ರೇರ್ ವೀಲ್ ಡ್ರೈವ್ , 6-ಸ್ಪೀಡ್ ಗೇರ್‌ಬಾಕ್ಸ್‌ , 2.2 ಲೀಟರ್‌ ಹಾಕ್ ಡೀಸೆಲ್ ಎಂಜಿನ್‌, 22.8 ಸೆಂಮೀ ಟಚ್‌ಸ್ಕ್ರೀನ್ ಸೇರಿದಂತೆ ಹಲವು ಅತ್ಯಾಕರ್ಷಕ ಫೀಚರ್ ಜೊತೆ ಹೊಚ್ಚ ಹೊಸ ಮಹೀಂದ್ರ ಬೊಲೆರೋ ನಿಯೋ+  ಕಾರು ಬಿಡುಗಡೆಯಾಗಿದೆ. ಇದರ ಬೆಲೆ ಎಷ್ಟು? 

ನವದೆಹಲಿ(ಏ.17) ಮಹೀಂದ್ರ ಇದೀಗ ಹೊಚ್ಚ ಹೊಸ ಬೊಲೆರೋ ನಿಯೋ+ 9 ಸೀಟರ್ ವಾಹನವನ್ನು ಬಿಡುಗಡೆ ಮಾಡಿದೆ. ಪಿ4 ಹಾಗೂ ಪ್ರೀಮಿಯಂ ಪಿ10 ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದೆ. ಚಾಲಕನನ್ನು ಒಳಗೊಂಡು 9 ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಸೊಗಸಾದ, ವಿಶಾಲವಾದ ಮತ್ತು ದೃಢವಾದ ಎಸ್‌ಯುವಿಯನ್ನು ಬಯಸುವ ಗ್ರಾಹಕರಿಗಾಗಿಯೇ ಈ ಎಸ್‌ಯುವಿಯನ್ನು ವಿನ್ಯಾಸಗೊಳಿಸಲಾಗಿದೆ.

ಹೊಸ ಬೊಲೆರೋ ನಿಯೋ+ ಕಾರು 11.39 ಲಕ್ಷ ರೂಪಾಯಿಂದ (ಕ್ಸ್-ಶೋರೂಂ)ಆರಂಭಗೊಳ್ಳಲಿದೆ. ಬೊಲೆರೋ ನಿಯೊ+ 9-ಸೀಟರ್ ವಾಹನವು ಬೊಲೆರೋದ ಅತ್ಯಂತ ವಿಶ್ವಾಸಾರ್ಹ, ಶಕ್ತಿಯುತ ಮತ್ತು ಎಲ್ಲಿಗೆ ಬೇಕಾದರೂ ಹೋಗಬಹುದಾದ ಗುಣವುಳ್ಳ ಎಸ್‌ಯುವಿ ಆಗಿದೆ. ಇದು ಸೊಗಸಾದ ಬೋಲ್ಡ್ ಡಿಸೈನ್, ಪ್ರೀಮಿಯಂ ಇಂಟೀರಿಯರ್(ಒಳಾಂಗಣ) ಮತ್ತು ನಿಯೋ ತಂತ್ರಜ್ಞಾನವನ್ನು ಹೊಂದಿರುವ ಎಸ್‌ಯುವಿ ಆಗಿದೆ. ದೊಡ್ಡ ಕುಟುಂಬ ಹೊಂದಿರುವವರು, ಸಾಂಸ್ಥಿಕ ಗ್ರಾಹಕರು, ಟೂರ್ ಮತ್ತು ಟ್ರಾವೆಲ್ ಆಪರೇಟರ್ ಗಳು ಮತ್ತು ಕಂಪನಿಗಳಿಗೆ ವಾಹನಗಳನ್ನು ಗುತ್ತಿಗೆ ನೀಡುವ ಗುತ್ತಿಗೆದಾರರು ಇತ್ಯಾದಿ ಗ್ರಾಹಕರ ಅಗತ್ಯಗಳನ್ನು ಪೂರೈಸಲೆಂದೇ ಈ ಎಸ್‌ಯುವಿಯನ್ನು ವಿನ್ಯಾಸ ಮಾಡಲಾಗಿದೆ.

ಮಹೀಂದ್ರ XUV300 ಇನ್ಮುಂದೆ 3XO ಮರುನಾಮಕರಣ, ಏ.29ಕ್ಕೆ ಅತ್ಯಾಕರ್ಷಕ ಕಾರು ಅನಾವರಣ!

