ಸ್ಪೋರ್ಟ್ಸ್ ಆ್ಯಕ್ಟಿವಿಟಿ, ಅಗ್ರೆಸ್ಸೀವ್ ಲುಕ್ ಹೊಂದಿದೆ ನೂತನ ಕಾರು ಹಲವು ಆಕರ್ಷಕ ಫೀಚರ್ಸ್ ಲೋಡೆಡ್ ಪ್ರೊಫೈಲ್  ಕಾರು  ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳ ಅಗತ್ಯಗಳಿಗೆ ತಕ್ಕಂತೆ ರೂಪಿಸಿದ ಕಾರು  

ಬೆಂಗಳೂರು(ಮಾ.11): ಹೊಚ್ಚ ಹೊಸ BMW X4 ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ತನ್ನ BMW ಸ್ಪೋಟ್ರ್ಸ್ ಆಕ್ಟಿವಿಟಿ ಕೂಪೆ(SAC)ಯನ್ನು ಆಕರ್ಷಕ ಡಿಸೈನ್ ಎಲಿಮೆಂಟ್ಸ್, ಹೆಚ್ಚುವರಿ ಫೀಚರ್ಸ್ ಮತ್ತು ಹಲವು ವಿಶೇಷತೆಗಳೊಂದಿಗೆ ನವೀಕರಿಸಿದೆ. ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿಉತ್ಪಾದಿಸಲಾದ ನ್ಯೂ BMW X4ಡೀಸೆಲ್ ಮತ್ತು ಪೆಟ್ರೋಲ್ ವೇರಿಯೆಂಟ್‍ಗಳಲ್ಲಿ ಭಾರತದಾದ್ಯಂತಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ.

ನೂತನ ಕಾರಿನ ಬೆಲೆ(ಎಕ್ಸ್ ಶೋರೂಂ)
BMW X4 xDrive30i : 70,50,000 ರೂಪಾಯಿ
BMW X4 xDrive30d : 72,50,000 ರೂಪಾಯಿ

ಭಾರತದಲ್ಲಿ BMWX4 ವಿಶಿಷ್ಟವಾದ `ಸ್ಪೋಟ್ರ್ಸ್‍ಆಕ್ಟಿವಿಟಿ ಕೂಪೆ’ ಕಾನ್ಸೆಪ್ಟ್‍ಅನ್ನು ಸ್ಥಾಪಿಸಿದೆ ಮತ್ತು ಜನಪ್ರಿಯಗೊಳಿಸಿದೆ. ಇದು ಲಕ್ಷುರಿ ಸ್ಪೋರ್ಟ್ಸ್ ಆ್ಯಕ್ಟಿವಿಟಿ ವೆಹಿಕಲ್ ರೀತಿಯಲ್ಲಿಯೇ ಪ್ರಾಯೋಗಿಕತೆ, ವೈಶಾಲ್ಯ ಮತ್ತು ಕಾರ್ಯಕ್ಷಮತೆ ಬಯಸುವಗ್ರಾಹಕರಿಗೆತಕ್ಷಣವೇ ಆಯ್ಕೆಯ ವಾಹನವಾಗಿದೆ. ಮತ್ತು ಇದು BMW X4 ರ USP ಆಗಿದೆ. ಇದು ಶೀರ್ ಡ್ರೈವಿಂಗ್ ಪ್ಲೆಷರ್ ಅನ್ನು ಪ್ರತಿನಿತ್ಯದ ಪ್ರಾಯೋಗಿಕತೆ ಮತ್ತು ಸ್ಪೋರ್ಟಿ ಅಡ್ವೆಂಚರ್‍ನೊಂದಿಗೆ ನೀಡುತ್ತದೆ. ಈಗ ಹೊಸ BMW X4 ತನ್ನ ಸೆಗ್ಮೆಂಟ್‍ನಲ್ಲಿ ಈ ಸ್ಥಾನಮಾನವನ್ನು ನವೀಕರಿಸಿದ ನೋಟಗಳು ಮತ್ತು ಹಲವು ಆಕರ್ಷಕ ಫೀಚರ್‍ಗಳ ಲೋಡೆಡ್ ಪ್ರೊಫೈಲ್ ಮೂಲಕ ಮುಂದುವರಿಸುತ್ತದೆ. ಇದರ ಎಂದೆಂದಿಗೂ ದಿಟ್ಟ ವ್ಯಕ್ತಿತ್ವ ಮರೆಯಲಾಗದ ಸ್ಟೇಟ್‍ಮೆಂಟ್ ನೀಡುತ್ತದೆ ಎಂದು BMW ಗ್ರೂಪ್‍ಇಂಡಿಯಾದ ಅಧ್ಯಕ್ಷ ವಿಕ್ರಮ್ ಪಾವಾಹ್ ಹೇಳಿದ್ದಾರೆ.

