ಭಾರತದಲ್ಲಿ ಉತ್ಪಾದಿಸಿದ 20 ಲಕ್ಷ ಕಾರನ್ನು ವಿದೇಶಕ್ಕೆ ರಫ್ತು ಮಾಡಿದ ಮಾರುತಿ!
ಮಾರುತಿ ಎಂದರೆ ಕಾರು ಎನ್ನುವಷ್ಟರ ಮಟ್ಟಿಗೆ ಜನಪ್ರಿಯ ಬ್ರಾಂಡ್ ಆಗಿರುವ ಮಾರುತಿ ಸುಜುಕಿ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಭಾರತೀಯ ಪ್ಲಾಂಟ್‌ಗಳಲ್ಲಿ ಉತ್ಪಾದಿಸಿ 20 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುವ ಮೂಲಕ ಹೊಸ ಸಾಹಸವನ್ನು ಮೆರೆದಿದೆ. ಕಂಪನಿಯು ಭಾರತದಿಂದ 1986ರಲ್ಲಿ ಮೊದಲ ಬಾರಿಗೆ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಲಾರಂಭಿಸಿತು.
ಭಾರತದ ಅತ್ಯಂತ ಜನಪ್ರಿಯ ಕಾರ್ ಬ್ರಾಂಡ್ ಯಾವುದು ಎಂದರೆ ಯಾರಾದರೂ ಒಂದೂ ಕ್ಷಣ ಆಲೋಚಿಸದೇ ತಟ್ಟನೇ ಹೇಳುವುದು ಮಾರುತಿ ಸುಜುಕಿ ಎಂದು. ಭಾರತೀಯ ಗ್ರಾಹಕರ ಅಗತ್ಯಗಳನ್ನು ತನ್ನ ಸಮೀಪದ ಸ್ಪರ್ಧಿಗಳಿಗಿಂತಲೂ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಮಾರುತಿ ಸುಜುಕಿ ತನ್ನ ವಾಹನಗಳ ಮಾರಾಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಇದರ ಮಧ್ಯೆಯೇ ಇನ್ನೂ ಒಂದು ವಿಕ್ರಮವನ್ನು ಕಂಪನಿ ಸಾಧಿಸಿದೆ. ಏನೆಂದರೆ- ಮಾರುತಿ ಸುಜುಕಿ ಭಾರತದಿಂದಲೇ ವಿದೇಶಿ ಮಾರುಕಟ್ಟೆಗಳಿಗೆ ಸುಮಾರು 20 ಲಕ್ಷ ಕಾರುಗಳನ್ನು ರಫ್ತು ಮಾಡಿದೆ.
ಓಲಾದಿಂದ ಜಗತ್ತಿನ ಅತಿದೊಡ್ಡ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಫ್ಯಾಕ್ಟರಿ!
ಇಂಥದೊಂದು ಮೈಲುಗಲ್ಲು ಸಾಧಿಸಲು ಮಾರುತಿ ಸುಜುಕಿ ಕಂಪನಿಗೆ 34 ವರ್ಷಗಳನ್ನು ತೆಗೆದುಕೊಂಡಿದೆ. ಭಾರತದಲ್ಲಿ ತಯಾರಿಸಿದ ಕಾರುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುವ ಕಾಯಕವನ್ನು ಮಾರುತಿ ಸುಜುಕಿ 1986ರಿಂದಲೇ ಆರಂಭಿಸಿದೆ. ಇಲ್ಲಿಂದ ಮೊದಲ ಬಾರಿಗೆ ಹಂಗ್ರಿ ದೇಶಕ್ಕೆ ತನ್ನ ಕಾರುಗಳನ್ನು ರಫ್ತು ಮಾಡಿತ್ತು ಕಂಪನಿ. ಅಲ್ಲಿಂದ ಇಲ್ಲಿಯವರೆಗಿನ ದೀರ್ಘ ಪಯಣದಲ್ಲಿ 20 ಲಕ್ಷ ಯುನಿಟ್‌ಗಳನ್ನು ರಫ್ತು ಮಾಡುವ ಮೂಲಕ ಹೊಸ ಸಾಹಸ ಮೆರೆದಿದೆ.
ಗುಜರಾತ್‌ನ ಮುಂದ್ರಾ ಪೋರ್ಟ್ ಮೂಲಕ ಮಾರುತಿ ಸುಜುಕಿ ಇಂಡಿಯಾ ತನ್ನ ಎಸ್ ಪ್ರೆಸ್ಸೋ, ಸ್ವಿಫ್ಟ್ ಮತ್ತು ವಿಟಾರಾ ಬ್ರೆಜಾ ಮಾಡೆಲ್‌ಗಳ ಕಾರುಗಳನ್ನು ದಕ್ಷಿಣ ಆಫ್ರಿಕಾ ಮಾರುಕಟ್ಟೆಗೆ ರವಾನೆ ಮಾಡುವ ಮೂಲಕ 20 ಲಕ್ಷ ಕಾರುಗಳ ರಫ್ತು ಮೈಲುಗಲ್ಲನ್ನು ನೆಟ್ಟಿತು. ಇದೇ ವೇಳೆ, 10 ಲಕ್ಷದ ಮೈಲುಗಲ್ಲು ಸ್ಥಾಪಿಸಲು ಕಂಪನಿ 26 ವರ್ಷಗಳ ಬೇಕಾಯಿತು. ಆದರೆ, ಎರಡನೇ 10 ಲಕ್ಷದ ಮೈಲುಗಳನ್ನು ಕಂಪನಿ ಬಹಳ ಕಡಿಮೆ ಅವಧಿಯಲ್ಲೇ ಸಾಧಿಸಿದೆ.
