ಬರುತ್ತಿದೆ ಬೆಸ್ಟ್ ಪವರ್ – ಪರ್‌ಫಾರ್ಮೆನ್ಸ್ ಬೆಂಜ್‌ ಎಎಂಜಿ ಜಿಎಲ್ ಸಿ 43 4ಮ್ಯಾಟಿಕ್ ಕೂಪ್

ಹಬ್ಬಗಳ ಹಿನ್ನೆಲೆಯಲ್ಲಿ ಮರ್ಸಿಡೀಸ್ ಬೆಂಜ್ ಈಗ ಹೊಸ ಕಾರೊಂದನ್ನು ಅನಾವರಣಗೊಳಿಸುತ್ತಿದೆ. ಮರ್ಸಿಡೀಸ್ ಬೆಂಜ್ AMG GLC 43 4Matic Coupe ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಐಷಾರಾಮಿ ಆಟೋಮೇಟಿವ್ ವಿನ್ಯಾಸವನ್ನು ಹೊಂದಿದ್ದು, ಚಾಲನೆಗೆ ಅದ್ಭುತ ಖುಷಿಯನ್ನು ಕೊಡಲಿದೆ. ಹಾಗಾದರೆ ಇದು ಏನು..? ಎತ್ತ..? ಎಂಬ ಬಗ್ಗೆ ನೋಡೋಣ…

Mercedes-Benz unveils new AMG GLC 43 4Matic Coupe

ಸಾಲು ಹಬ್ಬಗಳ ಸಂದರ್ಭದಲ್ಲಿಯೇ ಮರ್ಸಿಡೀಸ್ ಬೆಂಜ್ ಈಗ ಹೊಸ ಕಾರೊಂದನ್ನು ಅನಾವರಣಗೊಳಿಸಲು ಮುಂದಾಗಿದೆ. ಅದರ ಹೊಸ ಆವೃತ್ತಿಯಾದ ಮರ್ಸಿಡೀಸ್ ಬೆಂಜ್ AMG GLC 43 4Matic Coupe ಅನ್ನು ಹಬ್ಬದ ಭಾಗವಾಗಿ ಪರಿಚಯಿಸುತ್ತಿದೆ. ಈ ಕಾರನ್ನು ಐಷಾರಾಮಿ ಆಟೋಮೇಟಿವ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಚಲಾಯಿಸಿದರೆ ಅದ್ಭುತ ಖುಷಿಯನ್ನು ಕೊಡುತ್ತದೆ. ಜೊತೆಗೆ ಇದರ ದೈನಂದಿನ ಕಾರ್ಯಕ್ಷಮತೆ ಸಹ ಉತ್ಕೃಷ್ಟತೆಯನ್ನು ಹೊಂದಿದ್ದು, ಸ್ಪೋರ್ಟಿನೆಸ್ ಹಾಗೂ ಅಡ್ವೆಂಚರ್ ಅನ್ನು ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಕಾರು ಇದಾಗಿದೆ. ನೂತನವಾಗಿ ಅನಾವರಣಗೊಳ್ಳುತ್ತಿರುವ ಈ AMG GLC 43 4Matic Coupe  ವು ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಮೊದಲ AMG ಕಾರು ಎಂಬ ಖ್ಯಾತಿಗೆ ಒಳಪಟ್ಟಿದೆ.

ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ
ಈ ಕಾರಿನ ಕಾರ್ಯಕ್ಷಮತೆ ಬಗ್ಗೆ ಹೇಳಬೇಕೆಂದರೆ ಇದಕ್ಕೆ ಯಾವುದೂ ಸರಿಸಾಟಿ ಇಲ್ಲವೆಂದೇ ಬಣ್ಣಿಸಬಹುದು. ಇದರಲ್ಲಿ ವಿಭಿನ್ನವಾದ ಚಾಲನಾ ವಿಧಾನಗಳನ್ನು ಅಳವಡಿಸಲಾಗಿದ್ದು, ಚಾಲನೆಗೆ ಬಹಳ ಆರಾಮದಾಯಕವಾಗುತ್ತದೆ. ಇದು ಅತ್ಯುತ್ತಮ ಅಂತರ್ನಿರ್ಮಿತ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ +, ಇಂಡಿವಿಜುವಲ್ ಹಾಗೂ ಸ್ಲೀಪರಿ ವಿಧಾನಗಳ ಆಯ್ಕೆಯನ್ನು ಚಾಲನೆ ವೇಳೆ ನೀಡಲಾಗಿದ್ದು, ಚಲಾಯಿಸುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾಗಿದೆ. ಈ ಕಾರು ಬೃಹತ್ 3.0 ಎಲ್ ವಿ 6 ಇಂಜಿನ್ ಸಹಿತ 2 ಟರ್ಬೋಚಾರ್ಜರ್ ಗಳನ್ನು ಹೊಂದಿದ್ದು, ಇದನ್ನು 287 ಕಿ.ವಾ. ಅಂದರೆ 390 ಎಚ್ ಪಿ ಮತ್ತು 250 ಎನ್ ಎಂ ಎಂದು ರೇಟ್ ಮಾಡಲಾಗಿದೆ. ಈ ಕಾರಿನ ಕಾರ್ಯಕ್ಷಮತೆಯ ಫಲಿತಾಂಶವು ವಿಶೇಷವಾಗಿದೆ. ಅದರಲ್ಲೂ ಎಮೋಟಿವ್ 43 ಶೈಲಿಯ ಜೊತೆಗೆ ಹೈಯರ್ ಚಾರ್ಜ್ ಪ್ರೆಶರ್ ಹೊಂದಿರುವುದು ಹೆಚ್ಚುವರಿ ಸಾಮರ್ಥ್ಯವನ್ನು ನೀಡಿದಂತಾಗಿದೆ. ಇದರ ವೇಗದ ಸಾಮರ್ಥ್ಯವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದ್ದು, 0 ಯಿಂದ 100 ಕಿ.ಮೀ. ವೇಗವನ್ನು ಕೇವಲ 4.9 ಸೆಕೆಂಡ್ ಅವಧಿಯೊಳಗೆ ಪಿಕಪ್ ಪಡೆಯಬಹುದಾಗಿದೆ. ಇದರ ವೇಗದ ಮಿತಿ 250 ಕಿ.ಮೀ. ಆಗಿದೆ. 
ವಿಡಿಯೋವನ್ನು ಇಲ್ಲಿ ನೋಡಿ:

ಸೊಗಸಾದ ಬಾಹ್ಯ ವಿನ್ಯಾಸ 
ಈ ಕಾರಿನ ಬಾಹ್ಯ ವಿನ್ಯಾಸವನ್ನು ಅತ್ಯಂತ ಸೊಗಸಾಗಿ ರಚಿಸಲಾಗಿದೆ. ಎಎಂಜಿಯನ್ನು ರೇಸ್‌ಟ್ರ್ಯಾಕ್‌ಗಾಗಿಯೇ ವಿನ್ಯಾಸಗೊಳಿಸಲಾಗಿದೆ. Mercedes-Benz AMG GLC 43 ವು ರೇಸ್‌ಟ್ರ್ಯಾಕ್‌ನಿಂದಲೇ ಸ್ಫೂರ್ತಿ ಪಡೆದು ವಿನ್ಯಾಸಗೊಂಡಿದೆ. ಇದರ ವಿನ್ಯಾಸ ಮತ್ತೊಂದು ವಿಶೇಷವೆಂದರೆ A ಆಕಾರ ಬರುವುದಲ್ಲದೆ, ಎಎಂಜಿಯ ನಿರ್ದಿಷ್ಟ ರೇಡಿಯೇಟರ್ ಗ್ರಿಲ್‌ನಿಂದ ರೂಪುಗೊಂಡಿದೆ. ಮುಂಭಾಗದ ಏಪ್ರಾನ್‌ನಲ್ಲಿ ಗಾಳಿ ಪ್ರವೇಶಕ್ಕೆ ಅವಕಾಶವನ್ನು ಮಾಡಿಕೊಡಲಾಗಿದ್ದು, ಇದು ಅವಳಿ ಕ್ರೋಮ್ ಪ್ಲೇಟೆಡ್ ಟೈಲ್‌ಪೈಪ್ ಟ್ರಿಮ್ ಎಲಿಮೆಂಟ್‌ನಲ್ಲಿ ಕೊನೆಗೊಳ್ಳುವ ಮಾದರಿಯಲ್ಲಿ ಎಎಂಜಿಯ ಎಕ್ಸಾಸ್ಟ್ ಸಿಸ್ಟಂ ಅನ್ನು ರಚಿಸಲಾಗಿದೆ. 