BMW ಹೊಸ ಮೈಲಿಗಲ್ಲು: 1 ಲಕ್ಷ ತಲುಪಿದ ದೇಶೀಯ ಉತ್ಪಾದಿತ ಕಾರುಗಳ ಸಂಖ್ಯೆ

ಹೊಸ BMW X4 ಈಗ ಎಕ್ಸ್‍ಕ್ಲೂಸಿವ್ `ಬ್ಲಾಕ್ ಶಾಡೋ’ ಎಡಿಷನ್‍ನಲ್ಲಿ ಸೀಮಿತ ಸಂಖ್ಯೆಗಳಲ್ಲಿ ಮಾತ್ರ ಲಭ್ಯ. ಡೈನಮಿಕ್ಸ್‍ಗೆ ಆದ್ಯತೆ ನೀಡಿ ಡಿಸೈನ್ ಮಾಡಲಾದ ಇದು ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿದೆ. 

ಸರ್ವೀಸ್ ಇನ್‍ಕ್ಲೂಸಿವ್ ಮತ್ತು ಸರ್ವೀಸ್ ಇನ್‍ಕ್ಲೂಸಿವ್ ಪ್ಲಸ್ BMW ಕಾರುಗಳಿಗೆ ಐಚ್ಛಿಕವಾಗಿ ಲಭ್ಯ. ಈ ಸರ್ವೀಸ್ ಪ್ಯಾಕೇಜಸ್‍ಕಂಡೀಷನ್ ಬೇಸ್ಡ್ ಸರ್ವೀಸ್(CBS) ಮತ್ತು ಮೇಂಟೆನೆನ್ಸ್ ವರ್ಕ್ ಒಳಗೊಂಡಿರುತ್ತವೆ. ಅವುಗಳು 3 ವರ್ಷಗಳು/40,000 ಕಿಲೋಮೀಟರ್‍ಗಳಿಂದ ಪ್ರಾರಂಭವಾಗುತ್ತವೆ ಮತ್ತುಆಕರ್ಷಕದರಕಿಲೋಮೀಟರ್‍ಗೆIಓಖ 1.52 ರಂತೆ10 ವರ್ಷಗಳು/2,00,000 ಕಿಲೋಮೀಟರ್‌ಗಳಿಗೆ ವಿಸ್ತರಿಸಬಹುದು. BMW X4 ಆಪ್ಷನಲ್ BMW ರಿಪೇರ್ ಇನ್‍ಕ್ಲೂಸಿವ್ ಒಳಗೊಂಡಿದ್ದು ಅದುವಾರೆಂಟಿ ಅನುಕೂಲಗಳನ್ನು ಸ್ಟಾಂಡರ್ಡ್‍ಎರಡು ವರ್ಷಗಳ ವಾರೆಂಟಿ ಪೀರಿಯಡ್ ಮುಗಿದ ನಂತರಕಾರ್ಯ ನಿರ್ವಹಣೆಯ ಮೂರನೇ ವರ್ಷದಿಂದಗರಿಷ್ಠ ಆರು ವರ್ಷದವರೆಗೆ ವಿಸ್ತರಿಸುತ್ತದೆ.

BMW MINI ಭಾರತದಲ್ಲಿ 47.20 ಲಕ್ಷ ರೂ. ದರದ ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್ ಬಿಡುಗಡೆ!

BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್‍ಆಕರ್ಷಕ BMW 360˚ ಫೈನಾನ್ಷಿಯಲ್ ಪ್ಲಾನ್‍ಅನ್ನು `ಡ್ರೈವ್ ಅವೇ ಮಂಥ್ಲಿ ಪ್ರೈಸ್,INR 89,999/-,ಅಶ್ಯೂರ್ಡ್ ಬೈಬ್ಯಾಕ್ ವರೆಗೆ ಮತ್ತುಅನುಕೂಲಕರ ಟರ್ಮ್ ಆಯ್ಕೆಗಳನ್ನು ನೀಡುತ್ತದೆ. ಕಸ್ಟಮೈಸ್ ಮಾಡಲಾದ ಫೈನಾನ್ಷಿಯಲ್ ಸಲ್ಯೂಷನ್ಸ್ ಅನ್ನು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಮತ್ತಷ್ಟು ವಿನ್ಯಾಸಗೊಳಿಸಬಹುದು.

