Asianet Suvarna News Asianet Suvarna News

ನೆಕ್ಸಾನ್‌ಗೆ 7ನೇ ವರ್ಷದ ಸಂಭ್ರಮ, 1 ಲಕ್ಷ ರೂ ಬಂಪರ್ ಆಫರ್ ಘೋಷಿಸಿದ ಟಾಟಾ!

ಭಾರತದಲ್ಲಿ ಟಾಟಾ ನೆಕ್ಸಾನ್ ಕಾರು ಭಾರಿ ಮೋಡಿ ಮಾಡಿದೆ. ಸುರಕ್ಷತೆ ಜೊತೆಗೆ ಮಾರಾಟದಲ್ಲೂ ದಾಖಲೆ ಬರೆದಿರುವ ಟಾಟಾ ನೆಕ್ಸಾನ್ ಇದೀಗ 7ನೇ ವರ್ಷದ ಸಂಭ್ರಮ ಆಚರಿಸುತ್ತಿದೆ. ಇದರ ಪ್ರಯುಕ್ತ ಗ್ರಾಹಕರಿಗೆ ಬಂಪರ್ ಕೊಡುಗೆ ಘೋಷಿಸಿದೆ.
 

Tata Motor Celebrate nexon 7th Anniversary with Price benefits up to Rs 1 lakh ckm
Author
First Published Jun 15, 2024, 10:13 PM IST

ನವದೆಹಲಿ(ಜೂ.15) ಟಾಟಾ ಮೋಟಾರ್ಸ್ ಭಾರತದಲ್ಲಿ ಗರಿಷ್ಠ ಸುರಕ್ಷತೆ, ಅತ್ಯಾಕರ್ಷಕ ಕಾರುಗಳ ಮೂಲಕ ಕಾರು ಮಾರುಕಟ್ಟೆಯಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ. ಈ ಪೈಕಿ ಟಾಟಾ ನೆಕ್ಸಾನ್ ಕಾರು ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಮಾರಾಟದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ಟಾಟಾ ನೆಕ್ಸಾನ್‌ಗೆ ಇದೀಗ 7ನೇ ವರ್ಷದ ಸಂಭ್ರಮ. ಇದರ ಪ್ರಯುಕ್ತ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಪ್ರಯೋಜಗಳ ಆಫರ್ ಘೋಷಿಸಿದೆ.  

2017ರಲ್ಲಿ ಬಿಡುಗಡೆಯಾದ ನೆಕ್ಸಾನ್ 2021 ರಿಂದ 2023 ರವರೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರಲ್ಲಿ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಮೊದಲ ವಾಹನ ಎಂಬ ಖ್ಯಾತಿಯನ್ನು ನೆಕ್ಸಾನ್ ಹೊಂದಿದೆ. ಆ ಮೂಲಕ ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಫೆಬ್ರವರಿ 2024ರಲ್ಲಿ, ಹೊಸ ಜನರೇಷನ್ ನ ನೆಕ್ಸಾನ್ 2022ರ ಹೆಚ್ಚಿನ ಪ್ರೋಟೋಕಾಲ್ ಪ್ರಕಾರ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.  

ಹೊಚ್ಚ ಹೊಸ ಟಾಟಾ ಅಲ್ಟ್ರೋಜ್ ರೇಸರ್ ಕಾರು ಲಾಂಚ್, ಇದರ ಬೆಲೆ ಎಷ್ಟು?

ಟಾಟಾ ಮೋಟಾರ್ಸ್ ನೆಕ್ಸಾನ್ ಗೆಲುವಿನ ಸಂಭ್ರಮ ಆಚರಿಸುತ್ತಿದೆ. ಹಲವಾರು ವಿಶೇಷ ಕಾರ್ಯಕ್ರಮಗಳು ಮತ್ತು ಗ್ರಾಹಕರ ಸಭೆಗಳನ್ನು ಆಯೋಜಿಸುತ್ತಿವೆ. ಹೊಸ ನೆಕ್ಸಾನ್ ಅನ್ನು ಬುಕಿಂಗ್ ಮಾಡುವವರಿಗೆ, ನೆಕ್ಸಾನ್ ಬುಕಿಂಗ್ ಮಾಡಿ ಕಾಯುತ್ತಿರುವ ಗ್ರಾಹಕರಿಗೆ ಹಾಗೂ ಹೊಸ ನೆಕ್ಸಾನ್‌ಗೆ ಅಪ್‌ಗ್ರೇಡ್ ಮಾಡಲು ಬಯಸುವ ಗ್ರಹಾಕರಿಗೆ 1 ಲಕ್ಷ ರೂಪಾಯಿ ವರೆಗಿನ ಪ್ರಯೋಜನ ನೀಡಲಾಗುತ್ತದೆ.  

