Asianet Suvarna News Asianet Suvarna News

3.5 ಲಕ್ಷ ರೂಪಾಯಿಗೆ ನೂತನ ಹಾಗೂ ಅತ್ಯಾಕರ್ಷಕ ಅಲ್ಟೋ ಕಾರು ಆ.18ಕ್ಕೆ ಬಿಡುಗಡೆ!

ಮಾರುತಿ ಸುಜುಕಿ ಸಣ್ಣ ಕಾರು ಸೆಗ್ಮೆಂಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿದೆ. ತನ್ನ ಮಾರುತಿ ಅಲ್ಟೋ ಕೆ10 ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಮತ್ತೊಂದು ವಿಶೇಷತೆ ಅಂದರೆ 3.5 ಲಕ್ಷ ರೂಪಾಯಿಗೆ ಈ ಕಾರು ಲಭ್ಯವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Maruti Suzuki launch alto k10 in august 18th expected price range Rs 3 50 lakh ckm
Author
Bengaluru, First Published Aug 16, 2022, 4:42 PM IST

ನವದೆಹಲಿ(ಆ.16):  ಭಾರತದಲ್ಲಿ ಕೈಗೆಟುಕುವ ದರದಲ್ಲಿ, ಕಡಿಮೆ ನಿರ್ವಹಣೆ ವೆಚ್ಚದ ಕಾರುಗಳನ್ನ ನೀಡುತ್ತಿರುವ ಹೆಗ್ಗಳಿಕಗೆ ಮಾರುತಿ ಸುಜುಕಿ ಪಾತ್ರವಾಗಿದೆ. ಇದೀಗ ಮಾರುತಿ ತನ್ನ ಅಲ್ಟೋ ಕೆ10 ಕಾರನ್ನು ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಆಗಸ್ಟ್ 18ಕ್ಕೆ ನೂತನ ಅಲ್ಟೋ ಕೆ10 ಕಾರು ಬಿಡುಗಡೆಯಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕಾರು ಕೇವಲ 3.5 ಲಕ್ಷ ರೂಪಾಯಿ ಲಭ್ಯವಾಗಲಿದೆ. ಮೂಲಗಳ ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟೋ ಕೆ10 ಕಾರಿನ ಬೆಲೆಗಿಂತ ಕೊಂಚ ಏರಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಅಲ್ಟೋ ಕೆ10 ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಅಲ್ಟೋ ಕೆ10 ಕಾರಿನ ಬುಕಿಂಗ್ ಆರಂಭಗೊಂಡಿದೆ. 11,000 ರೂಪಾಯಿಗೆ ನೂತನ ಕಾರನ್ನು ಬುಕ್ ಮಾಡಿಕೊಳ್ಳಬಹುದು. 

ಮಾರುತಿ ಅಲ್ಟೋ ಕೆ10 ಕಾರು  LXi, LXi (O), VXi, VXi (O), VXi+, ಹಾಗೂ VXi+ (O)ವೇರಿಯೆಂಟ್ ಲಭ್ಯವಿದೆ. 7 ವೇರಿಯೆಂಟ್ ಜೊತಗೆ 6 ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ. ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. 1.0 ಲೀಟರ್ ಎಂಜಿನ್ ಹೊಂದಿದ್ದು, 66bhp ಪವರ್ ಹಾಗೂ  89Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಯೂ ಲಭ್ಯವಿದೆ. 

31 ಕಿ.ಮೀ ಮೈಲೇಜ್, ಕೈಗೆಟುಕುವದ ದರದ ಮಾರುತಿ ಸುಜುಕಿ ಸ್ವಿಫ್ಟ್ CNG ಕಾರು ಬಿಡುಗಡೆ!

ಮುಂಭಾಗದ ಗ್ರಿಲ್ ಬದಲಾಯಿಸಿಲಾಗಿದೆ. ಅಲ್ಟೋ ಕೆ10 ವಿನ್ಯಾಸ ಮತ್ತಷ್ಟು ಆಕರ್ಷಕವಾಗಿದೆ. ಸೆಲೆರಿಯೋ ಕಾರಿನ ಬಹುತೇಕ ಫೀಚರ್ಸ್‌ಗಳು ನೂತನ ಅಲ್ಟೋ ಕೆ10 ಕಾರಿನಲ್ಲಿದೆ. ಬ್ಲಾಕ್ ಥೀಮ್ ಇಂಟಿರೀಯರ್, ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಟೀರಿಂಗ್ ವೀಲ್ಸ್‌‌ನಲ್ಲಿ ಬದಲಾವಣೆ, ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್ಸ್ಈ ಕಾರಿನಲ್ಲಿದೆ.

ಮಾರುತಿ ಸುಜುಕಿ ನ್ಯೂ ವ್ಯಾಗನ್‌ ಆರ್‌ ಕಾರಿನ ಬೇಡಿಕೆಯೂ ಹೆಚ್ಚಾಗಿದೆ. ಈಗಾಗಲೇ ವ್ಯಾಗನರ್ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಇದೀಗ ಮತ್ತಷ್ಟು ಹೊಸತನದೊಂದಿಗೆ ವ್ಯಾಗನರ್ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.  ಒಂದು ಕಾಲದಲ್ಲಿ ಭಾರತದ ರಸ್ತೆಯನ್ನು ಆಳುತ್ತಿದ್ದ ಮಾರುತಿ ಸುಜುಕಿ ವ್ಯಾಗನ್‌ ಆರ್‌ ಮತ್ತೆ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಸಿಸಿ ಭಾರಿ ಸಂಚಲನ ಸೃಷ್ಟಿಸಿದೆ. .  ಇತ್ತೀಚೆಗೆ ಹ್ಯುಂಡೈ ಕಂಪನಿ ತನ್ನ ಯಶಸ್ವೀ ಕಾರಾಗಿದ್ದ ಸ್ಯಾಂಟ್ರೋ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿತ್ತು. ಮಾರುತಿ ಕಂಪನಿ ಕೂಡ ತನ್ನ ಯಶಸ್ವೀ ಕಾರು ವ್ಯಾಗನ್‌ ಆರ್‌ ಅನ್ನು ಹೊಸ ರೂಪದಲ್ಲಿ ಆಕರ್ಷಕ ರೀತಿಯಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಇದರಲ್ಲಿ 1.0 ಲೀಟರ್‌ ಇಂಜಿನ್‌, 5 ಬಗೆಯ ಮ್ಯಾನುಯಲ್‌ ಸ್ಪೀಡ್‌ ಗೇರ್‌ ಹೊಂದಿದೆ.

ಹೊಚ್ಚ ಹೊಸ ಮಾರುತಿ ಅಲ್ಟೋ ಕೆ10 ಆಗಸ್ಟ್ 18ಕ್ಕೆ ಬಿಡುಗಡೆ, ಬುಕಿಂಗ್ ಬೆಲೆ 11 ಸಾವಿರ ರೂ ಮಾತ್ರ!

Follow Us:
Download App:
  • android
  • ios