ಹೊಸ BMW X4
ಹೊಸ BMW X4 ಹೊಂದಿದ ಅನನ್ಯವಾದ ಸ್ಪೋಟ್ರ್ಸ್‍ಆಕ್ಟಿವಿಟಿ ವೆಹಿಕಲ್ ಕೂಪೆ ಡಿಸೈನ್ ನಿಶ್ಚಿತವಾಗಿಯೂ ಎಲ್ಲರ ಗಮನ ಸೆಳೆಯುವಂಥದ್ದು. ಗಮನಾರ್ಹವಾಗಿರೀಡಿಸೈನ್ಡ್‍ಎಕ್ಸ್‍ಟೀರಿಯರ್ ಆಫ್-ರೋಡ್ ನೋಟ ಹಾಗೂ ಸ್ಪೋರ್ಟಿನೆಸ್ ಮರುದೃಢೀಕರಿಸುತ್ತದೆ. ಹೊಸ ಮುಂಬದಿ ಅದರ ಆಕರ್ಷP ÀBMW ಕಿಡ್ನಿಗ್ರಿಲ್, ತೆಳು ಹೆಡ್‍ಲೈಟ್ಸ್ ಮತ್ತು ಮರು ವಿನ್ಯಾಸದ ಫ್ರಂಟ್ ಏಪ್ರನ್‍ನಿಂದ ತಕ್ಷಣವೇ ಗಮನಿಸುವಂಥದ್ದಾಗಿದೆ.

ವಿಶಿಷ್ಟವಾದ BMW ಮೆಷ್‍ಕಿಡ್ನಿಗ್ರಿಲ್‍ಆಲ್-ಬ್ಲಾಕ್ ಮೆಷ್-ಇನ್ಸರ್ಟ್ ಮತ್ತು ಫ್ರೇಮ್‍ಅನ್ನು‘M ಹೈ ಗ್ಲಾಸ್ ಶಾಡೋ ಲೈನ್’ನಲ್ಲಿ ಫಿನಿಷ್ ಮಾಡಲಾಗಿದೆ.ಅಡಾಪ್ಟಿವ್ ಐಇಆ ಹೆಡ್‍ಲ್ಯಾಂಪ್ಸ್ ಈಗ 10mm ತೆಳುವಾಗಿವೆ ಮತ್ತು ಸಪಾಟಾಗಿದ್ದು ಹೆಚ್ಚು ಕೇಂದ್ರೀಕೃತ ಮುಖ ಸೃಷ್ಟಿಸಿವೆ. ಅವುಗಳನ್ನು ಒಶಾಡೋಲೈನ್ ಬ್ಲಾಕ್ ಅಕ್ಸೆಂಟ್ಸ್‍ನೊಂದಿಗೆಡಿಸೈನ್ ಮಾಡಲಾಗಿದೆ ಮತ್ತು ಮ್ಯಾಟ್ರಿಕ್ಸ್ ಫಂಕ್ಷನ್‍ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. ಕೆಳಕ್ಕೆ ಚಲಿಸಿದಂತೆ ಹೊಸದಾಗಿ ವಿನ್ಯಾಸಗೊಳಿಸಿದ ಫ್ರಂಟ್‍ಏಪ್ರನ್ M ಏರ್‍ಡೈನಮಿಕ್ ಪ್ಯಾಕೇಜ್ ಮೂಲಕ ಫ್ರಂಟ್/ರಿಯರ್‍ಏಪ್ರನ್ ಮತ್ತು ಸೈಡ್ ಸಿಲ್ ಕವರ್ಸ್ ಮೂಲಕ ಶಕ್ತಿಯನ್ನು ಪ್ರಕಟಿಸುತ್ತದೆ. ವರ್ಟಿಜಲ್‍ಡಾರ್ಕ್ ಶಾಡೋ ಮೆಟಾಲಿಕ್‍ನಲ್ಲಿ ಏರ್‍ಇನ್‍ಟೇಕ್ಸ್ ಮತ್ತು ಬಂಪರ್‍ಇನ್ಸಟ್ರ್ಸ್ ಮತ್ತಷ್ಟು ದಿಟ್ಟತನ ಸೇರಿಸುತ್ತದೆ.

