ಭಾರತೀಯ ಕಾರುಗಳ ಸುರಕ್ಷತೆ ಪರಿಶೀಲಿಸಲಿದೆ ಭಾರತ್ ಎನ್ಕ್ಯಾಪ್: ಗಡ್ಕರಿ

ಕಾರುಗಳ ಸುರಕ್ಷತಾ ಮಾನದಂಡವನ್ನು ಪರಿಶೀಲಿಸುವ ಗ್ಲೋಬಲ್‌ ಎನ್‌ಕ್ಯಾಪ್‌ (Global NCAP) ಅನ್ನು ಭಾರತಕ್ಕೆ ತರುವ ಭಾರತ್ NCAP ಅಥವಾ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮಕ್ಕಾಗಿ ಕರಡು GSR (ಸಾಮಾನ್ಯ ಶಾಸನಬದ್ಧ ನಿಯಮಗಳು) ಅಧಿಸೂಚನೆಗೆ ಅನುಮೋದನೆ ನೀಡಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ (MoRTH) ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

MoRTH approves for the GSR draft of Bharath NCAP says Nitin Gadkari

ಕಾರುಗಳ ಸುರಕ್ಷತಾ ಮಾನದಂಡವನ್ನು ಪರಿಶೀಲಿಸುವ ಗ್ಲೋಬಲ್ ಎನ್ಕ್ಯಾಪ್ (Global NCAP) ಅನ್ನು ಭಾರತಕ್ಕೆ ತರುವ ಭಾರತ್ NCAP ಅಥವಾ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮಕ್ಕಾಗಿ ಕರಡು GSR (ಸಾಮಾನ್ಯ ಶಾಸನಬದ್ಧ ನಿಯಮಗಳು) ಅಧಿಸೂಚನೆಗೆ ಅನುಮೋದನೆ ನೀಡಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ (MoRTH) ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. 
ಪ್ರಪಂಚದಾದ್ಯಂತದ ಇತರ ಸುರಕ್ಷತಾ ವಾಚ್ಡಾಗ್ಗಳಂತೆ, ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ಗಳಲ್ಲಿನ (Crash test) ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್ಗಳನ್ನು ನೀಡುವ ಮೂಲಕ ಭಾರತದಲ್ಲಿ ಮಾರಾಟವಾಗುವ ಆಟೋಮೊಬೈಲ್‌ಗಳ ಅಪಘಾತದ ಸುರಕ್ಷತೆಯನ್ನು ಪರಿಶೀಲಿಸುತ್ತದೆ.

ಈ ಕುರಿತು ವಿವರಿಸಿರುವ ಗಡ್ಕರಿ 'ಭಾರತ್ ಎನ್‌ಸಿಎಪಿಯ ಪರೀಕ್ಷಾ ಪ್ರೋಟೋಕಾಲ್ ಅಸ್ತಿತ್ವದಲ್ಲಿರುವ ಭಾರತೀಯ ನಿಯಮಗಳಲ್ಲಿ ಅನ್ವಯವಾಗುವ ಮಾಡುವ ಜಾಗತಿಕ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್ಗಳೊಂದಿಗೆ ಹೊಂದಿಕೆಯಾಗುತ್ತದೆ, ವಾಹನ ತಯಾಋಕ ಕಂಪನಿಗಳು ತಮ್ಮ ವಾಹನಗಳನ್ನು ಭಾರತದ ಸ್ವಂತ ಆಂತರಿಕ ಪರೀಕ್ಷಾ ಸೌಲಭ್ಯಗಳಲ್ಲಿ ಪರೀಕ್ಷಿಸಲು ಇದು ಅನುವು ಮಾಡಿಕೊಡುತ್ತದೆ,'ಎಂದು ಟ್ವೀಟ್ ಮಾಡಿದ್ದಾರೆ. 

ಜೊತೆಗೆ, ಸರಣಿ ಟ್ವೀಟ್ನಲ್ಲಿ ಅವರು,  ”ಭಾರತ್ ಎನ್ಸಿಎಪಿ (ಹೊಸ ಕಾರ್ ಪರಿಶೀಲನಾ ಕಾರ್ಯಕ್ರಮ)  ಅನ್ನು ಪರಿಚಯಿಸಲು ನಾನು ಈಗ ಕರಡು ಜಿಎಸ್ಆರ್ ಅಧಿಸೂಚನೆಯನ್ನು ಅನುಮೋದಿಸಿದ್ದೇನೆ, ಇದರಲ್ಲಿ ಭಾರತದಲ್ಲಿನ ವಾಹನಗಳಿಗೆ ಕ್ರ್ಯಾಶ್ ಟೆಸ್ಟ್ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್ಗಳನ್ನು ನೀಡಲಾಗುತ್ತದೆ” ಎಂದು ಘೋಷಿಸಿದ್ದಾರೆ. 
'ಕ್ರ್ಯಾಶ್ ಟೆಸ್ಟ್‌ಗಳ ಆಧಾರದ ಮೇಲೆ ಭಾರತೀಯ ಕಾರುಗಳ ಸ್ಟಾರ್ ರೇಟಿಂಗ್ ಕಾರುಗಳಲ್ಲಿ ರಚನಾತ್ಮಕ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾತ್ರವಲ್ಲದೆ ಭಾರತೀಯ ಆಟೋಮೊಬೈಲ್‌ಗಳ (Indian Automobile) ರಫ್ತು ಯೋಗ್ಯತೆಯನ್ನು ಹೆಚ್ಚಿಸಲು ಅತ್ಯಂತ ನಿರ್ಣಾಯಕವಾಗಿದೆ,' ಎಂದು ಅವರು ಹೇಳಿದ್ದಾರೆ.

