ಮಾರುಕಟ್ಟೆಗೆ ಎಂಟ್ರಿ ಕೊಟ್ಟ Bolero Neo! ಹೇಗಿದೆ ಮಹೀಂದ್ರಾ ಕಂಪನಿಯ SUV?
ಕಾರುಗಳ ಉತ್ಪಾದನೆಯಲ್ಲಿ ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಮಹಿಂದ್ರಾ, ಬಹು ನಿರೀಕ್ಷೆಯ ಬೊಲೆರೋ ನಿಯೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬ್ರೆಜಾ, ಸೊನೆಟ್, ನೆಕ್ಸಾನ್, ವೆನ್ಯೂ ಸೇರಿದಂತೆ ಹಲವು ಎಸ್‌ಯುವಿಗಳಿಗೆ ತೀವ್ರ ಪೈಪೋಟಿ ಒಡ್ಡಲಿರುವ ಬೊಲೆರೋ ನಿಯೋ ಒಟ್ಟು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಬೆಲೆ 8.48 ಲಕ್ಷ ರೂ.ನಿಂದ ಆರಂಭವಾಗಲಿದೆ.
ಬೊಲೆರೋ ಎಸ್‌ಯುವಿಗೆ ಕಾಯುತ್ತಿರುವವರಿಗೆ ಇದು ಶುಭ ಸುದ್ದಿ. ಬಹಳ ದಿನಗಳಿಂದಲೂ ನಿರೀಕ್ಷೆಯಲ್ಲಿದ್ದ ಬೊಲೆರೋ ನಿಯೋ ಎಸ್‌ಯುವಿಯನ್ನು ಮಹಿಂದ್ರಾ ಕಂಪನಿಯು ಲಾಂಚ್ ಮಾಡಿದೆ. ಈ ಹೊಸ ಬೊಲೆರೋ ನಿಯೋ ಎಸ್‌ಯುವಿ ಬೆಲೆ 8.48 ಲಕ್ಷ ರೂಪಾಯಿಯಾಗಿದ್ದು, ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾದ ಬೆನ್ನಲ್ಲೇ ಬೊಲೆರೋ ಬಹಳಷ್ಟು ಭರವಸೆಗಳನ್ನು ಹುಟ್ಟು ಹಾಕಿದೆ.
ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ವರ್ಷಕ್ಕೆ 25 ಕೋಟಿ ರೂ. ಸಬ್ಸಿಡಿ
ಈ ಹೊಸ ಬೊಲೆರೋ ನಿಯೋ mHawk100ನೊಂದಿಗೆ ಬರುತ್ತಿದೆ. ಇದು ಹಳೆಯ ಬೊಲೆರೋ ಎಂಜಿನ್ ಆಗಿದ್ದರೂ ಹೆಚ್ಚಿನ ಟಾರ್ಕ್ ಉತ್ಪಾದಿಸುತ್ತಿದೆ. ಸ್ಕಾರ್ಪಿಯೋ ಮತ್ತು ಥಾರ್‌ಗೆ ಆಧಾರವಾಗಿರುವ ಮೂರನೇ ತಲೆಮಾರಿನ ಚಾಸಿಸ್ ಮೇಲೆ ನಿರ್ಮಿಸಲಾಗಿರುವ ಬೊಲೆರೊ ನಿಯೋಸ್ ಬಾಡಿ ಆನ್ ಫ್ರೇಮ್ ನಿರ್ಮಾಣ ಮತ್ತು ಹಿಂಬದಿ-ಚಕ್ರ ಡ್ರೈವ್ ಒರಟು ಭೂಪ್ರದೇಶದಲ್ಲಿ ಅದರ ಸಾಮರ್ಥ್ಯ ಪ್ರದರ್ಶನಕ್ಕೆ ಸಹಾಯ ಮಾಡುತ್ತದೆ.
ಟಿಯುವಿ300 ಮತ್ತು ಬೊಲೆರೋ ಗ್ರಾಹಕರಿಂದ ಪಡೆದ ಪ್ರತಿಕ್ರಿಯೆಗನ್ನು ಆಧರಿಸಿ ಮತ್ತು ಅವರ ಅಗತ್ಯಕ್ಕೆ ತಕ್ಕಂತೆ ಬೊಲೆರೋ ನಿಯೋ ಎಸ್‌ಯುವಿ ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ಸಾಕಷ್ಟು ರಸ್ತೆ ಉಪಸ್ಥಿತಿಯನ್ನು ಹೊಂದಿರುವ ಈ ಬೊಲೆರೋ ನಿಯೋ ಬಲವಾದ ಎ-ಪಿಲ್ಲರ್ ಹೊಂದಿದೆ ಮತ್ತು ಸ್ಥಿರ ಬಾಗುವ ದೀಪಗಳು ಮತ್ತು ಸಂಯೋಜಿತ ಡಿಆರ್‌ಎಲ್‌ಗಳೊಂದಿಗೆ ಸಿಗ್ನೇಚರ್ ಫ್ರಂಟ್ ಗ್ರಿಲ್‌ನೊಂದಿಗೆ ಬರುತ್ತದೆ. ಹಿಂಭಾಗದ ಸ್ಪಾಯ್ಲರ್ ಡಿಫೋಗರ್ ಅನ್ನು ಹೊಂದಿದೆ ಮತ್ತು ಪರಿಚಿತ ಎಕ್ಸ್-ಟೈಪ್ ಸ್ಪೇರ್ ವೀಲ್ ಕವರ್ ಹೊಂದಿದೆ.