ಸೈಡ್ ಪ್ರೊಫೈಲ್‍ಅದ್ಭುತವಾದಅಥ್ಲೆಟಿಕ್ ಮತ್ತು ಸ್ಪೋರ್ಟಿಯಾಗಿದೆ. ವಿಶುಯಲ್ ಬ್ಲಾಕ್ ಫ್ರೇಮ್‍ಅನ್ನು ಕೂಪೆ-ಸ್ಟೈಲ್ ವಿಂಡೋಸ್ ಸುತ್ತಲೂ M ಹೈ ಗ್ಲಾಸ್ ಶಾಡೋಲೈನ್‍ನೊಂದಿಗೆ ಸೃಷ್ಟಿಸಲಾಗಿದೆ. ಇದು ಗೈಡರ್‍ರೈಲ್, ಮಿಡ್‍ಪಿಲ್ಲರ್ಸ್ ವಿಂಡೋರಿಸೆಸ್‍ಕವರ್‍ನಿಂದ ಸೈಡ್-ವ್ಯೂ ಮಿರರ್ಸ್‍ಗೆ ಹಾಗೂ ಅಂತಿಮವಾಗಿ ರೂಫ್‍ರೈಲ್‍ಗೆ ವಿಸ್ತರಿಸುತ್ತದೆ. 20”ಲೈಟ್ M ಅಲಾಯ್ ವ್ಹೀಲ್ಸ್‍ಡಬಲ್ ಸ್ಪೋಕ್ ಮತ್ತು ಸ್ಪೋರ್ಟ್ ಬ್ರೇಕ್ಸ್‍ರೆಡ್ ಕ್ಯಾಲಿಪರ್ಸ್‍ನೊಂದಿಗೆಡಿಸ್ಪ್ಲೇಟ್ರಾಕ್‍ನ ಸನ್ನದ್ಧತೆ ಪ್ರದರ್ಶಿಸುತ್ತದೆ.

BMW Car Launch ಭಾರತದಲ್ಲಿ ಹೊಚ್ಚ ಹೊಸ BMW M4 ಕಾಂಪಿಟೀಶನ್ ಕೂಪೆ ಕಾರು ಬಿಡುಗಡೆ!

ಹೊಸ ಸ್ಪೋರ್ಟಿ ವಾತಾವರಣದಿಂದ ಇಂಟೀರಿಯರ್ ಅಸಾಧಾರಣ ಮಟ್ಟದ ಸೌಖ್ಯ ಮತ್ತುಕಾರ್ಯ ನಿರ್ವಹಣೆ ನೀಡುತ್ತದೆ. ಒಟ್ಟಿಗೆಎತ್ತರಿಸಲಾದ ಸೀಟ್ ಸ್ಥಾನ ಮತ್ತುಉದಾರ ಪ್ರಮಾಣಗಳಿಂದ ಇದು ಫಸ್ರ್ಟ್-ಕ್ಲಾಸ್‍ಕಂಫರ್ಟ್‍ಅನ್ನು ನೀಡುತ್ತದೆ. ಇಂಟೀರಿಯರ್ ಸ್ಪಷ್ಟವಾಗಿ ರೂಪಿಸಿದ ಮೇಲ್ಮೈಗಳು ಮತ್ತುಎರ್ಗೊನಾಮಿಕಲಿ ದೋಷರಹಿತಕಾಕ್‍ಪಿಟ್‍ಡಿಸೈನ್ ಹೊಂದಿದ್ದುಅದುತೀವ್ರವಾದಡ್ರೈವಿಂಗ್‍ಎಕ್ಸ್‍ಪೀರಿಯೆನ್ಸ್‍ಗೆ ಶೇಕಡಾ ನೂರರಷ್ಟು ಚಾಲಕನ ಗಮನ ಕೇಂದ್ರೀಕರಿಸುತ್ತದೆ ಮತ್ತು ಮುಂಬದಿಯ ಪ್ರಯಾಣಿಕರು ಸ್ಪೋಟ್ರ್ಸ್‍ಸೀಟ್ಸ್‍ನಿಂದ ಪ್ರೀಮಿಯಂ SACಯ ಉನ್ನತ ಸಾಮಥ್ರ್ಯ ನೀಡುತ್ತದೆಅದುಅಸಂಖ್ಯಎಲೆಕ್ಟ್ರಿಕಲ್‍ಅಡ್ಜಸ್ಟ್‍ಮೆಂಟ್‍ಆಪ್ಷನ್ಸ್ ಮತ್ತು ಮೆಮೊರಿ ಫಂಕ್ಷನ್ ನೀಡುತ್ತದೆ. ಹಿಂಬದಿಯ ಪ್ರಯಾಣಿಕರು ಸೀಟುಗಳನ್ನು ಹೆಚ್ಚುವರಿ ಅನುಕೂಲಕ್ಕಾಗಿ 9˚ ಹಿಂದಕ್ಕೆ ಬಾಗಿಸಬಹುದು.ಸೆಂಟರ್‍ಕನ್ಸೋಲ್‍ನ ಮಾಡ್ರನ್‍ಡಿಸೈನ್, ಸೆನ್ಸಾಟೆಕ್‍ನಲ್ಲಿಇನ್ಸ್‍ಟ್ರುಮೆಂಟ್ ಪ್ಯಾನೆಲ್, M ಹೆಡ್‍ಲೈನ್‍ಅಂಥ್ರಾಸೈಟ್ ಮತ್ತುಗ್ಯಾಲ್ವನಿಸ್ ಎಂಬೆಲ್ಲಿಷರ್‍ಕ್ಯಾಬಿನ್ ಪ್ರೀಮಿಯಂನೆಸ್‍ಗೆ ಸೇರ್ಪಡೆ ಮಾಡುತ್ತದೆ.M ಲೆದರ್ ಸ್ಟೀರಿಂಗ್ ವ್ಹೀಲ್ `ವಾಕ್‍ನಪ್ಪಾ ಬ್ಲಾಕ್’ ಹಾಗೂ ಬ್ಲಾಕ್‍ಸ್ಟಿಚಿಂಗ್ ಹಾಗೂ Mಲೊಗೊವನ್ನು ವಿಶೇಷತೆಗೆತರಲಾಗಿದೆ.