ಶಕ್ತಿಯುತ ಸಾಮರ್ಥ್ಯ:
ಬೊಲೆರೋ ನಿಯೊ+ ದೃಢವಾದ 2.2 ಲೀಟರ್‌ ಹಾಕ್ ಡೀಸೆಲ್ ಎಂಜಿನ್‌ ಹೊಂದಿದೆ. ಇದರಲ್ಲಿರುವ ಮೈಕ್ರೋ-ಹೈಬ್ರಿಡ್ ತಂತ್ರಜ್ಞಾನವು ಅತ್ಯುತ್ತಮ ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಇದರ ಅತ್ಯುತ್ತಮ ನಿರ್ಮಾಣ ಗುಣಮಟ್ಟ ಮತ್ತು ಭಾರಿ ಸಾಮರ್ಥ್ಯದ ಸ್ಟೀಲ್ ದೇಹದಿಂದಾಗಿ ಈ ಎಸ್‌ಯುವಿಯನ್ನು ದೀರ್ಘ ಬಾಳಿಕೆ ಮತ್ತು ಸುರಕ್ಷತೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಬಿಡಿ ಜೊತೆಗೆ ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಐಸೋಫಿಕ್ಸ್ ಚೈಲ್ಡ್ ಸೀಟ್‌ಗಳು, ಎಂಜಿನ್ ಇಮೊಬಿಲೈಜರ್ ಮತ್ತು ಸ್ವಯಂಚಾಲಿತ ಡೋರ್ ಲಾಕ್‌ ಒಳಗೋಡು ಅನೇಕ ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಈ ಎಸ್‌ಯುವಿ ಹೊಂದಿದೆ. ಅದರಿಂದ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.

ಸ್ಟೈಲಿಶ್ ಬೋಲ್ಡ್ ಡಿಸೈನ್ :
ಈ ಹೊಸ ಬೊಲೆರೋ ನಿಯೊ+ ಎಸ್‌ಯುವಿ ಎಕ್ಸ್-ಆಕಾರದ ಬಂಪರ್‌ಗಳು, ಕ್ರೋಮ್ ನಿಂದ ಅಲಂಕರಿಸಲ್ಪಟ್ಟ ಫ್ರಂಟ್ ಗ್ರಿಲ್ ಮತ್ತು ಎಕ್ಸ್-ಆಕಾರದ ಸ್ಪೇರ್ ವೀಲ್ ಕವರ್ ನಂತಹ ಬೊಲೆರೋದ ಸಿಗ್ನೇಚರ್ ವಿನ್ಯಾಸ ಅಂಶಗಳನ್ನು ಹೊಂದಿದೆ. ಜೊತೆಗೆ ಸೈಡ್ ಬಾಡಿ ಕ್ಲಾಡಿಂಗ್‌ ಕೂಡ ಹೊಂದಿದೆ. ಇದರ ಅಧಿಕೃತ ಎಸ್‌ಯುವಿ ವಿನ್ಯಾಸ ಮತ್ತು ಭವ್ಯವಾಗಿ ಕಾಣಿಸುವ ಸ್ಟೈಲಿಶ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಆಕರ್ಷಕ ಹುಡ್‌ ಗಳಿಂದಾಗಿ ಆಕರ್ಷಕವಾಗಿ ಕಾಣಿಸುತ್ತದೆ. 40.64 ಸೆಂಮೀನ ಮಿಶ್ರಲೋಹದ ಚಕ್ರಗಳು ಮತ್ತು ಮತ್ತು ಹಿಂಭಾಗದಲ್ಲಿ ಮೆಟ್ಟಿಲುಗಳನ್ನು ಒಳಗೊಂಡಿರುವ ಬೊಲೆರೋ ನಿಯೊ + ಸೊಗಸಾಗಿದ್ದು, ಬಲಶಾಲಿ ಲುಕ್ ಅನ್ನು ಹೊಂದಿದೆ. ಈ ಎಸ್‌ಯುವಿ ಯಾವುದೇ ರಸ್ತೆಯಲ್ಲಿಯೂ, ಎಂಥಾ ರಸ್ತೆಯಲ್ಲಿಯೂ ಎದ್ದು ಕಾಣುವಂತೆ ಇರುತ್ತದೆ.