ಬೊಲೆರೋ ಗಾಡಿಗೆ ಒಂದು ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಅವರ ಎಲ್ಲ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಈ ಹೊಸ ಬೊಲೆರೋ ಹೊಂದಿದೆ ಎಂಬ ವಿಶ್ವಾಸವನ್ನು ಕಂಪನಿ ಹೊಂದಿದೆ. ವಿಶೇಷವಾಗಿ ಯುವ ಜನತೆಯನ್ನು ಸೆಳೆಯುವಲ್ಲಿ ಇದು ಯಶಸ್ವಿಯಾಗಲಿದೆ ಎನ್ನಲಾಗುತ್ತಿದೆ.
1.5 ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿರುವ ಹೊಸ ಬೊಲೆರೋ ನಿಯೋ, 100 ಬಿಎಚ್‌ಪಿ ಮತ್ತು 260 ಎನ್‌ಎಂ ಟಾರ್ಕ್ ಪವರ್ ಉತ್ಪಾದಿಸುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ಇದೆ. ಬೊಲೆರೋ ನಿಯೋ ಆಟೋಮೆಟಿಕ್ ಟ್ರಾನ್ಷಿಮಿಷನ್‌ನೊಂದಿಗೆ ಬರುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಿಕೊಳ್ಳಬೇಕು.
ಡಟ್ಸನ್ ಕಾರು ಖರೀದಿಸಲಿದ್ದೀರಾ? 40 ಸಾವಿರ ರೂ.ವರೆಗೆ ಗರಿಷ್ಠ ಆಫರ್!
ನ್ಯಾಪೋಲಿ ಬ್ಲ್ಯಾಕ್, ಮೆಜೆಸ್ಟಿಕ್ ಸಿಲ್ವರ್, ಹೈವೇ ರೆಡ್, ಪರ್ಲ್ ವೈಟ್, ಡೈಮೆಂಡ್ ವೈಟ್, ರಾಕಿ ಬೀಜ್ ಬಣ್ಣಗಳಲ್ಲಿ ಬೊಲೆರೋ ನಿಯೋ ಮಾರಾಟಕ್ಕೆ ಸಿಗಲಿದೆ. ಮಹಿಂದ್ರಾ ಕಂಪನಿಯು ಹೊಸ ಬೊಲೆರೋ ನಿಯೋ ಎಸ್‌ಯುವಿಯನ್ನು ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡಲಿದೆ. ಅವು ಹೀಗಿವೆ: ಎನ್4, ಎನ್8, ಎನ್10 ಮತ್ತು ಎನ್10(ಓ). ಹೊಸ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಮಹಿಂದ್ರಾ ಕಂಪನಿಯ ಪ್ರತಿಯೊಂದು ವೆರಿಯೆಂಟ್‌ನಲ್ಲಿ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಅಳವಡಿಸಿದೆ.
ಮಹೀಂದ್ರಾ ಬಿಡುಗಡೆ ಮಾಡಿರುವ ಈ ಹೊಸ ಬೆಲೆರೋ ನಿಯೋ ಎಸ್‌ಯುವಿ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಡ್ರೈವರ್ ಮತ್ತು ಕೋ ಡ್ರೈವರ್‌ಗೆ ಎರಡು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಉಳಿದಂತೆ ರಿಯರ್ ಪಾರ್ಕಿಂಗ್ ಸೆನ್ಸರ್, ಎಬಿಎಸ್, ಇಬಿಡಿ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್(ಸಿಬಿಡಿ) ಸ್ಟ್ಯಾಂಡರ್ಡ್ ಆಗಿ ದೊರೆಯುತ್ತವೆ.
ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಬೊಲೆರೋ ನಿಯೋ, ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಜಾ, ಹುಂಡೈ ಕಂಪನಿಯ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ನಿಸ್ಸಾನ್ ಮ್ಯಾಗ್ನೆಟ್ ಮತ್ತು ರೆನೋ ಕೈಗರ್ ಸೇರಿದಂತೆ ಇನ್ನಿತರ ಈ ಸೆಗ್ಮೆಂಟ್‌ನ ವಾಹನಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಬ್ಬದ ಸೀಸನ್‌ಗೆ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ ಕಾರ್ ಬಿಡುಗಡೆ?