Asianet Suvarna News Asianet Suvarna News

ಮಾರುತಿ ಬ್ರೀಜಾ, ವಿಟಾರಾ ಕಾರುಗಳಿಗೆ ಭಾರಿ ಬೇಡಿಕೆ: 2 ಲಕ್ಷಕ್ಕೂ ಮೀರಿದ ಬುಕಿಂಗ್

ಹೊಸ ಪೀಳಿಗೆಯ ಬ್ರೀಝಾ ಮತ್ತು ಆಲ್-ನ್ಯೂ ಗ್ರ್ಯಾಂಡ್ ವಿಟಾರಾ ಜನರಿಂದ ಅಪಾರ ಪ್ರಮಾಣದ ಮೆಚ್ಚುಗೆ ಗಳಿಸಿದ್ದು, ಇದುವರೆಗೆ ದೇಶದಲ್ಲಿ ಎರಡು ವಾಹನಗಳ ಒಟ್ಟು ಬುಕಿಂಗ್‌ ಸಂಖ್ಯೆ 2 ಲಕ್ಷ ದಾಟಿದೆ

Maruti Suzuki breeza and vitara booking crosses 2 lacks
Author
First Published Nov 2, 2022, 1:27 PM IST

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಇತ್ತೀಚೆಗೆ ಬಿಡುಗಡೆಗೊಳಿಸಿದ ಹೊಸ ಪೀಳಿಗೆಯ ಬ್ರೀಝಾ (Breeza) ಮತ್ತು ಆಲ್-ನ್ಯೂ ಗ್ರ್ಯಾಂಡ್ ವಿಟಾರಾ (All-new grand Vitara) ಜನರಿಂದ ಅಪಾರ ಪ್ರಮಾಣದ ಮೆಚ್ಚುಗೆ ಗಳಿಸಿದ್ದು, ಇದುವರೆಗೆ ದೇಶದಲ್ಲಿ ಎರಡು ವಾಹನಗಳ ಒಟ್ಟು ಬುಕಿಂಗ್‌ ಸಂಖ್ಯೆ 2 ಲಕ್ಷ ದಾಟಿದೆ ಎಂದು ಇತ್ತೀಚೆಗೆ ಎಂಎಸ್ಐಎಲ್   (MSIL) ಬಹಿರಂಗಗೊಳಿಸಿದೆ.

ಹೊಸದಾಗಿ ಬಿಡುಗಡೆಯಾಗಿರುವ ಹೊಸ ಪೀಳಿಗೆಯ ಬ್ರೀಜಾ ಹೆಚ್ಚು ದೊಡ್ಡದಾಗಿದ್ದು, ಸಬ್-4 ಮೀಟರ್ ಕಾಂಪ್ಯಾಕ್ಟ್ SUV ಬಯಸುವ ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿದೆ.  ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಡೀಸೆಲ್-ಬೀಟಿಂಗ್ 28 ಕಿಮೀ  ಮೈಲೇಜ್ ನೀಡುತ್ತದೆ. ಇದು ಸೀಮಿತ ದೂರದವರೆಗೆ ಪೂರ್ಣ-ಎಲೆಕ್ಟ್ರಿಕ್ ಕಾರ್ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ.  ಈ ಎರಡೂ ಕಾರುಗಳು ಹೊಸ ವಿನ್ಯಾಸವನ್ನು ಹೊಂದಿವೆ. 
ಈ SUV ಗಳ ಬುಕಿಂಗ್‌ ಹೆಚ್ಚಳದಿಂದ ಕಂಪನಿ ಎರಡನೇ ತ್ರೈಮಾಸಿಕದಲ್ಲಿ ಭಾರಿ ಮಾರಾಟ ದಾಖಲಿಸಿದೆ. ಈಅವಧಿಯಲ್ಲಿ, ಮಾರುತಿ ಸುಜುಕಿ ಇಂಡಿಯಾ 5 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿತು. ಕಂಪನಿಯ ಫಲಿತಾಂಶವು ವರ್ಷದಿಂದ ವರ್ಷಕ್ಕೆ ಶೇ. 38 ರಷ್ಟು ಹೆಚ್ಚಳವಾಗಿದೆ. ಈ ಎಸ್‌ಯುವಿ (SUV)ಗಳ ಜೊತೆಗೆ, ಕಂಪನಿಯು ಈ ವರ್ಷ ಭಾರತದಲ್ಲಿ ಹಲವಾರು ಹೊಸ ಮಾದರಿಗಳನ್ನು ಪರಿಚಯಿಸಿದೆ. ಇದು ಹೊಸ ಮಾರುತಿ ಸುಜುಕಿ ಆಲ್ಟೊ K10, ಎರ್ಟಿಗಾ ಫೇಸ್‌ಲಿಫ್ಟ್ (Ertica facelift) ಮತ್ತು ಇತರ ಮಾದರಿಗಳ CNG ರೂಪಾಂತರಗಳು ಸಹ ಒಳಗೊಂಡಿದೆ.

ಮಾರುತಿ ಸುಜುಕಿ ಕಾರು ಸುರಕ್ಷತಾ ಫಲಿತಾಂಶ ಪ್ರಕಟ!