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿರುವ ಮಾರುತಿ ಸುಜುಕಿ, ಇಲ್ಲಿಂದ ಹೊರದೇಶಗಳಿಗೆ ಹೆಚ್ಚು ರಫ್ತು ಮಾಡಿದ್ದು ಯುರೋಪಿಯನ್ ಮಾರುಕಟ್ಟೆಗೆ. ಉದಯನ್ಮೋಖ ಮಾರುಕಟ್ಟೆಗಳೆನಿಸಿದ ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಮತ್ತು ಏಷ್ಯನ್ ಪ್ರದೇಶದ ಮಾರುಕಟ್ಟೆಗಳ ಮೇಲೆ 2012ರಿಂದಲೇ ಮಾರುತಿ ಸುಜುಕಿ ಹೆಚ್ಚು ಗಮನ ಕೇಂದ್ರೀಕರಿಸಲು ಆರಂಭಿಸಿತು ಮತ್ತು ಅದರ ಭರ್ಜರಿ ಫಲಿತಾಂಶವನ್ನು ಕಂಪನಿ ಇದೀಗ ಪಡೆದುಕೊಳ್ಳುತ್ತಿದೆ.
ಹೊಸ ಅವತಾರದಲ್ಲಿ ಫೇಸ್‌ಲಿಫ್ಟ್ ಹೊಸ ಸ್ವಿಫ್ಟ್ ಕಾರು ಬಿಡುಗಡೆ
ಭಾರತವು ಜಾಗತಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುವ ಮುಂಚೆಯಿಂದಲೂ ಅಂದರೆ 34 ವರ್ಷ ಹಿಂದಿನಿಂದಲೂ ಮಾರುತಿ ಸುಜುಕಿ ತನ್ನ ಕಾರುಗಳನ್ನು ರಫ್ತು ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಗಳಿಗೆ ತೆರೆದುಕೊಂಡ ಪರಿಣಾಮ ಕಂಪನಿಯು ತನ್ನ ಗುಣಮಟ್ಟ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಸಾಧ್ಯವಾಯಿತು ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಆಯುಕಾವಾ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀಲಿ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ರಾಷ್ಟ್ರಗಳಿಗೆ ಭಾರತದಲ್ಲಿ ತಯಾರಾದ ಕಾರುಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಟೋ, ಬಲೆನೋ, ಡಿಸೈರ್ ಮತ್ತು ಸ್ವಿಫ್ಟ್ ಕಾರುಗಳು ಚೀಲಿ ಮಾರುಕಟ್ಟೆಯಲ್ಲೂ ಭಾರೀ ಜನಪ್ರಿಯ ಆಯ್ಕೆಗಳಾಗಿ ಹೊರಹೊಮ್ಮಿವೆ ಎಂಬುದು ಮಾರುತಿ ಸುಜುಕಿ ಕಂಪನಿಯ ಅಭಿಪ್ರಾಯವಾಗಿದೆ. ಈ ಮಾಡೆಲ್‌ಗಳು ಭಾರತದಲ್ಲಿ ಜನಪ್ರಿಯವಾಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಮಾರುತಿ ಸುಜುಕಿ ತನ್ನ ರಫ್ತು ವಹಿವಾಟನ್ನು ಇನ್ನಷ್ಟು ಶಕ್ತಿಯುತವಾಗಿ ಮುಂದುವರಿಸಲು ಯೋಜನೆ ರೂಪಿಸಿದೆ. ಸದ್ಯ 150 ವೆರಿಯೆಂಟ್‌ಗಳ ಒಟ್ಟು 14 ಮಾಡೆಲ್ ಕಾರುಗಳನ್ನು ಸುಮಾರು 100 ದೇಶಗಳಿಗೆ ರಫ್ತು ಮಾಡುತ್ತಿದೆ. ಭಾರತದಲ್ಲಿನ ನಮ್ಮ ಪ್ಲಾಂಟ್‌ಗಳಲ್ಲಿ ತಯಾರಿಸಿದ ವಾಹನಗಳು ಗುಣಮಟ್ಟ, ಸುರಕ್ಷತೆ, ವಿನ್ಯಾಸ ಮತ್ತು ತಂತ್ರಜ್ಞಾನದ ಜಾಗತಿಕ ಮಾನದಂಡಗಳಿಂದಾಗಿ ಹೆಚ್ಚಿನ ಜನಪ್ರಿಯ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಆಯುಕಾವಾ ತಿಳಿಸಿದ್ದಾರೆ. ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಜಿಮ್ಮಿ ಎಸ್‌ಯುವಿಯನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚು ಜನಪ್ರಿಯಗೊಳಿಸುವ ಗಮನವನ್ನು ಕಂಪನಿ ಹೊಂದಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!