ವಿಶ್ವವೇ ಈಗ ಡಿಜಿಟಲ್ ಸ್ಮಾರ್ಟ್‌ನೆಸ್ ಅಪ್ಪಿಕೊಂಡಿದೆ ಅನ್ನೋದರಲ್ಲಿ ಅನುಮಾನವಿಲ್ಲ. ನಮ್ಮ ಬದುಕನ್ನು ಈ ಡಿಜಿಟಲ್ ಸ್ಮಾರ್ಟ್‌ನೆಸ್ ಸರಳ ಹಾಗೂ ಸುಲಭಗೊಳಿಸಿದೆ. ಸ್ಮಾರ್ಟ್ ಟಿವಿಯಿಂದ  ಸ್ಮಾರ್ಟ್ ವಾಚ್, ಫೋನ್, ಲ್ಯಾಪ್‌ಟಾಪ್ , ಇಷ್ಟೇ ಯಾಕೆ  ಗೃಹ ಸಹಾಯಕ, ಮನೆಯಲ್ಲಿರುವ ನಮ್ಮ ಸುತ್ತಮುತ್ತಲಿನ ಎಲ್ಲವೂ ಸ್ವತಃ  ಎಐ ಆಧಾರಿತ ವ್ಯವಸ್ಥೆಯ ಮೂಲಕ ಯೋಚಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶ್ವಾದ್ಯಂತ ಮನ್ನಣೆ ಹಾಗೂ ಸ್ವೀಕಾರ ಪಡೆದ ತಂತ್ರಜ್ಞಾನ ನಮ್ಮ ಬದುಕನ್ನು ಹೊಸ ಆ್ಯಪ್ಲಿಕೇಶನ್ ಹಾಗೂ ಸಾಫ್ಟ್‌ವೇರ್‌ನಿಂದ ಮತ್ತಷ್ಟು ಸುಲಭಗೊಳಿಸಿದೆ.  

ಹಾಗಾದರೆ ನಿಮ್ಮ ಕಾರು ಯಾಕೆ ಭಿನ್ನವಾಗಿರಬೇಕು. ವಿಶ್ವದ ಮುಂಚೂಣಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಜ್ ಅತ್ಯುತ್ತಮ ಹಾಗೂ ವಿಶ್ವ ದರ್ಜೆಯ ತಂತ್ರಜ್ಞಾನಗಳನ್ನು ಕಾರಿಗೆ ಅಳವಡಿಸುವ ನಿಟ್ಟಿನಲ್ಲ ಕಾರ್ಯಪ್ರವೃತ್ತವಾಗಿದೆ. ಈ ಮೂಲಕ ಬಳಕೆದಾರ ಸ್ನೇಹಿ, ಗರಿಷ್ಠ ಸುರಕ್ಷತೆ, ಐಷಾರಾಮಿ ಹಾಗೂ ಟಾಪ್ ಕ್ಲಾಸ್  ಗುಣಮಟ್ಟ ಹೊಂದಿದೆ. ಈ ಎಲ್ಲಾ ಗುಣಲಕ್ಷಣಗಳು ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರಿನಲ್ಲಿ ಸಿಗಲಿದೆ. ಈ ಕಾರು ಅತ್ಯುತ್ತಮ ವಿನ್ಯಾಸ, ಸುರಕ್ಷತೆ, ಸ್ಥಿರತೆ, ಹೊಸತನ ಹಾಗೂ ತಂತ್ರಜ್ಞಾನ ಸೇರಿದಂತೆ ಕಾರಿನ ಪ್ರತಿಯೊಂದು ಅಂಶಗಳು ಅತ್ಯುತ್ತಮ ದರ್ಜೆಯದ್ದಾಗಿದೆ. ಇಷ್ಟೇ ಅಲ್ಲ ಇಂಟೆಲಿಜೆನ್ಸ್ ಮಾಸ್ಟರ್‌ಪೀಸ್ ಹಾಗೂ ಸ್ಪೋರ್ಟಿ ಲುಕ್, ಫಿನೀಶಿಂಗ್ ಹೊಂದಿದೆ. ಇತ್ತೀಚಿನ ಹೊಸ ಅಪ್‌ಗ್ರೇಜ್ ಎಂದರೆ ಮರ್ಸಿಡಿಸ್ ಬೆಂಝ್  ಇ ಕ್ಲಾಸ್ ಕಾರಿಗೆ ಮರ್ಸಿಡಿಸ್ ಮಿ ಕೆನಕ್ಟ್ ತಂತ್ರಜ್ಞಾನವನ್ನು ಸೇರಿಸಲಾಗಿದೆ.