ಮಾರುತಿ ಸುಜುಕಿ ಇಂಡಿಯಾ 2023 ರ ಎರಡನೇ ತ್ರೈಮಾಸಿಕ (2022ರ ಜುಲೈ-ಸೆಪ್ಟೆಂಬರ್) ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ. ಡೇಟಾವು ವರ್ಷದಿಂದ ವರ್ಷಕ್ಕೆ ಬಲವಾದ ಹೆಚ್ಚಳವನ್ನು ತೋರಿಸುತ್ತದೆ. ಶೇ. 41ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಕಂಪನಿಯು ಎರಡನೇ ತ್ರೈಮಾಸಿಕದಲ್ಲಿ ಒಟ್ಟು 5.17 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ಎಲ್ಲಾ ಅವಧಿಗಳಿಗಿಂತ ಹೆಚ್ಚಾಗಿದೆ. ರಫ್ತಿನ ವಿಷಯದಲ್ಲಿ, ಮಾರುತಿ ಸುಜುಕಿ ಎರಡನೇ ತ್ರೈಮಾಸಿಕದಲ್ಲಿ ಒಟ್ಟಾರೆ 63,195 ವಾಹನಗಳನ್ನು ರಫ್ತು ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ  ಶೇ.6ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಂಪನಿ ಒಟ್ಟು 1.31 ಲಕ್ಷ ವಾಹನಗಳನ್ನು ರವಾನಿಸಿದೆ. 2022ರ ಸೆಪ್ಟೆಂಬರ್ ಅಂತ್ಯದಲ್ಲಿ ಕಂಪನಿ, ಒಟ್ಟು  4,12,000 ಕಂಪನಿಗಳನ್ನು ಇನ್ನೂ ಗ್ರಾಹಕರಿಗೆ ವಿತರಿಸಲು ಬಾಕಿ ಇದೆ ಎಂದು ಕಂಪನಿಯು ಬಹಿರಂಗಪಡಿಸಿತು.

ಮಾರುತಿ ಸುಜುಕಿಯು ತನ್ನ ಅತ್ಯಧಿಕ ತ್ರೈಮಾಸಿಕ ಆದಾಯ 29,931 ಕೋಟಿ ರೂ.ಗಳಷ್ಟಿದೆ ಎಂದು ವರದಿ ಮಾಡಿದೆ. ಇದು  ವರ್ಷದಿಂದ ವರ್ಷಕ್ಕೆ ಶೇ.46ರಷ್ಟು ಏರಿಕೆಯಾಗಿದೆ. 2022 ರ ಎರಡನೇ ತ್ರೈಮಾಸಿಕದಲ್ಲಿ ಕಾರ್ಯಾಚರಣಾ ಲಾಭದಲ್ಲಿನ ತೀವ್ರ ಕುಸಿತದಿಂದಾಗಿ ಸರಕುಗಳ ಬೆಲೆಗಳಲ್ಲಿ ತೀವ್ರ ಏರಿಕೆ ಮತ್ತು ಎಲೆಕ್ಟ್ರಾನಿಕ್ ಘಟಕಗಳ ಪೂರೈಕೆ ಕೊರತೆಯಾಗಿತ್ತು. ಇನ್ನೊಂದೆಡೆ, ಕಂಪನಿಯು ತನ್ನ ಮೂರು ಜನಪ್ರಿಯ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ಗಳಾದ ವ್ಯಾಗನ್ಆರ್, ಸೆಲೆರಿಯೊ ಮತ್ತು ಇಗ್ನಿಸ್ನ ಒಟ್ಟು 9,925 ವಾಹನಗಳನ್ನು ಹಿಂಪಡೆಯುತ್ತಿದೆ. ಹಿಂದಿನ ಬ್ರೇಕ್ ಅಸೆಂಬ್ಲಿ ಪಿನ್ನೊಂದಿಗೆ ಸಂಭಾವ್ಯ ಸಮಸ್ಯೆಯನ್ನು ಪರಿಹರಿಸಲು, ಎಲ್ಲಾ ಮೂರು ಹ್ಯಾಚ್ಬ್ಯಾಕ್ಗಳನ್ನು ಹಿಂಪಡೆಯಲಾಗುತ್ತಿದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1, 2022 ರ ನಡುವೆ ಉತ್ಪಾದಿಸಲಾದ ಈ ಎಲ್ಲಾ ವಾಹನಗಳ , ಮಾರುತಿ ಸುಜುಕಿ ನಿಯಂತ್ರಕ ಫೈಲಿಂಗ್ ಅನ್ನು ಸಲ್ಲಿಸಿದೆ. ಹಿಂಬದಿಯ ಬ್ರೇಕ್ ಕ್ರ್ಯಾಕ್ ಆಗುವುದರಿಂದ ಕಾರು  ಬ್ರೇಕ್ ಅಳವಡಿಸಿದಾಗ ಅದು ಕರ್ಕಶ ಧ್ವನಿ ಹೊರಡಿಸಬಹುದು.ಇದನ್ನು ದುರಸ್ತಿ ಮಾಡದೆ ದೀರ್ಘಕಾಲದವರೆಗೆ ಚಾಲನೆ ಮಾಡುವುದು ಬ್ರೇಕ್‌ನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಪನಿ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಮೂರು ಮಾದರಿಯ ಕಾರುಗಳ ಮಾಲೀಕರು ಹತ್ತಿರದ ಸರ್ವಿಸ್ ಸೆಂಟರ್ (Service Center) ಅಥವಾ ವರ್ಕ್ ಶಾಪ್‌ಗ ಹೋಗುವಂತೆ ಕಂಪನಿ ಸಲಹೆ ನೀಡಿದೆ.

ಆಲ್‌-ನ್ಯೂ ಮಾರುತಿ ಸುಜುಕಿ ಬ್ರೀಝಾ ಬಿಡುಗಡೆ: ಬೆಲೆ 7.99 ಲಕ್ಷ ರೂ.ಗಳಿಂದ ಆರಂಭ

Follow Us:
Download App:
  • android
  • ios