ದೆಹಲಿಯಲ್ಲಿ 10 ವರ್ಷ ಹಳೆ ಡೀಸೆಲ್ ವಾಹನ ಬಳಕೆ ನಿಷೇಧ ವಿನಾಯ್ತಿಗೆ NGT ನಕಾರ!

*ಪರಿಸರ ಮಾಲಿನ್ಯ ಉಂಟು ಮಾಡುವ ಹಿನ್ನೆಲೆಯಲ್ಲಿ ನಿಷೇಧ
*15 ವರ್ಷ ಹಳೆಯ ಪೆಟ್ರೋಲ್‌ ವಾಹನಕ್ಕೂ ನಿಷೇಧ
*ಎಲೆಕ್ಟ್ರಿಕ್‌ ಆಗಿ ಪರಿವರ್ತಿಸಲು ಅವಕಾಶ

NGT refuses to allow 10 year old diesel vehicles in Delhi NCR

Auto Desk: ದೇಶದಲ್ಲಿ 15 ವರ್ಷ ಹಳೆಯದಾದ ವಾಣಿಜ್ಯ ವಾಹನಗಳು ಹಾಗೂ 20 ವರ್ಷ ಹಳೆಯದಾದ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲು ಗುಜರಿ ನೀತಿ (Scrap policy) ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಲವು ಸಿದ್ಧತೆಗಳು ಕೂಡ ನಡೆಯುತ್ತಿವೆ. ಇದರ ಬೆನ್ನಲ್ಲೇ, ದೆಹಲಿ-ಎನ್ಸಿಆರ್ನಲ್ಲಿ  (Delhi-NCR) 10 ವರ್ಷಗಳಿಗೂ ಹಳೆಯದಾದ ಡೀಸೆಲ್ ವಾಹನಗಳನ್ನು ರಸ್ತೆಗಿಳಿಸುವುದನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ- ಎನ್ಜಿಟಿ (National Green Tribunal)  ಈ ಹಿಂದೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದು, ಯಾವುದೇ ರೀತಿಯ ವಿನಾಯಿತಿ ನೀಡಲು ನಿರಾಕರಿಸಿದೆ.

10 ವರ್ಷ ಹಳೆಯ ಡೀಸೆಲ್ ವಾಹನಗಳ ಮೇಲಿನ ನಿಷೇಧದ ಮೇಲೆ ವಿನಾಯಿತಿ ಕೋರಿದ ಸರ್ಕಾರ ಸೇರಿದಂತೆ ಹಲವರು ವೈಯಕ್ತಿಕ ಅರ್ಜಿಗಳನ್ನು ಸಲ್ಲಿಸಿದೆ. ಆದರೆ, ಇದನ್ನು ಒಪ್ಪದ ಎನ್ಜಿಟಿ, 10 ವರ್ಷ ಹಳೆಯದಾದ ಡೀಸೆಲ್ ವಾಹನಗಳ ಮೇಲಿನ ನಿಷೇಧವು ಈ ವಾಹನಗಳು ದೆಹಲಿ-ಎನ್ಸಿಆರ್ನಲ್ಲಿ ಸಂಚರಿಸಲು ಅನರ್ಹವಾಗಿದೆ ಏಕೆಂದರೆ ಅವುಗಳು ಹೊಸ ವಾಹನಗಳಿಗಿಂತ ಹೆಚ್ಚು ಮಾಲಿನ್ಯವನ್ನುಂಟುಮಾಡುತ್ತವೆ ಎಂದಿದೆ.

ಇದನ್ನೂ ಓದಿ: Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಮತ್ತು ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಈಗಾಗಲೇನಿ ರ್ಧಾರಿತ ವಿಷಯದ ಮೇಲೆ ಸಲ್ಲಿಕೆಯಾಗಿರುವ ಇಂತಹ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದಿದೆ.

