Asianet Suvarna News Asianet Suvarna News

Electric Vehicle ವಲಯದಲ್ಲಿ ಹೊಸ ವಾಹನಗಳ ಉತ್ಪಾದನೆಗೆ ಮಹೀಂದ್ರಾ ಸಜ್ಜು

ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್‌ ವಾಹನಗಳ ವಲಯದಲ್ಲಿ ಭಾರಿ ಬೆಳವಣಿಗೆಯಾಗಲಿದೆ ಎಂಬ ಆಶಾವಾದ ಹೊಂದಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ  ಕಂಪನಿ, ಮುಂದಿನ ಕೆಲ ವರ್ಷಗಳಲ್ಲಿ ಹೊಸ ಉತ್ಪನ್ನಗಳ ತಯಾರಿಕೆ ಮತ್ತು ಹೂಡಿಕೆಗಳಿಗೆ ಮುಂದಾಗಿದೆ.  

Mahindra all set for new productions and investment in electric vehicle segment
Author
First Published Sep 12, 2022, 3:05 PM IST

ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಭಾರಿ ಬೆಳವಣಿಗೆಯಾಗಲಿದೆ ಎಂಬ ಆಶಾವಾದ ಹೊಂದಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ( Mahindra & Mahindra) ಕಂಪನಿ, ಮುಂದಿನ ಕೆಲ ವರ್ಷಗಳಲ್ಲಿ ಹೊಸ ಉತ್ಪನ್ನಗಳ ತಯಾರಿಕೆ ಮತ್ತು ಹೂಡಿಕೆಗಳಿಗೆ ಮುಂದಾಗಿದೆ.  ಕಂಪನಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈ ಮೂಲದ ಈ ಕಂಪನಿಯ ತಜ್ಞರು, ಫ್ಲೀಟ್ (Fleet) ಹಾಗೂ ಕ್ರೀಡಾ ಯುಟಿಲಿಟಿ (Sports utility) ವಾಹನಗಳ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದ್ದು,ಇದು ದೇಶೀಯ ಮಾರುಕಟ್ಟೆಯಲ್ಲಿ ಮುಂಚೂಣಿ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ (ಆಟೊ ಹಾಗೂ ಕೃಷಿ ವಲಯ) ರಾಜೇಶ್ ಜೆಜುರಿಕರ್, “ನಮ್ಮ ಆಂತರಿಕ ಸಂಶೋಧನೆಯ ಪ್ರಕಾರ, ಈಗಾಗಲೇ ಎಸ್ಯುವಿ ಖರೀದಿಸಿರುವ ಶೇ.25ರಷ್ಟು ಜನರು ತಮ್ಮ ಮುಂದಿನ ಖರೀದಿಯಲ್ಲಿ ಎಲೆಕ್ಟ್ರಿಕ್ ಎಸ್ಯುವಿಗೆ (Electric SUV) ಆದ್ಯತೆ ನೀಡಲು ಬಯಸುತ್ತಿದ್ದಾರೆ. ಮುಂದಿನ 2-3 ವರ್ಷಗಳಲ್ಲಿ ಈ ಬದಲಾವಣೆಗಳನ್ನು ಕಾಣಬಹುದು ಎಂದು ಕೂಡ ಸಂಶೋಧನೆ ತಿಳಿಸಿದೆ” ಎಂದಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ತಮ್ಮ ಶೇ.23ರಿಂದ ಶೇ.30ರಷ್ಟು ಎಸ್ಯುವಿಗಳು ಎಲೆಕ್ಟ್ರಿಕ್ ಆಗಿರಲಿದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ ಎಂದು ಕೂಡ ಅವರು ತಿಳಿಸಿದರು. ಈಗಾಗಲೇ ಮಹೀಂದ್ರಾ ಐದು ಹೊಸ ಎಲೆಕ್ಟ್ರಿಕ್ ಕ್ರೀಡಾ ಯುಟಿಲಿಟಿ ಎಸ್ಯುವಿ ವಾಹನಗಳ ಬಿಡುಗಡೆ ಘೋಷಿಸಿದ್ದು, ಮೊದಲ ನಾಲ್ಕು ವಾಹನಗಳು 2024 ರಿಂದ 2026ರ ಡಿಸೆಂಬರ್ ಒಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಐದು ಎಸ್ಯುವಿ ಮಾದರಿಗಳನ್ನು ಎಕ್ಸ್ಯುವಿ ಮತ್ತು ಆಲ್ –ನ್ಯೂ ಎಲೆಕ್ಟ್ರಿಕ್ ಬ್ರ್ಯಾಡ್ ‘ಬಿಇ’ ಎಂದು ಹೆಸರಿಸಲು ಕಂಪನಿ ನಿರ್ಧರಿಸಿದೆ.

ಇದರ ಜೊತೆಗೆ, ಫ್ಲೀಟ್ ವಾಹನ ವಲಯ ಕೂಡ ಶೀಘ್ರದಲ್ಲೇ ಎಲೆಕ್ಟ್ರಿಕ್ ಆಗಿ ಬದಲಾಗುವ ನಿರೀಕ್ಷೆಯಿದೆ. ಏಕೆಂದರೆ, ಆರ್ಥಿಕವಾಗಿ ಇದು ಲಾಭಕರವಾಗಿದೆ ಎಂದು ಜೆಜುರಿಕರ್ ಹೇಳಿದ್ದಾರೆ. ಆದರೆ, ವೈಯಕ್ತಿಕ ವಲಯದಲ್ಲಿನ ಹ್ಯಾಚ್ಬ್ಯಾಕ್ಗಳು ಹಾಗೂ ಸೆಡಾನ್ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ನಿಧಾನವಾಗಲಿದೆ. ಏಕೆಂದರೆ, ಸೂಕ್ತ ಹಾಗೂ ಸಮರ್ಪಕ ಚಾರ್ಜಿಂಗ್ ಸೌಲಭ್ಯವಿಲ್ಲದೆ, ಗ್ರಾಹಕರು ತಮ್ಮ ಕುಟುಂಬಕ್ಕಾಗಿ ಖರೀದಿಸುವ ಏಕೈಕ ಕಾರಿಗೆ ಅಷ್ಟೊಂದು ಹೆಚ್ಚಿನ ಬೆಲೆ ಪಾವತಿಸಲು ಇಷ್ಟಪಡುವುದಿಲ್ಲ ಎಂದು ಅವರು ತಿಳಿಸಿದರು. ಎಸ್ಯುವಿ (SUV) ವಲಯದಲ್ಲಿ, ಅದು ಪ್ರವೇಶ ಮಾದರಿ ಅಥವಾ ಮಿಡ್-ಸೈಜ್ ಆಗಿರಬಹುದು, ಇತರ ಕಾರುಗಳಿಗಿಂತ ವೇಗವಾಗಿ ಅಳವಡಿಕೆಯಾಗುತ್ತಿದೆ. ಇದು ಒಂದಕ್ಕಿಂತ ಹೆಚ್ಚಿನ ಕಾರನ್ನು ಹೊಂದಿರುವ ಕುಟುಂಬ ಸೇರಿದಂತೆ ಇತರ ಕುಟುಂಬಗಳಿಗೆ ಅನ್ವಯವಾಗುತ್ತದೆ ಎಂದರು.


ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೂಮ್‌ಗೆ ಇದು ಸೂಕ್ತ ಸಮಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಇದಕ್ಕೆ ಉತ್ತರ ಹೌದು ಮತ್ತು ಇಲ್ಲ ಎಂಬುದಾಗಿದೆ. ಸದ್ಯ ಸಿ ವಲಯದಲ್ಲಿ ಶೇ.1ರಷ್ಟು ಹಾಗೂ ಬಿ ವಲಯದಲ್ಲಿ ಶೇ.4ರಷ್ಟು ಪ್ರಗತಿಯಾಗಿದೆ. ಅದು ಏಕಾಏಕಿ ಶೇ.30 ಮತ್ತು ಶೇ.40ಕ್ಕೆ ಏರಿಕೆಯಾಗಲು ಸಾಧ್ಯವೇ. ಇಲ್ಲ, ಹಾಗಾಗುವುದಿಲ್ಲ. ನಾವು ನಿಧಾನವಾಗಿ ಶೇ.10ರಿಂದ 15ರಷ್ಟು ಹಂತಹಂತವಾಗಿ ಏರಿಕೆಯಾಗುವುದನ್ನು ನೋಡಬಹುದು. ಮುಂದಿನ 4-5 ವರ್ಷಗಳಲ್ಲಿ ಇದು ಶೇ.20ರಿಂದ 30ರಷ್ಟು ಮಟ್ಟಕ್ಕೆ ತಲುಪಲಿದೆ ಎಂದರು.

ಎಲೆಕ್ಟ್ರಿಕ್ ಕ್ರೀಡಾ ಯುಟಿಲಿಟಿ ವಾಹನಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಉತ್ಪಾದಿಸುವ ಕುರಿತು ಕಂಪನಿ ಮುಂದಿನ 3ರಿಂದ 6 ತಿಂಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ಕಂಪನಿ ಈಗಾಗಲೇ ಎಕ್ಸ್ಯುವಿ ಬ್ರ್ಯಾಂಡ್ ಅಡಿಯಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಎಸ್ಯುವಿಯನ್ನು ಅನಾವರಣಗೊಳಿಸಿದೆ.  
 

Follow Us:
Download App:
  • android
  • ios