರ್ ಸೆಗ್ಮೆಂಟ್ ಕಾರುಗಳ ವಿಶೇಷ ಶೋ ರೂಂ
  • ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ನೂತನ ಶೋ ರೂಂ
  • ನಗರಾದ್ಯಂತ 53 ಹಾಗೂ ಇನ್ನುಳಿದ ಮಳಿಗೆ ಗ್ರಾಮೀಣ ಭಾಗದಲ್ಲಿ ಆರಂಭ
Tata Motors inaugurates 70 new sales outlets in emerging markets across Southern India ckm
Author
Bengaluru, First Published Sep 8, 2021, 8:11 PM IST
  • Facebook
  • Twitter
  • Whatsapp

ಬೆಂಗಳೂರು(ಸೆ.08) ಆಟೋಮೊಬೈಲ್ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್,  ಒಂದೇ ದಿನದಲ್ಲಿ ದಕ್ಷಿಣ ಭಾರತದಾದ್ಯಂತ ಇರುವ ಆರಂಭಿಕ ಮಾರುಕಟ್ಟೆಗಳಲ್ಲಿ 70 ಹೊಸ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದೆ. 53 ನಗರಗಳಾದ್ಯಂತ ಇರುವ ಈ ಮಳಿಗೆಗಳು,  ಟಾಟಾದ ಎಲೆಕ್ಟ್ರಿಕ್ ವಾಹನಗಳ ಪೋರ್ಟ್‍ಪೋಲಿಯೋ ಒಳಗೊಂಡಂತೆ, ಅದರ ‘ನ್ಯೂ ಫಾರೆವರ್’ ಸೆಗ್ಮೆಂಟ್ ಹೊಂದಿದೆ. 

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್: ಟಾಟಾ ಟಿಗೋರ್ ಇವಿ ಗರಿಷ್ಠ ಸುರಕ್ಷೆಯ ಕಾರ್

ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಈ ಹೊಸ ಶೋರೂಮ್‍ಗಳ ಸೇರ್ಪಡೆಯೊಂದಿಗೆ, ದಕ್ಷಿಣ ಭಾರತದಲ್ಲಿನ (ಕರ್ನಾಟಕ, ತಮಿಳುನಾಡು, ಪಾಂಡಿಚೆರಿ, ತೆಲಂಗಾಣ, ಆಂಧ್ರಪ್ರದೇಶ ಹಾಗು ಕೇರಳ) ಟಾಟಾ ಮೋಟರ್ಸ್ ಕಾರ್ಯಜಾಲವು 272 ಆಗಿರಲಿದೆ.  ಭಾರತದಲ್ಲಿನ ರೀಟೇಲ್ ಹೆಜ್ಜೆಗುರುತು 980ಕ್ಕೆ ಏರಿಕೆಯಾಗಿದೆ. ಇದಲ್ಲದೆ, 32 ಹೊಸ ಡೀಲರ್‍ಶಿಪ್ ಸರಪಳಿಯನ್ನೂ ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ 7, ಚೆನ್ನೈನಲ್ಲಿ 5, ಹೈದರಾಬಾದ್‍ನಲ್ಲಿ 4 ಮತ್ತು ಕೊಚ್ಚಿನ್‍ನಲ್ಲಿ 4.  ಮೇಲಾಗಿ, ಈ ವಿಸ್ತೃತ  ವಿಸ್ತರಣೆಯು ದಕ್ಷಿಣ ಭಾರತದ ಒಳಪ್ರದೇಶದ ಮಾರುಕಟ್ಟೆಗಳಲ್ಲಿರುವ 38 ಮಳಿಗೆಗಳ ಆರಂಭವನ್ನೂ ಒಳಗೊಂಡಿದೆ.  

306 ಕಿ.ಮೀ ಮೈಲೇಜ್, ಕೈಗೆಟುಕವ ಬೆಲೆ, ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಾಂಚ್!