ಒಂದು ದೊಡ್ಡ ವಿದ್ಯುತ್ ಚಾಲಿತ ಪನೋರಮಾ ಸನ್‍ರೂಫ್‍ನಿಂದಾಗಿ ವಿಶ್ರಾಂತಿ ಮತ್ತು ಸಾಮರಸ್ಯದ ಲೌಂಜ್ ವಾತಾವರಣವನ್ನು ರಚಿಸಲಾಗಿದೆ. ಆರು ಆಯ್ಕೆ ಮಾಡಬಹುದಾದ ಬೆಳಕಿನ ವಿನ್ಯಾಸಗಳೊಂದಿಗೆ ಆಂಬಿಯೆಂಟ್ ಲೈಟಿಂಗ್ ವಾತಾವರಣವನ್ನು ಸೃಷ್ಟಿಸುತ್ತದೆ.ವೆಲ್ಕಂ ಲೈಟ್‍ಕಾರ್ಪೆಟ್ ಸೈಡ್ ಸಿಲ್‍ನಿಂದ ಹೊಮ್ಮಿದ್ದು ಪ್ರಯಾಣಿಕರನ್ನುಆಕರ್ಷಕ ಶೈಲಿಯಲ್ಲಿ ಸ್ವಾಗತಿಸುತ್ತದೆ.ಎಲೆಕ್ಟ್ರೊಪ್ಲೇಟೆಡ್‍ಕಂಟ್ರೋಲ್ಸ್ ಮತ್ತು3-ಝೋನ್ ಆಟೊಮ್ಯಾಟಿಕ್‍ಕ್ಲೈಮೇಟ್‍ಕಂಟ್ರೋಲ್ ವಿಸ್ತರಿಸಿದ ಆಯ್ಕೆಗಳೊಂದಿಗೆ ಒಟ್ಟಾರೆಐಷಾರಾಮಿ ಭಾವನೆಗೆ ಸೇರ್ಪಡೆಯಾಗುತ್ತದೆ. ಬುಟ್ ಸಾಮಥ್ರ್ಯ525 ಲೀಟರ್‍ಗಳಾಗಿವೆ ಮತ್ತು40/20/40 ಸ್ಪ್ಲಿಟ್ ರಿಯರ್ ಸೀಟ್ ಬ್ಯಾಕ್‍ರೆಸ್ಟ್1,430 ಲೀಟರ್ಸ್‍ಗೆವಿಸ್ತರಿಸಬಹುದಾಗಿದೆ. 