ಎಎಂಜಿ ನೈಟ್ ಪ್ಯಾಕೇಜ್
ನೂತನ ಎಎಂಜಿ ಆವೃತ್ತಿಯಲ್ಲಿ ರಾತ್ರಿ ವೇಳೆಯೂ ಚಾಲನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಅಂದರೆ, ಎಲ್ಲ ಹೊಸ ಮರ್ಸಿಡೀಸ್ – ಎಎಂಜಿ ಜಿಎಲ್ ಸಿ 43 4ಮ್ಯಾಟಿಕ್ ಕೂಪ್ ಕಾರನ್ನು ಸ್ಪೋರ್ಟ್ಸ್ ಹೈ ಗ್ಲೋಸ್ ಬ್ಲಾಕ್ (ಕಪ್ಪು ಬಣ್ಣದ ಹೊಳಪು) ಅಂಶಗಳಿಂದ ರೂಪಿಸಲಾಗಿದೆ. ಹೈ ಗ್ಲೋಸ್ ಬ್ಲಾಕ್ ಫ್ರಂಟ್ ಸ್ಪ್ಲಿಟರ್ ಅನ್ನು ಮುಂಭಾಗದಲ್ಲಿರುವ ಏಪ್ರಾನ್‌ನಲ್ಲಿರುವಂತೆ ಹಾಗೂ ಹಿಂಭಾಗದ ಏಪ್ರಾನ್‌ನಲ್ಲಿ ಹೈ ಗ್ಲೋಸ್ ಬ್ಲಾಕ್ ಟ್ರಿಮ್ ಜೊತೆಗೆ ಡಿಫ್ಯೂಸರ್ ಬೋರ್ಡ್ ಅನ್ನು ಸಹ ವಿನ್ಯಾಸಗೊಳಿಸಲಾಗಿದೆ.

ಐಷಾರಾಮಿ ಇಂಟೀರಿಯರ್
ಈ ಕಾರಿನ ಒಳಾಂಗಣ ವಿನ್ಯಾಸವನ್ನೂ ಸಹ ಐಷಾರಾಮಿಯಾಗಿ ರಚಿಸಲಾಗಿದೆ. ಎಲ್ಲ ಹೊಸ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಎಎಂಜಿ ನಿರ್ದಿಷ್ಟ ಸ್ಟಿಚಿಂಗ್‌ವುಳ್ಳ ಸ್ಪೋರ್ಟ್ಸ್ ಸೀಟುಗಳಿವೆ. ಮತ್ತಿದರ ಜೊತೆಗೆ ಸ್ಟೀರಿಂಗ್ ವೀಲ್‌ಗೆ ಬ್ಲಾಕ್ ನಪ್ಪಾ ಲೆದರ್ ಅನ್ನು ಬಳಸಲಾಗಿದ್ದು, ಉತ್ತಮ ಅನುಭವವನ್ನು ಕೊಡುತ್ತದೆ. ಇಲ್ಲಿ ಒಮ್ಮೆ ನೀವು ಆಸೀನರಾದರೆ ಆರಾಮದಾಯಕ ಫೀಲ್ ಅನ್ನು ಕೊಡಲಿದೆ. ಅಲ್ಲದೆ, MBUX ಮಲ್ಟಿ ಮೀಡಿಯಾ ಸಿಸ್ಟಂ, ನೇವಿಗೇಶನ್ ಮತ್ತು ಕನೆಕ್ಟಿವಿಟಿಗೋಸ್ಕರ ಮರ್ಸಿಡಿಸ್ ಮಿ ಕನೆಕ್ಟ್ ಆ್ಯಪ್ ಮತ್ತು ಅದರ ಆಪರೇಟಿಂಗ್ ಕಾನ್ಸೆಪ್ಟ್ ಅನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. 

