Asianet Suvarna News Asianet Suvarna News

5 ಮಹೀಂದ್ರಾ ಆಲ್ ಎಲೆಕ್ಟ್ರಿಕ್ ಎಸ್ಯುವಿ ವಿನ್ಯಾಸ, ಟೀಸರ್ ಬಿಡುಗಡೆ

ಮಹೀಂದ್ರಾ 2022ರ ಆಗಸ್ಟ್‌ 15 ರಂದು ಅನಾವರಣಗೊಳ್ಳಲಿರುವ ಈ ಐದು SUVಗಳ ಟೀಸರ್ ಅನ್ನು ಬಿಡುಗಡೆಗೊಳಿಸಿದೆ

Mahindra All electric SUV teaser and design released
Author
Bangalore, First Published Aug 5, 2022, 3:59 PM IST

‘ಬಾರ್ನ್ ಎಲೆಕ್ಟ್ರಿಕ್’ ಘೋಷವಾಕ್ಯದಡಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ(Mahindra N Mahindra), ಐದು ವಿಭಿನ್ನ ಆಲ್-ಎಲೆಕ್ಟ್ರಿಕ್ (All  electric) SUV ಗಳನ್ನು ಅನಾವರಣಗೊಳಿಸುವ ಮೂಲಕ ಭಾರತೀಯ ವಾಹನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಸಿದ್ಧವಾಗಿದೆ. 2022ರ ಆಗಸ್ಟ್ 15 ರಂದು ಈ ಐದು SUVಗಳು ಅನಾವರಣಗೊಳ್ಳಲಿವೆ. ಈಗಾಗಲೇ ಮಹೀಂದ್ರಾ ಇದರ ವಿನ್ಯಾಸದ ರೂಪುರೇಷೆಯನ್ನು ಬಿಡುಗಡೆಗೊಳಿಸಿದೆ. ಮಹೀಂದ್ರಾ  ಈಗ ಮತ್ತೊಂದು ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಇದು ಈ SUV ಗಳಲ್ಲಿ ಲಭ್ಯವಿರುವ ಇನ್-ಕಾರ್ ಕನೆಕ್ಟಿವಿಟಿ ವೈಶಿಷ್ಟ್ಯಗಳ ಸುಳಿವು ನೀಡಿದೆ. ಟೀಸರ್ನಲ್ಲಿ ಡಿಜಿಟಲ್ ಪರದೆಯನ್ನು ತೋರಿಸಲಾಗಿದ್ದು, ಇದು ಇನ್ಫೋಟೈನ್ಮೆಂಟ್ ಸಿಸ್ಟಮ್ನಂತೆ ಕಾಣುತ್ತದೆ ಮತ್ತು ಇದು ಎಲ್ಲಾ ಐದು ಎಲೆಕ್ಟ್ರಿಕ್ SUV ಗಳಿಗೆ ಸಾಮಾನ್ಯವಾದ ಫೀಚರ್ ಆಗಿದೆ. 

ಟೀಸರ್ ವೀಡಿಯೊದಲ್ಲಿ, ಸೀಟುಗಳ ಅಡ್ಜಸ್ಟ್ಮೆಂಟ್, ಡ್ಯುಯಲ್-ಜೋನ್ ಸ್ವಯಂಚಾಲಿತ ಎಸಿ(AC) ಕಂಟ್ರೋಲ್, ಮ್ಯೂಸಿಕ್ ಸಿಸ್ಟಮ್ನಂತ ಕಾರಿನ ವಿವಿಧ ಕಾರ್ಯಗಳನ್ನು ತೋರಿಸಲಾಗಿದೆ. ವೀಡಿಯೊದಲ್ಲಿ ತೋರಿಸಿರುವ ದೃಶ್ಯಗಳ ಸರಣಿಯಲ್ಲಿ, SUV ಗಳಲ್ಲಿ ಒಂದರ ವೇಗದ ಚಾರ್ಜಿಂಗ್ ಸಿಸ್ಟಮ್ ಮತ್ತು ಫ್ಲಾಟ್ ಬೋರ್ಡ್ ಆರ್ಕಿಟೆಕ್ಚರ್ನಂತಹ ವಿವರಗಳನ್ನು ತೋರಿಸಲಾಗಿದೆ. ಹಿಂದಿನ ತಿಂಗಳಲ್ಲಿ, ಮಹೀಂದ್ರಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ (teaser) ವೀಡಿಯೊವನ್ನು ಬಿಡುಗಡೆ ಮಾಡಿತು, ಇದು ಈ ಎಲ್ಲಾ ಐದು ಎಸ್ಯುವಿಗಳ ವಿನ್ಯಾಸಗಳ ಪ್ರಕಾರವನ್ನು ಸೂಚಿಸುತ್ತದೆ. SUV ಗಳ ಈ ಸಂಪೂರ್ಣ ಹೊಸ ಶ್ರೇಣಿಯು ಕೂಪ್ SUV, ಕಾಂಪ್ಯಾಕ್ಟ್ SUV, ಮಧ್ಯಮ ಗಾತ್ರದ SUV, ಮಧ್ಯಮ ಗಾತ್ರದ ಕೂಪ್ SUV ಮತ್ತು ಫಾಸ್ಟ್ಬ್ಯಾಕ್ ತರಹದ SUV ಅನ್ನು ಒಳಗೊಂಡಿದೆ. ಈ ಮಾದರಿಗಳಲ್ಲಿ, ಮಧ್ಯಮ ಗಾತ್ರದ SUV ಯ ಸಿಲೂಯೆಟ್ XUV700 ನಂತೆಯೇ ಕಾಣುತ್ತದೆ, ಇದು XUV700 ನ ಎಲ್ಲಾ-ಎಲೆಕ್ಟ್ರಿಕ್ ಆವೃತ್ತಿಯಾಗಿದೆ ಎಂದು ಸೂಚಿಸುತ್ತದೆ. ಈ ಪೈಕಿ XUV900  ಹೆಚ್ಚು ಸದ್ದು ಮಾಡುತ್ತಿದೆ.

ಮಹೀಂದ್ರಾ ಬೊಲೆರೋ ಎಲೆಕ್ಟ್ರಿಕ್ ಪಿಕ್ಅಪ್ ಟೀಸರ್ ಬಿಡುಗಡೆ

ಮಹೀಂದ್ರಾ ಈ SUV ಗಳ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಈ ಐದು ಎಲ್ಲಾ ಹೊಸ ಎಲೆಕ್ಟ್ರಿಕ್ SUV ಗಳು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಮಾಡುವ ಕಾರುಗಳ ವಿನ್ಯಾಸವನ್ನು ಪರಿಚಯಿಸುತ್ತದೆ. ಈ ಎಲೆಕ್ಟ್ರಿಕ್ SUVಗಳ ಹೊರತಾಗಿ, ಮಹೀಂದ್ರಾ XUV400 ಎಲೆಕ್ಟ್ರಿಕ್ SUV ಅನ್ನು ಸಹ ಬಿಡುಗಡೆ ಮಾಡುತ್ತದೆ, ಇದು ಟಾಟಾ ನೆಕ್ಸನ್ EV ಮ್ಯಾಕ್ಸ್ ಮತ್ತು MG ZS EV ಯಂತಹ ಹೊಸ-ಪೀಳಿಗೆಯ ಎಲೆಕ್ಟ್ರಿಕ್ SUV ಗಳಿಗೆ ಸ್ಪರ್ಧೆ ನೀಡಲಿವೆ. ಹೊಸ XUV400 ಅನ್ನು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸಲಾಗುತ್ತಿದೆ ಮತ್ತು ಪರೀಕ್ಷಾ ಮ್ಯೂಲ್ ಮಾದರಿಯು ಉತ್ಪಾದನೆಗೆ ಸಿದ್ಧವಾಗಿದೆ ಎಂದು ಸೂಚಿಸುತ್ತದೆ, ಇದು 2022 ರ ಅಂತ್ಯದ ಮೊದಲು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇತ್ತೀಚೆಗಷ್ಟೇ ಮಹೀಂದ್ರಾ ಹೊಸ ಪೀಳಿಗೆಯ ಸ್ಕಾರ್ಪಿಯೋ ಎನ್ ಅನ್ನು ಬಿಡುಗಡೆಗೊಳಿಸಿದ್ದು, ಭಾರಿ ಬೇಡಿಕೆ ಗಳಿಸಿದೆ. ಬುಕಿಂಗ್ ಆರಂಭವಾದ ಕೇವಲ 30 ನಿಮಿಷಗಳಲ್ಲಿ ಇದು 1.5 ಲಕ್ಷ ಬುಕಿಂಗ್ಗಳನ್ನು ಪಡೆದುಕೊಂಡಿದೆ. 
ಮಹೀಂದ್ರಾ ಸ್ಕಾರ್ಪಿಯೋ ಎನ್ನ ಬೆಲೆ 11.99 ಲಕ್ಷ ರೂ.ಗಳಿಂದ ಆರಂಭವಾಗಿ ವೇರಿಯಂಟ್ಗಳ ಆಧಾರದ ಮೇಲೆ 23.90 ಲಕ್ಷ ರೂ.ಗಳವರೆಗೆ ಇದೆ. ಮಹೀಂದ್ರಾ ಎಕ್ಸ್ಯುವಿ700 ದಂತೆ ಇದು ಕೂಡ 25 ವೇರಿಯಂಟ್ಗಳಲ್ಲಿ ಬರುತ್ತದೆ. ಸ್ಕಾರ್ಪಿಯೋ ಎನ್ ಟಾಪ್ ವೇರಿಯಂಟ್ ಬೆಲೆ 24.15 ಲಕ್ಷ ರೂ.ಗಳಷ್ಟಿದೆ. ಸ್ಕಾರ್ಪಿಯೋ ಎನ್ ಆಟೊಮೆಟಿಕ್ ದರ 15.45 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

10 ವರ್ಷಗಳ ಕಠಿಣ ಶ್ರಮದಿಂದ SUV ಖರೀದಿಸಿದ ಯುವಕ, ಆನಂದ್‌ ಮಹೀಂದ್ರಾ ಮೆಚ್ಚುಗೆ!

Follow Us:
Download App:
  • android
  • ios