BMW ಎಫಿಷಿಯೆಂಟ್ ಡೈನಮಿಕ್ಸ್‍ಕುಟುಂಬದ ಇನ್ನೊವೇಟಿವ್‍ಪೆಟ್ರೋಲ್ ಮತ್ತುಡೀಸೆಲ್‍ಎಂಜಿನ್ಸ್ ಗಮನಾರ್ಹವಾಗಿ ಸ್ಫೂರ್ತಿಯುತ ಪವರ್‍ಡೆಲಿವರಿಅಲ್ಲದೆತಕ್ಷಣದ ಪ್ರತಿಕ್ರಿಯಾತ್ಮಕತೆಯನ್ನುಕಡಿಮೆಎಂಜಿನ್ ವೇಗಗಳಲ್ಲೂ ನೀಡುತ್ತದೆ.ಸರಿಸಾಟಿಇರದಟ್ವಿನ್ ಪವರ್‍ಟರ್ಬೊ ಟೆಕ್ನಾಲಜಿ ಅದನ್ನು ಸಾಧ್ಯವಾಗಿಸಿದೆ ಅದು ಶಕ್ತಿಯನ್ನು ಅಸಾಧಾರಣ ದಕ್ಷತೆಯೊಂದಿಗೆ ಸಂಯೋಜಿಸುತ್ತದೆ.BMW X4 xಡ್ರೈವ್30d ಥ್ರೀ-ಲೀಟರ್ ಸಿಕ್ಸ್-ಸಿಲಿಂಡರ್ ಡೀಸೆಲ್ ಎಂಜಿನ್265 hp ಔಟ್‍ಪುಟ್ ಉತ್ಪಾದಿಸುತ್ತದೆ ಮತ್ತುಗರಿಷ್ಠ ಟಾರ್ಕ್620 Nm ಪಡೆಯುತ್ತದೆ. 2,000 – 2,500 rpm ನಲ್ಲಿ ನೀಡುತ್ತದೆ.ಕಾರು ಕೇವಲ 5.8 ಸೆಕೆಂಡುಗಳಲ್ಲಿ 0 -100Km / hr ಆಕ್ಸಲರೇಟ್ ಆಗುತ್ತದೆ. BMW X4xಡ್ರೈವ್30i ಟು-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್‍ಎಂಜಿನ್‍ಔಟ್‍ಪುಟ್‍ಉತ್ಪಾದಿಸುತ್ತದೆ ಮತ್ತುಗರಿಷ್ಠ ಟಾರ್ಕ್ 350 ಓm ಪಡೆಯುತ್ತದೆ. 1,450 –4,800 ಡಿಠಿm ರಲ್ಲಿ ನೀಡುತ್ತದೆ.ಕಾರು ಕೇವಲ 6.6 ಸೆಕೆಂಡುಗಳಲ್ಲಿ 0 -100 Km /hr ಆಕ್ಸಲರೇಟ್‍ಆಗುತ್ತದೆ.

8-ಸ್ಪೀಡ್ ಸ್ಟೆಪ್ಟ್ರಾನಿಕ್‍ಆಟೊಮ್ಯಾಟಿಕ್‍ಟ್ರಾನ್ಸ್‍ಮಿಷನ್ ಮೃದುವಾದ, ಬಹುತೇಕ ಅಗ್ರಾಹ್ಯಗೇರ್ ಶಿಫ್ಟ್ಸ್ ನೀಡುತ್ತದೆ.ಯಾವುದೇ ಸಮಯದಲ್ಲಿ, ಯಾವುದೇಗೇರ್‍ನಲ್ಲಿಟ್ರಾನ್ಸ್‍ಮಿಷನ್ ಪರಿಪೂರ್ಣವಾಗಿಎಂಜಿನ್‍ನೊಂದಿಗೆ ಸಹಯೋಗ ಹೊಂದುವ ಮೂಲಕ ಪೂರ್ಣ ಶಕ್ತಿ ಮತ್ತುದಕ್ಷತೆ ಸಾಧಿಸಲು ನೆರವಾಗುತ್ತದೆ.ಮತ್ತಷ್ಟು ಹೆಚ್ಚಿನಡ್ರೈವಿಂಗ್ ಪ್ಲೆಷರ್‍ಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್‍ಟ್ರಾನ್ಸ್‍ಮಿಷನ್ ಸ್ಟೀರಿಂಗ್ ವ್ಹೀಲ್ ಪ್ಯಾಡ್ಲರ್ ಶಿಫ್ಟರ್‍ಗಳೊಂದಿಗೆ ಲಭ್ಯ.