ಚೆಂದದ ಇಂಟೀರಿಯರ್ಸ್ ಮತ್ತು ಹೆಚ್ಚು ಆರಾಮದಾಯಕ:
ಬೊಲೆರೋ ನಿಯೋ+ ಪ್ರೀಮಿಯಂ ಇಟಾಲಿಯನ್ ಒಳಾಂಗಣ ಹೊಂದಿದೆ. ಬ್ಲೂಟೂತ್, ಯುಎಸ್‌ಬಿ ಮತ್ತು ಆಕ್ಸ್ ಸಂಪರ್ಕವನ್ನು ಒಳಗೊಂಡಿರುವ 22.8 ಸೆಂಮೀನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹೊಂದಿದ್ದು, ಅತ್ಯುತ್ತಮ ಸೌಕರ್ಯ ಒದಗಿಸುತ್ತದೆ. ಆಂಟಿ-ಗ್ಲೇರ್ ಐಆರ್‌ವಿಎಂ, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಐಆರ್‌ವಿಎಂಗಳು ಮತ್ತು ಎತ್ತರ-ಹೊಂದಾಣಿಕೆ ಮಾಡಬಲ್ಲ ಡ್ರೈವರ್ ಸೀಟ್ ನಂತಹ ಹೆಚ್ಚುನ ಅನುಕೂಲತೆಗಳನ್ನು ಇದರಲ್ಲಿ ಒದಗಿಸಲಾಗಿದೆ. ವಾಹನವು ಮುಂಭಾಗ ಮತ್ತು ಹಿಂಭಾಗದಲ್ಲಿ ಪವರ್ ವಿಂಡೋಗಳು, ಆರ್ಮ್‌ ರೆಸ್ಟ್‌ ಗಳು ಮತ್ತು ದೊಡ್ಡದಾದ ಡಿಕ್ಕಿಯ ಸ್ಥಳವನ್ನು ಕೂಡ ಹೊಂದಿದೆ. ಇದು ಆರಾಮದಾಯಕ ಪ್ರಯಾಣ ಒದಗಿಸುವ ಭರವಸೆ ನೀಡುತ್ತದೆ. ಇದು ವೈವಿಧ್ಯಮಯ ಸೀಟ್ ಸೆಟ್ಟಿಂಗ್ ಹೊಂದಿದ್ದು, 2-3-4 ಮಾದರಿಯಲ್ಲಿ ಸೀಟ್ ಜೋಡಿಸಲಾಗಿದೆ. ಒಟ್ಟು 9 ಆಸನಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರ ಮತ್ತು ಸರಕು ಇಡುವ ಸ್ಥಳವೂ ವಿಶಾಲವಾಗಿದ್ದು, ವಿವಿಧ ರೀತಿಯ ಪ್ರಯಾಣದ ಅಗತ್ಯಗಳನ್ನು ಪೂರೈಸುತ್ತದೆ.

ಥಾರ್ ಮರುಭೂಮಿಯಿಂದ ಸ್ಪೂರ್ತಿ ಪಡೆದ ಮಹೀಂದ್ರ ಥಾರ್ ಅರ್ಥ್ ಎಡಿಶನ್ ಕಾರು ಬಿಡುಗಡೆ!

ಈ ಸಂದರ್ಭದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ನ ಆಟೋಮೋಟಿವ್ ಸೆಕ್ಟರ್ ಸಿಇಓ ನಳಿನಿಕಾಂತ್ ಗೊಲ್ಲಗುಂಟಾ ಮಾತನಾಡಿ , "ಹಲವಾರು ವರ್ಷಗಳಿಂದ ಬೊಲೆರೋ ಬ್ರ್ಯಾಂಡ್ ನಮ್ಮ ಗ್ರಾಹಕರಿಗೆ ದೃಢವಾದ ಮತ್ತು ವಿಶ್ವಾಸಾರ್ಹವಾದ ವಾಹನವಾಗಿ ಕಾಣಿಸಿಕೊಂಡಿದ್ದು, ಸತತವಾಗಿ ನಿರೀಕ್ಷೆ ಮೀರಿದ ಕಾರ್ಯಕ್ಷಮತೆಯನ್ನು ಒದಗಿಸುತ್ತಿದೆ. ಬೊಲೆರೋ ನಿಯೋ+ ಬಿಡುಗಡೆ ಮಾಡುವ ಮೂಲಕ ನಾವು ಬಾಳಿಕೆ ಹೆಚ್ಚಳ, ಸುಧಾರಿತ ವೈಶಿಷ್ಟ್ಯಗಳು ಮತ್ತು ಉತ್ತಮ ಸೌಕರ್ಯದ ಭರವಸೆಯನ್ನು ನೀಡುತ್ತಿದ್ದೇವೆ. ಆ ಮೂಲಕ ಪ್ರತಿ ಕುಟುಂಬ ಮತ್ತು ವಾಹನ ಮಾಲೀಕರಿಗೆ ಸಮೃದ್ಧ ಚಾಲನಾ ಅನುಭವವನ್ನು ಒದಗಿಸಲಿದ್ದೇವೆ” ಎಂದು ಹೇಳಿದರು.