ದಕ್ಷಿಣ ಭಾರತವು ಒಟ್ಟೂ ಉದ್ಯಮ ಪ್ರಮಾಣದ ಶೇಕಡಾ 28 ರಷ್ಟು ಕೊಡುಗೆ ಸಲ್ಲಿಸುತ್ತಿದೆ.  ಇಂತಹ ಆರಂಭಿಕ ಮಾರುಕಟ್ಟೆಗಳಲ್ಲಿ ನಾವು  ಪ್ರಧಾನವಾಗಿ ಸ್ಥಾಪಿತವಾಗಿರುವುದು ಬಹಳ ಮುಖ್ಯ. ದಕ್ಷಿಣ ಭಾರತದಲ್ಲಿ 12.1%ಮಾರುಕಟ್ಟೆ ಪಾಲು ಹೊಂದಿರುವ ನಾವು ನಮ್ಮ ಗ್ರಾಹಕರಿಗೆ ಬದ್ಧವಾಗಿದ್ದೇವೆ.  ನಮ್ಮ  ನ್ಯೂ ಫಾರೆವರ್ ಶ್ರೇಣಿಯ ಪ್ಯಾಸೆಂಜರ್ ಕಾರುಗಳಿಗೆ ಅವರಿಗೆ ಸುಲಭ ಪ್ರವೇಶಾವಕಾಶ  ಸಿಗುವಂತೆ ಮಾಡಬೇಕೆಂದಿದ್ದೇವೆ. ಈ 70 ಹೊಸ ಮಾರಾಟ ಮಳಿಗೆಗಳ ಸರಣಿ ಪ್ರಾರಂಭೋತ್ಸವವು, ಭಾರತದಲ್ಲಿ ನಮ್ಮ ತೀವ್ರ ರೀಟೇಲ್ ವಿಸ್ತರಣೆಯಲ್ಲಿ ಮಹತ್ತರ  ಮೈಲಿಗಲ್ಲಾಗಿದೆ. ಈ ವಿಸ್ತರಣೆಯು ಇಂದು ಹೆಚ್ಚು ಸುಲಭವಾಗಿರುವ ಹಾಗು ತತ್ಸಂಬಂಧಪಡುವಂತಹ ತಡೆರಹಿತ “ಫೈಜಿಟಲ್” ಅನುಭವಕ್ಕಾಗಿ ಆಫ್‍ಲೈನ್ ಹಾಗು ಆನ್‍ಲೈನ್ ಎರಡೂ ವಿಧದಲ್ಲಿ, ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮತ್ತು ಸತತವಾಗಿ ಬದಲಾಗುತ್ತಿರುವ ಅಭಿರುಚಿಗಳಿಗೆ ತಕ್ಕಂತೆ ಮಾಡಲು ನೆರವಾಗುತ್ತದೆ ಎಂದು  ಮಾರುಕಟ್ಟೆ ಹಾಗು ಕಸ್ಟಮರ್  ಕೇರ್ ವಿಭಾಗದ ಉಪಾಧ್ಯಕ್ಷ  ರಾಜನ್ ಅಂಬ ಹೇಳಿದ್ದಾರೆ.

ಪದಕ ಮಿಸ್ ಮಾಡಿಕೊಂಡ ಒಲಿಂಪಿಕ್ ಪಟುಗಳಿಗೆ ಟಾಟಾ ಅಲ್ಟ್ರೋಜ್ ಕಾರು ಗಿಫ್ಟ್!

ತನ್ನ ನ್ಯೂ ಫಾರೆವರ್ ಶ್ರೇಣಿಯ ಹಿನ್ನೆಲೆಯಲ್ಲಿ ಟಾಟಾ  ಮೋಟರ್ಸ್ ಪ್ಯಾಸಂಜರ್ ವಾಹನ ಮಾರುಕಟ್ಟೆಯಲ್ಲಿ ಬೃಹತ್ ಹೆಜ್ಜೆಗಳನ್ನಿಡುತ್ತಿದೆ. ಮಾರ್ಚ್’21 ಹಾಗು Q4 FY21ದಲ್ಲಿ ಸಂಸ್ಥೆಯು, 9  ವರ್ಷಗಳಲ್ಲೇ ತನ್ನ ಅತ್ಯಧಿಕ ಪ್ಯಾಸೆಂಜರ್ ವಾಹನ ಮಾರಾಟವನ್ನು ದಾಖಲಿಸಿತ್ತು. ಆ.ವ.21ರಲ್ಲಿ ಸಂಸ್ಥೆಯ ಪ್ಯಾಸೆಂಜರ್ ವಾಹನ ವ್ಯಾಪಾರವು 8 ವರ್ಷಗಳಲ್ಲೇ ತನ್ನ ಅತ್ಯಧಿಕ ವಾರ್ಷಿಕ ಮಾರಾಟವನ್ನು ದಾಖಲಿಸಿ, ಆ.ವ.20ಕ್ಕೆ ಹೋಲಿಸಿದರೆ 69% ಬೆಳವಣಿಗೆ ಸಾಧಿಸಿತ್ತು.  

Follow Us:
Download App:
  • android
  • ios