BMW xಡ್ರೈವ್, ಇಂಟೆಲಿಜೆಂಟ್‍ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಚಾಲನೆಯ ಸನ್ನಿವೇಶವನ್ನು ಸತತವಾಗಿ ಗಮನಿಸುತ್ತದೆ ಮತ್ತುತ್ವರಿತವಾಗಿ ಪ್ರತಿಕ್ರಿಯೆ ನೀಡುತ್ತದೆ.ಕಿರಿದಾದ, ಕಡಿಮೆತೂಕದ ಮತ್ತು ದಕ್ಷಆಲ್-ವ್ಹೀಲ್‍ಡ್ರೈವ್ ಸಿಸ್ಟಂ ಎಂಜಿನ್‍ನ ಶಕ್ತಿಯನ್ನು ಫ್ರಂಟ್ ಮತ್ತುರಿಯರ್‍ಆಕ್ಸಲ್ ನಡುವೆ ಚಾಲನೆಯ ಸನ್ನಿವೇಶಕ್ಕೆಅನುಗುಣವಾಗಿಮತ್ತು ಮೇಲ್ಮೈಗೆ ಹೊಂದುವಂತೆ ವಿತರಿಸುತ್ತದೆ.ಎಲೆಕ್ಟ್ರಾನಿಕಲಿ ಕಂಟ್ರೋಲ್ಡ್ `ಆಟೊಮ್ಯಾಟಿಕ್ ಡಿಫರೆನ್ಷಿಯಲ್ ಬ್ರೇಕ್ಸ್/ಲಾಕ್ಸ್(ABD-X) ವಿಸ್ತರಿಸಿದ `ಡೈನಮಿಕ್‍ಟ್ರಾಕ್ಷನ್‍ಕಂಟ್ರೋಲ್(DTC), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್‍ಕಂಟ್ರೋಲ್ ಪ್ರತಿ ಪ್ರದೇಶವನ್ನುಆಕ್ರಮಿಸಲುನೆರವಾಗುತ್ತದೆ. ಅಡಾಪ್ಟಿವ್ ಸಸ್ಪೆನ್ಷನ್‍ಡ್ಯಾಂಪರ್ ಲಕ್ಷಣಗಳನ್ನು ಯಾವುದೇ ಚಾಲನೆಯ ಸನ್ನಿವೇಶಕ್ಕೆ ಹೊಂದಿಸಿಕೊಳ್ಳಲು ಕಂಫರ್ಟ್ ಮತ್ತುಡ್ರೈವಿಂಗ್‍ಡೈನಮಿಕ್ಸ್ ಹೆಚ್ಚಿಸಿ ಸಾಧ್ಯವಾಗಿಸುತ್ತದೆ.

BMW ಎಫಿಷಿಯೆಂಟ್‍ಡೈನಮಿಕ್ಸ್‍ಆಟೊ ಸ್ಟಾರ್ಟ್-ಸ್ಟಾಪ್, ECO PRO ಮೋಡ್, ಬ್ರೇಕ್-ಎನರ್ಜಿರೀಜನರೇಷನ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, 50:50 ವೆಯ್ಟ್ ಡಿಸ್ಟ್ರಿಬ್ಯೂಷನ್ ಮತ್ತಿತರೆಇನ್ನೊವೇಟಿವ್‍ಟೆಕ್ನಾಲಜೀಸ್ ಮೂಲಕ `ಶೀರ್ ಡ್ರೈವಿಂಗ್ ಪ್ಲೆಷರ್’ ಅನ್ನು ದ್ವಿಗುಣಗೊಳಿಸುತ್ತದೆ.ಡ್ರೈವಿಂಗ್‍ಎಕ್ಸ್‍ಪೀರಿಯೆನ್ಸ್‍ಕಂಟ್ರೋಲ್ ಸ್ವಿಚ್ ಬಳಸಿ ಚಾಲಕರು ವಿಭಿನ್ನಡ್ರೈವಿಂಗ್ ಮೋಡ್ಸ್(ECOPRO, COMFORT, SPORT/ SPORT +)ಎಲ್ಲ ಚಾಲನೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಆಯ್ಕೆ ಮಾಡಿಕೊಳ್ಳಬಹುದು. 

ಹೊಸ BMW X4 ಕಟಿಂಗ್-ಎಡ್ಜ್‍ಸೇಫ್ಟಿಟೆಕ್ನಾಲಜೀ ಹೊಂದಿದೆ. ಇದುಯಾವುದೇ ಸನ್ನಿವೇಶದಲ್ಲಿ ಆರುಏರ್‍ಬ್ಯಾಗ್ಸ್, ಅಟೆಂಟಿವ್‍ನೆಸ್ ಅಸಿಸ್ಟೆನ್ಸ್, ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್(DSC) ಕಾರ್ನರಿಂಗ್ ಬ್ರೇಕ್‍ಕಂಟ್ರೋಲ್(CBC), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‍ಆಟೊಫೋಲ್ಡ್‍ನೊಂದಿಗೆ, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್‍ಇಮ್ಮೊಬಿಲಯಸರ್ ಮತ್ತುಕ್ರಾಶ್ ಸೆನ್ಸರ್, ISOFIX ಚೈಲ್ಡ್ ಸೀಟ್ ಮೌಂಟಿಂಗ್ ಮತ್ತು ಇಂಟಿಗ್ರೇಟೆಡ್‍ಎಮರ್ಜೆನ್ಸಿ ಸ್ಪೇರ್ ವ್ಹೀಲ್‍ಅನ್ನು ಲೋಡ್ ಫ್ಲೋರ್ ಕೆಳಗಡೆ ಒಳಗೊಂಡಿದೆ. 