Mercedes-Benz unveils new AMG GLC 43 4Matic Coupe

ತಂತ್ರಜ್ಞಾನದಲ್ಲಿ ಮುಂಚೂಣಿ
ಮರ್ಸಿಡೀಸ್ ಮಿ ಕನೆಕ್ಟ್ ಆ್ಯಪ್ ಮೂಲಕ ನೀವು ಜಗತ್ತಿನ ಯಾವುದೇ ಮೂಲೆಯಿಂದಲೂ ಸಹ ವಾಹನದಲ್ಲಿರುವ ಯಾವುದೇ ವ್ಯಕ್ತಿಯ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ. ಈ ಆಪ್‌ನಲ್ಲಿ ಒಂದು ಬಟನ್ ಎಷ್ಟೆಲ್ಲ ಕಾರ್ಯನಿರ್ವಹಣೆ ಮಾಡುತ್ತದೆ ಎಂದರೆ, ಅನೇಕ ಅನುಕೂಲವನ್ನು ಮಾಡಿಕೊಡುತ್ತದೆ. ಅಲ್ಲದೆ, ನಮ್ಮ ಮೊಬೈಲ್‌ನಲ್ಲಿರುವ ಆ್ಯಪ್ ಮೂಲಕವೇ ಕಾರನ್ನು ಸ್ಟಾಪ್ (ನಿಲ್ಲಿಸುವ) ಮಾಡುವ ಸೌಲಭ್ಯವನ್ನು ನೀಡಲಾಗಿದ್ದು, ಕಾರಿನ ಸುರಕ್ಷತೆಯ ದೃಷ್ಟಿಯಿಂದ ಈ ಫೀಚರ್ ಅನ್ನು ಅಳವಡಿಸಲಾಗಿದೆ. ಒಂದು ನೀವು ಯಾವುದಾದರೂ ಒಂದು ಪ್ರದೇಶದಲ್ಲಿ ತೊಂದರೆಗೊಳಗಾಗಿ ಸಿಲುಕಿಕೊಂಡರೆ ಮೀ ಕನೆಕ್ಟ್ ಆ್ಯಪ್ ನೇವಿಗೇಶನ್‌ಗೆ ಸಹಾಯ ಮಾಡುತ್ತದೆ.

Mercedes-Benz unveils new AMG GLC 43 4Matic Coupe


ನೀವು ಕಾರು ಖರೀದಿಸಬೇಕು ಎಂಬ ಹಂಬಲ ಹೊಂದಿದ್ದರೆ ಅದಕ್ಕೆ ಎಎಂಜಿ ಮಾದರಿಯ ಕಾರು ಖರೀದಿಗೆ ಉತ್ತಮವಾಗಿದೆ. ಇಂದೇ ನೀವು ಟೆಸ್ಟ್ ಡ್ರೈವ್ ಮಾಡಿ ನೋಡಿ, ಎಲ್ಲ ಮರ್ಸಿಡಿಸ್ ಬೆಂಜ್‌ನ ಎಎಂಜಿ ಜಿಎಲ್‌ಸಿ 43 4ಮ್ಯಾಟಿಕ್ ಕೂಪ್‌ನ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೀರಿ. 

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

Latest Videos
Follow Us:
Download App:
  • android
  • ios