"ನಿರ್ಧಾರಿತ ವಿಷಯದಲ್ಲಿ ಅಂತಹ ಅರ್ಜಿಗಳನ್ನು ಎಲ್ಲಾ ಸಮಯದಲ್ಲೂ ಪರಿಗಣಿಸಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ, ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ವಜಾಗೊಳಿಸಲಾಗಿದೆ" ಎಂದು ಎನ್ಜಿಟಿ ತೀರ್ಪು ಹೇಳಿದೆ.ಅರ್ಜಿದಾರರು ಶೇಕಡಾ 100 ರಷ್ಟು ಅಂಗವಿಕಲರಾಗಿದ್ದು , ಈ ಆದೇಶದಿಂದ ಅವರಿಗೆ ಸಾಕಷ್ಟು ನಷ್ಟವಾಗಲಿದೆ. ಈ  ಕಾರಣಕ್ಕಾಗಿ 10 ವರ್ಷಗಳ ಕಾಲಮಿತಿಯನ್ನು ಮೀರಿ ದೆಹಲಿ-ಎನ್ಸಿಆರ್ನಲ್ಲಿ ಡೀಸೆಲ್ ವಾಹನವನ್ನು ಬಳಸಲು ವಿನಾಯಿತಿ ನೀಡುವಂತೆ ನಿರ್ದೇಶನ ಕೋರಿ ಸರಬ್ಜಿತ್ ಎ ಸಿಂಗ್  ಎಂಬುವವರು ಅರ್ಜಿ ಸಲ್ಲಿಸಿದ್ದರು. 

ಇದನ್ನೂ ಓದಿ: Upcoming Car 400 ಕಿ.ಮೀ ಮೈಲೇಜ್, 15 ಲಕ್ಷ ರೂ, ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

ಎನ್ಜಿಟಿ ಇಂತಹ ಮನವಿಯನ್ನು ತಿರಸ್ಕರಿಸಿರುವುದು ಇದೇ ಮೊದಲಲ್ಲ. ಈ ಹಿಂದೆ, ದೆಹಲಿ-ಎನ್ಸಿಆರ್ನಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸುವ ತನ್ನ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರ ಸರ್ಕಾರದ ಮನವಿಯನ್ನು ಎನ್ಜಿಟಿ ವಜಾಗೊಳಿಸಿತ್ತು.

ಡೀಸೆಲ್ ವಾಹನಗಳು ಕಾರ್ಸಿನೋಜೆನಿಕ್ ಅನ್ನು ಹೊರಸೂಸುತ್ತದೆ. ಒಂದು ಡೀಸೆಲ್ ವಾಹನ ಬಳಕೆಯಿಂದ  24 ಪೆಟ್ರೋಲ್ ವಾಹನಗಳು ಅಥವಾ 40 CNG ವಾಹನಗಳಿಗೆ ಸಮಾನವಾದ ಮಾಲಿನ್ಯ ಉಂಟಾಗುತ್ತದೆ ಎಂಬ ಅಂಶವನ್ನು ಎನ್ಜಿಟಿ (NGT)ಗಂಭೀರವಾಗಿ ಪರಿಗಣಿಸಿದೆ. ಪರಿಸರ ಮಾಲಿನ್ಯದ ಕುರಿತ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಏಕಾಏಕಿ ಈ ಆದೇಶ ನೀಡಿದ್ದು,  ಹಠಾತ್ತನೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಸಂಚರಿಸಲು ಅನರ್ಹಗೊಳಿಸಿದೆ.

ಹಳೆಯ ಪೆಟ್ರೋಲ್ ವಾಹನಗಳ ಮೇಲೂ ನಿಷೇಧ: ಮಾಲಿನ್ಯಕಾರಕ ಹೊರಸೂಸುವಿಕೆಯ ಆಧಾರದ ಮೇಲೆ 10 ವರ್ಷ ಹಳೆಯದಾದ ಡೀಸೆಲ್ ವಾಹನಗಳ ಮೇಲೆ ಮಾತ್ರವಲ್ಲದೆ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಮೇಲೂ ನಿಷೇಧವನ್ನು ಜಾರಿಗೊಳಿಸಲಾಗಿದೆ. ಈಗ ದೆಹಲಿ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಜನರಿಗೆ ತಮ್ಮ ಐಸ್ (ICE) ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಬದಲಾಯಿಸುವ ಕುರಿತು ಉತ್ತೇಜನ ನೀಡುತ್ತಿದೆ. ಇವಿ (EV) ನೀತಿಯ ಅಡಿಯಲ್ಲಿ ದೆಹಲಿ ಸರ್ಕಾರದ ಇತ್ತೀಚಿನ ಪ್ರಕಟಣೆಯ ಪ್ರಕಾರ, ಅಂತಹ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಮರುಹೊಂದಿಸಬಹುದು ಮತ್ತು ಅವುಗಳನ್ನು ದೆಹಲಿ-ಎನ್ಸಿಆರ್ಗಳಲ್ಲಿ ಚಲಾಯಿಸಬಹುದು.

Latest Videos
Follow Us:
Download App:
  • android
  • ios