BMW ಕನೆಕ್ಟೆಡ್‍ಡ್ರೈವ್‍ಟೆಕ್ನಾಲಜೀಸ್‍ವಾಹನೋದ್ಯಮದಲ್ಲಿ ಆವಿಷ್ಕಾರದಅಡೆತಡೆಯನ್ನು ಮುರಿಯುವುದನ್ನು ಮುಂದುವರಿಸಿದೆ.ಮಾಡ್ರನ್‍ಕಾಕ್‍ಪಿಟ್‍ಕಾನ್ಸೆಪ್ BMW ಲೈವ್‍ಕಾಕ್‍ಪಿಟ್ ಪ್ರೊಫೆಷನಲ್‍ನಲ್ಲಿ3ಆ ನ್ಯಾವಿಗೇಷನ್, 12.3-ಇಂಚು ಡಿಜಿಟಲ್‍ಇನ್ಫರ್ಮೇಷನ್‍ಡಿಸ್ಪ್ಲೇ ಸ್ಟೀರಿಂಗ್ ವ್ಹೀಲ್ ಹಿಂಬದಿ, 12.3-ಇಂಚು ಕಂಟ್ರೋಲ್‍ಡಿಸ್ಪ್ಲೇ ಮತ್ತು BMW ಹೆಡ್-ಅಪ್‍ಡಿಸ್ಪ್ಲೇಒಳಗೊಂಡಿದೆ.ಕಾರಿನ ಒಳಗಿರುವವರು ಅವರ BMW ವರ್ಚುಯಲ್ ಅಸಿಸ್ಟೆಂಟ್‍ಗೆ ಮಾತನಾಡುವ ಮೂಲಕ ಕಾರಿನ ಹಲವಾರು ಕಾರ್ಯಗಳನ್ನು ನಿರ್ವಹಿಸಬಹುದು.BMW ಗೆಸ್ಚರ್‍ಕಂಟ್ರೋಲ್‍ನಿಂದ ಕೈಗಳು ಮಾತನಾಡುತ್ತವೆಅದು ಆರುಪೂರ್ವ ನಿರ್ಧಾರಿತ ಕೈ ಚಲನೆಗಳನ್ನು ಗುರುತಿಸುತ್ತದೆ. ವೈರ್‍ಲೆಸ್‍ಆಪಲ್‍ಕಾರ್‍ಡಿಸ್ಪ್ಲೇಲ/ಆಂಡ್ರಾಯಿಡ್‍ಆಟೊ ಮಿತಿಯಿರದ ಸ್ಮಾರ್ಟ್‍ಫೋನ್ ಸಂಪರ್ಕವನ್ನುಕಾರಿನೊಂದಿಗೆ ನೀಡುವ ಮೂಲಕ ಹಲವು ಫಂಕ್ಷನ್ಸ್ ಲಭ್ಯತೆ ನೀಡುತ್ತದೆ. ಹರ್ಮನ್‍ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ 16 ಸ್ಪೀಕರ್‍ಗಳೊಂದಿಗೆ ಕಿವಿಗೆ ಸುಶ್ರಾವ್ಯತೆ ನೀಡುತ್ತದೆ. 

ಡ್ರೈವ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಹಿಂದೆಂದಿಗಿಂತ ಬಹಳ ವಿಸ್ತಾರವಾಗಿದೆ.ಪಾರ್ಕಿಂಗ್ ಅಸಿಸ್ಟೆಂಟ್‍ರಿಯರ್ ವ್ಯೂಕ್ಯಾಮರಾದಲ್ಲಿ ಬಿಗಿಯಾದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ನೆರವಾಗುತ್ತದೆ. ರಿವರ್ಸಿಂಗ್ ಅಸಿಸ್ಟೆಂಟ್ ಸರಿಸಾಟಿ ಇರದ ಬೆಂಬಲವನ್ನು ಪಾರ್ಕಿಂಗ್ ತಾಣದಿಂದ ತೆಗೆಯುವಾಗ ಅಥವಾ ಕಿರಿದಾದ ದಾರಿಗಳಲ್ಲಿ ಚಾಲಿಸುವಾಗ ನೀಡುತ್ತದೆ