ಮುಂಬೈ(ಜ.16): ಮುಖೇಶ್ ಅಂಬಾನಿ ಹೆಸರು ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮಾತ್ರವಲ್ಲ, ಭಾರತದಲ್ಲಿ ರಾಜಕಾರಣಗಳಿ ಆರೋಪ ಪ್ರತ್ಯಾರೋಪಗಳಲ್ಲಿ ಅಂಬಾನಿ ಹೆಸರು ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಅಂಬಾನಿ, ತಮ್ಮ ಹಾಗೂ ಕುಟುಂಬದ ಭದ್ರತೆಗಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಇದೀಗ ತಮ್ಮ ಭದ್ರತೆಗೆ ಮತ್ತೆ 10 ಕೋಟಿ ರೂಪಾಯಿ ಮೌಲ್ಯದ ಮರ್ಸಿಡೀಸ್ ಬೆಂಝ್ ಕಾರುಗಳನ್ನು ಖರೀದಿಸಿದ್ದಾರೆ.

ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಮುಖೇಶ್ ಅಂಬಾನಿ ಹಾಗು ಕುಟುಂಬಕ್ಕೆ z+ ಭದ್ರತೆಯನ್ನು ಸರ್ಕಾರ ನೀಡಿದೆ. ಇದರ ಜೊತೆಗೆ ಅಂಬಾನಿ ಪ್ರೈವೇಟ್ ಸೆಕ್ಯೂರಿಟಿ ಕೂಡ ಹೊಂದಿದ್ದಾರೆ. ಇದೀಗ ಅಂಬಾನಿ ತಮ್ಮ ಭದ್ರತೆಗಾಗಿ, ಸೆಕ್ಯೂರಿಟಿ ಗಾರ್ಡ್‌ಗಳಿಗೆ 4 ಮರ್ಸಿಡೀಸ್ ಬೆಂಝ್ G63 AMG ಕಾರು ನೀಡಿದ್ದಾರೆ. ನಾಲ್ಕು ಕಾರಿನ ಬೆಲೆ 10 ಕೋಟಿ ರೂಪಾಯಿ. ನೂತನ ಸೆಕ್ಯೂರಿಟಿ ಗಾರ್ಡ್ ಕಾರುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಮರ್ಸಿಡೀಸ್ ಬೆಂಝ್ G63 AMG ಕಾರಿನ ಬೆಲೆ 2.5 ಕೋಟಿ ರೂಪಾಯಿ.  ಬೆಂಝ್ G63 AMG ಕಾರಿಗಿಂತ ಮೊದಲು ಅಂಬಾನಿ ಸೆಕ್ಯೂರಿಟಿ ಗಾರ್ಡ್ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ಯೂ ಕಾರು ಬಳಸುತ್ತಿದ್ದರು. ಈ ಕಾರಿಗೆ ಸುಮಾರು 2 ಕೋಟಿ ರೂಪಾಯಿ. 

 ಮರ್ಸಿಡೀಸ್ ಬೆಂಝ್ G63 AMG ಕಾರು 3982 cc, V8 ಬಿಟರ್ಬೋ ಎಂಜಿನ್ ಹೊಂದಿದೆ.  576 Bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.