Upcoming Car ಜ.14ರಿಂದ ಕಿಯಾ ಕರೆನ್ಸ್ ಬುಕಿಂಗ್ ಆರಂಭ, ಕೈಗೆಟುಕವ ಬೆಲೆಯಲ್ಲಿ MPV ಕಾರು ಲಭ್ಯ!
- ಜನವರಿ 14 ರಿಂದ ಹೊಚ್ಚ ಹೊಸ ಕಿಯಾ ಕರೆನ್ಸ್ ಕಾರು ಬುಕಿಂಗ್ ಒಪನ್
- ಟೊಯೋಟಾ ಇನೋವಾ, ಟಾಟಾ ಸಫಾರಿ, ಮಾರುತಿ XL6 ಕಾರಿಗೆ ಪ್ರತಿಸ್ಪರ್ಧಿ
- ಹೊಸ ವರ್ಷದಿಂದ ಆಕರ್ಷಕ ಬೆಲೆಯಲ್ಲಿ ನೂತನ ಕರೆನ್ಸ್ ಕಾರು ಲಭ್ಯ
ಅನಂತಪುರಂ(ಡಿ.30): ಕಿಯಾ ಮೋಟಾರ್ಸ್(Kia Motors) ಅನಾವರಗೊಳಿಸಿರುವ ಕಿಯಾ ಕರೆನ್ಸ್ MPV ಕಾರಿನ ಬುಕಿಂಗ್ ಜನವರಿ 14 ರಿಂದ ಆರಂಭಗೊಳ್ಳುತ್ತಿದೆ. ಈ ಮೂಲಕ ಹೊಸ ವರ್ಷದಲ್ಲಿ ಕಿಯಾ ಮತ್ತೆ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಇದು ಕಿಯಾ ಮೋಟಾರ್ಸ್ ಕಂಪನಿಯ 4ನೇ ಕಾರಾಗಿದೆ. ಕಿಯಾ ಅನಾವರಣಗೊಳಿಸಿರುವ ಕರೆನ್ಸ್ ಕಾರು ಅತ್ಯಂತ ಆಕರ್ಷಕ ಕಾರಾಗಿದ್ದು, ಕೈಗೆಟುಕವ ದರದಲ್ಲಿ ಲಭ್ಯವಾಗಲಿದೆ.
ಕಿಯಾ ಮೋಟಾರ್ಸ್ ಭಾರತದಲ್ಲಿ ಸೆಲ್ಟೋಸ್ SUV ಕಾರನ್ನು ಬಿಡುಗಡೆ ಮಾಡಿ ದೇಶದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಬಳಿಕ ಕಿಯಾ ಕಾರ್ನಿವಲ್, ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡಿತ್ತು. ಇದೀಗ ಕಿಯಾ ಕರೆನ್ಸ್(Kia Carens) ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕೂ ಮುನ್ನ ಬುಕಿಂಗ್(Bookings Open) ತೆರೆದಿದ್ದು, ದಾಖಲೆಯ ಬುಕಿಂಗ್ ಆಗುವ ಸಾಧ್ಯತೆಗಳು ಗೋಚರಿಸುತ್ತಿದೆ. ವಿಶೇಷ ಅಂದರೆ ಕಿಯಾ ಕರೆನ್ಸ್ ಮೊದಲು ಭಾರತದಲ್ಲಿ(India) ಬಿಡುಗಡೆಯಾಗಲಿದೆ. ಬಳಿಕ ಇತರ ದೇಶದಲ್ಲಿ ಬಿಡುಗಡೆಯಾಗಲಿದೆ.
Upcoming Cars 2022 ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಟಾಪ್ 4 MPV ಕಾರು!
ನೂತನ ಕಿಯಾ ಕರೆನ್ಸ್ ಕಾರು ಟೊಯೋಟೋ ಇನೋವಾ ಕ್ರಿಸ್ಟಾ, ಟಾಟಾ ಸಫಾರಿ, ಮಾರುತಿ ಸುಜುಕಿ XL6, ಹ್ಯುಂಡೈ ಅಲ್ಕಜರ್, ಮಹೀಂದ್ರ ಮೊರೆಜೋ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಇದೀಗ ಕಿಯಾ ಸೆಲ್ಟೋಸ್ ಹಾಗೂ ಸೊನೆಟ್ ಕಾರಿನಂತೆ ಭಾರತದಲ್ಲಿ ಮೋಡಿ ಮಾಡಲು ಕರೆನ್ಸ್ ಸಜ್ಜಾಗಿದೆ. ಕಿಯಾ ಕರೆನ್ಸ್ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾದ ಕಾರು. ಆಂಧ್ರ ಪ್ರದೇಶದ(Andhra Pradesh) ಅನಂತಪುರಂದಲ್ಲಿರುವ ಉತ್ಪಾದನಾ(Production) ಘಟಕದಲ್ಲಿ ಕರೆನ್ಸ್ ಕಾರು ನಿರ್ಮಾಣವಾಗಿದೆ.