41 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ನೆಕ್ಸಾನ್ ನ ಅತ್ಯದ್ಭುತ ಕಾರ್ಯಕ್ಷಮತೆಯು ಗಮನ ಸೆಳೆಯುತ್ತದೆ ಮತ್ತು ಅದರಿಂದಲೇ ಮಾರಾಟ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) 3 ಲಕ್ಷಕ್ಕೂ ಹೆಚ್ಚು ನೆಕ್ಸಾನ್ ಯುನಿಟ್‌ಗಳು ಮಾರಾಟವಾಗಿವೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಎಂಬ ಬಹು ಪವರ್‌ಟ್ರೇನ್‌ಗಳಲ್ಲಿ ಲಭ್ಯವಿರುವ ನೆಕ್ಸಾನ್, ಸಮಯದ ಜೊತೆಗೆ ದೃಢವಾಗಿ ಬೆಳವಣಿಗೆ ಹೊಂದಿದೆ. ಸೆಗ್ಮೆಂಟಿನಲ್ಲಿ ಅತಿ ಆಕರ್ಷಕವಾದ ಅದರ ವಿನ್ಯಾಸ, ವಿಭಾಗದಲ್ಲಿಯೇ ಅತ್ಯುತ್ತಮ ಅನ್ನಿಸುವ ಫೀಚರ್ ಗಳು ಮತ್ತು ಟೆಕ್ ಫಾರ್ವರ್ಡ್ ಗುಣಗಳಿಂದಾಗಿ ನೆಕ್ಸಾನ್ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ.

ರೇಂಜ್ ರೋವರ್ ಬೆಲೆ ಬರೋಬ್ಬರಿ 56 ಲಕ್ಷ ರೂ ಇಳಿಕೆ, ಕೈಗೆಟುಕವ ದರದಲ್ಲಿ ಐಷಾರಾಮಿ ಕಾರು!

ಅತ್ಯಾಧುನಿಕ ಕನೆಕ್ಟಿವಿಟಿ, ಅಪ್‌ಗ್ರೇಡ್ ಮಾಡಿದ ಸುರಕ್ಷತಾ ಫೀಚರ್ ಗಳು ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ನೆಕ್ಸಾನ್ ಅತ್ಯುತ್ತಮ ಕಾರ್ಯಕ್ಷಣತೆ ಪ್ರದರ್ಶಿಸಲು ಸನ್ನದ್ಧವಾಗಿದೆ ಮತ್ತು ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಜೊತೆಗೆ ಈ ಸೆಗ್ಮೆಂಟಿನಲ್ಲಿ ಇದು ಮುಂಚೂಣಿಯಲ್ಲಿ ನಿಂತಿದೆ. ಆಧುನಿಕ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ ಈ ಎಸ್ ಯು ವಿಯು ಯಾವಾಗಲೂ ರಸ್ತೆಯಲ್ಲಿ ಘನತೆಯಿಂದ ಕಾಣಿಸಿಕೊಳ್ಳುತ್ತದೆ ಮತ್ತು ಅತ್ಯುತ್ತ ಕಾರ್ಯನಿರ್ವಹಣೆಯನ್ನು ನೀಡುತ್ತದೆ. ಗ್ರಾಹಕರು ಮತ್ತು ಅಭಿಮಾನಿಗಳ ಅತ್ಯುತ್ಸಾಹದ ಪ್ರತಿಕ್ರಿಯೆಯು ನೆಕ್ಸಾನ್ ಅನ್ನು ಭಾರತೀಯ ಆಟೋ ಉದ್ಯಮದ ಸ್ಪರ್ಧಾತ್ಮಕ ವಿಭಾಗದ ನಾಯಕನನ್ನಾಗಿ ಮಾಡಿದೆ.
 

Latest Videos
Follow Us:
Download App:
  • android
  • ios