 

ಮರ್ಸಿಡಿಸ್ ಮಿ ಕೆನೆಕ್ಟ್ ತಂತ್ರಜ್ಞಾನ ಐಷಾರಾಮಿ ಕಾರಾದ ಮರ್ಸಿಡೀಸ್ ಬೆಂಜ್ ಕಾರನ್ನು ಇತರ ಕಾರುಗಳಿಂದ ಪ್ರತ್ಯೇಕಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಾರಣ ಮರ್ಸಿಡಿಸ್ ಮಿ ಕೆನೆಕ್ಟ್ ಮೂಲಕ ಕಾರಿನೊಂದಿಗೆ  ಸಂಪರ್ಕ ಸಾಧ್ಯವಾಗಲಿದೆ. 

ಧ್ವನಿ ನಿಯಂತ್ರಣ ಸಹಾಯ
ಈಗ ಮರ್ಸಿಡಿಸ್ ಬೆಂಜ್ ಕಾರನ್ನು ಮನೆಯ ಸೋಫಾದಲ್ಲಿ ಆರಾಮವಾಗಿ ಕುಳಿತು ನಿಯಂತ್ರಣ ಮಾಡಬಹುದು. ಮರ್ಸಿಡಿಸ್ ಬೆಂಜ್ ಕಾರಿನ ಮರ್ಸಿಡಿಸ್ ಮಿ ಕೆನೆಕ್ಟ್ ಆ್ಯಪ್‌ನ್ನು ಗೂಗಲ್ ಹೋಮ್ ಅಥವಾ ಅಮೆಜಾನ್ ಅಲೆಕ್ಸಾಗೆ ಲಿಂಕ್ ಮಾಡಿದರೆ ಸಾಕು. ಮನೆಯಿಂದಲೇ ಕುಳಿತು ಸೂಚನೆ ನೀಡಬಹುದು. ಕಾರನ್ನು ಲಾಕ್ ಮಾಡಲು ಧ್ವನಿ ಮೂಲಕ ಹೇಳಿದರೆ, ಹೊರಗಡೆ ಇರುವ ನಿಮ್ಮ ಮರ್ಸಿಡಿಸ್ ಬೆಂಜ್ ಕಾರು ಲಾಕ್ ಆಗಲಿದೆ. ಹೀಟ್ ಸ್ವಿಚ್ ಆನ್, ನ್ಯಾವಿಗೇಶನ್ ವಿಳಾಸ, ಮ್ಯೂಸಿಕ್, ಲೈಟ್ ಸೇರಿದಂತೆ ಮರ್ಸಿಡಿಸ್ ಮಿ ಕೆನೆಟ್ ಮೂಲಕ ಕಾರಿನ ನಿಯಂತ್ರಣ ಪಡೆಯಬಹುದು. ಇವೆಲ್ಲವೂ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರಿನಲ್ಲಿದೆ.

ಮೊಬೈಲ್‌ನಲ್ಲಿ ಮರ್ಸಿಡಿಸ್ ಮಿ ಆ್ಯಪ್
ಮರ್ಸಿಡಿಸ್ ಮಿ ಕನೆಕ್ಟ್ ಆ್ಯಪನ್ನು ನಿಮ್ಮ ಮೊಬೈಲ್‌ನೊಂದಿಗೆ ವಾಹನವನ್ನು ಸಂಪರ್ಕಿಸುವ ಅತ್ಯಂತ ಶಕ್ತಿಯುತವಾದ ಅಪ್ಲಿಕೇಶನ್ ಆಗಿದೆ. ಈ ರೀತಿಯ ಹಲವು ವೈಶಿಷ್ಟ್ಯಗಳೊಂದಿಗೆ ಹಾಗೂ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಲಾಗಿದೆ.

