ಒಂದೇ ದಿನ 3 ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಕಲ್ಯಾಣ್ ಜ್ಯೂವೆಲ್ಲರಿ ಮುಖ್ಯಸ್ಥ, ಬೆಲೆ 25 ಕೋಟಿ ರೂ!

ದಕ್ಷಿಣ ಭಾರತದ ಜನಪ್ರಿಯ ಉದ್ಯಮಿ, ದೇಶ-ವಿದೇಶಗಳಲ್ಲಿ ಕಲ್ಯಾಣ್ ಜ್ಯೂವೆಲ್ಲರ್ಸ್ ಶಾಖೆ ತೆರೆದು ವ್ಯವಹಾರ ನಡೆಸುತ್ತಿರುವ ಟಿಎಸ್ ಕಲ್ಯಾಣರಾಮನ್ ಇದೀಗ ಕಾರು ಖರೀದಿಸಿ ಸಂಚಲನ ಸೃಷ್ಟಿಸಿದ್ದಾರೆ. ಶ್ರೀಮಂತ ಉದ್ಯಮಿಗಳು ದುಬಾರಿ ಕಾರು ಖರೀದಿಸುವದರಲ್ಲೇನು ವಿಶೇಷ ಅಂತೀರಾ? ಕಾರಣ ಕಲ್ಯಾಣರಾಮನ್ ಒಂದೇ ದಿನ 3 ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಖರೀದಿಸಿದ್ದಾರೆ. ಇದರ ಬೆಲೆ 25 ಕೋಟಿ ರೂಪಾಯಿ.
 

Kalyana Jewellers chairman Buys 3 Rolls Royce cullinan SUV car with rs 25 crore ckm

ತ್ರಿಶೂರ್(ಮಾ.22) ಸೆಲೆಬ್ರೆಟಿಗಳು, ಉದ್ಯಮಿಗಳು, ಶ್ರೀಮಂತರು ಐಷಾರಾಮಿ ದುಬಾರಿ ಕಾರುಗಳನ್ನು ಖರೀದಿಸುವುದು ಸಾಮಾನ್ಯ. ಕಸ್ಟಮೈಸ್ಡ್ ಕಾರು, ವಿಶೇಷ ನಂಬರ್ ಪ್ಲೇಟ್‌ಗಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ ಉದಾಹರಣೆಗಳೂ ಇವೆ. ಇದೀಗ ಭಾರತದ ಅತ್ಯಂತ ಜನಪ್ರಿಯ ಉದ್ಯಮಿ ಕಲ್ಯಾಣ್ ಜ್ಯುವೆಲ್ಲರ್ಸ್ ಮುಖ್ಯಸ್ಥ ಟಿಎಸ್ ಕಲ್ಯಾಣರಾಮನ್ ಒಂದೇ ದಿನ 3 ರೋಲ್ಸ್ ರಾಯ್ಸ್ ಕಲ್ಲಿನಾನ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಇದರ ಮೌಲ್ಯ ಬರೋಬ್ಬರಿ 25 ಕೋಟಿ ರೂಪಾಯಿ.

ಕಲ್ಯಾಣ್ ಗ್ರೂಪ್ ಮಾಲೀಕರಾಗಿರು ಟಿಸ್ ಕಲ್ಯಾಣರಾಮನ್ ಒಂದೇ ದಿನ ಮೂರು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ಈ ಕುರಿತು ವಿಡಿಯೋ ಇದೀಗ ವೈರಲ್ ಆಗಿದೆ. ರೋಲ್ಸ್ ರಾಯ್ಸ್ ಬ್ಲಾಕ್ ಬ್ಯಾಡ್ಜ್ ಕಲ್ಲಿನಾನ್ ಹಾಗೂ ಇನ್ನೆರಡು ರೆಗ್ಯೂಲರ್ ಕಲ್ಲಿನಾನ್ ಕಾರನ್ನು ಕಲ್ಯಾಣರಾಮನ್ ಖರೀದಿಸಿದ್ದಾರೆ. ಈ ಮೂರು ಕಾರಿನ ಎಕ್ಸ್ ಶೋ ರೂಂ ಬೆಲೆ 25 ಕೋಟಿ ರೂಪಾಯಿ.

ಮದುವೆ ಸಂಭ್ರಮದಲ್ಲಿರುವ ಅಂಬಾನಿ ಕುಟುಂಬದಲ್ಲಿದೆ ದುಬಾರಿ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್!