ಮ್ಯಾಥ್ಸ್ ಟೀಚರ್ ನಿರ್ಮಿಸಿದ ಸೋಲಾರ್ ಕಾರಿದು

ಹೊಸ ಭಾರತ್ ಎನ್ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ. ಇದು ಭಾರತದ ಕಾರು ಖರೀದಿದಾರರಿಗೆ ಭಾರತದಲ್ಲಿಯೇ ಪರಿಶೀಲಿಸಲ್ಪಟ್ಟ ಕಾರುಗಳ ಸ್ಟಾರ್ ರೇಟಿಂಗ್ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಸುರಕ್ಷಿತ ವಾಹನಗಳನ್ನು ನಿರ್ಮಿಸಲು ಇದು ಭಾರತದಲ್ಲಿ OEM ಗಳ (ಮೂಲ ಸಲಕರಣೆ ತಯಾರಕ) ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. 

ಈ ಕುರಿತು ವಿವರಿಸಿರುವ ನಿತಿನ್ ಗಡ್ಕರಿ, 'ಭಾರತವನ್ನು ವಿಶ್ವದ ನಂಬರ್ 1 ಆಟೋಮೊಬೈಲ್ ಹಬ್ ಮಾಡುವ ಧ್ಯೇಯದೊಂದಿಗೆ ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತ್ ಎನ್ಸಿಎಪಿ ನಿರ್ಣಾಯಕ ಸಾಧನವಾಗಿದೆ. ಇಲ್ಲಿಯವರೆಗೆ, ಗ್ಲೋಬಲ್ ಎನ್ಸಿಎಪಿ ತನ್ನ "ಸೇಫರ್ ಕಾರ್ಸ್ ಫಾರ್ ಇಂಡಿಯಾ (Safers cars for India) ಉಪಕ್ರಮದ ಅಡಿಯಲ್ಲಿ ಮೇಡ್-ಇನ್-ಇಂಡಿಯಾ ಕಾರುಗಳನ್ನು ಪರೀಕ್ಷಿಸುತ್ತಿದೆ, ಇದು ವಾಹನಗಳ ಅಪಘಾತ ತಡೆಯುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತಿದೆ. ಮಾರುತಿ S-ಪ್ರೆಸ್ಸೊ (S-presso), ಸ್ವಿಫ್ಟ್ (Swift) ಅಥವಾ ಹ್ಯುಂಡೈ ಗ್ರಾಂಡ್ i10 (Hyundai Grand i10) ನಿಯೋಸ್‌ನಂಥ ಕಡಿಮೆ-ಸುರಕ್ಷತೆಯ ದರದ ಕಾರುಗಳು 0 ರಿಂದ 2 ಸ್ಟಾರ್ಸ್ ನಡುವೆ ರೇಟಿಂಗ್ ಪಡೆದಿದ್ದರೂ, XUV300, ಟಾಟಾ ನೆಕ್ಸನ್, ಪಂಚ್ ಮತ್ತು ಆಲ್ಟ್ರೋಜ್ ಮಹೀಂದ್ರಾ XUV700 ನಂತಹ ಎಸ್ಯುವಿಗಳು 5-ಸ್ಟಾರ್  ರೇಟಿಂಗ್ ಪಡೆದುಕೊಂಡಿವೆ. 

ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ ದಂಡ ತೆರಬೇಕಿನ್ನು

ಸದ್ಯಕ್ಕೆ, ಭಾರತ್ ಎನ್ಸಿಎಪಿ ಯಾವಾಗ ಕಾಲಿಡುತ್ತದೆ ಅಥವಾ ವಾಹನಗಳು ಎಲ್ಲಿ ಕ್ರ್ಯಾಶ್ ಪರೀಕ್ಷೆಗೆ ಒಳಗಾಗುತ್ತವೆ ಎಂಬ ಟೈಮ್‌ಲೈನ್ ಅನ್ನು ಕೇಂದ್ರ ಸಚಿವರು ಬಹಿರಂಗಪಡಿಸಿಲ್ಲ. ಅದೇನೇ ಇದ್ದರೂ, ಇದು ಖಂಡಿತವಾಗಿಯೂ ಭಾರತ ಸರ್ಕಾರದ ಒಂದು ದೊಡ್ಡ ಮತ್ತು ಹೆಚ್ಚು ಅಗತ್ಯವಿರುವ ಸುರಕ್ಷತಾ ಉಪಕ್ರಮವಾಗಿದೆ.

Latest Videos
Follow Us:
Download App:
  • android
  • ios