  • ಮಿ ಕನೆಕ್ಟ್ ಮೊಬೈಲ್ ಆ್ಯಪ್ ಮೂಲಕ ಕಾರಿನ ಚಕ್ರದ ಗಾಳಿ, ಇಂಧನ ಮಾಹಿತಿ, ತಾಪಮಾನ ನಿಯಂತ್ರಣ, ಬ್ರೇಕ್‌ ಸ್ಥಿತಿ ಸೇರಿದಂತೆ ಕಾರಿನ ಮಾಹಿತಿಯನ್ನು ಮೊಬೈಲ್‌ನಲ್ಲಿ ಪಡೆಯಬಹುದು.
  • ಮರ್ಸಿಡಿಸ್ ಮಿ ಕನೆಕ್ಟ್ ಪಾರ್ಕ್ ಲೊಕೇಟರ್ ಮೂಲಕ ಮರ್ಸಿಡಿಸ್ ಬೆಂಜ್ ಕಾರು ಎಲ್ಲಿ ಪಾರ್ಕಿ ಮಾಡಿದ್ದೀರಾ? ಪಾರ್ಕಿಂಗ್ ಹಾಗೂ ಕಾರಿನ ಲೋಕೇಶನ್ ಮಾಹಿತಿಯನ್ನು ಮಿ ಕನೆಕ್ಟ್ ಆ್ಯಪ್ ಮೂಲಕ ಪಡೆಯಬಹುದು.
  • ರಿಮೋಟ್ ಕಾರ್ ಲಾಕಿಂಗ್ ಮೂಲಕ ಕಾರನ್ನು ಲಾಕ್ ಹಾಗೂ ಅನ್‌ಲಾಕ್ ಮಾಡಬಹುದು. ಸಿಂಗಲ್ ಟಚ್(ಟ್ಯಾಪ್) ಮೂಲಕ ಕಾರು ಲಾಕ್-ಅನ್‌ಲಾಕ್ ಆಗಲಿದೆ. ಇನ್ನು ಕಾರನ್ನು ಕೆಲ ಹೊತ್ತು ಲಾಕ್ ಮಾಡದೇ ಹಾಗೇ ಬಿಟ್ಟಿದ್ದರೆ, ನೋಟಿಫಿಕೇಶ್ ಕೂಡ ನೀಡಲಿದೆ.
  • ಮರ್ಸಿಡಿಸ್ ಮಿ ಕನೆಕ್ಟ್ ಆ್ಯಪ್ ಮೂಲಕ ತಲುಪಬೇಕಾದ ಸ್ಥಳ ಅಥವಾ ನ್ಯಾವಿಗೇಶನ್ ಸೂಚನೆಗಳನ್ನು ಕಳುಹಿಸಬಹುದು.

 

ಮರ್ಸಿಡಿಸ್ ಮಿ ಕನೆಕ್ಟ್ ಆ್ಯಪ್ ವಿಶೇಷತೆ ಇಲ್ಲಿಗೆ ಮುಗಿದಿಲ್ಲ. ಮ್ಯೂಸಿಕ್ ಆನಂದಿಸಲು, ಟ್ರಾಫಿಕ್ ರಸ್ತೆಗಳ ಮಾಹಿತಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಸಹಾಯವನ್ನು ನೀಡಲಿದೆ.  

ವಿಶ್ವ ದಿನದಿಂದ ದಿನಕ್ಕೆ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ತಂತ್ರಜ್ಞಾನಗಳು ಅಪ್‌ಗ್ರೇಡ್ ಆಗುತ್ತದೆ. ಈ ನಿಟ್ಟಿನಲ್ಲಿ ಮರ್ಸಿಡಿಸ್ ಬೆಂಜ್ ಅತ್ಯುತ್ತಮ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಅನುಭವವನ್ನು ಗ್ರಾಹಕರಿಗೆ ನೀಡುತ್ತ ಮುಂಚೂಣಿಯಲ್ಲಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: