ಭಾರತದಲ್ಲಿ 400ನೇ ಕಾರು ವಿತರಿಸಿದ ಐಷಾರಾಮಿ ಲ್ಯಾಂಬೋರ್ಗಿನಿ

ಐಷಾರಾಮಿ ಕಾರು ತಯಾರಕ ಲ್ಯಾಂಬೋರ್ಗಿನಿ ಇಂಡಿಯಾ, ದೇಶದಲ್ಲಿ ಇತ್ತೀಚೆಗೆ ತನ್ನ 400 ನೇ ಕಾರನ್ನು ದೇಶದಲ್ಲಿ ವಿತರಿಸಿದೆ.

Lamborghini delivers 400th car in India

 Auto Desk: ಐಷಾರಾಮಿ ಕಾರು ತಯಾರಕ ಲ್ಯಾಂಬೋರ್ಗಿನಿ ಇಂಡಿಯಾ( Lamborghini India), ದೇಶದಲ್ಲಿ ಇತ್ತೀಚೆಗೆ ತನ್ನ 400 ನೇ ಕಾರನ್ನು ದೇಶದಲ್ಲಿ ವಿತರಿಸಿದೆ. ಇದು ಕಂಪನಿಯ ಇಲ್ಲಿಯವರೆಗಿನ ಅತಿ ಹೆಚ್ಚಿನ ಮಾರಾಟವಾಗಿದೆ.ಕಂಪನಿಯು 2007 ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಲ್ಯಾಂಬೋರ್ಗಿನಿ, ಕಳೆದ ವರ್ಷ ಶೇ.86 ರಷ್ಟು ಮಾರಾಟ ದಾಖಲಿಸಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಇದರ ಲ್ಯಾಂಬೋರ್ಗಿನಿ ಉರುಸ್ನ (Urus) ಜನಪ್ರಿಯತೆ. ಕಂಪನಿಯು 2021ರ ಸೆಪ್ಟೆಂಬರ್ ನಲ್ಲಿ 300 ಕಾರುಗಳನ್ನು ವಿತರಿಸುವುದಾಗಿ ಘೋಷಿಸಿದಾಗಿನಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 400 ನೇ ಕಾರನ್ನು ವಿತರಿಸಲಾಗಿದೆ. ಈ ಮೈಲಿಗಲ್ಲನ್ನು ಸಂಭ್ರಮಿಸಲು ಲ್ಯಾಂಬೋರ್ಗಿನಿ, ಗೋವಾದಲ್ಲಿ ತನ್ನ ಮೂರನೇಆವೃತ್ತಿಯ ಲ್ಯಾಂಬೋರ್ಗಿನಿ ಡೇ ಆಚರಿಸುತ್ತಿದೆ.

2022 ಲ್ಯಾಂಬೋರ್ಗಿನಿ ಡೇ  ಎಂಬ ಜೀವನಶೈಲಿ ಈವೆಂಟ್ನಲ್ಲಿ ಸುಮಾರು 40 ಗ್ರಾಹಕರು ಹಾಜರಿದ್ದರು. ಇದರಲ್ಲಿ ಗ್ಯಾರೇಜ್ ತುಂಬಾ ಎಕ್ಸೋಟಿಕ್ ಕಾರುಗಳನ್ನು ಹೊಂದಿರುವ ಗ್ರಾಹಕರಿಂದ ಹಿಡಿದು ಮೊದಲ ಬಾರಿಗೆ ಲ್ಯಾಂಬೋರ್ಗಿನಿ  ಖರೀದಿಸಿದವರು ಕೂಡ ಹಾಜರಿದ್ದು, ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. 

ಇದನ್ನೂ ಓದಿ: ಮನೆ ಬಣ್ಣಕ್ಕೆ 3 ಕಾರು ರೀ-ಪೇಂಟ್‌ ಮಾಡಿಸಿದ ನಟಿ: ವ್ಯಯಿಸಿದ್ದು ಬರೋಬ್ಬರಿ 75 ಲಕ್ಷ ರೂ.!

ಮರುದಿನ, 40 ಲ್ಯಾಂಬೋರ್ಗಿನಿ ಕಾರುಗಳು ಹೋಟೆಲ್ ಮುಂದೆ ಡ್ರೈವ್ಗೆ ಸಿದ್ಧವಾಗಿ ನಿಂತಿದ್ದವು. ಇದರಲ್ಲಿ ಎಲ್ಲಾ ಆಕಾರಗಳು ಮತ್ತು ಗಾತ್ರಗಳ ಕಾರುಗಳು ಇದ್ದವು. ಉರುಸ್ ಮತ್ತು ಹ್ಯುರಾಕನ್ ಇದರ ನೇತೃತ್ವ ವಹಿಸಿದ್ದವು.ಪರಿಣಾಮವಾಗಿ V8s, V10s ಮತ್ತು V12 ಗಳು ಗೋವಾದಲ್ಲಿ ಗರ್ಜಿಸಿದವು. ಜನರು ಈ ಕಾರುಗಳ ಸರಣಿಯನ್ನು ಕಣ್ತುಂಬಿಕೊಂಡವರು. ಪೂರ್ವ-ಫೇಸ್ಲಿಫ್ಟ್ ಹ್ಯುರಾಕನ್ನಿಂದ ಹಿಡಿದು ಹೊಸ EVO ವರೆಗೆ, ಉರುಸ್ನ ವಿಶೇಷ ಆವೃತ್ತಿಗಳವರೆಗೆ, ಪ್ರತಿ ಕಾರು ಅದರ ಬಗ್ಗೆ ಕೆಲವು ವಿಶೇಷತೆಗಳನ್ನು ಹೊಂದಿದ್ದವು. ನಯವಾದ ಕಾರವಾರ ಹೆದ್ದಾರಿ, ನಾಲ್ಕು ಪಥದ ರಸ್ತೆಯ ಸಣ್ಣ ಪ್ಯಾಚ್ ಎಲ್ಲದರ ಮೇಲಿನ ಡ್ರೈವ್ ಮನೋರಂಜನೀಯವಾಗಿತ್ತು. 

ಜನರು ಕಾರುಗಳೊಂದಿಗೆ ಚಿತ್ರಗಳು, ವಿಡಿಯೋಗಳನ್ನು ತೆರೆಯಲು ಮುಗಿಬಿದ್ದರು. ಕಾರುಗಳ ಮಾಲೀಕರು ಕೂಡ ಭಾವಪರವಶರಾಗಿದ್ದರು. ಅನೇಕರು, ಕಾರು ಕೊಳ್ಳುವ ಹಾಗೂ ಅದನ್ನು ಚಲಾಯಿಸುವುದರ ಹಿಂದಿನ ಅನುಭವಗಳನ್ನು ಹಂಚಿಕೊಂಡರು.

ಶೇ.70ರಷ್ಟು ಗ್ರಾಹಕರು ಲ್ಯಾಂಬೋರ್ಗಿನಿ ಡೇಗೆ ತಪ್ಪದೇ ಭೇಟಿ ನೀಡುತ್ತಾರೆ ಮತ್ತು ಪ್ರತಿ ವರ್ಷ ಸುಮಾರು ಶೇ. 30ರಷ್ಟು ಹೊಸ ಗ್ರಾಹಕರು ಸೇರಿಕೊಳ್ಳುತ್ತಾರೆ ಎಂದು ಲ್ಯಾಂಬೋರ್ಗಿನಿ ಹೇಳಿದೆ.
ಲಂಬೋರ್ಗಿನಿ ಉರುಸ್ ಸೂಪರ್ ಸ್ಪೋರ್ಟ್ಸ್ ಕಾರ್ ಅನ್ನು ಎಸ್ಯುವಿಯ ಕ್ರಿಯಾತ್ಮಕತೆಯೊಂದಿಗೆ ವಿಲೀನಗೊಳಿಸಿದ ವಿಶ್ವದ ಮೊದಲ ಸೂಪರ್ ಸ್ಪೋರ್ಟ್ ಆಗಿದೆ. ಇದು 650 ಸಿವಿ (CV) ಮತ್ತು 850 ಎನ್ಎಂ(Nm) ಟಾರ್ಕ್ ಅನ್ನು ಉತ್ಪಾದಿಸುವ 4.0-ಲೀಟರ್ ಟ್ವಿನ್-ಟರ್ಬೊ ವಿ8 (V8) ಎಂಜಿನ್ ಹೊಂದಿದೆ.

ಇದನ್ನೂ ಓದಿ: ಬರೀ ನಂಬರ್‌ ಪ್ಲೇಟ್‌ಗೆ 17 ಲಕ್ಷ ಕೊಟ್ಟ ಜೂ.NTR, ಕಾರ್ ಬೆಲೆ ಎಷ್ಟು ?

ಲ್ಯಾಂಬೋರ್ಗಿನಿ ಉರುಸ್ 3.6 ಸೆಕೆಂಡುಗಳಲ್ಲಿ 0 ರಿಂದ 62 ಕಿಮೀವರೆಗೆ ವೇಗ ಹೆಚ್ಚಿಸಬಲ್ಲದು 190 ಕಿಮೀ ವೇಗ ತಲುಪಬಲ್ಲದು. ವಿನ್ಯಾಸ, ಕಾರ್ಯಕ್ಷಮತೆ, ಡ್ರೈವಿಂಗ್ ಡೈನಾಮಿಕ್ಸ್ ಮತ್ತು ಡ್ರೈವಿಂಗ್ ಭಾವನೆಗಳು ಲ್ಯಾಂಬೋರ್ಗಿನಿ ಉರುಸ್ನಲ್ಲಿ ವಿಶೇಷವಾಗಿಯೇ ಇರುತ್ತದೆ.

ಉರುಸ್ ಟ್ರ್ಯಾಕ್ನಿಂದ ಮರಳು, ಮಂಜುಗಡ್ಡೆ, ಜಲ್ಲಿಕಲ್ಲು ಅಥವಾ ಬಂಡೆಗಳವರೆಗೆ ಯಾವುದೇ ಭೂಪ್ರದೇಶದಲ್ಲಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ಇದು ಸಂಪೂರ್ಣ ಆಲ್-ರೌಂಡ್ ಸೂಪರ್ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ.

ದೇಶದಲ್ಲಿ ಹಲವು ಗಣ್ಯರ ನಡುವೆ ಕೂಡ ಲ್ಯಾಂಬೋರ್ಗಿನಿ ಉರುಸ್ ಕ್ರೇಜ್ ಹೆಚ್ಚಿದ್ದು, ಹಲವು ಸೆಲೆಬ್ರಿಟಿಗಳು ಕೂಡ ಈ ಐಷರಾಮಿ ಕಾರನ್ನು ಖರೀದಿಸಿದ್ದಾರೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ, ನಟರಾದ ರಣವೀರ್ ಸಿಂಗ್, ಕಾರ್ತಿಕ್ ಆರ್ಯನ್, ಜೂನಿಯರ್ ಎನ್.ಟಿ.ರಾಮರಾವ್, ಸ್ಯಾಂಡಲ್ವುಡ್ನ ನಟ ದಿ.ಪುನೀತ್ರಾಮ್ ಕುಮಾರ್ ಮತ್ತಿತರರು ಇದರ ಹೆಮ್ಮೆಯ ಮಾಲೀಕರಾಗಿದ್ದಾರೆ.

Latest Videos
Follow Us:
Download App:
  • android
  • ios