ಕಿಯಾ ಕೆರನ್ಸ್ ಕಾರಿನ ಅಂದಾಜು ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಮೂಲಕ ಬೆಲೆಯಲ್ಲೂ ಪ್ರತಿಸ್ಪರ್ಧಿ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಕಾರು 6 ಸೀಟರ್ ಹಾಗೂ 7 ಸೀಟರ್ ಆಯ್ಕೆ ಲಭ್ಯವಿದೆ. ಇತ್ತ ಡಿಸೈನ್‌ನಲ್ಲಿ ಕಿಯಾ ಇತರ ಕಾರುಗಳನ್ನು(Kia Car) ಹಿಂದಿಕ್ಕಿದೆ. ಅತ್ಯುತ್ತಮ ಡಿಸೈನ್ ಕರೆನ್ಸ್ ಕಾರು ದೇಶದಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ. ಮುಂಭಾಗದಲ್ಲಿ ಸ್ಟೈಲಿಶ್ ಗ್ರಿಲ್, ಅತೀ ದೊಡ್ಡ LED ಹೆಡ್‌ಲ್ಯಾಂಪ್ಸ್, ಡೇ ಟೈಮ್ LED ರನ್ನಿಂಗ್ ಲೈಟ್, ಡೈಮಂಡ್ ಶೇಪ್ ಮೆಶ್, ಸ್ಲೀಕ್ ಕ್ರೋಮ್ ವರ್ಟಿಕಲ್ LED ಫಾಗ್ ಲ್ಯಾಂಪ್ಸ್ ಸೇರಿದಂತೆ ಹಲವು ಹೊಸತನಗಳ ಫೀಚರ್ಸ್ ಈ ಕಾರಿನಲ್ಲಿದೆ.
Kia Carens Details Revealed: ಕಂಪನಿಯ ಹೊಸ 7 ಸೀಟರ್ ಕಾರು: ಮುಂದಿನ ವರ್ಷ ಅದ್ದೂರಿ ಎಂಟ್ರಿ!
ಸ್ಪೋರ್ಟಿ ಅಲೋಯ್ ವ್ಹೀಲ್, ಕ್ರೋಮ್ ಗಾರ್ನಿಶ್ಡ್ ಡೋರ್ ಹ್ಯಾಂಡಲ್, ಟರ್ನ್ ಇಂಡಿಕೇಟರ್ ವಿಂಗ್ಸ್ ಮಿರರ್, ಡೆಲ್ಟಾ ಶೇಪ್ LED ಟೈಲ್‌ಲೈಟ್ಸ್, ಬ್ಲಾಕ್ ಕ್ಲಾಡಿಂಗ್ ಚಂಕಿ ಬಂಪರ್ ಕಿಯಾ ಕರೆನ್ಸ್ ಕಾರಿನ ಅಂದ ಮತ್ತಷ್ಟು ಹೆಚ್ಚಿಸಿದೆ. ಇನ್ನು ಕಾರಿನ ಒಳಾಂಗಣ ಕೂಡ ಅತ್ಯಂತ ಆಕರ್ಷಕವಾಗಿದೆ. ಪ್ರೀಮಿಯಂ ಲುಕ್ ನೀಡಲಾಗಿದೆ. ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಕಿಯಾ ಸೆಲ್ಟೋಸ್, ಸೊನೆಟ್ ಕಾರಿನಲ್ಲಿರುವಂತೆ ಅತೀ ಹೆಚ್ಚು ಕಾರ್ ಕೆನಕ್ಟೆಡ್ ಫೀಚರ್ಸ್ ನೀಡಲಾಗಿದೆ. ಡ್ಯುಯೆಲ್ ಟೋನ್ ಕಲರ್ ಥೀಮ್, ಲೆಥರ್ ಸೀಟ್ ನೀಡಲಾಗಿದೆ.
ಕಿಯಾ ಕರೆನ್ಸ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್‌ಗಳಾದ 6 ಏರ್‌ಬ್ಯಾಗ್, ABS, ESC, HAC, VSM, DBC, BAS, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, TPMS ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ ಎಲ್ಲಾ ಕಾರಿಗೆ ಸ್ಟಾಂಡರ್ಡ್ ಮಾಡಲಾಗಿದೆ. 7 ಸ್ಪೀಡ್ DCT ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.