ಕೇರಳ ಮೂಲದ ಟಿಎಸ್ ಕಲ್ಯಾಣರಾಮನ್ ಈ ಕಾರು ಖರೀದಿ ಮೂಲಕ ದಾಖಲೆ ಬರೆದಿದ್ದಾರೆ. ಕೇರಳದಲ್ಲಿ ಒಂದೇ ಬಾರಿಗೆ ಇಷ್ಟು ದುಬಾರಿ ಮೊತ್ತ ಕಾರು ಖರೀದಿಸಿದ ಹೆಗ್ಗಳಿಕೆಗೆ ಕಲ್ಯಾಣರಾಮನ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಕೇರಳದಲ್ಲಿ ಬ್ಲಾಕ್ ಬ್ಯಾಡ್ಜ್ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಮೊದಲ ಕೇರಳಿಗ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by EISK77 (@eisk77)

 

ಕಲ್ಯಾಣರಾಮನ್ ಕಾರು ಸಂಗ್ರಹಾಲಯದಲ್ಲಿ ಹಲವು ಐಷರಾಮಿ ದುಬಾರಿ ಕಾರುಗಳಿವೆ. ಬಹುತೇಕ ಎಲ್ಲಾ ಐಷಾರಾಮಿ ಬ್ರ್ಯಾಂಡ್‌ಗಳ ಕಾರುಗಳು ಕಲ್ಯಾಣರಾಮನ್ ಬಳಿ ಇದೆ. ಇನ್ನು ಕಲ್ಯಾಣರಾಮನ್‌ಗೆ ರೋಲ್ಸ್ ರಾಯ್ಸ್ ಬ್ರ್ಯಾಂಡ್ ಕಾರು ಹೊಸದಲ್ಲ. ಈಗಾಗಲೇ ಇವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ 1 ಹಾಗೂ ಫ್ಯಾಂಟಮ್ ಸೀರಿಸ್ 2ನ ಒಟ್ಟು 3 ಕಾರುಗಳಿವೆ. ಇದೀಗ ರೋಲ್ಸ್ ರಾಯ್ಸ್ ಕಾರುಗಳ ಪೈಕಿ ಮತ್ತೆ ಮೂರು ಕಾರುಗಳು ಸೇರ್ಪಡೆಗೊಂಡಿದೆ. 

ವಿಶ್ವದ ಅತ್ಯಂತ ದುಬಾರಿ, ರೋಮ್ಯಾಂಟಿಕ್ ಕಾರು, ರೋಲ್ಸ್ ರಾಯ್ಸ್ ಅರ್ಕಾಡಿಯಾ ಅನಾವರಣ!

ಇದರ ಜೊತೆಗೆ ಕಲ್ಯಾರಾಮನ್ ಖಾಸಗಿ ಜೆಟ್ ಹೊಂದಿದ್ದಾರೆ. ಎಂಬ್ರಾಯೆರ್ ಲೆಗೆಸಿ 650 ಜೆಟ್‌ನ್ನು ಕಲ್ಯಾಣರಾಮನ್ 178 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಇದರ ಜೊತೆಗೆ ಬೆಲ್ 427 ಹೆಲಿಕಾಪ್ಟರ್ ಮಾಲೀಕರಾಗಿದ್ದಾರೆ. ಈ ಹೆಲಿಕಾಪ್ಟರ್ ಬೆಲೆ 48 ಕೋಟಿ ರೂಪಾಯಿ.

1993ರಲ್ಲಿ ಕಲ್ಯಾಣ್ ಜ್ಯೂವೆಲ್ಲರ್ಸ್ ಮೊದಲ ಜ್ಯೂವೆಲ್ಲರಿ ಶಾಖೆ ತೆರದಿತ್ತು. ಇದೀಗ ದೇಶ ವಿದೇಶಗಳಲ್ಲಿ 200ಕ್ಕೂ ಶಾಖೆಗಳನ್ನು ಹೊಂದಿದೆ. ಯುಎಇ, ಕತಾರ್, ಕುವೈಟ್ ಒಮನ್ ಸೇರಿದಂತೆ ವಿದೇಶಗಳಲ್ಲಿ 30ಕ್ಕೂ ಹೆಚ್ಚಿನ ಶಾಖೆಗಳಿವೆ.
 

Latest Videos
Follow Us:
Download App:
  • android
  • ios